Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಮಗುವಿನ ಹುಟ್ಟುಹಬ್ಬಕ್ಕೆ ಕೆಲವೊಂದು ಐಡಿಯಾಗಳು
ಮಗುವಿನ ಜನನವು ಹೆತ್ತವರಲ್ಲಿ ಅತ್ಯಂತ ಸಂಭ್ರಮ ಮತ್ತು ಸಂತೋಷವನ್ನು ಉಂಟುಮಾಡಿ ಅದು ಜೀವಮಾನವಿಡಿ ಉಳಿದುಕೊಳ್ಳುವಂತೆ ಮಾಡುತ್ತದೆ. ಹೆತ್ತವರಾಗಿ ಮಗುವಿನ ಮೊದಲ ಹುಟ್ಟುಹಬ್ಬವನ್ನು ತುಂಬಾ ಅದ್ಧೂರಿಯಾಗಿ ಮಾಡಿ ಆ ಕ್ಷಣಗಳು ಯಾವಾಗಲೂ ನಮ್ಮ ನೆನಪಿನಲ್ಲಿ ಉಳಿಯುವಂತಾಗಲೂ ಎಲ್ಲವನ್ನು ಕ್ಲಿಕ್ ಮಾಡುತ್ತೇವೆ. ಮಗುವಿನ ಮೊದಲ ಹುಟ್ಟುಹಬ್ಬವು ಅದ್ಭುತ ಕೇಕ್, ಉಡುಗೊರೆ ಮತ್ತು ಕುಟುಂಬಕ್ಕೆ ಹತ್ತಿರವಾಗಿರುವ ವಿಶೇಷ ಅತಿಥಿಗಳಿಂದ ತುಂಬಿರುತ್ತದೆ. ಈ ಸಂಭ್ರಮದ ಸಮಯವನ್ನು ಪ್ರತಿಯೊಬ್ಬರೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸುತ್ತೇವೆ ಮತ್ತು ಈ ಸಮಯವನ್ನು ಕಳಕೊಳ್ಳಲು ನಾವು ಬಯಸುವುದಿಲ್ಲ.
ನಿಮ್ಮ ಮಗುವಿಗೆ ಒಂದು ವರ್ಷವಾಗಿರುವುದೇ ಅದು ದೊಡ್ಡ ಮೈಲುಗಲ್ಲು ಮತ್ತು ಈ ದೊಡ್ಡ ಸಾಧನೆಯನ್ನು ಆಚರಿಸುವುದು ನಿಮ್ಮ ಅತೀ ಪ್ರಾಮುಖ್ಯ ವಿಷಯವಾಗಲಿದೆ. ಈ ದೊಡ್ಡ ಸಂಭ್ರಮವನ್ನು ಆಚರಿಸಲು ನೀವು ಹಲವಾರು ರೀತಿಯ ಹುಟ್ಟುಹಬ್ಬದ ಐಡಿಯಾಗಳಿರುತ್ತದೆ. ಯುವ ಜನಾಂಗದೊಂದಿಗೆ ಹುಟ್ಟುಹಬ್ಬದ ಥೀಮ್ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತಿದೆ. ನಿಮ್ಮ ಮಗ ಅಥವಾ ಮಗಳಿಗೆ ಮೊದಲ ಹುಟ್ಟುಹಬ್ಬದ ಬಗ್ಗೆ ತಿಳಿಯದೆ ಇರಬಹುದು. ಆದರೆ ಈ ಕ್ಷಣಗಳನ್ನು ಮುಂದೊಂದು ದಿನ ಅವರಿಗೆ ತೋರಿಸಿ ನೀವು ಸಂಭ್ರಮಿಸಬಹುದು.

ನೀವು ಈಗಾಗಲೇ ಕೆಲವೊಂದು ಹುಟ್ಟುಹಬ್ಬದ ಪಾರ್ಟಿಗಳನ್ನು ಆಯೋಜಿಸಿದ್ದರೂ ನಿಮ್ಮ ಮಗುವಿನ ಮೊದಲ ಹುಟ್ಟುಹಬ್ಬವನ್ನು ಆಚರಿಸಲು ಮಾಡಿಕೊಳ್ಳುವ ಯೋಜನೆ ತುಂಬಾ ಕ್ಲಿಷ್ಟಕರ. ಕೆಲವೊಂದು ಸರಳ ಟಿಪ್ಸ್, ತಂತ್ರ ಮತ್ತು ತಂತ್ರಜ್ಞಾನದೊಂದಿಗೆ ಯಾವುದೇ ಸ್ಥಳ ಮತ್ತು ಸಮಯದಲ್ಲಿ ಮಗುವಿನ ಮೊದಲ ಹುಟ್ಟುಹಬ್ಬವನ್ನು ನೀವು ಅದ್ಧೂರಿಯ ಸಮಾರಂಭವಾಗಿ ಮಾಡಬಹುದು.
