ಮಗುವಿನ ಹಸಿವು ನೀಗಿತು ಎಂಬ ಭ್ರಮೆ ಬೇಡ, ಎಚ್ಚರ!

By Manu

ಮಕ್ಕಳ ಆರೋಗ್ಯವೇ ಪೋಷಕರ ಭಾಗ್ಯ. ಹೌದು, ಮಗು ಆರೋಗ್ಯದಾಯಕವಾಗಿದ್ದು, ಮನೆಯ ತುಂಬಾ ಆನಂದದಿಂದ ಓಡಾಡುತ್ತಿದ್ದರೆ, ಇದಕ್ಕಿಂತ ಮಿಗಿಲಾದ ಭಾಗ್ಯ ಮತ್ತೊಂದಿಲ್ಲ. ಈ ಸನ್ನಿವೇಶಕ್ಕಾಗಿ ಎಲ್ಲಾ ಪೋಷಕರು ಹಂಬಲಿಸುತ್ತಿರುತ್ತಾರೆ. ಇತ್ತೀಚಿನ ಅಧ್ಯಯನವೊಂದು ಹೇಳುವ ಪ್ರಕಾರ ಮಗುವಿಗೆ ಆರೋಗ್ಯಕರವಾದ ಆಹಾರ ನೀಡಿದರೆ ಅದು ಮಕ್ಕಳ ಬಾಯಿಗೆ ಹೆಚ್ಚು ರುಚಿಸುವುದಿಲ್ಲ. ಇದರಿಂದ ಈ ಆಹಾರಗಳನ್ನು ಸೇವಿಸಲು ಒಪ್ಪದೇ ಕಡಿಮೆ ಸೇವಿಸುವ ಅಭ್ಯಾಸ ಈಗಲೂ ಚಾಲ್ತಿಯಲ್ಲಿದೆ.

ಪೋಷಕರು ಒತ್ತಾಯಿಸಿದರೂ ಸಹ ಮಕ್ಕಳು ಈ ಆಹಾರಗಳನ್ನು ಸೇವಿಸಲು ನಿರಾಕರಿಸುತ್ತವೆ. ಇಲ್ಲಿಯೇ ನಿಮ್ಮ ನಿಜವಾದ ಪ್ರತಿಭೆ ಹೊರಹೊಮ್ಮಬೇಕು. ಏಕೆಂದರೆ ಮಕ್ಕಳು ರುಚಿಸದ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವಿಸಲು ನಿರಾಕರಿಸುತ್ತವೆ. ಇಲ್ಲಿಯೇ ನಿಮಗೆ ನಿಜವಾದ ಸವಾಲು ಎದುರಾಗುತ್ತದೆ. ಮೊದಲಿಗೆ ಮಗುವಿನ ಮನಸ್ಥಿತಿಯನ್ನು ಅರಿಯಲು ಪ್ರಯತ್ನಿಸಿ. ಇದರಿಂದ ನೀವು ನೀಡುವ ಆಹಾರ ಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಿ. ಇದರಿಂದ ನಿಮ್ಮ ಮಗುವಿನ ಆರೋಗ್ಯವು ಇಮ್ಮಡಿಯಾಗಲಿದೆ.

ಉತ್ತರಗಳು ಕೇವಲ ಒಂದೇ ಉತ್ತರವಲ್ಲ. ಇದಕ್ಕೆ ಅನೇಕ ಉತ್ತರಗಳಿವೆ. ಮೊದಲಿಗೆ ನೀವು ಪೋಷಕರಾಗಿ ನಿಮ್ಮ ಮಗುವಿಗೆ ಅವಶ್ಯಕವಾಗಿರುವ ಪೌಷ್ಟಿಕಾಂಶಗಳನ್ನು ಒಮ್ಮೆ ಅರಿಯಲು ಪ್ರಯತ್ನಿಸಿ. ನಿಮ್ಮ ಮಗುವಿಗೆ ಸಮ ಪ್ರಮಾಣದಲ್ಲಿ ಕಾರ್ಬೊಹೈಡ್ರೇಟ್ಸ್, ಪ್ರೋಟಿನ್, ವಿಟಮಿನ್ಸ್ ಮತ್ತು ಖನಿಜ ಸತ್ವಗಳನ್ನು ನೀಡಬೇಕು. ಇದರ ಹೊರತಾಗಿ ಕೆಲವು ಮಕ್ಕಳಿಗೆ ಇತರ ಮಕ್ಕಳಿಗಿಂತ ಇನ್ನೂ ಹೆಚ್ಚಿನ ಪೌಷ್ಟಿಕಾಂಶದ ಅಗತ್ಯವಿರುತ್ತದೆ.

