Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಮಕ್ಕಳ ಮಿದುಳಿನ ಸಾಮರ್ಥ್ಯ ಹೆಚ್ಚಿಸುವ 10 ಆಹಾರಗಳು
ಮಕ್ಕಳಿಗಾಗಿ ಆರೋಗ್ಯಕರವಾದ ಆಹಾರವನ್ನು ಒದಗಿಸಲು ಸ್ವಲ್ಪ ಆಲೋಚಿಸಬೇಕಾಗುತ್ತದೆ. ಆದರೆ ಕೆಲಸಕ್ಕೆ ಹೋಗುವ ಪೋಷಕರು ಮಕ್ಕಳ ಲಾಲನೆ, ಪಾಲನೆ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಅಥವಾ ಅವರಿಗೆ ಅವಶ್ಯಕವಾದ ತಿಂಡಿ,ತಿನಿಸುಗಳನ್ನು ಒದಗಿಸುವ ಬಗ್ಗೆ ಅಷ್ಟಾಗಿ ಮುತುವರ್ಜಿ ವಹಿಸಲು ಸಾಧ್ಯವಾಗುವುದಿಲ್ಲ. ಆ ಮಕ್ಕಳು ಆಹಾರ ತಿನಿಸುಗಳ ವಿಚಾರದಲ್ಲಿ ಕೇವಲ ಚೀಸ್, ಮ್ಯಾಕರೋನಿಗಳನ್ನು ಪ್ರತಿ ಬಾರಿ ತಿನ್ನುವಾಗ ಬೇಕೆಂದು ಬಯಸುತ್ತಿರುತ್ತಾರೆ. ಅವರು ಈ ಬಗೆಯ ತಿಂಡಿಗಳನ್ನೇ ಮತ್ತೆ ಮತ್ತೆ ಬಯಸಿದಾಗ ಅವರ ಮೇಲೆ ರೇಗಬೇಡಿ. ಬದಲಿಗೆ ನಾವು ಇಲ್ಲಿ ಪಟ್ಟಿ ಮಾಡಿರುವ ಮೊಟ್ಟೆ, ಒಣ ಹಣ್ಣು, ಏಲಕ್ಕಿ ಮತ್ತು ಇನ್ನಿತರ ಆರೋಗ್ಯಕಾರಿ ತಿಂಡಿಗಳನ್ನು ನೀಡಿ.
ಒಬ್ಬ ಪೋಷಕರಾಗಿ ನೀವು ನಿಮ್ಮ ಮಗುವಿನ ಮೆದುಳು ಮತ್ತು ದೇಹದ ಅಭಿವೃದ್ಧಿಗೆ ಸಹಕರಿಸುವ, ಆರೋಗ್ಯಕಾರಿಯಾದ ಆಹಾರಗಳನ್ನು ಒದಗಿಸಬೇಕಾದುದು ನಿಮ್ಮ ಕರ್ತವ್ಯ. ಇಲ್ಲಿ ನೀಡಿರುವ ಅತ್ಯಂತ ಪೌಷ್ಟಿಕ ಆಹಾರಗಳಲ್ಲಿ ಆಂಟಿ ಆಕ್ಸಿಡೆಂಟ್‍ಗಳು,ವಿಟಮಿನ್‍ಗಳು, ಮಿನರಲ್‍ಗಳು, ನಾರಿನಂಶ, ಆರೋಗ್ಯಕ್ಕೆ ಅತ್ಯಾವಶ್ಯಕವಾದ ಕೊಬ್ಬಿನಂಶ ಮತ್ತು ಪ್ರೊಟೀನ್‍ಗಳು ಇವೆ.
ಹಸುಗೂಸುಗಳಿಗಾಗಿ ಮತ್ತು ಮಕ್ಕಳಿಗಾಗಿ 10 ಅತ್ಯಂತ ಪೌಷ್ಟಿಕ ಆಹಾರಗಳು

