Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಸಿಕ್ಕಾ ಪಟ್ಟೆ ತುಂಟ ಮಗುವಿಗೆ ಆಹಾರಕ್ರಮ ಹೀಗಿರಲೇಬೇಕು
ನಿಮ್ಮ ಮಗು ಸಿಕ್ಕಾ ಪಟ್ಟೆ ಗಲಾಟೆ ಮಾಡುತ್ತದೆಯೇ? ಅವನ/ಅವಳ ಗಲಾಟೆಯನ್ನು ಸಹಿಸಲೇ ಸಾಧ್ಯವಾಗುತ್ತಿಲ್ಲವೇ? ಅಂತಹ ಮಕ್ಕಳಿಗೆ ಹೊಡೆಯುವುದರಿಂದ, ಹೆದರಿಸುವುದರಿಂದ ಯಾವುದೇ ಪ್ರಯೋಜವಿಲ್ಲ. ಕೆಲವು ಮಕ್ಕಳು ನಿಂತ ಕಾಲಲ್ಲಿ ನಿಲ್ಲುವುದಿಲ್ಲ. ಫ್ರೆಂಡ್ಸ್ ಜೊತೆ ಆಡಲು ಬಿಟ್ಟರೆ ಅಲ್ಲಿ ಹೋಗಿ ಬಿದ್ದು, ಅಥವಾ ಇತರ ಮಕ್ಕಳನ್ನು ಬೀಳಸಿ ಬರುತ್ತಾರೆ.
ಮನೆಯಲ್ಲೂ ಸುಮ್ಮನೆ ಕೂರುವುದಿಲ್ಲ, ಕಿಟಕಿ ಹತ್ತುವುದು, ಸಾಮಾನುಗಳನ್ನು ಬೀಳಸಿ ಹಾಕುವುದು ಹೀಗೆ ಗಲಾಟೆ ಮಾಡುತ್ತಲೇ ಇರುತ್ತವೆ. ಅವನ/ಳ ಗಲಾಟೆ ನೋಡುವಾಗ ಸಿಕ್ಕಾಪಟ್ಟೆ ಕೋಪ ಬರುವುದು ಸಹಜ, ಆದರೆ ಕೋಪ ಪಟ್ಟುಕೊಳ್ಳುವ ಮೊದಲು ನಿಮ್ಮ ಮಗು ಏಕೆ ಈ ರೀತಿ ಆಡುತ್ತದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು.
ಈ ರೀತಿಯ ಮಕ್ಕಳನ್ನು ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ Hyper active kids(ಅತೀ ಚಟುವಟಿಕೆಯ ಮಕ್ಕಳು) ಎನ್ನುತ್ತಾರೆ. ಆ ಮಕ್ಕಳಿಗೆ ಯಾವುದೇ ಆಹಾರ ಕೊಟ್ಟರು ನೋಡಲು ತೆಳ್ಳಗೆ ಇರುತ್ತಾರೆ. ಆದ್ದರಿಂದ ಇಂತಹ ಮಕ್ಕಳನ್ನು ಹ್ಯಾಂಡಲ್ ಮಾಡಲು ಬೆತ್ತ ಹಿಡಿದು ಗದರಿಸುವ ಬದಲು ಅವರ ಮೆದುಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಕೊಡಿ.
ಮಕ್ಕಳಲ್ಲಿ Hyper active ಕಡಿಮೆಯಾಗಲು ಈ ಕೆಳಗಿನ ಪೋಷಕಾಂಶವಿರುವ ಆಹಾರವನ್ನು ಕೊಡುವುದು ಒಳ್ಳೆಯದು.

ಆಹಾರಕ್ರಮ
ಇಂತಹ ಮಕ್ಕಳು ಸದಾ ಚಟುವಿಟಕೆಯಿಂದ ಇರುತ್ತಾರೆ. ಆದ್ದರಿಂದ ಮಕ್ಕಳಿಗೆ ಜಂಕ್ ಫುಡ್ಸ್ ಬದಲು ಪೋಷಕಾಂಶವಿರುವ ಆಹಾರಗಳನ್ನು ಕೊಡಬೇಕು. ಬೀನ್ಸ್, ತೆಳುಮಾಂಸ, ಮೊಟ್ಟೆ, ಚೀಸ್ ಇವುಗಳನ್ನು ಕೊಡುವುದು ಒಳ್ಳೆಯದು.