Cheat Sheet: Easy Tricks To Give Proper Nutrition To Your Child

ಆದ್ದರಿಂದ ನಿಮ್ಮ ಮಗುವಿನ ಆಹಾರದ ಅವಶ್ಯಕತೆಯನ್ನು ಮೊದಲು ತಿಳಿಯಿರಿ. ನಂತರದ ಹಂತವೆಂದರೆ ಮಕ್ಕಳು ಆಹಾರ ಸೇವಿಸುವ ವಿಧಾನ. ಈಗಿನ ಆಧುನಿಕ ಮಕ್ಕಳು ತುಂಬಾ ಚುರುಕಾಗಿದ್ದು, ಆಹಾರವನ್ನು ನೀಡುವ ಪೋಷಕರ ತಂತ್ರಗಳು ಬಹಳ ಸುಲಭವಾಗಿ ಕಂಡುಕೊಳ್ಳುತ್ತಾರೆ. ಆದ್ದರಿಂದ ಈಗಿನ ಆಧುನಿಕ ಮಕ್ಕಳ ಜೊತೆ ವ್ಯವಹರಿಸಲು ಹೆಚ್ಚಿನ ಕಾಳಜಿಯ ಅಗತ್ಯವಿದೆ. ಅಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಪೌಷ್ಟಿಕಾಂಶಗಳ ಕೊರತೆಯಿಂದಾಗಿ, ಮಕ್ಕಳಲ್ಲಿ ಮಾನಸಿಕ ಏಕಾಗ್ರತೆಯ ಸಮಸ್ಯೆ, ದುರ್ಬಲ ಜ್ಞಾಪಕ ಶಕ್ತಿ, ದುರ್ಬಲ ದೇಹ ಸಾಮರ್ಥ್ಯ, ರೋಗ ನಿರೋಧಕ ಶಕ್ತಿಯ ಕೊರತೆಗಳಿಗೆ ಕಾರಣವಾಗುತ್ತಿದ್ದು, ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಉದಾಹರಣೆ ಸಾಕಷ್ಟು ನಡೆಯುತ್ತಿದೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆಯು ಹೆಚ್ಚಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಮಕ್ಕಳು ಸೇವಿಸುವ ಆಹಾರದಲ್ಲಿ ಮೈಕ್ರೊ ನ್ಯೂಟ್ರಿಯಂಟ್ ಅಥವಾ ಅವಶ್ಯಕ ಪೌಷ್ಟಿಕಾಂಶದ ಕೊರತೆಯೇ ಕಾರಣವಾಗಿದೆ. ಈಗಿನ ಆಧುನಿಕ ಜೀವನ ಶೈಲಿ ಮತ್ತು ಆಹಾರ ಪದ್ಧತಿಗೆ ಧನ್ಯವಾದ ಹೇಳಲೇಬೇಕು. ಕಾಣದ ಹಸಿವು ಪೌಷ್ಟಿಕಾಂಶ ಕೊರತೆಯಿಂದ ಬರಲು ಕಾರಣವಾಗುತ್ತಿದ್ದು, ನಮ್ಮ ಮಕ್ಕಳು ವಿಟಮಿನ್ ಕೊರತೆ ಮತ್ತು ಖನಿಜ ಸತ್ವಗಳಾದ ಕಬ್ಬಿಣ, ಜಿಂಕ್, ಕ್ಯಾಲ್ಸಿಯಮ್, ವಿಟಮಿನ್ ಎ, ವಿಟಮಿನ್ ಬಿ, ಇತರೆ ಸತ್ವಗಳ ಕೊರತೆಯಿಂದ ಮುಚ್ಚಿಟ್ಟ ಅಥವಾ ಕಾಣದ ಹಸಿವಿನಿಂದ ಬಳಲುತ್ತಿರುತ್ತಾರೆ.

