Latest Updates
-
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!!
ಮಕ್ಕಳ ಆರೋಗ್ಯ ವೃದ್ಧಿಗಾಗಿ ದಾಳಿಂಬೆಯ ಚಿನ್ನದಂತಹ ಗುಣಗಳು
ಮಕ್ಕಳ ಆರೈಕೆಯು ಎಲ್ಲ ಪೋಷಕರ ಜವಾಬ್ದಾರಿಯಾಗಿರುತ್ತದೆ. ಮಕ್ಕಳಿಗೆ ನೀಡುವ ಆಹಾರ ಶೈಲಿಯ ಬಗ್ಗೆ ಪೋಷಕರು ಹೆಚ್ಚು ಆಲೋಚನಾ ಪೂರ್ವಕವಾಗಿರಬೇಕು, ಜೊತೆಗೆ ಹೆಚ್ಚು ಅವಶ್ಯವಿರುವ ಪೌಷ್ಠಿಕಾಂಶಯುಕ್ತ ಆಹಾರಗಳನ್ನು ಸಕಾಲದಲ್ಲಿ ನೀಡಬೇಕು. ಅದರಿಂದ ಮಕ್ಕಳ ಬೆಳವಣಿಗೆಯು ಸುಗಮಗೊಂಡು ಹೆಚ್ಚು ಚುರುಕಾಗಲು ನೆರವಾಗುತ್ತದೆ. ಈ ನಿಟ್ಟಿನಲ್ಲಿ ಹಣ್ಣುಗಳನ್ನು ಮಕ್ಕಳಿಗೆ ನೀಡುವಾಗ, ಅದರಲ್ಲಿರುವ ಪೌಷ್ಠಿಕಾಂಶ ಸತ್ವಗಳ ಬಗ್ಗೆ ಒಮ್ಮೆ ಅರಿಯಿರಿ. ನೀವು ನೀಡುವ ಹಣ್ಣುಗಳಲ್ಲಿ ಮಕ್ಕಳಿಗೆ ಬೇಕಾಗುವ ಪೌಷ್ಠಿಕಾಂಶ ಸತ್ವಗಳು ಇವೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ.
ಬನ್ನಿ ಈ ಲೇಖನದಲ್ಲಿ ದಾಳಿಂಬೆ ಹಣ್ಣಿನ ವಿಶೇಷವನ್ನು ಮತ್ತು ಮಕ್ಕಳಿಗೆ ಅದರಿಂದಾಗುವ ಲಾಭಾದ ಬಗ್ಗೆ ಕೆಲ ಸಂಗತಿಗಳನ್ನು ನಿಮಗಾಗಿ ನೀಡಲಾಗಿದೆ. ದಾಳಿಂಬೆಯನ್ನು ನಿಮ್ಮ ಮಕ್ಕಳ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳಲೇಬೇಕಾದ ಆಹಾರವಾಗಿದೆ. ಇದನ್ನು ನಿಮ್ಮ ಶಿಶುವಿಗೆ 6 ತಿಂಗಳು ಪೂರೈಸಿದ ಮೇಲೆ ನೀಡಬಹುದಾಗಿದೆ. ಇದೊಂದು ಸೂಪರ್ ಫುಡ್ ಆಗಿದ್ದು, ಇದರಲ್ಲಿ ಉತ್ಕರ್ಷಣ ನಿರೋಧಕ ಸತ್ವವು ಯಥೇಚ್ಛವಾಗಿದೆ. ಇದನ್ನು ಪಾನೀಯ ಆಥವಾ ರೂಪದಲ್ಲಿ ಮಕ್ಕಳಿಗೆ ನೀಡಬಹುದಾಗಿದೆ. ಇದರಲ್ಲಿ ಫೋಲಿಯೇಟ್, ನಾರಿನ ಅಂಶ, ಪೊಟಾಷಿಯಮ್ ಮತ್ತು ನೀರಿನಲ್ಲಿ ಕರಗುವ ವಿಟಮಿನ್ ಬಿ ಕಾಂಪ್ಲೆಕ್ಸ್ ಸತ್ವಗಳು ಹೇರಳವಾಗಿದೆ. ದಾಳಿಂಬೆ ಹಣ್ಣಿನಲ್ಲಿರುವ 10 ಅದ್ಭುತ ಪ್ರಯೋಜನಗಳು
ದಾಳಿಂಬೆಯು ನಿಮ್ಮ ಮಗುವಿನ ಆರೋಗ್ಯದ ಆರೈಕೆಯಲ್ಲಿ ನಾನಾ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಇದು ನಿಮ್ಮ ಶಿಶುವಿನ ಹೊಟ್ಟೆಯ ಭಾಗಕ್ಕೆ ಹಿತಕರ ಅನುಭವವನ್ನು ನೀಡಿ ಮಲಬಾಧೆಯನ್ನು ನಿಯಂತ್ರಿಸುತ್ತದೆ ಮತ್ತು ಗ್ಯಾಸ್ ಟ್ರೈಟಿಸ್ ತೊಂದರೆಯನ್ನು ನಿವಾರಿಸುತ್ತದೆ. ಅದರಲ್ಲೂ ಶಿಶುವಿಗೆ ಹಲ್ಲು ಹುಟ್ಟುವಾಗ ಇದು ಹಿತಕರವಾದ ಅನುಭವ ನೀಡುವ ಸಾಧನವಾಗಿದೆ. ದಾಳಿಂಬೆಯಿಂದ ನಿಮ್ಮ ಶಿಶುವಿಗೆ ಆಗುವ ಪ್ರಯೋಜನಗಳ ಬಗ್ಗೆ ಈ ತಾಣದಲ್ಲಿ ನೀಡಲಾಗಿದ್ದು, ಅದರ ಪ್ರಯೋಜನ ಹೊಂದಿರಿ. ವಿವರಗಳಿಗೆ ಮುಂದೆ ಓದಿ...