ಒಮೆಗಾ 3 ಕೊಬ್ಬಿನಂಶ
ಮಕ್ಕಳ ಮೆದುಳಿನ ಬೆಳವಣಿಗೆಗೆ ಒಮೆಗಾ 3 ಕೊಬ್ಬಿನಂಶ ಅವಶ್ಯಕ. ಆದ್ದರಿಂದ ಒಮೆಗಾ 3 ಕೊಬ್ಬಿನಂಶವಿರುವ ಆಹಾರವನ್ನು ಆಹಾರಕ್ರಮದಲ್ಲಿ ಸೇರಿಸಿ.

ಮಕ್ಕಳ ಮನಸ್ಸನ್ನು ನಿಗ್ರಹದಲ್ಲಿಡುವ ಆಹಾರಗಳು
ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ ಇದು ಮಕ್ಕಳ ಮನಸ್ಸನ್ನು ನಿಗ್ರಹದಲ್ಲಿಡುವಂತೆ ಮಾಡಿ, ಗಲಾಟೆಯನ್ನು ಕಡಿಮೆ ಮಾಡುವಂತೆ ಮಾಡುತ್ತದೆ, ಅಲ್ಲದೆ ಈ ಪೋಷಕಾಂಶ ಮಕ್ಕಳಲ್ಲಿ ಏಕಾಗ್ರತೆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಶೀತಲೀಕರಿಸಿದ ಆಹಾರ ಕೊಡಬೇಡಿ
ಮಕ್ಕಳಿಗೆ ತಾಜಾ ಆಹಾರವನ್ನು ಕೊಡಿ, ಕೃತಕ ಸಿಹಿ ಇರುವ ಹಾಗೂ ಶೀತಲೀಕರಣ ಮಾಡಿದ ಆಹಾರಗಳನ್ನು ಮಕ್ಕಳಿಗೆ ಕೊಡುವುದನ್ನು ಕಮ್ಮಿ ಮಾಡಿ.

ರಕ್ತದಲ್ಲಿ ಸಕ್ಕರೆಯಂಶ ಸರಿ ಪ್ರಮಾಣದಲ್ಲಿರಲಿ
ಹೈಪರ್ ಆಕ್ಟೀವ್ ಮಕ್ಕಳು ಇತರ ಮಕ್ಕಳಿಗಿಂತ ಹೆಚ್ಚಿನ ಸಿಹಿ ತಿನ್ನುತ್ತವೆ. ಆದರೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಕ್ಕಳ ರಕ್ತದಲ್ಲಿ ಸಕ್ಕರೆಯಂಶ ಸರಿ ಪ್ರಮಾಣದಲ್ಲಿರುವಂತೆ ನೋಡಿ ಕೊಳ್ಳಿ, ತುಂಬಾ ಸಿಹಿ ಪದಾರ್ಥಗಳನ್ನು ಕೊಡಬೇಡಿ.

ಮಕ್ಕಳಿಗೆ ಕೊಡುವ ಆಹಾರ ಹೀಗಿರಲಿ
ಮಾವಿನ ಹಣ್ಣು, ಬೆರ್ರಿ, ಕಿತ್ತಳೆ, ತಾಜಾ ತರಕಾರಿಗಳಾದ ಕ್ಯಾರೆಟ್, ಎಲೆ ಕೋಸು, ಹೂ ಕೋಸು, ಸೆಲರಿ ಇವುಗಳನ್ನು ಇಂತಹ ಮಕ್ಕಳ ಆಹಾರಕ್ರಮದಲ್ಲಿ ಕಡ್ಡಾಯವಾಗಿ ಸೇರಿಸಬೇಕು. ಪ್ರತೀದಿನ ಹಾಲು ಮತ್ತು ಮೊಟ್ಟೆ ಕೊಡುವುದು ಒಳ್ಳೆಯದು.

ಮಗುವಿ ಗಲಾಟೆ ಕಡಿಮೆ ಮಾಡಲು ಟಿಪ್ಸ್
ಈ ರೀತಿ ಆಹಾರಕ್ರಮ ಬದಲಾಯಿಸಿ ನೋಡಿ, ನಿಮ್ಮ ಮಗು ಗಲಾಟೆ ಮಾಡುವುದನ್ನು ಕಡಿಮೆ ಮಾಡುವುದು.



Click it and Unblock the Notifications