ಮೊಟ್ಟೆಗಳು
ಮೊಟ್ಟೆಗಳಲ್ಲಿ ಪ್ರೊಟೀನ್ ಹೆಚ್ಚಾಗಿರುತ್ತದೆ. ಅಲ್ಲದೇ ಇವುಗಳಲ್ಲಿ ಸ್ವಾಭಾವಿಕವಾಗಿ ವಿಟಮಿನ್ ಡಿ ಇರುತ್ತದೆ. ಇವು ದೇಹದಲ್ಲಿ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ನೆರವಾಗುತ್ತವೆ. ಬೆಳಗಿನ ಉಪಾಹಾರದಲ್ಲಿ ಮೊಟ್ಟೆಯನ್ನು ಸೇವಿಸುವುದರಿಂದ ನಿಮ್ಮ ಮಕ್ಕಳು ಅಕಾಲಿಕ ಹಸಿವಿನಿಂದ ದೂರ ಉಳಿಯುತ್ತಾರೆ.

ಓಟ್ ಮೀಲ್ (ಧಾನ್ಯಗಳು)
ಸಂಶೋಧನೆಗಳ ಪ್ರಕಾರ ಓಟ್ ಮೀಲ್‍ಗಳನ್ನು ಸೇವಿಸುವುದರಿಂದ ಮಕ್ಕಳು ಶಾಲೆಯಲ್ಲಿ ಏಕಾಗ್ರತೆಯಿಂದ ಪಾಠವನ್ನು ಕೇಳಲು ಅನುಕೂಲವಾಗುತ್ತದೆ. ನಾರಿನಂಶ ಹೆಚ್ಚಾಗಿರುವ ಓಟ್ ಮೀಲ್ ಮಕ್ಕಳಿಗೆ ಪುಟಿಯುವ ಚೈತನ್ಯವನ್ನು ನೀಡುತ್ತದೆ.

ಹಣ್ಣುಗಳು
ಯಾವುದೇ ಬಗೆಯ ಹಣ್ಣುಗಳನ್ನು ಬೇಕಾದರು ನಿಮ್ಮ ಮಗು ಸೇವಿಸಬಹುದು. ಇವುಗಳಲ್ಲಿ ವಿಟಮಿನ್ ಮತ್ತು ಮಿನರಲ್‍ಗಳು ಅಧಿಕ ಪ್ರಮಾಣದಲ್ಲಿ ಇರುತ್ತವೆ. ಅಲ್ಲದೇ ಹಣ್ಣುಗಳಲ್ಲಿರುವ ನಾರಿನಂಶವು ಮಕ್ಕಳನ್ನು ಲವಲವಿಕೆಯಿಂದ ಇಡುತ್ತವೆ. ಹಣ್ಣುಗಳಲ್ಲಿರುವ ಪೌಷ್ಟಿಕ ಅಂಶಗಳು ನಿಮ್ಮ ಮಗುವಿಗೆ ದೊರೆಯಬೇಕಾದರೆ ದ್ರಾಕ್ಷಿ, ಕಲ್ಲಂಗಡಿ, ಖರಬೂಜ, ಕಿವಿ ಫ್ರೂಟ್ ಮತ್ತು ಕಿತ್ತಳೆ ಹಣ್ಣುಗಳಂತಹ ವೈವಿಧ್ಯಮಯವಾದ ಹಣ್ಣುಗಳನ್ನು ತಿನ್ನಲು ನೀಡಿ.

ಒಣ ಹಣ್ಣುಗಳು
ಒಣ ಹಣ್ಣುಗಳಲ್ಲಿ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅತ್ಯಾವಶ್ಯಕವಾಗಿರುವ ಆರೋಗ್ಯಕಾರಿ ಕೊಬ್ಬುಗಳು ದೊರೆಯುತ್ತವೆ. ಅಲ್ಲದೇ ಇವು ಹೃದಯದ ಆರೋಗ್ಯಕ್ಕು ಸಹ ಉತ್ತಮ ಆಹಾರವಾಗಿದೆ. ಬೆಳಗಿನ ಜಾವ ಸ್ವಲ್ಪ ಪ್ರಮಾಣದ ಒಣ ಹಣ್ಣು ಸೇವಿಸುವುದರಿಂದ ನಿಮ್ಮ ಮಗುವಿನ ದೇಹಕ್ಕೆ ಆರೋಗ್ಯಕಾರಿ ಕೊಬ್ಬು ಸೇರಿ, ನಿಮ್ಮ ಮಕ್ಕಳು ಇಡೀ ದಿನವನ್ನು ಲವಲವಿಕೆಯಿಂದ ಕಳೆಯಲು ನೆರವಾಗುತ್ತದೆ.

