Latest Updates
-
ಕಜರಿ ತೀಜ್ 2026: ಉಪವಾಸದ ದಿನ ಆರೋಗ್ಯ ಮತ್ತು ಸಂಗಾತಿಯೊಂದಿಗೆ ಸುಗಮ ಸಂವಹನಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಇಂದೇ ಕೊನೆಯ ಅವಕಾಶ: ಎಲ್ಪಿಜಿ ಇ-ಕೆವೈಸಿ ಮಾಡದಿದ್ದರೆ ಸಿಲಿಂಡರ್ ದರ ಏರಿಕೆ ಖಚಿತ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆ ಬಜೆಟ್ ಉಳಿಸಿ, ಈರುಳ್ಳಿ ಇಲ್ಲದೆಯೂ ರುಚಿಕರ ಹೈ-ಪ್ರೋಟೀನ್ ಊಟ ಮಾಡಿ! -
#5DayWeekandFairPLI ಟ್ರೆಂಡ್: ಬ್ಯಾಂಕ್ ಮತ್ತು ಐಟಿ ಉದ್ಯೋಗಿಗಳ ಆಕ್ರೋಶ, 5 ದಿನದ ಕೆಲಸಕ್ಕೆ ಸಿಗುತ್ತಾ ಮನ್ನಣೆ? -
ಮಕ್ಕಳಿಗಾಗಿ ದಾಂಪತ್ಯ ಉಳಿಸಿಕೊಳ್ಳಬೇಕೇ? ಜೀನತ್ ಅಮಾನ್ ಅವರ ವೈರಲ್ ಸಲಹೆ ಮತ್ತು ಪೋಷಕರಿಗೆ ಮಹತ್ವದ ಪಾಠ -
ಇಂದು ಬೆಂಗಳೂರಿನಲ್ಲಿ ಪವರ್ ಕಟ್: ವೈಟ್ಫೀಲ್ಡ್, ಪೀಣ್ಯ, ಮಲ್ಲೇಶ್ವರಂ ಸೇರಿ ಪ್ರಮುಖ ಏರಿಯಾಗಳ ಪಟ್ಟಿ ಇಲ್ಲಿದೆ -
ಇನ್ಮುಂದೆ ಬಿಸ್ಕತ್ತು, ಕೂಲ್ ಡ್ರಿಂಕ್ಸ್ ಮೇಲೆ ಕೆಂಪು ಎಚ್ಚರಿಕೆ ಲೇಬಲ್: FSSAI ಹೊಸ ನಿಯಮವೇನು? -
ಮುಂಬೈ ಲೋಕಲ್ ರೈಲು ಪ್ರಯಾಣಿಕರೇ ಗಮನಿಸಿ: ಇಂದು ಮೆಗಾ ಬ್ಲಾಕ್, ಯಾವ ಮಾರ್ಗದಲ್ಲಿ ಸಂಚಾರ ಸ್ಥಗಿತ? -
ರಾಷ್ಟ್ರೀಯ ಪೋಷಕಾಂಶ ವಾರ: ಕನ್ನಡಿಗರ ಆರೋಗ್ಯಕ್ಕಾಗಿ 7 ದಿನಗಳ ಸಿಂಪಲ್ ಡಯಟ್ ಮತ್ತು ವ್ಯಾಯಾಮ ಪ್ಲಾನ್! -
ಕ್ರಿಕೆಟ್ ಮ್ಯಾಚ್ ನೋಡುವಾಗ ಮನೆಯಲ್ಲಿ ಜಗಳ ಬೇಡ: ದಂಪತಿಗಳು ಇಂದೇ ಮಾಡಿಕೊಳ್ಳಿ ಈ 'ಮ್ಯಾಚ್ ಡೇ ಒಪ್ಪಂದ'!
ಮಕ್ಕಳ ಬೆಳವಣಿಗೆ ಮೊಂಡ ಮಾಡುತ್ತೆ ಟಿವಿ

ಮಕ್ಕಳು ಟಿವಿ ಚಟವನ್ನು ಬೆಳೆಸಿಕೊಳ್ಳಲು ಪೋಷಕರೆ ಪ್ರತ್ಯಕ್ಷವಾದ ಕಾರಣ. ಮಕ್ಕಳು ಗಲಾಟೆ ಮಾಡದೆ ಇರಲಿ ಎಂದು ತಂದು ಟಿವಿ ಮುಂದೆ ಕೂರಿಸುತ್ತಾರೆ, ಮುಂದೆ ಅದೇ ಮಕ್ಕಳಿಗೆ ಅಭ್ಯಾಸವಾಗಿ ಬಿಡುತ್ತದೆ. ಟಿವಿಯಿಂದಾಗಿ ಇತರ ಮಕ್ಕಳೊಂದಿಗೆ ಆಡಲು ಹೋಗುವುದಿಲ್ಲ, ಪಾಠದತ್ತ ಹೆಚ್ಚಿನ ಗಮನ ಹರಿಸುವುದಿಲ್ಲ ಇವೆಲ್ಲವೂ ಮಕ್ಕಳನ್ನು ಸೋಮಾರಿಗಳನ್ನಾಗಿ ಮಾಡುತ್ತದೆ.