ಅದ್ಧೂರಿ ಪಾರ್ಟಿಗಾಗಿ ನೀವು ಹುಟ್ಟುಹಬ್ಬದ ಕೆಲವೊಂದು ಟಿಪ್ಸ್ ಗಳನ್ನು ಪಾಲಿಸಬಹುದು.
ಮಗುವಿನ ಮೊದಲ ಹುಟ್ಟುಹಬ್ಬಕ್ಕೆ ಪಾರ್ಟಿ ಐಡಿಯಾಗಳು
ಪಾರ್ಟಿ ಎಲ್ಲಿ ಮಾಡುವುದು?
ಮೊದಲ ಹುಟ್ಟುಹಬ್ಬವು ಅದ್ಧೂರಿಯಾಗಿರಬೇಕು. ಮನೆಯಲ್ಲಿ ಸರಳ ಪಾರ್ಟಿ ಅಥವಾ ಯಾವುದಾದರೂ ಹೋಟೆಲ್ ನಲ್ಲಿ ಈ ಸಂಭ್ರಮಾಚರಣೆ ಮಾಡಬಹುದು. ಮನೆಗೆ ಉಡುಗೊರೆ ತರಲು ಯಾವುದಾದರೂ ಸಾರಿಗೆ ವ್ಯವಸ್ಥೆ ಮಾಡಬೇಕೆಂಬುವುದು ನೆನಪಿರಲಿ.
ಸ್ಪೆಷಲ್ ಕೇಕ್
ಇದು ನಿಮ್ಮ ಮಗುವಿನ ಮೊದಲ ಹುಟ್ಟುಹಬ್ಬ ಮತ್ತು ಅತ್ಯಾಕರ್ಷಕ ಕೇಕ್ ನ ಹೊರತಾಗಿ ಇದು ಅಪೂರ್ಣವಾಗಲಿದೆ. ನೀವು ಮನೆಯಲ್ಲೇ ಕೇಕ್ ತಯಾರಿಸಬಹುದು ಅಥವಾ ಯಾವುದಾದರೂ ಒಳ್ಳೆಯ ಬೇಕರಿಯಿಂದ ಕೇಕ್ ತರಿಸಬಹುದು.
ಥೀಮ್ ಆಯ್ಕೆ ಮಾಡಿ
ಮಕ್ಕಳಿಗೆ ಕಾರ್ಟೂನ್ ಎಂದರೆ ಪಂಚಪ್ರಾಣ. ನೀವು ಯಾವುದಾದರೂ ಕಾರ್ಟೂನ್ ಥೀಮ್ ಅಥವಾ ಮಗು ಇಷ್ಟಪಡುವ ಯಾವುದನ್ನಾದರೂ ಆಯ್ಕೆ ಮಾಡಬಹುದು. ಪ್ರಾಣಿಗಳು, ಆಟಿಕೆ ಅಥವಾ ಆಹಾರದಲ್ಲಿ ಥೀಮ್ ರಚಿಸಬಹುದು.
ಅತಿಥಿಗಳ ಪಟ್ಟಿ
ಮಗುವಿನ ಹುಟ್ಟುಹಬ್ಬಕ್ಕೆ ಮಿತಿಮೀರಿದ ಸಂಖ್ಯೆಯಲ್ಲಿ ಅತಿಥಿಗಳು ಬಂದರೆ ಆಗ ಮಗುವಿಗೆ ಕಿರಿಕಿರಿಯಾಗಬಹುದು. ಇದರಂತೆ ಯೋಜನೆ ಹಾಕಿಕೊಂಡು ನಿಮ್ಮ ಕುಟುಂಬಕ್ಕೆ ತುಂಬಾ ಹತ್ತಿರವಾಗಿರುವವರನ್ನು ಆಹ್ವಾನಿಸಿ. ಅತಿಥಿಗಳ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇರಲಿ.