ಈ ಪೌಷ್ಟಿಕಾಂಶಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಅವಶ್ಯಕ. ಮತ್ತೊಂದು ಅಚ್ಚರಿಯ ಸಂಗತಿಯೆಂದರೆ, ಇಡೀ ಪ್ರಪಂಚದಲ್ಲಿ 2 ಬಿಲಿಯನ್ ಜನರು ತಮಗೆ ಪೌಷ್ಠಿಕಾಂಶಗಳನ್ನು ಖರೀದಿಸಿ ಸೇವಿಸುವ ಸಾಮರ್ಥ್ಯವಿದ್ದರೂ ಸಹ ಅವರು ಈ ರೀತಿಯ ಹಸಿವಿನಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯು ಸದ್ಯಕ್ಕೆ ಯಾವುದೇ ತೊಂದರೆ ನೀಡದಿದ್ದರೂ ಸಹ ದಿನಕಳೆದಂತೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ದೀರ್ಘಕಾಲದ ಈ ತೊಂದರೆಯಿಂದ ಮಾನಸಿಕ ಏಕಾಗ್ರತೆಯ ಸಮಸ್ಯೆ, ದುರ್ಬಲ ಜ್ಞಾಪಕ ಶಕ್ತಿ, ದುರ್ಬಲ ದೇಹ ಸಾಮರ್ಥ್ಯ, ರೋಗ ನಿರೋಧಕ ಶಕ್ತಿಯ ಕೊರತೆಗಳಿಗೆ ಕಾರಣವಾಗಲಿದ್ದು, ಇನ್ನು ಕೆಲವು ಪ್ರಕರಣಗಳಲ್ಲಿ ಪೌಷ್ಠಿಕಾಂಶ ಕೊರತೆಯಿಂದ ಸಾವು ಕೂಡ ಸಂಭವಿಸುವ ಸಂದರ್ಭಗಳು ಎದುರಾಗುತ್ತವೆ. ಪೋಷಕರಾಗಿ ನಮಗೆ ಈ ರೀತಿಯ ಹಸಿವಿನ ಬಗ್ಗೆ ಅರಿವಿರುವುದಿಲ್ಲ. ಇದರಿಂದ ನಿಮ್ಮ ಮಗುವಿಗೆ ಅವಶ್ಯಕ ಪೌಷ್ಠಿಕಾಂಶಗಳನ್ನು ನೀಡದೆ ತೊಂದರೆ ಎದುರಿಸಬೇಕಾಗುತ್ತದೆ.

