Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಮಗುವಿಗೆ ಮೊಟ್ಟೆ ಯಾವಾಗಿನಿಂದ ಕೊಡುವುದು ಒಳ್ಳೆಯದು?
ಮೊಟ್ಟೆ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಪೋಷಕಾಂಶಗಳಿಂದ ತುಂಬಿರುವ ಮೊಟ್ಟೆಯನ್ನು ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ನೀಡಲಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ನೋಡಿದ್ರೆ ಮಕ್ಕಳಿಗೆ ಮೊಟ್ಟೆ ಉತ್ತಮ ಆಹಾರವಾಗಿದೆ. ಆದ್ರೆ ಹೆಚ್ಚಿನ ಪೋಷಕರು ಮಕ್ಕಳಿಗೆ ಮೊಟ್ಟೆ ನೀಡೋದಕ್ಕೆ ಭಯ ಪಡುತ್ತಾರೆ. ಹಾಗಾದ್ರೆ ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಮೊಟ್ಟೆಯನ್ನು ಪರಿಚಯಿಸಬೇಕು? ಇದ್ರಿಂದ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಾ? ಏನಾದ್ರು ಅಪಾಯಗಳಿದ್ಯಾ? ಅನ್ನೋದನ್ನು ತಿಳಿಯೋಣ.
ಮಕ್ಕಳಿಗೆ ಮೊಟ್ಟೆ ಯಾವಾಗ ಕೊಡಬೇಕು?
ಒಂದು ಅಧ್ಯಯನದ ಪ್ರಕಾರ ಮಕ್ಕಳಿಗೆ ಎಂಟು ತಿಂಗಳು ತುಂಬಿದ ಮೇಲೆ ಮೊಟ್ಟೆಯ ಹಳದಿ ಭಾಗವನ್ನು ನೀಡಬಹುದಂತೆ. ಇನ್ನೂ ಮೊಟ್ಟೆಯ ಬಿಳಿಭಾಗವನ್ನು ಒಂದು ವರ್ಷದ ನಂತರವೇ ಪರಿಚಯಿಸಬೇಕು. ಇನ್ನೂ ದೇಶದ ಇತರ ಭಾಗಗಳಲ್ಲಿ ಮಕ್ಕಳಿಗೆ ಆರು ತಿಂಗಳು ತುಂಬಿದ ತಕ್ಷಣ ಮೊಟ್ಟೆಯನ್ನು ನೀಡುತ್ತಾರಂತೆ. ಕೆಲವೊಂದು ಸಲ ಮಕ್ಕಳಿಗೆ ಬಹುಬೇಗ ಮೊಟ್ಟೆ ನೀಡೋದ್ರಿಂದ ಅಲರ್ಜಿಯಾಗುವ ಸಾಧ್ಯತೆಯಿದೆ. ಹೀಗಾಗಿ ಮಕ್ಕಳಿಗೆ ಮೊಟ್ಟೆ ಕೊಡೋ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಮೊಟ್ಟೆಯಲ್ಲಿರುವ ಪೌಷ್ಟಿಕಾಂಶಗಳು
ಮೊಟ್ಟೆಯು ಉತ್ತಮ ಗುಣಮಟ್ಟದ ಪ್ರೋಟೀನ್‌ಗಳ ಪ್ರಮುಖ ಮೂಲವಾಗಿದೆ. ಇದ್ರಲ್ಲಿ ತಾಮ್ರ, ಸತು, ಸೆಲೆನಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಕೊಲೆಸ್ಟ್ರಾಲ್, ಕೊಬ್ಬು, ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಡಿ, ಬಿ 12 ನಂತಹ ಹದಿಮೂರು ಅಗತ್ಯ ಖನಿಜಗಳನ್ನು ಒಳಗೊಂಡಿದೆ. ಈ ಎಲ್ಲಾ ಪೋಷಕಾಂಶಗಳು ಮಕ್ಕಳ ಬೆಳವಣಿಗೆ ಸಹಾಯವಾಗುತ್ತದೆ.
ಮೊಟ್ಟೆಯಿಂದ ಮಕ್ಕಳಿಗಾಗುವ ಆರೋಗ್ಯಕಾರಿ ಪ್ರಯೋಜನಗಳೇನು?