ಹಾಲು
ಹೈನು ಉತ್ಪನ್ನಗಳಲ್ಲಿ ದೊರೆಯುವ ಕ್ಯಾಲ್ಸಿಯಂ ಮತ್ತು ಪ್ರೊಟೀನ್‍ಗಳು ಮೆದುಳು ಮತ್ತು ದೇಹಕ್ಕೆ ಅಗತ್ಯವಾದ ಇಂಧನವನ್ನು ಒದಗಿಸುತ್ತವೆ. ಪ್ರೊಟೀನ್‍ಗಳು ಮೆದುಳಿನ ಜೀವಕೋಶಗಳ ನಿರ್ಮಾಣಕ್ಕೆ ಸಹಕರಿಸುತ್ತವೆ. ಅಲ್ಲದೆ ಇದರಲ್ಲಿರುವ ಕ್ಯಾಲ್ಸಿಯಂ ಮಕ್ಕಳ ಮೂಳೆ ಮತ್ತು ಹಲ್ಲುಗಳನ್ನು ಸದೃಢವಾಗಿ ಇಡಲು ನೆರವಾಗುತ್ತವೆ.

ಪಾಲಾಕ್ ಸೊಪ್ಪು
ಪಾಲಾಕ್ ಸೊಪ್ಪಿನಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ, ಫಾಲಿಕ್ ಆಮ್ಲ, ವಿಟಮಿನ್ ಎ ಮತ್ತು ಸಿ ಗಳು ಅಧಿಕ ಪ್ರಮಾಣದಲ್ಲಿ ಇವೆ. ಇವು ಮಿದುಳು ಮತ್ತು ಮೂಳೆಗಳ ಬೆಳವಣಿಗೆಗೆ ಅತ್ಯಾವಶ್ಯಕವಾದ ಅಂಶಗಳಾಗಿವೆ ಎಂಬುದನ್ನು ಮರೆಯಬಾರದು.

ಮೊಸರು
ಮೊಸರಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಸಮೃದ್ಧವಾಗಿ ಇವೆ. ಇವುಗಳು ಮೂಳೆಗಳು ಮತ್ತು ಹಲ್ಲುಗಳ ಬೆಳವಣಿಗೆಗೆ ಸಹಕರಿಸುತ್ತವೆ. ಅಲ್ಲದೇ ಇದು ಜೀರ್ಣ ಕ್ರಿಯೆ ಚೆನ್ನಾಗಿ ನಡೆಯುವಂತೆ ಪ್ರೋತ್ಸಾಹಿಸಿ, ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಹಾಗಾಗಿ ಕಡಿಮೆ ಕಬ್ಬಿಣಾಂಶವಿರುವ ಮೊಸರಿಗೆ ಅವುಗಳಿಗೆ ತಾಜಾ ಆದ ಅಥವಾ ಒಣ ಹಣ್ಣುಗಳನ್ನು ಬೆರೆಸಿ ತಿನ್ನಲು ಕೊಡಿ.

