Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಶಾಲೆಗಳಲ್ಲಿ ಆಟ, ಪಾಠದ ಜೊತೆ ಧ್ಯಾನಕ್ಕೂ ಪ್ರಾಮುಖ್ಯತೆ ಇರಲಿ
ಪುರಾತನ ಕಾಲದಿಂದಲೂ ನಮ್ಮ ಋಷಿಮುನಿಗಳು ತಮ್ಮ ಮನಸ್ಸನ್ನು ನಿಗ್ರಹದಲ್ಲಿಡಲು ಮತ್ತು ಏಕಾಗ್ರತೆ ಸಾಧಿಸಲು ಬಳಸಿಕೊಂಡಿದ್ದ ಸಾಧನವೆಂದರೆ ಅದೇ ಧ್ಯಾನ. ಇದು ಮನಸ್ಸು ಹಾಗೂ ಬುದ್ಧಿಯನ್ನು ಮಾತ್ರ ನಿಯಂತ್ರಿಸುವುದಲ್ಲದೆ ಆರೋಗ್ಯ ಸಹಿತ ಹಲವಾರು ಲಾಭಗಳಿವೆ. ಇದೆಲ್ಲದರ ಬಗ್ಗೆ ನಮಗೆ ತಿಳಿದಿದೆ. ಆದರೆ ಶಾಲೆಗಳಲ್ಲಿ ಧಾನ್ಯವನ್ನು ಅಳವಡಿಸಿಕೊಳ್ಳುವುದರ ಪ್ರಾಮುಖ್ಯತೆ ಬಗ್ಗೆ ಯಾವತ್ತಾದರೂ ಚಿಂತಿಸಿದ್ದೀರಾ?
ಧ್ಯಾನ ಮಾಡುವಂತಹ ಮಕ್ಕಳು ಇತರ ಮಕ್ಕಳಿಗಿಂತ ಉತ್ತಮ ನಡವಳಿಕೆ, ಭಾವನೆ ಮತ್ತು ಬುದ್ಧಿವಂತಿಕೆಯ ಸರಾಸರಿಯನ್ನು ಹೊಂದಿರುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ. ಮಕ್ಕಳು ಧ್ಯಾನ ಮಾಡುವುದರಿಂದ ಅವರು ಕಲಿಕೆ ಮತ್ತು ಇತರ ಒತ್ತಡಗಳಿಂದ ದೂರವಾಗಿ ಆರಾಮ ಮಾಡಲು ನೆರವಾಗುತ್ತದೆ. ಇದೇ ಧ್ಯಾನವನ್ನು ಶಾಲೆಗಳಲ್ಲಿ ಅಳವಡಿಸಲು ಬೇಕಾಗಿರುವ ಅತೀ ಮುಖ್ಯ ಅಂಶಗಳೆಂದರೆ ತರಬೇತಿ ಮತ್ತು ಸ್ಥಿರತೆ. ಶಾಲೆಯಲ್ಲಿ ಧ್ಯಾನ ಅಭ್ಯಾಸ ಮಾಡುವ ಮಕ್ಕಳಲ್ಲಿ ಒತ್ತಡದ ಹಾರ್ಮೋನ್ ಆಗಿರುವ ಕಾರ್ಟಿಸಾಲ್ ತುಂಬಾ ಕಡಿಮೆ ಇರುತ್ತದೆ.

ಆದರೆ ಇತರ ವಿದ್ಯಾರ್ಥಿಗಳಲ್ಲಿ ಇದು ಹೆಚ್ಚಿರುತ್ತದೆ ಎಂದು ಅಧ್ಯಯನಗಳು ಹೇಳಿವೆ. ಧ್ಯಾನವು ಮಕ್ಕಳನ್ನು ಶಾಂತವಾಗಿರುವಂತೆ ಮಾಡುತ್ತದೆ. ಮನೆಗಳಲ್ಲಿ ಇರುವಂತಹ ವಾತಾವರಣದ ನಡುವೆ ಮಕ್ಕಳು ಧ್ಯಾನ ಮಾಡುವುದು ತುಂಬಾ ಕಠಿಣ. ಶಾಲೆ ಇದಕ್ಕೆ ಸೂಕ್ತವಾದ ಸ್ಥಳ. ಯಾಕೆಂದರೆ ಇಲ್ಲಿ ಪ್ರತಿಯೊಂದು ವೇಳಾಪಟ್ಟಿಯಂತೆ ನಡೆಯುತ್ತದೆ ಹಾಗೂ ಧ್ಯಾನ ಮಾಡಲು ಇದು ಉತ್ತಮ ಸ್ಥಳ. ಶಾಲೆಗಳಲ್ಲಿ ಧ್ಯಾನವನ್ನು ಯಾಕಾಗಿ ಅಳವಡಿಸಿಕೊಳ್ಳಬೇಕು ಎನ್ನುವುದರ ಬದಲು ನಾವು ಇಲ್ಲಿ ಚರ್ಚಿಸೋಣ.
