Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈ ಕಾರಣಗಳಿಂದ ಗರ್ಭಾವಸ್ಥೆಯ ಸಂದರ್ಭದಲ್ಲಿ ಪತಿ-ಪತ್ನಿ ಹತ್ತಿರವಾಗುತ್ತಾರೆ
ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ಹಂತದಲ್ಲೂ ನಮ್ಮ ಜೀವನ ಬದಲಾಗುತ್ತಾ ಹೋಗುತ್ತದೆ. ಅದ್ರಲ್ಲೂ ಮದುವೆಯ ನಂತರದ ಜೀವನವೇ ಒಂದು ರೀತಿ ಆದರೆ ಗರ್ಭಿಣಿಯಾದ ನಂತರ ನಮ್ಮ ಜೀವನ ಮತ್ತೊಂದು ರೀತಿಯಾಗಿ ಬದಲಾಗುತ್ತದೆ.
ಆಗ ನಮ್ಮ ಪ್ರಾಮುಖ್ಯತೆಗಳು ಬೇರೆ ಆಗಬಹುದು, ನಮ್ಮ ಜೀವನ ಶೈಲಿ ಕೂಡ ಬದಲಾಗಬಹುದು. ಅದ್ರಲ್ಲೂ ಗರ್ಭಾವಸ್ಥೆಯು ಗಂಡ-ಹೆಂಡತಿಯನ್ನು ಒಂದು ಮಾಡೋದಂತೂ ಸುಳಲ್ಲ. ಯಾವ ಕಾರಣಗಳು ಗರ್ಭಾವಸ್ಥೆಯ ಸಮಯದಲ್ಲಿ ಪತಿ-ಪತ್ನಿಯನ್ನು ಒಂದು ಮಾಡುತ್ತೆ ಅನ್ನೋದನ್ನು ನೋಡೋಣ.

1. ಜವಾಬ್ದಾರಿಗಳು
ಮದುವೆ ನಂತರ ಪತಿ-ಪತ್ನಿ ಮನೆಯಲ್ಲಿ ಯಾವ ರೀತಿ ಇರುತ್ತಾರೆ ಅನ್ನೋದು ಗೊತ್ತೇ ಇರುತ್ತೆ. ಕೆಲವೊಂದು ಮನೆಗಳಲ್ಲಿ ಪತ್ನಿ ಮನೆ ಕೆಲಸ ಎಲ್ಲವನ್ನೂ ನಿಭಾಯಿಸಿಕೊಂಡು ಹೋದರೆ, ಇನ್ನೂ ಕೆಲವು ಮನೆಗಳಲ್ಲಿ ಪತಿಯು ಇದನ್ನೆಲ್ಲಾ ನಿಭಾಯಿಸುತ್ತಾನೆ. ಆದರೆ ಯಾವಾಗ ಪತ್ನಿ ಗರ್ಭಿಣಿಯಾಗಿದ್ದಾಳೆ ಅನ್ನೋದು ಗೊತ್ತಾಗುತ್ತದೆಯೋ ಅಂದಿನಿಂದ ಪತಿಯು ಪ್ರತಿಯೊಂದು ಜವಾಬ್ದಾರಿಗಳನ್ನು ಹೊತ್ತುಕೊಳ್ಳುತ್ತಾನೆ. ಮನೆ ಕೆಲಸದಿಂದ ಹಿಡಿದು ಪತ್ನಿಗೆ ಪ್ರತಿ ಕೆಲಸದಲ್ಲೂ ಸಹಾಯ ಮಾಡುತ್ತಾನೆ. ಆಲಸಿಯಾಗಿದ್ದ ಪತಿಯೂ ಕೂಡ ತನ್ನ ಮಗು ಹಾಗೂ ಹೆಂಡತಿಗಾಗಿ ಬದಲಾಗುತ್ತಾನೆ. ಪತಿಯ ಈ ಗುಣ ಇಬ್ಬರನ್ನೂ ಮತ್ತಷ್ಟು ಹತ್ತಿರ ತರುತ್ತದೆ.
