Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ
ಅಧಿಕ ಮಾರ್ಕ್ಸ್ ಬಂದರೆ ಮಾತ್ರ ಉತ್ತಮ ಭವಿಷ್ಯವೇ?

ಪ್ರತೀವರ್ಷ ಫಲಿತಾಂಶ ಬಂದಾಗ ಪಾಸ್ ಆಗಲಿಲ್ಲವೆಂದೂ, ಯೋಚಿಸಿದಷ್ಟು ಮಾರ್ಕ್ಸ್ ಬಂದಿಲ್ಲವೆಂದೋ ಪ್ರಾಣಕ್ಕೆ ಅಪಾಯ ತಂದುಕೊಳ್ಳುವ ಕೆಲವು ಮಕ್ಕಳನ್ನು ನೋಡುತ್ತೇವೆ. ಆದ್ದರಿಂದ ಇವತ್ತು ಪೋಷಕರು ತಮ್ಮ ಮಕ್ಕಳ ಕಡೆ ಸ್ವಲ್ಪ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು. ಪೋಷಕರು ಅಷ್ಟೇ ಮಕ್ಕಳಿಗೆ ಒಳ್ಳೆಯ ಮಾರ್ಕ್ಸ್ ಬರದಿದ್ದರೆ ಅವರನ್ನು ಬೈಯ್ಯುವುದು, ಹೊಡೆಯುವುದು ಮಾಡದಿರುವುದು ಒಳ್ಳೆಯದು. ಒಳ್ಳೆಯ ಅಂಕ ದೊರೆಯಲಿಲ್ಲವೆಂದು ಮಕ್ಕಳು ಮಾನಸಿಕವಾಗಿ ನೊಂದಿರುತ್ತಾರೆ, ಇದರ ಜೊತೆಗೆ ಪೋಷಕರ ವಾಕ್ ಪ್ರಹಾರವನ್ನು ಸಹಿಸಿಕೊಳ್ಳಲು ಆ ಮನಸ್ಸು ಸಿದ್ಧವಿರುವುದಿಲ್ಲ. ಒಳಿತು-ಕೆಡುಕಗಳ ಬಗ್ಗೆ ಯೋಚನೆ ಮಾಡುವ ಬುದ್ದಿಯೂ ಈ ಹದಿಹರೆಯದ ಪ್ರಾಯದ ಮಕ್ಕಳಲ್ಲಿ ಇರುವುದಿಲ್ಲ.
ತುಂಬಾ ಫೀಸ್ ತೆತ್ತು, ಮಕ್ಕಳಿಗೆ ಏನು ಬೇಕೋ ಅದನ್ನೆಲ್ಲಾ ತೆಗೆದುಕೊಟ್ಟು ಓದಲು ಕಳುಹಿಸಿರುತ್ತೀರಿ. ನಿಮ್ಮ ಮಕ್ಕಳು ಒಳ್ಳೆಯ ಅಂಕ ತೆಗೆಯಬೇಕೆಂಬ ಆಸೆ ಪೋಷಕರಲ್ಲಿರುವುದು ಸಹಜ. ಆದರೆ ಮಕ್ಕಳು ಒಳ್ಳೆಯ ಅಂಕ ತೆಗೆಯದಿದ್ದರೆ ಅದಕ್ಕಾಗಿ ದುಃಖಿಸಿಕೊಂಡು ಕೂರುವ ಬದಲು, ಅವರ ಆಸಕ್ತಿ ತಿಳಿದು, ಅವರನ್ನು ಪ್ರೋತ್ಸಾಹಿಸುವುದು ಒಳ್ಳೆಯದು.
ಉತ್ತಮ ಅಂಕ ತೆಗೆದರೆ ಮಾತ್ರ ಒಳ್ಳೆಯ ಹುದ್ದೆ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಳ್ಳೆಯ ಕಮ್ಯೂನಿಕೇಷನ್ ಸ್ಕಿಲ್, ತಾಂತ್ರಿಕ ಕೌಶಲ್ಯ, ಪ್ರತಿಭೆಯಿದ್ದರೆ, ಬದುಕುವ ಛಲವಿದ್ದರೆ ಕೆಲಸ ಸಿಗುವುದು ಕಷ್ಟವೇನಲ್ಲ, ಆದ್ದರಿಂದ ಅದರತ್ತ ಮಕ್ಕಳನ್ನು ತಯಾರು ಮಾಡಿ. ಆದ್ದರಿಂದ ಮಾರ್ಕ್ಸ್ ಹೆಚ್ಚು ತೆಗೆದಿಲ್ಲ ಅಂತ ಬೈಯಲು ಹೋಗಬೇಡಿ, ಈಗ ಬೈಯುವುದರಿಂದ ನಿಮ್ಮ ಮಗನ/ಮಗಳ ಅಂಕವೇನು ಹೆಚ್ಚುವುದಿಲ್ಲ, ನೆನಪಿರಲಿ.



Click it and Unblock the Notifications
