Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮಗನಿಗಿಂತ ಮಗಳಿಗೆ ಬೇಕು ಸ್ಪೆಷಲ್ ಕೇರ್

ಪ್ರಾಯಕ್ಕೆ ಬಂದ ಮಗಳಿಗೆ ಈ ರೀತಿಯಲ್ಲಿ ಕಾಳಜಿ ತೋರಿಸಿ, ಅದು ಅವಳಲ್ಲಿ ಆತ್ಮ ವಿಶ್ವಾಸ ತುಂಬುವುದು.
1. ಮಕ್ಕಳು ಚಿಕ್ಕವರಾಗಿದ್ದಾಗ ಮಗ ಮತ್ತು ಮಗಳನ್ನು ಒಂದೆ ರೀತಿ ನೋಡಿದರೂ ಮಗಳು ಪ್ರಾಯಕ್ಕೆ ಬಂದ ಮೇಲೆ ಅವಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.
2. ಹದಿಹರೆಯದ ಮಗಳು ಕೆಲವೊಮ್ಮೆ ನಿಮ್ಮ ಮಾತನ್ನು ಪ್ರತಿಭಟಿಸಬಹುದು. ಆದರೆ ಪ್ರೀತಿಯಿಂದ ತಿಳಿ ಹೇಳಿ.
3.,ಸಮಾಜ ಹೆಣ್ಣಿಗೆ ಒಂದು ನಿಯಮ ಗಂಡಿಗೆ ಒಂದು ನಿಯಮ ರೂಪಿಸಿದೆ. ಆದರೆ ನೀವು ಮನೆ ಒಳಗೆ ಬರುವಾಗ ಆ ನಿಯಮಗಳನ್ನೆಲ್ಲಾ ಮರೆತು ಮಗ ಮತ್ತು ಮಗಳನ್ನು ಒಂದೇ ರೀತಿ ಕಾಣಿ.
4. ಹೆಣ್ಣೆಂದು ಅವಳ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿದರೆ ಅವಳು ಮುಂದೆ ಭಯಗ್ರಸ್ಥಳಾಗಿ ಬೆಳೆಯುತ್ತಾಳೆ, ಅವಳಲ್ಲಿ ಸ್ವೌಗೌರವ ಕುಗ್ಗ ತೊಡುಗುತ್ತದೆ.
5. ಹೆಣ್ಣು ಮಕ್ಕಳು ಅಮ್ಮನಿಗಿಂತ ಅಪ್ಪನನ್ನು ಹೆಚ್ಚು ಹಚ್ಚಿಕೊಂಡಿರುತ್ತಾರೆ. ಆದ್ದರಿಂದ ಅಪ್ಪ ಮಗಳಿಗೆ ಒಳ್ಳೆಯ ಸ್ನೇಹಿತನಾಗಿ ಅವಳ ತಪ್ಪುಗಳನ್ನು ತಿದ್ದಬಹುದಾಗಿದೆ.
6. ಕೆಲವೊಮ್ಮೆ ತಂದೆಗೆ ಮಗಳ ಮೇಲೆ ಪ್ರೀತಿಯಿಂದ ಅವಳು ಏನೂ ಮಾಡಿದರು ಸರಿಯಂತೆ ವರ್ತಿಸಿದರೆ ತಾಯಿ ಮಗಳ ಕಿವಿ ಹಿಂಡಿ ಸರಿಪಡಿಸಬೇಕು.
7. ಮಗಳು ತಂದೆಯನ್ನು ಎಷ್ಟೆ ಹಚ್ಚಿಕೊಂಡಿದ್ದರು 12-18ರ ಪ್ರಾಯದಲ್ಲಿ ತಾಯಿಯ ಸಲಹೆ ಸೂಚನೆಗಳು ಹೆಣ್ಣು ಮಕ್ಕಳಿಗೆ ಅವಶ್ಯಕ.
8. ಆಸ್ತಿ ಹಂಚಿಕೆ ಮಾಡುವಾಗ ಈ ಹೆಣ್ಣು ಗಂಡು ತಾರತಮ್ಯ ಹೆಚ್ಚಾಗಿ ಕಂಡುಬರುತ್ತದೆ. ಆಗ ನೀವು ನಿಮ್ಮ ಸ್ವಂತ ಅನುಭವವನ್ನು ಅವಳೊಂದಿಗೆ ಹೇಳಿ ಸಮಸ್ಯೆಯನ್ನು ಅವಳಿಗೆ ನೋವಾಗಾದಂತೆ ಬಗೆಹರಿಸ ಬೇಕಾಗುತ್ತದೆ.



Click it and Unblock the Notifications