2. ಪತಿ ಮಗುವಿನ ಕಾಳಜಿ ಜೊತೆಗೆ ಪತ್ನಿಯ ಕಾಳಜಿ ಮಾಡುತ್ತಾರೆ
ಹುಟ್ಟುವ ಮಗುವಿನ ಬಗ್ಗೆ ತಂದೆ-ತಾಯಿ ಇಬ್ಬರಿಗೂ ಬೆಟ್ಟದಷ್ಟು ಆಸೆ, ಆಕಾಂಕ್ಷೆಗಳು ಇರುತ್ತದೆ. ಆದರೆ ಈ ಸಂದರ್ಭದಲ್ಲಿ ತಾಯಿಯಾದವಳಿಗೆ ಆತಂಕ ಹೆಚ್ಚಾಗೋದು ಸಾಮಾನ್ಯ. ಆದರೆ ಪತಿಯು ಪತ್ನಿ ಗರ್ಭಿಯಾಗಿದ್ದಾಗ ಆಕೆಗೆ ಯಾವುದೇ ಕುಂದು-ಕೊರತೆ, ನೋವು, ದುಃಖ ಆಕೆಯನ್ನು ಸುಳಿಯದಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ಪ್ರತಿಯೊಂದು ಹೆಜ್ಜೆಯಲ್ಲೂ ಆಕೆಗೆ ಸಾಥ್ ನೀಡುತ್ತಾನೆ. ಮಗುವಿನ ಜೊತೆಗೆ ತಾಯಿಯನ್ನೂ ಕೇರ್ ಮಾಡುತ್ತಾನೆ.
3. ಆತ್ಮೀಯತೆ ಹೆಚ್ಚಾಗುತ್ತದೆ
ಪತ್ನಿ ಗರ್ಭಿಣಿಯಾಗಿದ್ದಾಗ ಆಕೆಯೊಂದಿಗಿನ ಪತಿಯ ಭಾವನೆಗಳು ತುಂಬಾನೇ ಗಟ್ಟಿಯಾಗುತ್ತದೆ. ಅದು ದೈಹಿಕವಾಗಿ ಇರಬಹುದು ಅಥವಾ ಮಾನಸಿಕವಾಗಿ ಇರಬಹುದು. ಗರ್ಭಾವಸ್ಥೆಯ ಸಮಯದಲ್ಲಿ ನಿಮ್ಮ ದೇಹದಲ್ಲಿ ಅನೇಕರು ಬದಲಾವಣೆಗಳು ಆಗುತ್ತದೆ. ಹೊಟ್ಟೆಯಲ್ಲಿ ಮಗುವಿನ ಚಲನಾ ವಲನಗಳನ್ನು ನೀವು ಗಮನಿಸುತ್ತೀರಿ. ಇದನ್ನು ನಿಮ್ಮ ಪತಿಯ ಜೊತೆಗೆ ಹಂಚಿಕೊಳ್ಳುವುದರ ಮೂಲಕ ಇಬ್ಬರು ಹೊಸ ಅನುಭವಗಳನ್ನು ಪಡೆಯುತ್ತೀರಿ. ಈ ಸಣ್ಣ-ಪುಟ್ಟ ವಿಚಾರಗಳಿಂದ ಖುಷಿ ಕಮಡುಕೊಳ್ಳುತ್ತೀರಿ.
4. ಭವಿಷ್ಯದ ಬಗ್ಗೆ ಮಾತನಾಡೋದು
ಪತ್ನಿ ಗರ್ಭಿಣಿಯಾಗಿದ್ದ ಸಮಯದಲ್ಲಿ ಹೆಚ್ಚಾಗಿ ದಂಪತಿಗಳು ತಮ್ಮ ಹುಟ್ಟುವ ಮಗುವಿನ ಬಗ್ಗೆ ಕನಸನ್ನು ಕಾಣುತ್ತೀರಿ. ಮಗುವಿಗೆ ಯಾವ ಹೆಸರಿಡಬೇಕು? ಮಗುವಿಗೆ ಯಾವ ರೀತಿ ಬಟ್ಟೆ ಹಾಕಬೇಕು? ಯಾವ ಶಾಲೆಗೆ ಕಳುಹಿಸಬೇಕು ಅಂತೆಲ್ಲಾ ಸಹಜವಾಗಿ ಮಾತುಕತೆಗಳಾಗುತ್ತದೆ. ಈ ಎಲ್ಲಾ ವಿಚಾರಗಳು ನಿಮ್ಮಬ್ಬರನ್ನು ಮತ್ತಷ್ಟು ಹತ್ತಿರವಾಗುವಂತೆ ಮಾಡುತ್ತದೆ.