ಮಕ್ಕಳ ಟಿವಿ ನೋಡುವ ಅಭ್ಯಾಸವನ್ನು ಕಡಿಮೆ ಮಾಡುವ ಬಗ್ಗೆ ತೀವ್ರವಾಗಿ ಯೋಚಿಸುತ್ತಿದ್ದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.
1. ಮಗು ಹಠ ಮಾಡುವಾಗ, ಊಟ ಮಾಡದಿದ್ದಾಗ ಟಿವಿ ತೋರಿಸಿ ಸಮಧಾನ ಮಾಡುವ ಅಥವಾ ತಿನ್ನಿಸುವ ಅಭ್ಯಾಸವನ್ನು ಬೆಳೆಸಬಾರದು. ಹೀಗೆ ಮಾಡಿದರೆ ಮಗು ಬೆಳದಂತೆ ಟಿವಿ ನೋಡುವ ಅಭ್ಯಾಸ ಕೂಡ ಹೆಚ್ಚಾಗುತ್ತದೆ.
2. ಊಟದ ಸಮಯದಲ್ಲಿ ಟಿವಿಯನ್ನು ಆಫ್ ಮಾಡಬೇಕು. ರಾತ್ರಿ ಊಟದ ಸಮಯದಲ್ಲಿ ಆ ದಿನದ ತಮ್ಮ ಅನುಭವಗಳನ್ನು, ಸಂತೋಷಗಳನ್ನು ಹಂಚಿ ಕೊಳ್ಳುವುದರಿಂದ ಮನೆಯವರ ನಡುವೆ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಅದರ ಬದಲು ಟಿವಿಗೆ ಮಾತನಾಡಲು ಅವಕಾಶಕೊಟ್ಟರೆ ಮನೆಯವರಿಗೆ ತಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳಲು ಅವಕಾಶನೆ ಇರುವುದಿಲ್ಲ.
2. ಟಿವಿಯಲ್ಲಿ ಹಿಂಸೆಯನ್ನು ವೈಭವೀಕರಿಸಿ ತೋರಿಸುವ ಸಿನಿಮಾಗಳು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಅಂತಹ ಸಿನಿಮಾ ಅಥವಾ ಕಾರ್ಯಕ್ರಮವಿರುವ ಚಾನಲ್ ಗಳನ್ನು ಹಾಕದಂತೆ ಬ್ಲಾಕ್ ಮಾಡಬೇಕು.
3. ಪೋಷಕರು ಮಕ್ಕಳ ಬೆಡ್ ರೂಂನಲ್ಲಿ ಟಿವಿ ಕೊಡಿಸುವುದು ಪ್ರತಿಷ್ಠೆ ಸಂಕೇತ ಎಂದು ಭಾವಿಸಿದರೆ ತಪ್ಪಾದೀತು. ಹಾಗೆ ಮಾಡಿದರೆ ಮಕ್ಕಳು ಟಿವಿ ಚಟವನ್ನು ಹೆಚ್ಚು ಬೆಳೆಸಿಕೊಂಡು, ಅದು ಓದು, ವ್ಯಕ್ತಿತ್ವದ, ಮತ್ತು ದೈಹಿಕ ಆರೋಗ್ಯ ಹಾಳು ಮಾಡುತ್ತದೆ.
4. ಮಕ್ಕಳು ಅತಿ ಹೆಚ್ಚು ಟಿವಿ ನೋಡುತ್ತಿದ್ದಾರೆ ಎಂದು ಅನಿಸಿದ ತಕ್ಷಣ ಸ್ಪೋರ್ಟ್ಸ್ ಕ್ಲಬ್ ಸೇರಿಸಬೇಕು, ಕ್ರೀಡೆಯಲ್ಲಿ ಆಸಕ್ತಿ ಇಲ್ಲ ಅಂದರೆ ಸಂಗೀತ, ಡ್ಯಾನ್ಸ್ ಮುಂತಾದ ಕ್ಲಾಸ್ ಗೆ ಸೇರಿಸಬೇಕು.
5. ಮಕ್ಕಳ ಟಿವಿ ನೋಡುವ ಚಟಕ್ಕೆ ಪೋಷಕರೆ ಕಾರಣ, ಕೆಲಸದಿಂದ ಸುಸ್ತಾಗಿ ಬಂದಾಗ ಮಕ್ಕಳು ನಮಗೆ ತೊಂದರೆ ಕೊಡದ ಹಾಗೆ ಏನಾದರೂ ಮಾಡುತ್ತಿರಲಿ ಎಂಬ ಮನೋಭಾವವೆ ಇವೆಕ್ಕೆಲ್ಲಾ ಕಾರಣ. ಹಾಗೆ ಮಾಡದೆ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಆಡುವಂತೆ ಪ್ರೋತ್ಸಾಹಿಸಿ ಅವರ ಗಮನವನ್ನು ಅದರತ್ತ ತಿರುಗಿಸ ಬೇಕು. ಹೀಗೆ ಮಾಡಿ ಮಕ್ಕಳ ಟಿವಿ ನೋಡುವ ಅಭ್ಯಾಸಕ್ಕೆ ಕಡಿವಾಣ ಹಾಕಬಹುದು.



Click it and Unblock the Notifications