Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪೋಷಕರ ಕೋಪ ಮಕ್ಕಳ ಆತ್ಮವಿಶ್ವಾಸ ಕುಗ್ಗಿಸುವುದು

1. ಮಕ್ಕಳು ರಸ್ತೆಯಲ್ಲಿ ಓಡುವಾಗ, ಬೆಂಕಿ ಅಥವಾ ನೀರಿನಲ್ಲಿ ಆಡುವಾಗ ಜೋರು ಮಾಡಬೇಕು. ಏಕೆಂದರೆ ಈ ಸಂದರ್ಭದಲ್ಲಿ ಮೃದುವಾಗಿ ಹೇಳಿದರೆ ಮಕ್ಕಳು ಮಾತು ಕೇಳಿಸುವುದಿಲ್ಲ. ನಂತರ ಮಕ್ಕಳನ್ನು ಕರೆದು ಮೃದುವಾಗಿ ಅವರ ಹತ್ತಿರ ತಪ್ಪು ಕೇಳಿ ರಸ್ತೆಯಲ್ಲಿ ಜೋರಾಗಿ ಓಡಿದರೆ ಅಪಘಾತವಾಗುವುದು, ಗಾಯವಾಗುತ್ತದೆ ಎಂದು ಪ್ರೀತಿಯಿಂದ ಹೇಳಿ. ಮುಂದಕ್ಕೆ ಮಕ್ಕಳು ಕೂಡ ಆ ತಪ್ಪು ಮಾಡದಂತೆ ಎಚ್ಚರಿಕೆ ವಹಿಸಿ.
2. ಮಕ್ಕಳ ಸಣ್ಣ-ಪುಟ್ಟ ತಪ್ಪುಗಳಿಗೆ ಕೋಪಗೊಂಡು ಕಿರುಚಾಡಬಾರದು. ಏಕೆಂದರೆ ನಿಮ್ಮ ಈ ರೀತಿಯ ನಡುವಳಿಕೆ ಮಕ್ಕಳು ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡಲು ತಡೆಯುತ್ತದೆ. ಎಲ್ಲಾ ಸಮಯದಲ್ಲಿ ಬೈಯ್ಯುತ್ತಿದ್ದರೆ ಮಕ್ಕಳು ನಿಮ್ಮ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದ ನಡುವಳಿಕೆ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚು.
ಮಕ್ಕಳು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ದೋಷ ಹುಡುಕಬಾರದು. ಸಣ್ಣ ವಿಷಯಕ್ಕೆ ನಿಮಗೆ ಕೋಪ ಬರುವುದಾದರೆ ಕೋಪ ಬಂದಾಗ ಸ್ವಲ್ಪ ದೂರ ನಡೆಯಿರಿ, ಕೋಪ ತಣ್ಣಗೆ ಆದ ಮೇಲೆ ಮಕ್ಕನ್ನು ಕರೆದು ಪ್ರೀತಿಯಿಂದ ಅವರ ತಪ್ಪುಗಳಿಗೆ ತಿಳಿ ಹೇಳಬೇಕು. ಇಲ್ಲಿ ನೀವು ತೋರಿಸುವ ಕೋಪಕ್ಕಿಂತ ಪ್ರೀತಿ ನಿಮ್ಮ ಮಕ್ಕಳ ನಡುವಳಿಕೆಯನ್ನು ಸರಿಪಡಿಸುವಲ್ಲಿ ಪರಿಣಾಮಕಾರಿಯಾದ ಅಸ್ತ್ರವಾಗಿದೆ.
3. ಮಕ್ಕಳ ನಡುವಳಿಕೆಯನ್ನು ತಿದ್ದುವಾಗ ಕಿರುಚಾಡಿ ಹೇಳುವ ಬದಲು ಗಡಸಾಗಿ ಹೇಳಿ. ಉದಾಹರಣೆಗೆ ಮಗು ಗೊಂಬೆಯನ್ನು ಎಸೆದರೆ ಅದು ಅವರ ಹತ್ತಿರ ತೆಗೆದು ಇಡಲು ಹೇಳಬೇಕು. ಸಹಪಾಠಿಯ ವಸ್ತುಗಳನ್ನು ಎತ್ತಿಕೊಂಡು ಬಂದಿದ್ದರೆ ಅದನ್ನು ವಾಪಸ್ಸು ಮಾಡಲು ಹೇಳಬೇಕು.
4. ಹೋಲಿಕೆ ಬೇಡ: ಅನೇಕ ಪೋಷಕರು ಮಾಡುವ ದೊಡ್ಡ ತಪ್ಪು ಮಕ್ಕಳನ್ನು ಬೇರೆ ಮಕ್ಕಳ ಜೊತೆ ಹೋಲಿಕೆ ಮಾಡುವುದು. ನಿನಗಿಂತ ಅವನು ಬುದ್ಧಿವಂತ ಈ ಎಲ್ಲಾ ಮಾತುಗಳು ಮಕ್ಕಳ ಆತ್ಮವಿಶ್ವಾಸವನ್ನು ಮತ್ತಷ್ಟು ಕಡಿಮೆ ಮಾಡುವುದು.
ನೆನಪಿಡಿ:ಮಕ್ಕಳನ್ನು ತುಂಬಾ ಹೊಡೆದರೆ ಅಥವಾ ಅಳಿಸಿದರೆ ಅವರಲ್ಲಿ ಆತ್ಮವಿಶ್ವಾಸ ಕುಗ್ಗುವುದು ಅಥವಾ ನಕರಾತ್ಮಕ ಗುಣಗಳು ಹೆಚ್ಚಾಗುವುದು. ಆದ್ದರಿಂದ ಮಕ್ಕಳೊಂದಿಗೆ ದರ್ಪದ ಬದಲು ಸ್ನೇಹಿತರಂತೆ ವರ್ತಿಸುವುದು ಜಾಣತನ.



Click it and Unblock the Notifications
