Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳಿಗೆ ಆಟ-ಪಾಠದ ಜೊತೆಗೆ ತಾಳ್ಮೆ ಕೂಡ ಅತ್ಯಗತ್ಯ
ನಿಮ್ಮ ಮಕ್ಕಳಿಗೆ ತಾಳ್ಮೆಯನ್ನು ಕಲಿಸುವುದು ತುಂಬಾ ಮುಖ್ಯವಾದ ಕೆಲಸ. ಆದರೆ ಏಕೆ? ಎಂಬುದು ನಿಮ್ಮ ಪ್ರಶ್ನೆಯೇ? ಹೌದು, ನಾಳೆ ನಿಮ್ಮ ಮಗು ಸಮಾಜದಲ್ಲಿ ವಿವಿಧ ಸಮುದಾಯದ, ವಿವಿಧ ಮನಃಸ್ಥಿತಿಯ ಮತ್ತು ವಿವಿಧ ಜೀವನಶೈಲಿಗಳನ್ನು ಹೊಂದಿರುವ ಜನರ ಜೊತೆಗೆ ಬಾಳಬೇಕು ಮತ್ತು ಬೆರೆಯಬೇಕಾಗುತ್ತದೆ. ಆಗ ನಿಮ್ಮ ಮಗುವಿಗೆ ತಾಳ್ಮೆ ಮತ್ತು ಸಹಿಷ್ಣುತೆ ಎಂಬ ಗುಣಗಳು ನಿಜಕ್ಕೂ ಅವರಿಗೆ ಮುಂದೆ ಸಹಾಯಕ್ಕೆ ಬರುತ್ತವೆ.
ಏಕೆಂದರೆ ನಿಮ್ಮ ಮಗುವಿಗೆ ತಾಳ್ಮೆ ಎನ್ನುವುದು ಇದ್ದಲ್ಲಿ, ಅವರು ಎಂತಹ ಕಠಿಣ ಪರಿಸ್ಥಿತಿಗಳಲ್ಲಿಯೂ ಸಹ ಗೆದ್ದು ಹೊರ ಬರಬಲ್ಲರು. ಜೊತೆಗೆ ತಾಳ್ಮೆಯು ಅವರಿಗೆ ಹೊಸ ವಿಚಾರಗಳನ್ನು ಸುಲಭವಾಗಿ ಕಲಿಯಲು ಸಹಾಯ ಮಾಡುತ್ತದೆ. ತಾಳ್ಮೆಯೊಂದಿದ್ದರೆ, ನಿಮ್ಮ ಮಕ್ಕಳು ತರಗತಿಯ ಹೊರಗೆ ಸಹ ಮಕ್ಕಳು ಕೆಲವು ವಿಚಾರಗಳನ್ನು ಕಲಿಯುತ್ತಾರೆ. ತಾಳ್ಮೆಯು ಮಕ್ಕಳಿಗೆ ತೀರಾ ಅವಶ್ಯಕ, ತಾಳ್ಮೆಯಿರುವ ಮಕ್ಕಳು ಜೀವನದಲ್ಲಿ ಉತ್ತಮ ಏಳಿಗೆಯನ್ನು ಕಾಣುತ್ತಾರೆ. ಬನ್ನಿ ಈ ತಾಳ್ಮೆಯನ್ನು ಮಕ್ಕಳಿಗೆ ಹೇಗೆ ಕಲಿಸುವುದು ಎಂದು ತಿಳಿಯೋಣ....

ನಿಮ್ಮ ಮಗುವಿಗೆ ರೋಲ್ ಮಾಡೆಲ್ ಆಗಿರಿ
ಮಕ್ಕಳು ತಮ್ಮ ಪೋಷಕರನ್ನು ಮೊದಲು ಅನುಕರಿಸುತ್ತವೆ. ಆದ್ದರಿಂದ ಅವರಿಗೆ ಮೊದಲು ನೀವು ತಾಳ್ಮೆಯನ್ನು ತಿಳಿಸಿಕೊಡಿ. ನಿಮ್ಮ ನಡೆ ನುಡಿ ಮುಂತಾದವುಗಳಿಂದ ಅವರಿಗೆ ತಾಳ್ಮೆ ಎಂದರೆ ಏನು ಎಂದು ಮನವರಿಕೆ ಮಾಡಿಕೊಡಿ. ಅದನ್ನು ನೋಡಿ ಅವರು ಸಹ ಕಲಿಯುತ್ತಾರೆ. ಆಧುನಿಕ ತಂತ್ರಜ್ಞಾನ ಮಕ್ಕಳನ್ನು ದಿಕ್ಕು ತಪ್ಪಿಸುತ್ತಿದೆಯೇ?
ಪ್ರಭಾವ
ಒಳ್ಳೆಯ ಸಂಗೀತ, ಚಲನಚಿತ್ರಗಳು, ಪುಸ್ತಕಗಳು ಅಥವಾ ಕಲೆಯು ನಿಮ್ಮ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಇವು ಅವರ ಮನಸ್ಸಿನ ಮೇಲೆ ನಕಾರಾತ್ಮಕ ಪ್ರಭಾವ ಬೀರದಂತೆ ಕಾಪಾಡುತ್ತವೆ. ಯಾವಾಗ ನೀವು ನಿಮ್ಮ ಮಕ್ಕಳ ಮೇಲೆ ಸರಿಯಾದ ವಿಚಾರಗಳ ಪ್ರಭಾವ ಬೀರುವಂತೆ ಮಾಡುತ್ತೀರೋ, ಆಗ ಅವರು ಸರಿಯಾದ ದಾರಿಯಲ್ಲಿಯೇ ನಡೆಯುತ್ತಾರೆ.
ಹಕ್ಕುತ್ಯಾಗ
ತಾಳ್ಮೆಯಿಂದ ಇರುವುದು ಎಂದರೆ ನಿಮ್ಮ ಮಕ್ಕಳಿಗೆ ಇತರರು ತೊಂದರೆ ಮಾಡಿದಾಗ ಸುಮ್ಮನಿರುವುದು ಎಂದರ್ಥವಲ್ಲ. ತಾಳ್ಮೆ ಮತ್ತು ತಮ್ಮ ಸ್ವಾಭಿಮಾನ ರಕ್ಷಣೆಗೆ ಬೇಕಾದ ಅತ್ಯಗತ್ಯ ಅಂಶಗಳನ್ನು ಅವರಿಗೆ ತಿಳಿಸಿ. ತಾಳ್ಮೆಯಿರಲಿ, ಜೊತೆಗೆ ಸಾತ್ವಿಕ ಕೋಪವು ಇರಲಿ.
ಅನುಮತಿಸಿ
ನಿಮ್ಮ ಮಕ್ಕಳನ್ನು ಅಕ್ಕಪಕ್ಕದ ಮಕ್ಕಳ ಜೊತೆಗೆ ಬೆರೆಯಲು ಬಿಡಿ, ಇದರಿಂದ ಅವರಿಗೆ ತಾಳ್ಮೆ ಎಂಬುದರ ಪ್ರಾಯೋಗಿಕ ಚಿತ್ರಣ ದೊರೆಯುತ್ತದೆ.



Click it and Unblock the Notifications