ಈ ರೀತಿಯ ಪೌಷ್ಠಿಕಾಂಶದ ಕೊರತೆಯನ್ನು ಹೇಗೆ ಗಮನಿಸುವುದು?
ಇದಕ್ಕೆ ಉತ್ತರ ಪ್ರಶ್ನೆಯಲ್ಲಿಯೇ ಇದೆ. ಮೊದಲಿಗೆ ನಮ್ಮ ಮಕ್ಕಳಿಗೆ ಹೆಚ್ಚು ಪೌಷ್ಠಿಕಾಂಶಯುಕ್ತ ಆಹಾರವನ್ನು ನೀಡಬೇಕು. ಈಗಿನ ಆಧುನಿಕ ತಿನಿಸುಗಳಲ್ಲಿ ಕ್ಯಾಲೋರಿ ಸತ್ವಗಳು ಹೆಚ್ಚಾಗಿದ್ದರೂ ಸಹ, ಇವುಗಳಲ್ಲಿ ಪೌಷ್ಟಿಕಾಂಶದ ಕೊರತೆಯಿರುತ್ತದೆ. ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಆದ್ದರಿಂದ, ಪೋಷಕರು ಮೊದಲಿಗೆ ಹೆಚ್ಚಿನ ಕ್ಯಾಲೋರಿಯುಕ್ತ ಆಹಾರಕ್ಕೂ ಮತ್ತು ಹೆಚ್ಚಿನ ಪೌಷ್ಟಿಕಾಂಶಯುಕ್ತ ಆಹಾರಕ್ಕೂ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ಹೆಚ್ಚಿನ ಕ್ಯಾಲೋರಿಯುಕ್ತ ಆಹಾರಗಳು ಕೇವಲ ಹೊಟ್ಟೆಯನ್ನು ತುಂಬಿಸುತ್ತದೆಯೇ ವಿನಹ ದೇಹದ ಹಸಿವನ್ನು ನೀಗಿಸುವುದಿಲ್ಲ. ನಿಮ್ಮ ಮಕ್ಕಳಿಗೆ ಹೆಚ್ಚಿನ ಕ್ಯಾಲೋರಿಯಿರುವ ಮತ್ತು ಹೆಚ್ಚಿನ ಪೌಷ್ಟಿಕಾಂಶವಿರುವ ಎರಡೂ ರೀತಿಯ ಆಹಾರಗಳನ್ನು ಸೇವಿಸಲು ನೀಡಬೇಕು. ಏಕೆಂದರೆ, ಕೇವಲ ಮಗುವಿನ ಹೊಟ್ಟೆ ತುಂಬಿದರೆ ಸಾಲದು ಒಟ್ಟಾರೆಯಾಗಿ ದೇಹಕ್ಕೆ ಅವಶ್ಯವಿರುವ ಪೌಷ್ಟಿಕಾಂಶಗಳನ್ನು ನೀಡಿ ದೇಹದ ಹಸಿವನ್ನು ನೀಗಿಸುವ ಕಡೆ ಹೆಚ್ಚಿನ ಗಮನ ಹರಿಸಬೇಕು.

ಮಕ್ಕಳಿಗೆ ಅವಶ್ಯಕವಾಗಿ ಪೌಷ್ಟಿಕಾಂಶ ಗುಣ ನೀಡುವ ಉತ್ತಮವಾದ ಸಾಧನವೆಂದರೆ ಹಾಲು. ಇದು ನಿಮ್ಮ ಮಗುವಿಗೆ ಗಾತ್ರದ ಮತ್ತು ಸೂಕ್ಷ್ಮ ಪೌಷ್ಟಿಕಾಂಶ ಸತ್ವಗಳನ್ನು ಹೇರಳಾವಾಗಿ ನೀಡಿ ನಿಮ್ಮ ಮಗುವಿನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಆದರೆ, ಹಾಲು ನೀಡಿದರೂ ಸಹ ಅನೇಕ ತೊಂದರೆಗಳನ್ನು ಎದುರಿಸಲಾಗುತ್ತಿದೆ.

ವಿಶೇಷವಾಗಿ ತಿಳಿ ಹಾಲಿನಲ್ಲಿ ಯಾವುದೇ ರುಚಿಯು ಮಗುವಿನ ಅನುಭವಕ್ಕೆ ಬರುವುದಿಲ್ಲ. ಆದ್ದರಿಂದ ಹಾಲನ್ನು ಹೆಚ್ಚು ಪೌಷ್ಟಿಕಾಂಶಯುಕ್ತಗೊಳಿಸಲು ಇದಕ್ಕೆ ಒಂದು ಚಮಚ ಹಾರ್ಲಿಕ್ಸ್ ಬೆರೆಸಿ ನೀಡಿದರೆ, ಮಗುವಿಗೆ ಪೌಷ್ಟಿಕಾಂಶದ ಜೊತೆಗೆ ರುಚಿಯ ಅನುಭವವೂ ಆಗುತ್ತದೆ. ಜೊತೆಗೆ ಸೂಕ್ಷ್ಮ ಪೌಷ್ಟಿಕಾಂಶಗಳೂ ಸಹ ನಿಮ್ಮ ಮಗುವಿಗೆ ಸೇರಿಕೊಳ್ಳುತ್ತದೆ.

