Latest Updates
-
ಬಾಲ್ಕನಿ ಅಲಂಕಾರ: ಹಬ್ಬದ ಸಂಭ್ರಮಕ್ಕೆ 10 ನಿಮಿಷದ ಮ್ಯಾಜಿಕ್ -
ಬಿಸಿಲಿನ ಬೇಗೆಗೆ ಈ ಪಾನೀಯಗಳೇ ಮದ್ದು, ತಂಪಾಗಿರಿ ಹೀಗೆ! -
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ
ಪೋಷಕರೇ ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಐಸ್‌ಕ್ರೀಮ್ ಕೊಟ್ಟರೆ ಉತ್ತಮ?
ಐಸ್‌ಕ್ರೀಮ್ ಅಂದ್ರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಅದ್ರಲ್ಲೂ ಮಕ್ಕಳಿಗೆ ಮೊದಲ ಬಾರಿಗೆ ಐಸ್‌ಕ್ರೀಮ್ ಕೊಟ್ಟಾಗ ಅವರು ಅದನ್ನು ಚಪ್ಪರಿಸಿ ತಿನ್ನೋದನ್ನ ನೋಡೋದೇ ಒಂದು ರೀತಿ ಖುಷಿ.
ಆದ್ರೆ ಚಿಕ್ಕ ಮಕ್ಕಳಿಗೆ ಐಸ್‌ಕ್ರೀಮ್ ಕೊಡಬಾರದು ಅಂತಾರೆ. ಹಾಗಾದ್ರೆ ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಈಸ್‌ಕ್ರೀಮ್ ಕೊಡಬೇಕು? ಒಂದು ವರ್ಷದ ಕೆಳಗಿನ ಮಕ್ಕಳಿಗೆ ಯಾಕೆ ಐಸ್‌ಕ್ರೀಮ್ ಕೊಡಬಾರದು? ಮಕ್ಕಳಿಗೆ ಐಸ್‌ಕ್ರೀಮ್ ಕೊಡೋ ವಿಧಾನ ಹೇಗೆ ಎಂಬುವುದರ ಬಗ್ಗೆ ವಿವರವಾಗಿ ನೋಡೋಣ.

ಸಣ್ಣ ಮಕ್ಕಳು ಐಸ್‌ಕ್ರೀಮ್ ತಿನ್ನಬಹುದಾ?
ಐಸ್‌ಕ್ರೀಮ್ ಒಂದು ರೀತಿಯ ಆರ್ಟಿಫಿಶಿಯಲ್ ಪ್ರಾಡಕ್ಟ್. ಇದ್ರಲ್ಲಿ ಕೊಬ್ಬು ಹಾಗೂ ಸಕ್ಕರೆಯ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇನ್ನೂ ಐಸ್‌ಕ್ರೀಮ್ ಬೇರೆ ಬೇರೆ ಫ್ಲೇವರ್‌ಗಳಲ್ಲಿ ಲಭ್ಯವಿದ್ದು, ಅದಕ್ಕೆ ಫುಡ್ ಕಲರ್ ಕೂಡ ಸೇರಿಸಲಾಗುತ್ತದೆ. ಹೀಗಾಗಿ ಒಂದು ವರ್ಷದೊಳಗಿನ ಮಕ್ಕಳಿಗೆ ಐಸ್‌ಕ್ರೀಮ್ ನೀಡೋದು ಅವರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಐಸ್‌ಕ್ರೀಮ್ ಕೊಡಬಹುದು?
ಹನ್ನೆರಡು ತಿಂಗಳು ಅಂದ್ರೆ ಒಂದು ವರ್ಷ ತುಂಬಿದ ಮೇಲೆ ಮಕ್ಕಳಿಗೆ ಐಸ್‌ಕ್ರೀಮ್ ಕೊಡಬಹುದು. ಐಸ್‌ಕ್ರೀಮ್ ಹಾಲು ಹಾಗೂ ಕ್ರೀಮ್‌ನಿಂದ ಮಾಡಲ್ಪಟ್ಟಿರಬಹುದು, ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಪಾಶ್ಚರೀಕರಿಸಲ್ಪಟ್ಟಿದೆಯಾದರೂ ಶಿಶುಗಳ ಆರೋಗ್ಯಕ್ಕೆ ಅದರಲ್ಲಿರುವ ಪ್ರೋಟೀನ್, ಖನಿಜ ಹಾಗೂ ಇತರ ಪದಾರ್ಥಗಳು ಹಾನಿ ಮಾಡುವ ಸಾಧ್ಯತೆಗಳಿದೆ.
