Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಮಕ್ಕಳ ಕೆಮ್ಮು ನಿವಾರಣೆಗೆ ಮನೆ ಮದ್ದು

ಎರಡು ವಾರಗಳಿಗಿಂತ ಮೇಲ್ಪಟ್ಟು ಕೆಮ್ಮು ಇದ್ದರೆ ಅದು ಅಪಾಯಕಾರಿ ರೋಗಗಳ ಲಕ್ಷಣ ಕೂಡ ಆಗಿರಬಹುದು. ಆಗ ತಕ್ಷಣವೆ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಆದರೆ ಮಕ್ಕಳಿಗೆ ಜ್ವರವಿಲ್ಲದೆ 2-3 ದಿನದಿಂದ ಕೆಮ್ಮು ಮಾತ್ರ ಕಾಣಿಸಿಕೊಂಡರೆ, ಈ ಕೆಳಗಿನ ಸಲಹೆಗಳನ್ನು ಪಾಲಿಸಿ ಕೆಮ್ಮನ್ನು ನಿವಾರಣೆ ಮಾಡಬಹುದು.
1. ಮಕ್ಕಳಿಗೆ ಕೆಮ್ಮು ಬಂದರೆ ಸ್ವಟರ್ ಹೀಗೆ ಬೆಚ್ಚಗಿನ ಉಡುಪುಗಳನ್ನು ಧರಿಸಬೇಕು. ಏಕೆಂದರೆ ಥಂಡಿ ಗಾಳಿಗೆ ಮೈ ಒಡ್ಡಿದರೆ ಕೆಮ್ಮು ಮತ್ತಷ್ಟು ಜಾಸ್ತಿಯಾಗುವುದು.
2. ಅಮೃತಾಂಜನ ಅಥವಾ ಜಂಡೂಬಾಂಬ್ ಅನ್ನು ಮಕ್ಕಳು ಮಲಗುವ ಮುಂಚೆ ಎದೆಗೆ, ಕಿವಿ ಹತ್ತಿರ, ಬೆನ್ನಿಗೆ ಸವರ ಬೇಕು. ಇದರಿಂದ ಮಕ್ಕಳಿಗೆ ಉಸಿರಾಡಲು ತೊಂದರೆ ಉಂಟಾಗುವುದಿಲ್ಲ.
3. ಮಕ್ಕಳಿಗೆ ಕುಡಿಯಲಿಕ್ಕೆ ಬಿಸಿ ನೀರು ಕೊಡಬೇಕು, ವೈದ್ಯರ ಸಲಹೆ ಪಡೆದು ಹರ್ಬಲ್ ಟಿ ಸಹ ಕೊಡಬಹುದು.
4. ಈ ಸಂದರ್ಭದಲ್ಲಿ ಸಾಕಷ್ಟು ನೀರು ಮತ್ತು ತರಕಾರಿ ಸೂಪ್ ಕುಡಿಸಬೇಕು. ಏಕೆಂದರೆ ಶೀತ ಅಥವಾ ಕೆಮ್ಮು ಬಂದಾಗ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಅದರಿಂದಾಗಿ ದೇಹದ ಶಕ್ತಿ ಕುಂದುತ್ತದೆ. ಆದರೆ ನೀರಿನಂಶ ದೇಹಕ್ಕೆ ಸೇರಿದಾಗ ದೇಹದ ಸುಸ್ತು ಸ್ವಲ್ಪ ಕಡಿಮೆಯಾಗುತ್ತದೆ.
5. ಹಾಲು ಕುಡಿದ ಬಳಿಕ ಮಕ್ಕಳು ಜಾಸ್ತಿ ಕೆಮ್ಮಿದರೆ ಹಾಲನ್ನು ಸ್ವಲ್ಪ ದಿನಗಳವರೆಗೆ ಕುಡಿಯಲು ಕೊಡಬೇಡಿ. ಹಾಲಿನಿಂದ ಅಲರ್ಜಿಯಾಗಿ ಕೆಮ್ಮು ಜಾಸ್ತಿಯಾಗಬಹುದು.
6. ಮಕ್ಕಳು ಒಂದು ವರ್ಷಕ್ಕಿಂತ ದೊಡ್ಡವರಾಗಿದ್ದರೆ 2 ಕರಿಮೆಣಸನ್ನು ಪುಡಿ ಮಾಡಿ, ಅದನ್ನು 1/2 ಚಮಚ ಜೇನಿನೊಂದಿಗೆ ಬೆರೆಸಿ ಕುಡಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.



Click it and Unblock the Notifications