ನಿಮ್ಮ ಮಗುವನ್ನು ಹುರಿದುಂಬಿಸಿ
ಹಾರ್ಲಿಕ್ಸ್ ಬೆರೆಸಿದ ಹಾಲು ಹೆಚ್ಚು ರುಚಿಕರವಾಗಿರುವುದನ್ನು ಮಗುವಿಗೆ ಮನವರಿಕೆ ಮಾಡಿ ಅದನ್ನು ಕುಡಿಯಲು ಹುರಿದುಂಬಿಸಬೇಕು. ಮಗುವಿಗೆ ಅದನ್ನು ಕಲಸಲು ಬಿಡಿ ನಂತರ ಅದರ ಫಲಿತಾಂಶವನ್ನು ಮಗುವು ನೋಡಿ ಆನಂದಿಸುವುದನ್ನು ನೀವು ಕಾಣುವಿರಿ. ನಿಮ್ಮ ಮಗು ಈಗ ಈ ಪೌಷ್ಟಿಕ ಪಾನೀಯವನ್ನು ಒಲ್ಲೆ ಎನ್ನುವುದೇ ಇಲ್ಲ. ಮತ್ತೊಂದು ಆಯಾಮದಲ್ಲಿ ನೀವು ನಿಮ್ಮ ಮಗುವಿಗೆ ಪೌಷ್ಟಿಕಾಂಶಯುಕ್ತ ಹಾರ್ಲಿಕ್ಸ್ ಹಾಲನ್ನು ನೀಡಿ ಅದರ ಬೆಳವಣಿಗೆಗೆ ಕಾರಣರಾಗುತ್ತೀರಿ. ಇದು ನಿಮ್ಮ ಮಗುವಿಗೆ ಹೆಚ್ಚು ಸಹಕಾರಿ.

ಆಹಾರವನ್ನು ಜಂಕ್ ಫುಡ್ ನಂತೆ ಕಾಣುವ ರೀತಿಯಲ್ಲಿ ನೀಡಿ
ಹೌದು, ಈ ತಂತ್ರವು ನಿಮ್ಮ ಮಗುವಿಗೆ ನಿಜವಾಗಲೂ ಇಷ್ಟವಾಗುತ್ತದೆ. ನಿಮ್ಮ ಮಗುವು ಪಿಜ್ಜಾ, ಬರ್ಗರ್, ಪಾಸ್ಟಾ, ನೂಡಲ್ಸ್ ನಂತಹ ಜಂಕ್ ಫುಡ್ ಗಳ ಸೇವನೆಯನ್ನು ಇಷ್ಟಪಡುವುದರಿಂದ ಈ ರೀತಿಯ ಆಕರ್ಷಕ ರೂಪದಲ್ಲಿ ತಿನಿಸನ್ನು ನೀಡಿ. ಇದಕ್ಕೆ ಸುಲಭವಾದ ಉಪಾಯವಿದೆ. ನಿಮಗೆ ನಿಮ್ಮ ಮಗುವು ಹೆಚ್ಚು ತರಕಾರಿಗಳನ್ನು ಸೇವಿಸಬೇಕೆಂದು ಬಯಸಿದಲ್ಲಿ, ಆಲಿವ್ ತೈಲದಲ್ಲಿ ತರಕಾರಿಯನ್ನು ಕರಿದು, ಆಮ್ಲೆಟ್ ರೂಪದಲ್ಲಿ ತಯಾರಿಸಿ ತರಕಾರಿಯನ್ನು ಆಮ್ಲೆಟ್ ಒಳಗೆ ಕಾಣದಂತೆ ಇರಿಸಿ. ಇದಕ್ಕೆ ಮನೆಯಲ್ಲಿಯೇ ಮಾಡಿದಂತಹ ಮಸಾಲೆಗಳನ್ನು ರುಚಿಗೆ ತಕ್ಕಷ್ಟು ಬೆರೆಸಿ. ಈ ಬಗ್ಗೆ ಅಂತರ್ಜಾಲದಲ್ಲಿ ಅನೇಕ ಸಂಗತಿಗಳು ದೊರೆಯುತ್ತದೆ.