1. ರೋಗನಿರೋಧಕ ಶಕ್ತಿ ಹೊಂದಿದೆ
ಮೊಟ್ಟೆಗಳು ಕ್ಯಾಲ್ಸಿಯಂ, ಸೆಲೆನಿಯಮ್ ಮತ್ತು ಸತುಗಳಂತಹ ಖನಿಜಾಂಶಗಳಿಂದ ಸಮೃದ್ಧವಾಗಿವೆ. ಹೀಗಾಗಿ ಮಕ್ಕಳಲ್ಲಿ ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ರಚಿಸಲು ಸಹಾಯ ಮಾಡುತ್ತದೆ. ಇನ್ನೂ ಜೀವಕೋಶದ ಪುನರುತ್ಪಾದನೆಗೆ ಸಹಾಯ ಮಾಡುತ್ತದೆ. ಮೊಟ್ಟೆಯ ಬಿಳಿಭಾಗವು ದೇಹದಲ್ಲಿ ಸೋಡಿಯಂ ಮತ್ತು ಪೊಟ್ಯಾಸಿಯಮ್ ಅಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಮೊಟ್ಟೆಯಲ್ಲಿರುವ ಹಳದಿ ಭಾಗವನ್ನು ಮಕ್ಕಳಿಗೆ ತಿನ್ನಲು ಹಾಗೂ ಜೀರ್ಣಿಸೋದಕ್ಕೆ ಸುಲಭವಾಗಿದೆ. ಆದರೆ ಮೊಟ್ಟೆಯ ಹಳದಿ ಭಾಗ ತಿನ್ನಲು ಹಾಗೂ ಜೀರ್ಣಿಸೋದು ಮಕ್ಕಳಿಗೆ ತುಂಬಾನೇ ಕಷ್ಟ.ಹೀಗಾಗಿ ಬಿಳಿ ಭಾಗವನ್ನು ಒಂದು ವರ್ಷದ ನಂತರ ಕೊಟ್ಟರೆ ಸಾಕು.
2. ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ
ಮೊಟ್ಟೆಯ ಹಳದಿ ಭಾಗವು ಕೋಲೀನ್ ಮತ್ತು ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ. ಇದು ಶಿಶುಗಳಲ್ಲಿ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ಕೊಬ್ಬಿನ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮತ್ತು ದೇಹದಲ್ಲಿ ಹಾರ್ಮೋನುಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಕೋಲೀನ್ ಹೃದಯರಕ್ತನಾಳದ ಮತ್ತು ನರಮಂಡಲದ ಸರಿಯಾದ ಕಾರ್ಯನಿರ್ವಹಣೆಗೆ ಅವಶ್ಯಕವಾಗಿದೆ.
3. ಯಕೃತ್ತ್ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ
ಮೊಟ್ಟೆಗಳಲ್ಲಿನ ಸಲ್ಫರ್ ಅಂಶವು ಕೆರಾಟಿನ್ ಮತ್ತು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಜೊತೆಗೆ ವಿಟಮಿನ್ ಬಿ 12 ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಯಕೃತ್ತಿನ ಸರಿಯಾದ ಕಾರ್ಯನಿರ್ವಹಣೆಗೆ ಅವಶ್ಯಕವಾಗಿದೆ.
4. ಕಣ್ಣಿನ ಆರೋಗ್ಯಕ್ಕೆ ಉತ್ತಮ
ಮೊಟ್ಟೆಯಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್‌ನಂತಹ ಆಂಟಿ ಆಕ್ಸಿಡೆಂಟ್‌ಗಳು ಕಂಡುಬರುತ್ತವೆ. ಈ ಎರಡು ಅಂಶಗಳು ಮೊಟ್ಟೆಯ ಹಳದಿ ಭಾಗದಲ್ಲಿ ಕಂಡು ಬರುತ್ತದೆ. ಇದು ಹಾನಿಕಾರಕ ನೇರಳಾತೀತ ಬೆಳಕಿನಿಂದ ಉಂಟಾಗುವ ಹಾನಿಯಿಂದ ಲುಟೀನ್ ನಮ್ಮ ಕಣ್ಣುಗಳನ್ನು ರಕ್ಷಿಸುತ್ತದೆ.
ಮಕ್ಕಳಿಗೆ ಮೊಟ್ಟೆ ನೀಡೋದ್ರಿಂದ ಅಪಾಯವಿದ್ಯಾ?
ಮೊಟ್ಟೆಯ ಬಿಳಿಭಾಗವು ಕೆಲವು ಸಂದರ್ಭಗಳಲ್ಲಿ ಮಕ್ಕಳಲ್ಲಿ ಅಲರ್ಜಿ ಉಂಟಾಗಲು ಕಾರಣವಾಗುತ್ತದೆ. ಇನ್ನೂ ಮೊಟ್ಟೆಯ ಹಳದಿ ಭಾಗದಿಂದ ಯಾವುದೇ ರೀತಿ ಅಲರ್ಜಿ ಉಂಟಾಗುವುದು ಬಹಳ ಅಪರೂಪ. ಹೀಗಾಗಿ ಮಕ್ಕಳಿಗೆ ಮೊಟ್ಟೆಯನ್ನು ನೀಡುವಾಗ ಯಾವುದಾದ್ರು ರೀತಿ ಅಲರ್ಜಿ ಅಪಾಯ ಇದ್ಯಾ ಅನ್ನೋದನ್ನು ಗಮನಿಸಿ. ಒಂದು ವೇಳೆ ಈ ರೀತಿ ಆದರೆ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯದ ದೃಷ್ಟಿಯಿಂದ ಮೊಟ್ಟೆ ಮಕ್ಕಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ಕೆಲವೊಂದು ಸಾರಿ ಅಲರ್ಜಿಯ ಭಯ ಇರೋದ್ರಿಂದ ಈ ಬಗ್ಗೆ ಗಮನ ಕೊಡೋದು ಉತ್ತಮ.



Click it and Unblock the Notifications
