Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಕ್ಕಳಿಗೆ ಪೆಡಂಭೂತದಂತೆ ಕಾಡುವ ಸ್ಥೂಲಕಾಯದ ಸಮಸ್ಯೆ
ಸ್ಥೂಲಕಾಯವೆಂಬುದು ವಂಶಪಾರ್ಯವಾಗಿ ಬರುವಂತಹ ಕಾಯಿಲೆಯಾಗಿರುವುದಿಲ್ಲ. ಆಹಾರದಲ್ಲಿ ಸಮತೋಲನ ಇಲ್ಲದಿರುವುದು, ದೈಹಿಕ ಚಟುವಟಿಕೆ ಇಲ್ಲದಾಗಿರುವುದು, ನಿದ್ದೆಗೆಡುವುದು ಮತ್ತು ಆಲಸ್ಯದಿಂದಾಗಿ ಸ್ಥೂಲಕಾಯ ವ್ಯಕ್ತಿಯನ್ನು ಕಾಡುತ್ತದೆ ನಂತರ ರೋಗವಾಗಿ ಮಾರ್ಪಟ್ಟು ಇತರ ರೋಗಗಳಿಗೆ ಆಹ್ವಾನವನ್ನು ನೀಡುತ್ತದೆ. ನೀವು ಎಷ್ಟೇ ದೊಡ್ಡವರಿರಲಿ ಎಷ್ಟೇ ಸಣ್ಣವರಿರಲಿ ಬೊಜ್ಜು ದೇಹಕ್ಕೆ ಮಾರಕವಾಗುವುದು ಅದು ಅತಿರೇಕಕ್ಕೆ ಹೋದಾಗ ಮಾತ್ರ.

ಸ್ಥೂಲಕಾಯ ದೇಹವನ್ನು ಆವರಿಸಿದಾಗ ಸೊಂಟನೋವು, ಕಾಲುನೋವು, ಮೈಕೈನೋವು ಹೀಗೆ ನಿಮ್ಮನ್ನು ಕಾಡದ ನೋವುಗಳು ಆವರಿಸಿಲು ಆರಂಭಗೊಳ್ಳುತ್ತದೆ. ಹೃದಯಕ್ಕೆ ಒತ್ತಡ ಬಿದ್ದು ಹೃದಯಾಘಾತ ಆಗುವ ಸಂಭವ ಕೂಡ ಇದೆ. ದೇಹ ನಿಮ್ಮ ನಿಯಂತ್ರಣಕ್ಕೆ ಸಿಗದೇ ಹೋದಾಗ ದೇಹವು ರೋಗಗಳ ಗೂಡಾಗಿಬಿಡುತ್ತದೆ. ಅದಕ್ಕೆ ಸಮತೋಲಿತ ಡಯೆಟ್ ಅನ್ನು ನೀವು ಪಾಲಿಸಿದರೆ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯ ಹೆಚ್ಚು ಕಂಡುಬರುತ್ತಿರುವುದು ಎಳೆರಲ್ಲಾಗಿದೆ. ಫಾಸ್ಟ್ ಫುಡ್, ಕರಿದ ತಿಂಡಿಗಳು, ಬೇಕರಿಯ ಸಿಹಿ, ಚಟುವಟಿಕೆ ಇಲ್ಲದಿರುವುದು ಇಂದಿನ ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತಿರುವುದರಿಂದ ಬೊಜ್ಜು ಸಣ್ಣವರಲ್ಲಿ ರೋಗವಾಗಿ ಮಾರ್ಪಡುತ್ತಿದೆ. ಅಂತೆಯೇ ಸ್ಥೂಲಕಾಯದ ಮಕ್ಕಳು ಸಾಮಾನ್ಯ ಮಕ್ಕಳಿಗಿಂತಲೂ ಭಿನ್ನವಾಗಿರುತ್ತಾರೆ ಮತ್ತು ರೋಗಕ್ಕೆ ಹೆಚ್ಚು ಒಳಗಾಗಿರುತ್ತಾರೆ. ಸ್ಥೂಲಕಾಯ ಮಕ್ಕಳು ರಸ್ತೆದಾಟುವಾಗ ಹೆಚ್ಚು ಅಶಾಂತರಾಗಿರುತ್ತಾರೆ ಅಂತೆಯೇ ಇದು ಇವರಲ್ಲಿ ಅಪಾಯವನ್ನು ತಂದೊಡ್ಡುತ್ತದೆ ಎಂಬುದಾಗಿ ಅಧ್ಯಯನಗಳು ತಿಳಿಸುತ್ತಿವೆ. ಇತರ ಮಕ್ಕಳಿಗೆ ಹೋಲಿಸಿದಾಗ ಇವರ ಆಲೋಚನಾ ಶಕ್ತಿ ಹೆಚ್ಚು ವೇಗವಾಗಿದ್ದು ಸಮಾಧಾನಕರವಾಗಿ ಕಾರ್ಯನಿರ್ವಿಹಿಸಬೇಕು ಎಂಬ ಸಿದ್ಧಾಂತ ಕಡಿಮೆಯಾಗಿರುತ್ತದೆ. ಏನಿದ್ದರೂ ಬೇಗನೇ ಮಾಡಬೇಕು ಎಂಬುದರಿಂದಲೇ ಅವಸರ ಅಪಾಯವನ್ನು ತಂದೊಡ್ಡುತ್ತದೆ.