ಆಟಗಳನ್ನು ಆಡಿ
ಹುಟ್ಟುಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ನೀವು ಮಕ್ಕಳಿಗಾಗಿ ಕೆಲವೊಂದು ಆಟಗಳನ್ನು ಸೇರಿಸಿಕೊಳ್ಳಬೇಕು. ಇದರಿಂದ ನಿಮ್ಮ ಮಗು ಆಟದಲ್ಲಿ ತೊಡಗಿಕೊಳ್ಳುವಂತಾಗುತ್ತದೆ ಮತ್ತು ಹೆಚ್ಚಿನ ಸಮಯ ಖುಷಿಯಿಂದ ಇರುತ್ತದೆ.
ಫೋಟೊಶೂಟ್
ವಿಶೇಷ ಫೋಟೊಶೂಟ್ ಆಯೋಜಿಸುವ ಮೂಲಕ ನೀವು ಮಗುವಿನೊಂದಿಗಿನ ವಿಶೇಷ ಕ್ಷಣವನ್ನು ಸೆರೆ ಹಿಡಿಯಬಹುದು. ಜೀವನಮಾನವಿಡಿ ಪಾರ್ಟಿಯ ನೆನಪು ಉಳಿಯುವಂತೆ ಆಗಲು ನೀವು ಫೋಟೊಶೂಟ್ ಮಾಡಬೇಕಾಗುತ್ತದೆ.
ಪಾರ್ಟಿ ಪೂರೈಕೆಗಳು
ನಿಮ್ಮ ಮಗುವಿನ ಮೊದಲ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿಕೊಳ್ಳಲು ಪಾರ್ಟಿಯಲ್ಲಿ ಬ್ಯಾನರ್, ಬಲೂನ್, ಥೀಮ್ ಇರುವ ನ್ಯಾಪ್ಕೀನ್ ಮುಂತಾದವುಗಳನ್ನು ಬಳಸಿ. ಥೀಮ್ ಗೆ ಹೊಂದಿಕೊಳ್ಳುವಂತಹ ಪ್ಲೇಟ್ಸ್ ಮತ್ತು ಪಾತ್ರೆಗಳನ್ನು ಆಯ್ಕೆ ಮಾಡಬಹುದು.
ಮೆನು ತಯಾರಿಸಿ
ನಿಮ್ಮ ಮಗುವಿನ ಮೊದಲ ಹುಟ್ಟುಹಬ್ಬಕ್ಕೆ ಊಟದ ಮೆನು ತಯಾರಿಸುವ ಮೊದಲು ಅದು ಸಸ್ಯಹಾರಿಯಾ ಅಥವಾ ಮಾಂಸಹಾರಿಯಾ?, ಯಾವ ರೀತಿಯ ಪಾನೀಯ, ಇದಕ್ಕೆಲ್ಲಾ ಅಲರ್ಜಿ ಆಗುವ ಅತಿಥಿಗಳ ಪಟ್ಟಿ ಇತ್ಯಾದಿಯನ್ನು ಪರಿಣಿಸಬೇಕಾಗುತ್ತದೆ.
ಉಡುಗೊರೆ
ಉಡುಗೊರೆ ಇಲ್ಲದೆ ಹುಟ್ಟುಹಬ್ಬದ ಪಾರ್ಟಿ ಪೂರ್ಣಗೊಳ್ಳದು. ಮಗುವಿಗೆ ಯಾವ ರೀತಿಯ ಉಡುಗೊರೆ ತರಬೇಕು ಎನ್ನುವ ಬಗ್ಗೆ ಅತಿಥಿಗಳಿಗೆ ಮನವಿ ಮಾಡಬಹುದು ಅಥವಾ ಪಾರ್ಟಿಯ ಥೀಮ್ ಗೆ ಅನುಗುಣವಾಗಿ ಉಡುಗೊರೆ ತರಬೇಕೆಂದು ವಿನಂತಿಸಬಹುದು.
ಹುಟ್ಟುಹಬ್ಬದ ಈ ಎಲ್ಲಾ ಐಡಿಯಾಗಳೊಂದಿಗೆ ನೀವು ಮಗುವಿನ ಮೊದಲ ಹುಟ್ಟುಹಬ್ಬವನ್ನು ತುಂಬಾ ಸ್ಮರಣೀಯವಾಗಿಸಬಹುದು. ಅತಿಥಿಗಳಿಗೆ ಗೌರವಿಲ್ಲದೆ ಯಾವುದೇ ಪಾರ್ಟಿ ಕೂಡ ಪೂರ್ಣಗೊಳ್ಳದು. ಇದರಿಂದಾಗಿ ಅತಿಥಿಗಳು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಪಾರ್ಟಿ ನೀಡಿ.



Click it and Unblock the Notifications