ಒತ್ತಡ ಕಡಿಮೆ ಮಾಡುತ್ತದೆ
ಇಂದಿನ ದಿನಗಳಲ್ಲಿ ಶಾಲೆ ಎನ್ನುವುದು ಅತ್ಯಂತ ಒತ್ತಡದ ಸ್ಥಳಗಳಲ್ಲಿ ಒಂದಾಗಿದ್ದು, ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡವನ್ನು ಕಡಿಮೆ ಮಾಡಲು ಇದು ಅತ್ಯುತ್ತಮ ಉಪಾಯ. ಧ್ಯಾನವು ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
ಶೈಕ್ಷಣಿಕವಾಗಿ ಸುಧಾರಣೆ
ಶಾಲೆಯಲ್ಲಿ ಪ್ರತೀ ದಿನ ಧಾನ್ಯ ಅಭ್ಯಾಸ ಮಾಡುವಂತಹ ಮಕ್ಕಳು ತಮ್ಮ ಶೈಕ್ಷಣಿಕವಾಗಿಯೂ ಉತ್ತಮ ಅಂಕಗಳನ್ನು ಪಡೆಯುತ್ತಾರೆ. ಧ್ಯಾನದಿಂದ ಮಕ್ಕಳು ಹೆಚ್ಚಿನ ಏಕಾಗ್ರತೆ ಮತ್ತು ಬುದ್ದಿಶಕ್ತಿಯನ್ನು ಪಡೆಯುತ್ತಾರೆ. ಶಾಲೆಗಳಲ್ಲಿ ಧ್ಯಾನವನ್ನು ಅಳವಡಿಸಲು ಇದೂ ಒಂದು ಕಾರಣವಾಗಿದೆ.
ಬುದ್ದಿಶಕ್ತಿ ಸುಧಾರಣೆ
ಬಾಲ್ಯದಲ್ಲಿ ಮಕ್ಕಳು ಪ್ರತಿಯೊಂದನ್ನು ಬೇಗನೆ ಕಲಿತುಕೊಳ್ಳುತ್ತಾರೆ. ಇದರಲ್ಲಿ ಹೆಚ್ಚಿನದನ್ನು ಅವರು ಉಳಿಸಿಕೊಂಡು ಜೀವಮಾನವಿಡಿ ಅದನ್ನು ನೆನಪಿಸಿಕೊಳ್ಳುತ್ತಾರೆ. ಮಕ್ಕಳು ದಿನದಲ್ಲಿ ಅರ್ಧ ಗಂಟೆ ಕಾಲ ಧ್ಯಾನ ಮಾಡಿದರೆ ಇದು ಬುದ್ದಿಶಕ್ತಿಯನ್ನು ಉತ್ತಮಪಡಿಸುತ್ತದೆ.
ಹಾರ್ಮೋನ್ ಗಳ ಸಮತೋಲನ
ಬದಲಾದ ಜೀವನಶೈಲಿ ಮತ್ತು ಆಹಾರಕ್ರಮದಿಂದಾಗಿ ಪ್ರತಿಯೊಬ್ಬ ಮಕ್ಕಳಲ್ಲಿ ಹಾರ್ಮೋನ್ ಅಸಮತೋಲನ ಕಂಡುಬರುವುದು ಸಾಮಾನ್ಯ ವಿಷಯವಾಗಿದೆ. ದೇಹದಲ್ಲಿನ ಹಾರ್ಮೋನ್ ನ್ನು ಸಮತೋಲನದಲ್ಲಿಡಲು ಧ್ಯಾನ ಅತ್ಯುತ್ತಮ ಆಯ್ಕೆ. ಇದು ಬೇಗನೆ ಮೈನೆರೆಯುವುದನ್ನು ತಡೆಯಲು ನೆರವಾಗುತ್ತದೆ.
ವ್ಯಕ್ತಿತ್ವ ಸುಧಾರಣೆ
ಪರಿಪೂರ್ಣವಾದ ವ್ಯಕ್ತಿತ್ವ ಮಕ್ಕಳಲ್ಲಿ ಮೂಡಿಬರಬೇಕಾದರೆ ಅವರು ಧ್ಯಾನ ಮಾಡುವುದು ಅತೀ ಮುಖ್ಯ. ಧ್ಯಾನದಿಂದ ಮಕ್ಕಳು ಸಹಾನುಭೂತಿ, ಕರುಣೆ, ಕೋಪ ನಿರ್ವಹಣೆ ಮತ್ತು ಉದಾರತೆಯನ್ನು ಕಲಿತುಕೊಳ್ಳುತ್ತಾರೆ. ಬಾಲ್ಯದಿಂದಲೇ ಇಂತಹ ಗುಣಗಳನ್ನು ಅಳವಡಿಸಿಕೊಳ್ಳುವುದರಿಂದ ಅವರಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಶಾಲೆಗಳಲ್ಲಿ ಧ್ಯಾನವನ್ನು ಯಾಕೆ ಅಳವಡಿಸಿಕೊಳ್ಳಬೇಕೆಂದು ನೀವು ಚಿಂತಿಸುತ್ತಿದ್ದರೆ ಈ ಎಲ್ಲಾ ಕಾರಣಗಳನ್ನು ಇಟ್ಟುಕೊಂಡು ಇಂದೇ ಮುಂದಡಿಯಿರಿ. ಈ ವಿಷಯದ ಬಗ್ಗೆ ನಿಮ್ಮ ಸಲಹೆಗಳಿದ್ದರೆ ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.



Click it and Unblock the Notifications