ಉರಿಯೂತ ನಿವಾರಕ
ದಾಳಿಂಬೆ ರಸವು ಬ್ಯಾಕ್ಟೀರಿಯಲ್ ಸೂಕ್ಷ್ಮಜೀವಿಗಳನ್ನು ನಾಶ ಮಾಡಿ ಉರಿಯೂತವನ್ನು ನಿವಾರಿಸುತ್ತದೆ. ಬಯೋಕೆಮಿಕಲ್ ಮತ್ತು ಎಂಜಿಮ್ಗಳನ್ನು ದಾಳಿಂಬೆಯು ಒಳಗೊಂಡಿದ್ದು ಉರಿಯೂತ ನಿವಾರಕ ಅಂಶಗಳನ್ನು ದೇಹದಲ್ಲಿ ಉತ್ಪತ್ತಿ ಮಾಡುತ್ತದೆ.

ಜೀರ್ಣಸಮಸ್ಯೆಗೆ ರಾಮಬಾಣ
ಬ್ಯಾಕ್ಟೀರಿಯಾ ಮತ್ತು ವೈರಲ್ ಕಾರಣದಿಂದ ಉಂಟಾಗುವ ಅತಿಸಾರ ಮತ್ತು ಭೇದಿಯಂತಹ ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಿದೆ. ಹಣ್ಣಲ್ಲದೆ ಅದರ ಸಿಪ್ಪೆ ಮತ್ತು ಎಲೆಗಳು ಪಚನದ ಎಲ್ಲಾ ಸಮಸ್ಯೆಗಳನ್ನು ದೂರಮಾಡುವಲ್ಲಿ ಉಪಯೋಗಕಾರಿಯಾಗಿದೆ.

ಕರುಳಿನ ಹುಳುಗಳನ್ನು ನಿವಾರಿಸುತ್ತದೆ
ಮಕ್ಕಳಲ್ಲಿ ಕರುಳಿನ ಹುಳುಗಳು ಸರ್ವೇ ಸಾಮಾನ್ಯವಾಗಿದೆ. ಈ ಹುಳುಗಳು ಸಣ್ಣ ಕರುಳಿನ ಪೋಷಕಾಂಶಗಳ ಏಳಿಗೆಗೆ ತಡೆಯೊಡ್ಡುತ್ತವೆ. ದಾಳಿಂಬೆ ರಸವನ್ನು ಸೇವಿಸುವುದರಿಂದ ಈ ಹುಳುಗಳ ನಿವಾರಣೆ ಸಾಧ್ಯ.

ಜ್ವರ ನಿಯಂತ್ರಕ
ದಾಳಿಂಬೆ ರಸವನ್ನು ಸೇವಿಸುವುದರಿಂದ ಜ್ವರವು ನಿಯಂತ್ರಣಕ್ಕೆ ಬರುವುದಲ್ಲದೆ ಮಕ್ಕಳಿಗೆ ಅತ್ಯಗತ್ಯವಾಗಿರುವ ಪೋಷಕಾಂಶಗಳನ್ನು ಒದಗಿಸುವಲ್ಲಿ ಸಹಾಯಕವಾಗಿದೆ. ದಾಳಿಂಬೆಯಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ಜ್ವರ, ಶೀತವನ್ನು ನಿಯಂತ್ರಣಕ್ಕೆ ತಂದು ದೇಹಕ್ಕೆ ಶಕ್ತಿಯನ್ನು ಪೂರೈಸುತ್ತದೆ.

ದಂತಕುಳಿಯ ಸಮಸ್ಯೆಗಳ ನಿವಾರಣೆಗೆ
ಹಲ್ಲಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ದಾಳಿಂಬೆ ಪ್ರಯೋಜನಕಾರಿಯಾಗಿದೆ. ಮಕ್ಕಳಲ್ಲಿ ಆಗಾಗ್ಗೆ ಕಂಡುಬರುವ ಹಲ್ಲಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ದಾಳಿಂಬೆ ರಾಮಬಾಣದಂತಿದ್ದು ಹಲ್ಲಿನ ಇತರೆ ಸಮಸ್ಯೆಗಳನ್ನು ಇದು ಪರಿಹರಿಸುತ್ತದೆ. ವೈರಸ್ ಮತ್ತು ಜೀವವಿರೋಧಿ ಅಂಶಗಳು ಇದರಲ್ಲಿದ್ದು ಹಲ್ಲಿನ ಸಮಸ್ಯೆಗಳನ್ನು ದೂರಮಾಡುತ್ತವೆ.

ಯಕೃತ್ತನ್ನು ಸಂರಕ್ಷಿಸುತ್ತದೆ
ಮಕ್ಕಳ ಯಕೃತ್ತನ್ನು ಸುಧಾರಿಸಲು ದಾಳಿಂಬೆ ಸೇವಿಸುವಿಕೆ ಉತ್ತಮವಾದುದು. ಇದರಲ್ಲಿರುವ ಉತ್ಕರ್ಷಕ ನಿರೋಧಿ ಗುಣಗಳು ಆಕ್ಸಿಡೇಟೀವ್ ಒತ್ತಡವನ್ನು ನಿವಾರಿಸಿ ಯಕೃತ್ತನ್ನು ಸಂರಕ್ಷಿಸುತ್ತದೆ.



Click it and Unblock the Notifications











