Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಮಗುವಿನಲ್ಲಿರುವ ಈ ವಿಚಿತ್ರ ವರ್ತನೆಯೇ ಸೂಚಿಸುತ್ತೆ ಅದು ಸೂಪರ್ ಜೀನಿಯಸ್ ಅಂತ!
ಇರಬೇಕೆಂದು ಬಯಸಲು ಹೋಗಬೇಡಿ. ಅವರಲ್ಲಿ ಆ ಮಕ್ಕಳಿಗಿಂತ ಹೆಚ್ಚಿನ ಬುದ್ಧಿವಂತಿಕೆ ಇರಬಹುದು, ಹಾಗಾಗಿ ಈ ಮಕ್ಕಳಲ್ಲಿ ಸ್ವಲ್ಪ ವಿಚಿತ್ರ ವರ್ತನೆ ಇದೆ ಎಂದಾಗ ಅದೊಂದು ಸಮಸ್ಯೆ ಅಂತ ನೋಡಬೇಡಿ, ಅವರು ಸೂಪರ್ ಜೀನಿಯಸ್ ಆಗಿರಬಹುದು.

ಮಕ್ಕಳಲ್ಲಿ ಈ ವರ್ತನೆ ಇದ್ದರೆ ಅವರು ವಿಚಿತ್ರವಾಗಿ ವರ್ತಿಸುತ್ತಿಲ್ಲ, ಆ ಮಕ್ಕಳು ತುಂಬಾನೇ ಬುದ್ಧಿವಂತರಾಗಿರುತ್ತಾರೆ:
ಕೆಲವೊಂದು ಆಟದಲ್ಲಿ ತುಂಬಾ ಹೊತ್ತು ಮಗ್ನರಾಗಿರುವುದು:
ಜಿಗ್‌ಸಾ ಪಝಲ್ ಪಟ್ ಅಂತ ಮಾಡುವುದು, ಏನಾದರೂ ಆಟ ಆಡುತ್ತಿದ್ದರೆ ಅದರಲ್ಲಿ ವಿಶೇಷತೆ ಕಂಡು ಹಿಡಿಯುವುದು, ಏನೋ ಒಂದು ಹೊಸ ಪ್ರಯತ್ನ ಮಾಡುತ್ತಿರುವುದು ಇವೆಲ್ಲಾ ಅವರಲ್ಲಿರುವ ಕುತೂಹಲ ಹಾಗೂ ಏನೋ ಅನ್ವೇಷಣೆ ಗುಣವನ್ನು ತೋರಿಸುತ್ತದೆ. ನೀವು ಹೇಳುವುದನ್ನು ಅವರು ಒಪ್ಪಬೇಕೆಂತಿಲ್ಲ, ತಮ್ಮದೇ ಆದ ರೀತಿಯಲ್ಲಿ ಅನ್ವೇಷಣೆ ಮಾಡುತ್ತಾರೆ.
ಉದಾಹರಣೆಗೆ ಒಂದು ಆಟಿಕೆ ಗಾಡಿ ಕೊಡಿಸಿದರೆ ಅದನ್ನೆಲ್ಲಾ ಬಿಚ್ಚಿ, ಮತ್ತೆ ಜೋಡಿಸಿ ಏನೆಲ್ಲಾ ಮಾಡುತ್ತಿದ್ದರೆ ಬೈಯ್ಯಲು ಹೋಗಬೇಡಿ, ಅವರ ಯಾವುದೋ ಒಂದು ಕುತೂಹಲದಿಂದ ಏನೋ ಒಂದು ಕಂಡುಕೊಳ್ಳುವ ಪ್ರಯತ್ನದಲ್ಲಿರುತ್ತಾರೆ, ಇದೊಂದು ಉದಾಹರಣೆ ಅಷ್ಟೇ. ಹಾಗಾಗಿ ಮಕ್ಕಳು ಏನೋ ಮಾಡುತ್ತಿದ್ದಾಗ ಅವರು ಹಾಳು ಮಾಡುತ್ತಿದ್ದಾರೆ ಅಥವಾ ಕೆಲಸದ ಇಲ್ಲದೆ ಏನೇನೋ ಮಾಡುತ್ತಿದ್ದಾರೆ ಕೋಪಗೊಂಡು ಗದರಲು ಹೋಗಬೇಡಿ.
