Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಕ್ಕಳ ಬೆಳವಣಿಗೆ ಸರಿಯಾಗಿದೆ ಎಂದು ತಿಳಿಯುವುದು ಹೇಗೆ?

ಮಕ್ಕಳ ಬೆಳವಣಿಗೆಯು ವಯೋಮಾನಕ್ಕೆ ಅನುಗುಣವಾಗಿ ವಿಭಿನ್ನವಾಗಿರುತ್ತದೆ. ಉಷ್ಣ ಪ್ರದೇಶದಲ್ಲಿ ಮಕ್ಕಳು ಬೇಗನೆ ಬೆಳವಣಿಗೆಯನ್ನು ಹೊಂದುತ್ತಾರೆ. ಮಕ್ಕಳ ಬೆಳವಣಿಗೆಯು ಹಲವಾರು ವಿಷಯಗಳಿಂದ ಪ್ರಭಾವಿತವಾಗಿವೆ. ಸಾಮಾನ್ಯವಾಗಿ ಆರೋಗ್ಯವಂತ ಮಕ್ಕಳಲ್ಲಿ ಬೆಳವಣಿಗೆಯು ಜೀವನದ ಮೊದಲ ವರ್ಷದಲ್ಲಿಯೇ ಶೀಘ್ರವಾಗಿ ಆಗುತ್ತದೆ
ಬೆಳವಣಿಗೆಯ ಕ್ರಮ:
ಬಹುತೇಕ ಎಲ್ಲ ಮಕ್ಕಳು ಹುಟ್ಟಿದ 2-3 ದಿನಗಳಲ್ಲಿ ತೂಕ ಕಳೆದುಕೊಳ್ಳುತ್ತವೆ. 7 ರಿಂದ 10 ದಿನಗಳಲ್ಲಿ ಪುನಃ ತೂಕ ಗಳಿಸುತ್ತವೆ. ಅವುಮೊದಲ ಮೂರು ತಿಂಗಳ ತನಕ ಗಳಿಸುವ ತೂಕವು ದಿನಕ್ಕೆ 25-30ಗ್ರಾಂ ಆಗಿರುತ್ತದೆ. ಸಾಮಾನ್ಯವಾಗಿ ಮಗುವಿನ ತೂಕ 3 ತಿಂಗಳಲ್ಲಿ ಹುಟ್ಟಿದಾಗ ಇದ್ದ ತೂಕಕ್ಕಿತ ಎರಡು ಪಟ್ಟು ಮತ್ತು ಒಂದು ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗುವುದು. ಕೆಲವೊಂದು ಮಕ್ಕಳು ಹುಟ್ಟಿದಾಗಲೆ ಕಡಿಮೆ ತೂಕವಿದ್ದರೂ ಕೂಡ ಅಂತಹ ಮಕ್ಕಳಲ್ಲಿ ತೂಕ ಬೇಗನೆ ಎರಡುಪಟ್ಟಾಗುವುದು. ಒಂದು ವರ್ಷದಲ್ಲಿ ನಾಲ್ಕು ಪಟ್ಟಾಗುವುದು. ಒಂದು ವರ್ಷದ ನಂತರ ಬೆಳವಣಿಗೆಯ ವೇಗ ಕಡಿಮೆಯಾಗುವುದು. ಮಕ್ಕಳು ಹುಟ್ಟಿದಾಗ ತುಂಬಾ ಕಡಿಮೆ ತೂಕವಿದ್ದರೂ ನಂತರ ಪೌಷ್ಠಿಕ ಆಹಾರಗಳಿಂದ ತೂಕ ಹೆಚ್ಚಾಗುವುದು. ಆದರೆ ಮತ್ತೆ ಕೆಲವು ಮಕ್ಕಳಲ್ಲಿ ಈ ರೀತಿಯ ಬೆಳವಣಿಗೆ ಕಂಡುಬರುವುದಿಲ್ಲ. ಆ ರೀತಿಯಾದರೆ ಮಕ್ಕಳ ತಜ್ಞರನ್ನು ಕಂಡು ಸಲಹೆಗಳನ್ನು ಪಡೆದುಕೊಳ್ಳಬೇಕು.
ಮಕ್ಕಳ ತೂಕದ ಗ್ರಾಫ್ ಪ್ರಕಾರ ಅನೇಕ ಮಕ್ಕಳಲ್ಲಿ ಮೊದಲ 5-6 ತಿಂಗಳಲ್ಲಿ ಬೆಳವಣಿಗೆ ಸರಿಯಾದ ರೀತಿಯಲ್ಲಿಯಾಗುವುದು. ತೂಕ ಆ ಅವಧಿಯಲ್ಲಿ ದ್ವಿಗುಣವಾಗುವುದು. ನಂತರ ಬೆಳವಣಿಗೆ ಕುಂಠಿತವಾಗುತ್ತದೆ. ಇದಕ್ಕೆ ಕಾರಣ ಮಗುವಿಗೆ ಎದೆ ಹಾಲು ಸಾಕಾಗುವುದಿಲ್ಲ. ಅದರ ಜತೆ ಹೆಚ್ಚುವರಿ ಆಹಾರವನ್ನು ಈಗಾಗಲೇ ಚರ್ಚಿಸಿದಂತೆ ನೀಡಬೇಕಾಗುವುದು.