ರಸ್ತೆಯನ್ನು ದಾಟುವಾಗ ಪಾಲಿಸಬೇಕಾದ ನಿಯಮಗಳಾದ ತಾಳ್ಮೆ, ಚುರುಕುತನ ಮತ್ತು ಜಾಗರೂಕತೆಯ ಕೊರತೆಯನ್ನು ಸ್ಥೂಲಕಾಯ ಮಕ್ಕಳು ಅನುಭವಿಸುತ್ತಾರೆ. ಇನ್ನು ಈ ಅಧ್ಯಯನ ಹೇಳುವಂತೆ ಸ್ಥೂಲಮಕ್ಕಳಲ್ಲಿ ಅವರು ರಸ್ತೆ ದಾಟುವ ಸಂದರ್ಭದಲ್ಲಿ ಅವರ ಸೆಲ್ಡಮ್ ನಿಧಾನವಾಗಿ ಪ್ರತಿಕ್ರಿಯಿಸುತ್ತದೆ ಇದರಿಂದ ಅಜಾಗರೂಕತೆ ಕೊರತೆ ಅವರನ್ನು ಕಾಡುತ್ತದೆ. ಇಂತಹ ಮಕ್ಕಳು ಹೆಚ್ಚು ಬೀಳುವುದು ಎಡುವುದು ಮಾಡುತ್ತಿರುತ್ತಾರೆ. ಅಂತೆಯೇ ಅವರು ವಾಹನ ದಟ್ಟಣೆಯಲ್ಲಿರುವಾಗ ಅವರ ರಸ್ತೆ ದಾಟುವಿಕೆ ಕ್ರಿಯೆಯು ಅವರ ದೇಹ ತೂಕವು ಟ್ರಾಫಿಕ್ಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಆಧರಿಸಿರುತ್ತದೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.
ಹೆಚ್ಚುವರಿ ತೂಕವು ವ್ಯಕ್ತಿಯ ಕೀಲುಗಳ ಮೇಲೆ ಒತ್ತಡವನ್ನು ಹೇರುವುದರಿಂದ ಇದು ಸಾಕಷ್ಟು ಅನಾನುಕೂಲವನ್ನು ಉಂಟುಮಾಡುತ್ತದೆ. ಮಗುವಿನ ಆಲೋಚನೆ, ಸಮಯ ಹೊಂದಿಸುವಿಕೆ, ಜ್ಞಾಪಕ ಶಕ್ತಿ, ಸಂಘಟಿಸುವ ಕೌಶಲ್ಯಗಳು ಮತ್ತು ಯೋಜಿಸುವುದರ ಮೇಲೆ ಸ್ಥೂಲಕಾಯ ಪರಿಣಾಮ ಬೀರುತ್ತದೆ. 200 ಮಕ್ಕಳ ಮೇಲೆ ಅಧ್ಯಯನವನ್ನು ಕೈಗೊಳ್ಳಲಾಗಿದ್ದು ರಸ್ತೆ ದಾಟುವ ಸಂದರ್ಭದಲ್ಲಿ ಇವರು ಹಠಾತ್ ಆಗಿ ಕಾರ್ಯಪ್ರವೃತ್ತರಾಗುತ್ತಾರೆ ಎಂಬುದು ತಿಳಿದು ಬಂದಿದೆ.
ಆದ್ದರಿಂದ ಸ್ಥೂಲಕಾಯ ಮಕ್ಕಳನ್ನು ಹೊಂದಿರುವ ಪೋಷಕರು ಈ ವಿಷಯದ ಮೇಲೂ ಹೆಚ್ಚು ಗಮನ ನೀಡಬೇಕಾಗುತ್ತದೆ. ಇತರ ಆರೋಗ್ಯ ಸಮಸ್ಯೆಗಳೊಂದಿಗೆ ಮಕ್ಕಳ ಆಲೋಚನೆ ಮತ್ತು ನಿರ್ಧರಿಸುವ ಶಕ್ತಿಯ ಮೇಲೂ ಬೊಜ್ಜು ಋಣಾತ್ಮಕ ಪ್ರಭಾವವನ್ನು ಬೀರುತ್ತದೆ. ಆದ್ದರಿಂದ ನಿಮ್ಮ ಮಕ್ಕಳು ಆರೋಗ್ಯಕರ ಆಹಾರವನ್ನು ಸೇವಿಸುವಂತೆ ನೋಡಿಕೊಂಡು ನಿಯಮಿತ ವ್ಯಾಯಾಮವನ್ನು ಮಾಡಿಸಿ ಸ್ಥೂಲಕಾಯವೆಂಬ ಭೂತದಿಂದ ಅವರನ್ನು ರಕ್ಷಿಸಿ.



Click it and Unblock the Notifications




