Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಕ್ಕಳ ಮೇಲೆ ಕಾಜೋಲ್ 'ಹೆಲಿಕಾಪ್ಟರ್ ಪೇರೆಂಟಿಂಗ್'! ಹೀಗಂದ್ರೆ ಏನು ಗೊತ್ತಾ?
ಮಕ್ಕಳು ದೊಡ್ಡವರಾದ ಮೇಲೆ ಯಾವ ರೀತಿ ವರ್ತಿಸಬೇಕು. ಅವರ ಗುಣಗಳು ಹೇಗೆಲ್ಲಾ ರೂಪುಗೊಳ್ಳಬೇಕು ಎಂಬುದನ್ನು ಪೋಷಕರೇ ನಿರ್ಧರಿಸಬೇಕಾಗುತ್ತದೆ. ಚಿಕ್ಕವರಿರುವಾಗಲೇ ಮಕ್ಕಳನ್ನು ತಿದ್ದಿ ತೀಡಿ ಸರಿದಾರಿಗೆ ಬರುವಂತೆ ಮಾಡಬೇಕು. ಮಕ್ಕಳಿಗೆ ಮನೆಯ ಮೊದಲ ಪಾಠ ಶಾಲೆ ಎಂದು ಹೇಳುವುದು ಇದಕ್ಕೆ. ಮನೆ ಬಿಟ್ಟರೆ ಶಾಲೆಯಲ್ಲಿ ಮಕ್ಳಳು ತಮ್ಮ ನಡುವಳಿಕೆ, ಭವಿಷ್ಯ ರೂಪಿಸಿಕೊಳ್ಳುತ್ತಾರೆ.
ಆದ್ರೆ ಇತ್ತೀಚಿಗೆ ಈ ಹೆಲಿಕಾಪ್ಟರ್ ಪೇರೆಂಟಿಂಗ್ ಎಂಬ ವಿಧಾನವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದು ಅತಿಯಾದ ರಕ್ಷಣಾತ್ಮಕ ಮತ್ತು ಅತ್ಯಂತ ಒಳಗೊಂಡಿರುವ ಪೋಷಕರ ಶೈಲಿಯನ್ನು ಸೂಚಿಸುತ್ತದೆ. ಹೆಲಿಕಾಪ್ಟರ್ ಹೇಗೆ ಸುಳಿದಾಡುತ್ತದೆಯೋ ಹಾಗೆಯೇ ಈ ಪೋಷಕರೂ ಕೂಡ ಮಕ್ಕಳ ಜೊತೆಗೆ ಸುಳಿದಾಡುತ್ತಾರೆ. ಅವರು ಸಾಮಾನ್ಯವಾಗಿ ತಮ್ಮ ಮಕ್ಕಳ ಜೀವನದ ಎಲ್ಲಾ ಅಂಶಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಈ ವಿಧಾನ ಈಗ ಸುದ್ದಿಯಾಗುತ್ತಿರುವುದು ಬಾಲಿವುಡ್ ನಟಿ ಕಾಜೋಲ್ ಅವರಿಂದ. ಅವರು ಇತ್ತೀಚಿಗೆ ತಮ್ಮ ಮಕ್ಕಳ ಬಗ್ಗೆ ಮಾತನಾಡುವಾಗ ಈ ಹೆಲಿಕಾಪ್ಟರ್ ಪೇರೆಂಟಿಂಗ್ ಬಗ್ಗೆ ಹೇಳಿದ್ದರು. ಕೆಲವರು ಇದೇನು ಹೆಲಿಕಾಪ್ಟರ್ ಪೇರೆಂಟಿಂಗ್ ಅವರ ಮೇಲೆ ಇದೆಂತ ಪ್ರಯೋಗ ಎಂಬೆಲ್ಲಾ ಚರ್ಚೆ ಹುಟ್ಟುಹಾಕಿತ್ತು.
ಆದ್ರೆ ಇದೊಂದು ಮಕ್ಕಳ ಪಾಲನೆ ಮಾಡುವ ವಿಧಾನ. ಹೆಲಿಕಾಪ್ಟರ್‌ನಂತೆ ಮಕ್ಕಳ ಜೊತೆಗೆ ಸುಳಿದಾಡುವುದು, ಅವರ ಮೇಲೆ ತೀಕ್ಷ್ಣವಾದ ದೃಷ್ಟಿ ಇಡುವುದು, ಅವರು ಎಲ್ಲೆಲ್ಲಾ ತೊಡಗಿಸಿಕೊಂಡಿದ್ದಾರೆ ಅವರ ಚಟುವಟಿಕೆ ಏನು ಎಂಬುದನ್ನು ಕ್ಷಣ ಕ್ಷಣದ ಮಾನಿಟರಿಂಗ್ ಮಾಡುವ ಒಂದು ವಿಧಾನವಂತೆ.
ಕೆಲವರ ಪ್ರಕಾರ ಈ ರೀತಿಯ ವಿಧಾನವು ಮಕ್ಕಳಲ್ಲಿ ಮಾನಸಿಕ ನೆಮ್ಮದಿ ಕೆಡಿಸುತ್ತದೆ ಎಂಬುದು. ಏಕೆಂದರೆ ಅವರ ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ವೈಯಕ್ತಿಕ ಜೀವನಕ್ಕೆ ಈ ಹೆಲಿಕಾಪ್ಟರ್ ಪೇರೆಂಟಿಂಗ್ ಕೊಳ್ಳಿ ಇಡಲಿದೆ ಎಂಬುದು ವಾದವಾಗಿದೆ.