ಮಗುವಿನ ತೂಕವು ಅದರ ಎತ್ತರವನ್ನು ಅವಲಂಬಿಸಿದೆ. ಮಗುವಿನ ತೂಕವು ಸಹಜವಾಗಿ ಇದೆಯೋ ಇಲ್ಲವೇ ಎಂಬುದನ್ನು ಅರಿಯುವುದು ಅತಿ ಅಗತ್ಯ. ಅದರ ಎತ್ತರದ ಪ್ರಕಾರ ಮಗುವು ಹೆಚ್ಚು ತೂಕದ್ದಾಗಿರಬಹುದು ಇಲ್ಲವೇ ಕಡಿಮೆ ತೂಕದ್ದಾಗಿರಬಹುದು. ಅತಿ ಕಡಿಮೆ ತೂಕ ಹೊಂದಿದ್ದರೆ ಅದು ಪೌಷ್ಟಿಕ ಆಹಾರಗನ್ನು ಕೊಡಬೇಕು.
ಎತ್ತರವು ಮಗುವಿನ ಬೆಳವಣಿಗೆಯನ್ನು ಅರಿಯುವ ಒಂದು ಅಂಶವಾಗಿದೆ. ನವಜಾತ ಶಿಶುವಿನ ಎತ್ತರವು 20 ಇಂಚು ಇರುತ್ತದೆ. ನಂತರ ಮೊದಲ ವರ್ಷದಲ್ಲಿ ಅದಕ್ಕಿಂತ 25ಸೆ.ಮೀ, ಎರಡನೆ ವರ್ಷದಲ್ಲಿ 12 ಸೆ.ಮೀ ಬೆಳೆಯುವುದು.3ನೇ, 4ನೇ,ಮತ್ತು 5ನೇ ವರ್ಷದಲ್ಲಿ ಕ್ರಮವಾಗಿ 9 ಸೆಂ.ಮಿ, 7ಸೆಂ.ಮೀ ಮತ್ತು 6 ಸೆಂ.ಮೀ.ಬೆಳೆಯಬೇಕು. ಎತ್ತರವು ವಯಸ್ಸಿಗೆ ಅನುಗುಣವಾಗಿಲ್ಲದಿದ್ದರೆ ಅದನ್ನು ಕುಂಠಿತ ಬೆಳವಣಿಗೆ ಅಥವಾ ಕುಬ್ಜ ಬೆಳವಣಿಗೆ ಎಂದು ಅರ್ಥ.
ಮಗುವಿನ ಅಭಿವೃದ್ಧಿಯು ಬೌದ್ಧಿಕ, ಭಾವನಾತ್ಮಕ,ಮತ್ತು ಸಾಮಾಜಿಕ ಕೌಶಲ್ಯಗಳು ಮತ್ತು ಕಾರ್ಯಗಳಿಗೆ ಸಂಬಂಧಿಸಿದ ಅಭಿವೃದ್ಧಿಯನ್ನು ಸೂಚಿಸುತ್ತದೆ. ಅದು ಮಾನಸಿಕ, ವರ್ತನೆಯ ಆಭಿವೃದ್ಧಿಯನ್ನು ಸೂಚಿಸುವುದು. ಅದ್ದರಿಂದ ಮಗುವಿನ ಬೆಳವಣಿಗೆಯ ಗಮನಿಸಬೇಕು. ತಾಯಂದಿರು ಮತ್ತು ಕುಟುಂಬದ ಸದಸ್ಯರು ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ ತಿಳೀದಿರುವುದು ಒಳ್ಳೆಯದು.
ವಂಶಪಾರಂಪರ್ಯ, ಪೌಷ್ಟಿಕತೆ, ಬಾಹ್ಯ ಪರಿಸರ, ಆರೋಗ್ಯ ಇವೆಲ್ಲಾ ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀಳುತ್ತದೆ. ಆದ್ದರಿಂದ ಮಗುವಿನ ಬೆಳವಣಿಗೆ ಸರಿಯಾಗಿ ಇರದಿದ್ದರೆ ಕೂಡಲೇ ವೈದ್ಯರನ್ನು ಕಂಡು ಅದಕ್ಕೆ ಕಾರಣವನ್ನು ಕಂಡು ಪರಿಹಾರವನ್ನು ಕಂಡುಕೊಳ್ಳಬೇಕು.



Click it and Unblock the Notifications