ಎಲ್ಲ ಬಗೆಯ ಧಾನ್ಯಗಳು
ಬ್ರೆಡ್, ರೊಟ್ಟಿ, ಚಪಾತಿ ಮತ್ತು ದ್ವಿದಳ ಧಾನ್ಯಗಳನ್ನು ಮಕ್ಕಳು ತಿನ್ನಲು ಸಂತೋಷಪಡುತ್ತಾರೆ. ಇವುಗಳಲ್ಲಿ ಫಾಲಿಕ್ ಆಮ್ಲ, ಕಬ್ಬಿಣ, ಸತು, ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ವಿಟಮಿನ್ ಬಿಗಳು ಯಥೇಚ್ಛವಾಗಿರುತ್ತವೆ. ಹಾಗಾಗಿ ನಿಮ್ಮ ಮಗುವಿಗೆ ಎಲ್ಲ ಬಗೆಯ ಧಾನ್ಯಗಳನ್ನು ನೀಡಲು ಮರೆಯದಿರಿ. ಮೊದಲಿಗೆ ಮೊಳಕೆ ಬಂದಿರುವ ಧಾನ್ಯದಿಂದ ಬ್ರೆಡ್ ಅಥವಾ ಪಾಸ್ತಾ ತಯಾರಿಸಿ ತಿನ್ನಲು ನೀಡಿ. ಇದರಿಂದ ನಿಮ್ಮ ಮಗುವಿಗೆ ಎಳೆ ವಯಸ್ಸಿನಲ್ಲಿಯೇ ಸದೃಢವಾದ ಹೃದಯವನ್ನು ಪಡೆಯಲು ನೆರವಾಗಿ.

ಅಕ್ರೋಟ್ ( ವಾಲ್ ನಟ್)
ವಾಲ್ ನಟ್‍ಗಳು ಒಂದು ಅತ್ಯುತ್ತಮವಾದ ಪ್ರೋಟಿನ್ ಉಪಾಹಾರವಾಗಿ (ಸ್ನಾಕ್) ಸಹಾಯಕ್ಕೆ ಬರುತ್ತವೆ. ಹಾಗಾಗಿ ಇದನ್ನು ನಿಮ್ಮ ಮಗುವಿನ ಊಟದ ಡಬ್ಬಿಯಲ್ಲಿ ತುಂಬಲು ಯಾವುದೇ ಅಡ್ಡಿಯಿಲ್ಲ. ಇವುಗಳಲ್ಲಿ ಒಮೆಗಾ - 3 ಕೊಬ್ಬಿನ ಆಮ್ಲಗಳು ಇವೆ. ಈ ಒಮೆಗಾವು ಮೆದುಳಿನ ಕಾರ್ಯ ವೈಖರಿ, ಕಾಯಿಲೆ ಮತ್ತು ಖಿನ್ನತೆಯನ್ನು ಹೊಡೆದೋಡಿಸುತ್ತವೆ. ಹಾಗಾಗಿ ವಾಲ್ ನಟ್ ಅನ್ನು ಕತ್ತರಿಸಿ ಮತ್ತು ಅವುಗಳನ್ನು ಗಂಜಿಯಂತೆಯೋ, ಬೇಯಿಸಿಯೋ ಅಥವಾ ಸಲಾಡ್ ಮಾದರಿಯಲ್ಲಿ ಬೇಕಾದರು ತಯಾರಿಸಿ ತಿನ್ನಬಹುದು.

ಎಲೆಕೋಸು
ಎಲೆಕೋಸು ಎಂಬುದು ಒಂದು ಬಗೆಯ ತೊಗಟೆಗಳನ್ನು ಹೊಂದಿರುವ ತರಕಾರಿ. ಇದರಲ್ಲಿ ಪೈಟೋನ್ಯೂಟ್ರಿಯೆಂಟ್ಸ್ ಯಥೇಚ್ಛವಾಗಿರುತ್ತದೆ. ಇದರಿಂದಾಗಿ ಇದು ಜೀರ್ಣಕ್ರಿಯೆಗೆ ಸಹಕರಿಸಿ ಕಾಯಿಲೆಯನ್ನು ದೂರವಿಡುತ್ತದೆ. ಇದರ ಕುರುಕಲು ಗುಣ ಮತ್ತು ರುಚಿಯಿಂದಾಗಿ ಮಕ್ಕಳು ಇದರಿಂದ ತಯಾರಿಸಿದ ಆಹಾರವನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ.



Click it and Unblock the Notifications