ಆಹಾರ ಸೇವಿಸುವುದನ್ನು ಮೋಜಿನ ಪ್ರಕ್ರಿಯೆಯಾಗಿ ಬದಲಾಯಿಸಿ
ನಿಮಗೆ ನಿಮ್ಮ ಮಗುವಿನ ಜನ್ಮದಿನದ ಕೇಕ್ ನೆನಪಿದೆಯೇ? ಅದರ ಮೇಲೆ ನಿಮ್ಮ ಮಗುವಿಗೆ ಇಷ್ಟವಾಗುವಂತಹ ಆಟಿಕೆಗಳ ರೂಪಗಳಾದ ಡಾಲ್, ಟೆಡ್ಡೀಸ್‌ನಂತಹ ರೂಪಗಳು ಇರುವುದನ್ನು ಗಮನಿಸಿದ್ದೀರಾ. ಈ ಉಪಾಯವನ್ನು ನೀವು ನೀಡುವ ಇತರೆ ಪೌಷ್ಟಿಕಾಂಶಯುಕ್ತ ಆಹಾರಗಳ ಮೇಲೂ ಪ್ರಯತ್ನಿಸಿ. ಸಹಜ ಆಹಾರಗಳನ್ನು ಆಕರ್ಷಕವಾಗಿ ಕಾಣುವಂತೆ ಜಜ್ಜಿದ ಚಾಕಲೇಟ್, ಮನೆಯಲ್ಲಿ ಮಾಡಿದ ಜೆಲ್ಲೀಸ್, ಜಾಮ್ ಅಥವಾ ಕೆಚಪ್ ಅನ್ನು ಬಳಸಿ ಸಿಂಗರಿಸಿ. ನಿಮ್ಮ ಮಗುವು ಈ ಆಹಾರವನ್ನು ಆನಂದದಿಂದ ಸವಿಯುವುದನ್ನು ನೋಡುತ್ತೀರಿ.

ಮಗುವಿಗೆ ಒತ್ತಾಯಿಸಬೇಡಿ
ನಿಮ್ಮ ಮಗುವು ಯಾವುದೇ ತರಕಾರಿ, ಮೊಟ್ಟೆ ಅಥವಾ ಹಾಲನ್ನು ಸೇವಿಸಲು ನಿರಾಕರಿಸಿದಲ್ಲಿ, ಸೇವಿಸುವಂತೆ ಒತ್ತಾಯಿಸಬೇಡಿ. ಇದಕ್ಕೆ ಬೇರೆ ರೀತಿಯ ತಂತ್ರಗಳನ್ನು ಪ್ರಯೋಗಿಸಬೇಕಾಗುತ್ತದೆ. ಉದಾಹರಣೆಗೆ ಪುಡಿಂಗ್‌ಗೆ ಮೊಟ್ಟೆಯನ್ನು ಬೆರೆಸಿ ನೀಡಿ ಅಥವಾ ಒಂದು ಲೋಟ ಹಾಲಿಗೆ ಹಾರ್ಲಿಕ್ಸ್ ಬೆರೆಸಿ ನೀಡಿ. ಹಾಗೆಯೇ ಪೌಷ್ಟಿಕಾಂಶದ ಸಮತೋಲನವನ್ನು ಕಾಪಾಡಲು ಅನೇಕ ರೀತಿಯ ಉಪಾಯಗಳನ್ನು ಅನುಸರಿಸಿ ನಿಮ್ಮ ಮಗುವಿನ ಬೆಳವಣಿಗೆಗೆ ನೆರವಾಗಿ.

X
Desktop Bottom Promotion