Latest Updates
-
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್!
ಮಕ್ಕಳ ಸ್ಥೂಲಕಾಯಕ್ಕೆ ಪಾಲಕರ ಆಹಾರಾಭ್ಯಾಸವೇ ಕಾರಣ!
ಮಕ್ಕಳು ತಮ್ಮ ಪಾಲಕರ ನಡೆನುಡಿಗಳನ್ನು ಮಾತ್ರವಲ್ಲ, ಆಹಾರವನ್ನೂ ಅನುಸರಿಸುತ್ತಾರೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಅಂದರೆ ಮಕ್ಕಳಿಗಾಗಿ ಬೇರೆಯೇ ಆಹಾರವನ್ನು ತಯಾರಿಸಿದ್ದರೂ ಮಕ್ಕಳು ಹಿರಿಯರ ಆಹಾರವನ್ನು ಹಾಗೂ ಹಿರಿಯರು ಆಹಾರ ತಿನ್ನುವ ವಿಧಾನವನ್ನೇ ಅನುಸರಿಸುತ್ತಾರೆ, ಇದು ಸ್ಥೂಲಕಾಯಕ್ಕೆ ಕಾರಣ ಎಂದು ತಿಳಿಸಿದೆ. ಮಕ್ಕಳಿಗೆ ಕಾಡುವ ಸ್ಥೂಲಕಾಯ, ಎಂದಿಗೂ ನಿರ್ಲಕ್ಷಿಸದಿರಿ

ಸಮೀಕ್ಷೆಯಲ್ಲಿ ಆರರಿಂದ ಹನ್ನೆರದು ವರ್ಷದ ನಡುವಣ ಸ್ಥೂಲಕಾಯದ ಮಕ್ಕಳಿರುವ ಸುಮಾರು ಏಳುನೂರು ಕುಟುಂಬಗಳನ್ನು ತಜ್ಞರು ಸಂದರ್ಶಿಸಿ ಸ್ಥೂಲಕಾಯಕ್ಕೆ ಮಕ್ಕಳು ತಮ್ಮ ಪಾಲಕರ ಆಹಾರವಿಧಾನವನ್ನು ಅನುಸರಿಸುತ್ತಿರುವುದು ಪ್ರಮುಖ ಕಾರಣ ಎಂದು ಕಂಡುಕೊಂಡಿದ್ದಾರೆ. ಇವರೆಲ್ಲರ ಆಹಾರಾಭ್ಯಾಸಗಳ ಬಗ್ಗೆ ಹಲವು ಮಾಹಿತಿಗಳನ್ನು ಕಲೆಹಾಕಿ ಕಡೆಗೆ ತಜ್ಞರು ಈ ತೀರ್ಮಾನಕ್ಕೆ ಬಂದಿದ್ದಾರೆ. ಬೆಳೆಯುವ ಮಕ್ಕಳ ಆಹಾರ ಪದ್ಧತಿ ಬಗ್ಗೆ ಗಮನವಿರಲಿ
ಅಂದರೆ ಹಿರಿಯರು ಸಿದ್ಧ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ತಿಂದಾಗ ಮಕ್ಕಳೂ ಇದೇ ಸಿದ್ಧ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ತಿಂದು ಸ್ಥೂಲಕಾಯವನ್ನು ಆಹ್ವಾನಿಸುತ್ತಿರುವುದು ಕಂಡುಬಂದಿದೆ. ಅಲ್ಲದೇ ಹಿರಿಯರು ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದಿಲ್ಲ ಎಂಬ ಕಾರಣದಿಂದ ಮಕ್ಕಳೂ ತಿನ್ನದಿರುವುದು ಇಡಿಯ ವಿಶ್ವದಲ್ಲಿಯೇ ಕಂಡುಬಂದಿರುವ ಸಾಮಾನ್ಯ ಸತ್ಯವಾಗಿದೆ. ಇದರ ಕಾರಣ ಕೊಬ್ಬು ಹೆಚ್ಚಾಗಿ, ನಾರು ಕಡಿಮೆಯಾಗಿ ದೇಹದಲ್ಲಿ ಅತಿ ಹೆಚ್ಚಿನ ಕೊಬ್ಬಿನ ಸಂಗ್ರಹಗೊಂಡು ಸ್ಥೂಲಕಾಯ ಆಗಮಿಸುತ್ತದೆ. ಮಕ್ಕಳಲ್ಲಿ ಸೋಂಕು ನಿವಾರಿಸುವ ಟಾಪ್ ಆಹಾರಗಳು
ಆದ್ದರಿಂದ ಮಕ್ಕಳಿಗಾಗಿಯಾದರೂ ಪಾಲಕರು ಇಷ್ಟವಿಲ್ಲದಿದ್ದರೂ ಇಷ್ಟವಿದ್ದಂತೆ ನಟಿಸಿಯಾದರೂ ಮಕ್ಕಳಿಗೆ ಆರೋಗ್ಯಕರ ಆಹಾರಗಳನ್ನು ತಿನ್ನಿಸುವುದು ಮಾತ್ರವಲ್ಲ, ಸೂಕ್ತ ವ್ಯಾಯಾಮವನ್ನು ತಾವೂ ಅನುಸರಿಸಿ ಮಕ್ಕಳಿಗೂ ಕಲಿಸಲು ಪ್ರಾರಂಬಿಸಿದರೆ ಮಾತ್ರ ಮಕ್ಕಳ ಆರೋಗ್ಯ ಉತ್ತಮಗೊಳ್ಳಬಹುದು.



Click it and Unblock the Notifications