5. ಭಾವನಾತ್ಮ ಪ್ರೋತ್ಸಾಹ ಬೇಕಾಗುತ್ತದೆ
ಗರ್ಭಿಣಿಯಾದ ಸಂದರ್ಭದಲ್ಲಿ ಮಹಿಳೆಯರಿಗೆ ಮೂಡ್ ಸ್ವಿಂಗ್ ಇದ್ದೇ ಇರುತ್ತದೆ. ಅನೇಕ ಸಲ ದು:ಖ, ಆತಂಕ ಹಾಗೂ ಒತ್ತಡಕ್ಕೆ ಒಳಗಾಗುತ್ತೀರಿ. ಇಂತಹ ಸಂದರ್ಭದಲ್ಲಿ ನಮಗೊಂದು ಭಾವನಾತ್ಮಕ ಪ್ರೋತ್ಸಾಹ ಬೇಕಾಗುತ್ತದೆ. ಪತಿಯಾದವನು ಈ ಸಂದರ್ಭದಲ್ಲಿ ದೈರ್ಯ ಹೇಳಿ, ಆಕೆಗೆ ಶಕ್ತಿ ತುಂಬುತ್ತಾನೆ. ಈ ಸಣ್ಣ-ಸಣ್ಣ ವಿಚಾರಗಳು ನಿಮ್ಮನ್ನು ಮತ್ತಷ್ಟು ಹತ್ತಿರ ತರುತ್ತದೆ.
6. ಗರ್ಭಾವಸ್ಥೆಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದು
ಪತ್ನಿ ಮೊದಲ ಸಾರಿ ಗರ್ಭಿಣಿಯಾದ ಸಂದರ್ಭದಲ್ಲಿ ಏನು ಮಾಡಬೇಕು? ಏನು ಮಾಡಬಾರದು ಅನ್ನೋ ವಿಚಾರ ನಮಗೆ ಗೊತ್ತಿರೋದಿಲ್ಲ. ಹೀಗಾಗಿ ಗರ್ಭಾವಸ್ಥೆಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದು ತುಂಬಾನೇ ಒಳ್ಳೆಯದು. ಪತಿ-ಪತ್ನಿ ಇಬ್ಬರೂ ಕೂಡ ಈ ಪುಸ್ತಕವನ್ನು ಓದಿ ಚರ್ಚೆ ಮಾಡಿಕೊಳ್ಳಬಹುದು. ಇದು ನಿಮ್ಮ ಗರ್ಭಾವಸ್ಥೆಯ ಪ್ರಯಾಣದಲ್ಲಿ ಸಹಾಯ ಮಾಡುತ್ತದೆ.
ಈ ಸಣ್ಣ ಪುಟ್ಟ ವಿಚಾರಗಳೇ ನಿಮ್ಮಲ್ಲಿ ಒಂದೊಳ್ಳೆ ಬಾಂಧವ್ಯಕ್ಕೆ ಕಾರಣವಾಗುತ್ತದೆ. ಮದುವೆಯಾದ ಸಂದರ್ಭದಲ್ಲಿ ಅಷ್ಟಾಗಿ ಆತ್ಮೀಯರಾಗಿರದ ಪತಿ-ಪತ್ನಿಯೂ ಕೂಡ ಮದುವೆಯ ನಂತರ ತುಂಬಾನೇ ಹತ್ತಿರವಾಗುತ್ತಾರೆ. ಅದಕ್ಕೆ ಹೇಳೋದು ತಾಯ್ತನ ಎನ್ನುವುದು ಹೆಣ್ಣಿಗೆ ಮರು ಜನ್ಮವಿದ್ದ ಹಾಗೇ. ಈ ಸಂದರ್ಭದಲ್ಲಿ ಆಕೆಗೆ ಮಗುವಿಗೆ ಜನ್ಮ ನೀಡುವ ಖುಷಿ ಒಂದು ಕಡೆಯಾದರೆ. ಮತ್ತೊಂದು ಕಡೆಯಿಂದ ಗಂಡ ಸೇರಿದಂತೆ ಮನೆಯಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.



Click it and Unblock the Notifications