ಒಂದು ವರದಿಯ ಪ್ರಕಾರ ಮಂಜುಗಡ್ಡೆಯಿಂದ ತಯಾರಿಸಲಾದ ಪದಾರ್ಥಗಳು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಇನ್ನೂ ಐಸ್‌ಕ್ರೀಮ್‌ನಲ್ಲಿ ಫುಡ್ ಕಲರ್ ಹಾಗೂ ಕೆಲವೊಂದು ಕೆಮಿಕಲ್‌ಗಳನ್ನು ಸೇರಿಸಲಾಗುತ್ತದೆ. ಹಾಗೂ ಅದ್ರಲ್ಲಿ ಯಾವುದೇ ರೀತಿಯ ಪೋಷಕಾಂಶಗಳು ಇರೋದಿಲ್ಲ. ಹೀಗಾಗಿ ಮಕ್ಕಳಿಗೆ ಐಸ್‌ಕ್ರೀಮ್ ಕೊಡಬೇಕು ಅನ್ನುವವರು ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಮಕ್ಕಳಿಗೆ ಐಸ್‌ಕ್ರೀಮ್ ಕೊಡೋವಾಗ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು?
ಮಕ್ಕಳಿಗೆ ಐಸ್‌ಕ್ರೀಮ್ ಕೊಡೋ ಮೊದಲು ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡರೆ ಒಳ್ಳೆಯದು.
1. ಐಸ್‌ಕ್ರೀಮ್‌ನಲ್ಲಿ ಬಳಸಿರೋ ವಸ್ತುಗಳನ್ನು ಗಮನಿಸಿ
ಐಸ್‌ಕ್ರೀಮ್‌ನಲ್ಲಿ ಹಲವಾರು ವಿಧಗಳಿದೆ. ಡ್ರೈ ಫ್ರೂಟ್ಸ್, ಹಣ್ಣುಗಳನ್ನು ಬಳಸಿ ಕೂಡ ಐಸ್‌ಕ್ರೀಮ್ ತಯಾರಿಸಲಾಗುತ್ತದೆ. ಸಾಧ್ಯವಾದಷ್ಟು ಚಿಕ್ಕ ಮಕ್ಕಳಿಗೆ ಪ್ಲೈನ್ ಐಸ್‌ಕ್ರೀಮ್‌ಗಳನ್ನೇ ನೀಡಿ. ಮಕ್ಕಳಿಗೆ ಅಂತಹ ಐಸ್‌ಕ್ರೀಮ್‌ಗಳನ್ನು ತಿನ್ನಲು ಕಷ್ಟವಾಗುತ್ತದೆ. ಇನ್ನೂ ಕೆಲ ಮಕ್ಕಳಿಗೆ ಐಸ್‌ಕ್ರೀಮ್ ತಿನ್ನೋದ್ರಿಂದ ಅಲರ್ಜಿ ಆಗುವ ಸಾಧ್ಯತೆಗಳಿದೆ. ಅಂತವರಿಗೆ ಐಸ್‌ಕ್ರೀಮ್ ಕೊಡಲೇಬೇಡಿ.
2. ಗುಣಮಟ್ಟದ ಐಸ್‌ಕ್ರೀಮ್‌ಗಳನ್ನೇ ನೀಡಿ
ಕಳಪೆ ಗುಣ ಮಟ್ಟದ ಐಸ್‌ಕ್ರೀಮ್‌ಗಳನ್ನು ಮಕ್ಕಳಿಗೆ ನೀಡಬೇಡಿ. ಬೀದಿ ಬದಿಯಲ್ಲಿ ಮಾರೋ ಐಸ್‌ಕ್ರೀಮ್‌ಗಳನ್ನು ಮಕ್ಕಳಿಗೆ ಕೊಡೋದು ಅಪಾಯ. ಹೀಗಾಗಿ ಅಂಗಡಿಗೆ ಹೋಗಿ ಯಾವುದಾದರೂ ಒಳ್ಳೆಯ ಬ್ರಾಂಡ್‌ನ ಐಸ್‌ಕ್ರೀಮ್‌ಗಳನ್ನೇ ಖರೀದಿಸಿ ಮಕ್ಕಳಿಗೆ ನೀಡಿ.