ಹಾಗಾದ್ರೆ ಕಾಜೋಲ್ ಹೇಳಿದ ಹೆಲಿಕಾಪ್ಟರ್ ಪೇರೆಂಟಿಂಗ್ ಏನು?
ಕಾಜೋಲ್ ಮತ್ತು ಅಜಯ್ ದೇವಗನ್ ನೈಸಾ ಮತ್ತು ಯುಗ್ ದೇವಗನ್ ಎಂಬ ಮಕ್ಕಳ ಪೋಷಕರಾಗಿ ವರ್ಷಗಳು ಕಳೆದಿವೆ. ಕಾಜೋಲ್ ತನ್ನ ತಾಯಿ ಕೂಡ ಕಟ್ಟುನಿಟ್ಟಾದ ನಿಯಮದಿಂದ ನನ್ನ ಬೆಳೆಸಿದ್ದಾರೆ. ಅವರ ಪುಸ್ತಕ ಈಗ ನನ್ನ ಹೆಗಲ ಮೇಲೆ ಇಟ್ಟಿದ್ದಾರೆ ಎಂಬುದನ್ನು ಒಪ್ಪಿಕೊಂಡರು. ಮಕ್ಕಳ ಪಾಲನೆಯಲ್ಲಿ ನನಗೆ ಹೆಲಿಕಾಪ್ಟರ್ ಪೇರೆಂಟಿಂಗ್ ನಿಜವಾಗಿಯೂ ಸಹಕಾರಿಯಾಗಿತ್ತು ಎಂದಿದ್ದರು.
ಈ ಹೇಳಿಕೆ ಬಳಿಕ ಹೆಲಿಕಾಪ್ಟರ್ ಪೇರೆಂಟಿಂಗ್ ಅಂದರೆ ಏನಪ್ಪಾ ಎಂದು ಎಲ್ಲರು ಹುಡುಕಾಡಿದ್ದಾರೆ. ಪೋಷಕರಾಗಿ ನಾವು ನಮ್ಮ ಮಕ್ಕಳ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದರ ಕುರಿತು ನಾವು ತಿಳಿದಿರಬೇಕು ಎಂದು ನಾನು ಖಂಡಿತವಾಗಿ ಭಾವಿಸುತ್ತೇನೆ. ಅದನ್ನು ಹೊಂದಿರುವುದು ಬಹಳ ಮುಖ್ಯ. ಇಂದು ನಮ್ಮ ಮಕ್ಕಳು ಏನು ಮಾಡುತ್ತಿದ್ದಾರೆಂಬುದನ್ನು ನಾವು ಪರಿಶೀಲಿಸಬೇಕಾಗಿದೆ, ತಮ್ಮ ಮಕ್ಕಳೊಂದಿಗೆ ಪೋಷಕರಂತೆ ನಿರಂತರವಾಗಿ ಸಂಪರ್ಕದಲ್ಲಿರುವುದು ಮತ್ತು ಸಂವಹನ ಮಾಡುವುದು ಮುಖ್ಯ ಎಂದು ಕಾಜೋಲ್ ಅಭಿಪ್ರಾಯಪಟ್ಟಿದ್ದಾರೆ.
ನಾನು ನನ್ನ ಮಕ್ಕಳ ಆಹಾರದಿಂದ ಹಿಡಿದು ಅವರ ಹಣಕಾಸು ವ್ಯವಹಾರ, ಕಾಲೇಜು, ಓದು, ಗೆಳೆಯರು ಹೀಗೆ ಪ್ರತಿಯೊಂದನ್ನು ಗಮನಿಸುತ್ತೇನೆ. ಮಕ್ಕಳ ಸರಿಯಾದ ಬೆಳವಣಿಗೆಗೆ ಈ ಹೆಲಿಕಾಪ್ಟರ್ ಪೇರೆಂಟಿಂಗ್ ಅತ್ಯಂತ ಮುಖ್ಯ. ನಾನು ಎಲ್ಲಾ ಪೋಷಕರಿಗೂ ಇದನ್ನು ಶಿಫಾರಸು ಮಾಡುತ್ತೇನೆ ಎಂದು ಅವರು ಹೇಳಿದ್ದರು.
ಮಕ್ಕಳ ಜೀವನದಲ್ಲಿ ಪೋಷಕರು ಅತೀಯಾಗಿ ತೊಡಗಿಸಿಕೊಳ್ಳುವುದು ಈ ವಿಧಾನದ ಒಂದು ಲಕ್ಷಣ. ಆದರೆ ಎಲ್ಲಾ ಪೋಷಕರ ದೃಷ್ಟಿಯಲ್ಲಿ ಇದು ಸರಿಯಾದ ಮಾರ್ಗ ಎಂದು ವಿಂಗಡಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಇದು ಮಕ್ಕಳಲ್ಲಿ ಹಾನಿಗೆ ಕಾರಣವಾಗಬಹುದಂತೆ.



Click it and Unblock the Notifications