ಕಠಿಣ ಪ್ರಶ್ನೆಗಳನ್ನು ಕೇಳುವುದು
ಮಕ್ಕಳು ಪ್ರಶ್ನೆ ಕೇಳಿದಾಗ ಅವರಿಗೆ ಬೈಯ್ಯಬೇಡಿ, ಬದಲಿಗೆ ಅವರು ಪ್ರಶ್ನೆ ಕೇಳಿದಾಗ ನಿಮಗೆ ಗೊತ್ತಿದ್ದರೆ ಹೇಳಿ ಇಲ್ಲವಾದರೆ ಅವರ ಮುಂದೆ ನನಗೆ ಗೊತ್ತಿಲ್ಲ ಎಂಬುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಿ. ನೀವು ಎಲ್ಲಿ ಡಡ್ಡರಂತೆ ಕಾಣಿಸಿಕೊಳ್ಳಬೇಕಾಗುತ್ತದೋ ಎಂದು ಗದರಬೇಡಿ, ನಾವು ಎಷ್ಟೇ ಬುದ್ಧಿವಂತರಾದರು ಮಕ್ಕಳೂ ನಮಗಿಂತ ಬುದ್ಧಿವಂತರು ಎಂಬುವುದು ಎಲ್ಲಾ ಪೋಷಕರ ಅನುಭವಕ್ಕೆ ಬಂದಿರುತ್ತದೆ ಅಲ್ವಾ?
ಕೆಲವೊಂದು ಸಮಸ್ಯೆಗೆ ಪಟ್ ಅಂತ ಅವರಿಗೆ ಐಡಿಯಾ ದೊರೆಯುತ್ತದೆ
ನೀವೇ ಏನೋ ಮಾಡ್ತಾ ಇರುತ್ತೀರಿ, ಆದರೆ ಅದನ್ನು ಗಮನಿಸಿದ ಅವರು ಸುಲಭವಾಗಿ ಮಾಡಿ ತೋರಿಸುತ್ತಾರೆ, ಇವೆಲ್ಲಾ ಅವರಲ್ಲಿನ ಬುದ್ಧಿವಂತಿಕೆ ತೋರಿಸುತ್ತದೆ.
ತುಂಬಾ ಹಿಂದೆ ನಡೆದಿರುವ ಘಟನೆಗಳನ್ನು ನೆನಪಿಸಿ ಹೇಳಿರುತ್ತಾರೆ
ಕೆಲವು ಮಕ್ಕಳಿಗೆ ನೆನಪಿನ ಶಕ್ತಿ ತುಂಬಾ ಚೆನ್ನಾಗಿರಲಿದೆ. ನಿಮ್ಮ ಮಕ್ಕಳಲ್ಲಿ ಅಂಥ ಲಕ್ಷಣಗಳು ಕಂಡು ಬಂದರೆ ತುಂಬಾನೇ ಬುದ್ಧಿವಂತರು ಎಂದರ್ಥ.
ದೊಡ್ಡ ಮಕ್ಕಳಷ್ಟೇ ಬುದ್ಧಿವಂತರು
ಮಗುವಿಗೆ ವಯಸ್ಸು ತುಂಬಾ ಚಿಕ್ಕದು ಆದರೆ ಅವರ ಬುದ್ಧಿವಂತರು ಎಂದರ್ಥ, ಅವರ ಬುದ್ಧಿಶಕ್ತಿ ತುಂಬಾನೇ ಇದೆ ಎಂದರ್ಥ.
ಭಾವನಾತ್ಮಕವಾಗಿ ತುಂಬಾನೇ ಪ್ರೌಢತೆ
ಹೌದು ಚಿಕ್ಕ ವಯಸ್ಸಾದರೂ ಅವರಿಗೆ ಪರಿಸ್ಥಿತಿ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ.
ಸ್ವಂತ ಕಲಿಯುವುದು
ಅವರಿಗೆ ಯಾರೂ ಕಲಿಸಬೇಕಾಗಿಲ್ಲ, ಸ್ವತಃ ತಾವೇ ಕಲಿಯುತ್ತಾರೆ. ಯೂಟ್ಯೂಬ್ ಇಂಥದ್ದೆಲ್ಲಾ ನೋಡಿ ಕಲಿಯುತ್ತಾರೆ.



Click it and Unblock the Notifications