3. ಸ್ವಲ್ಪ ಪ್ರಮಾಣದಲ್ಲಿ ಮಾತ್ರ ನೀಡಿ
ಮಕ್ಕಳಿಗೆ ಐಸ್‌ಕ್ರೀಮ್ ಕೊಟ್ಟರೆ ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಹಾಗಂತ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಐಸ್‌ಕ್ರೀಮ್ ಕೊಡೋದು ಸರಿಯಲ್ಲ. ಸ್ವಲ್ಪ ಪ್ರಮಾಣವಷ್ಟೇ ನೀಡಿದರೆ ಸಾಕು. ಇಲ್ಲವಾದರೆ ಹೊಟ್ಟೆ ಕೆಡಬಹುದು ಅಥವಾ ಶೀತ, ಜ್ವರ, ಕೆಮ್ಮು ಶುರುವಾಗುವ ಸಾಧ್ಯತೆಯೂ ಇದೆ.
4. ವೆನಿಲ್ಲಾ ಐಸ್‌ಕ್ರೀಮ್ ಉತ್ತಮ
ವೆನಿಲ್ಲಾ ಐಸ್‌ಕ್ರೀಮ್‌ನಿಂದ ಮಕ್ಕಳ ಆರೋಗ್ಯಕ್ಕೆ ಅಷ್ಟೇನು ತೊಂದರೆ ಆಗೋದಿಲ್ಲ. ಇದರಲ್ಲಿ ಯಾವುದೇ ರೀತಿಯ ಫುಡ್ ಕಲರ್ ಸೇರಿಸದ ಕಾರಣ ಬೇರೆ ಐಸ್‌ಕ್ರೀಮ್‌ಗಳಿಗೆ ಹೋಲಿಕೆ ಮಾಡಿದ್ರೆ ಇದು ಒಳ್ಳೆಯದು.
ಒಂದು ವರ್ಷದೊಳಗಿನ ಮಕ್ಕಳಿಗೆ ಐಸ್‌ಕ್ರೀಮ್ ಯಾಕೆ ಕೊಡಬಾರದು?
1 . ಜೀರ್ಣಕ್ರಿಯೆಗೆ ತೊಂದರೆ ಆಗಬಹುದು
ಐಸ್ ಕ್ರೀಮ್ ಹೊಟ್ಟೆಯೊಳಗಡೆ ಅನಿಲದ ಶೇಖರಣೆಗೆ ಕಾರಣವಾಗುತ್ತದೆ. ಇದು ನಿಮ್ಮ ಮಗುವಿಗೆ ಹೊಟ್ಟೆ ನೋವು ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಯನ್ನು ಉಂಟುಮಾಡಬಹುದು. ಕೆಲವೊಮ್ಮೆ ಐಸ್‌ಕ್ರೀಮ್ ಸೇವನೆಯಿಂದ ಮಕ್ಕಳಿಗೆ ಅಜೀರ್ಣ ಮತ್ತು ವಾಂತಿಗೆ ಕಾರಣವಾಗುತ್ತದೆ.
2. ಮಕ್ಕಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಕಡಿಮೆ ಇರುತ್ತದೆ
ಹಾಗೇ ನೋಡೋದಕ್ಕೆ ಹೋದರೆ ಐಸ್‌ಕ್ರೀಮ್ ತಿನ್ನೋದಕ್ಕೆ ರುಚಿಸುವಷ್ಟು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಐಸ್ ಕ್ರೀಂ ಆಗಿರಲಿ ಅಥವಾ ಮನೆಯಲ್ಲಿ ತಯಾರಿಸಿದ ಐಸ್ ಕ್ರೀಂ ಆಗಿರಲಿ ಅದರಲ್ಲಿ ಬ್ಯಾಕ್ಟೀರಿಯಾ ಇರುವ ಸಾಧ್ಯತೆ ಹೆಚ್ಚು. ಒಂದು ವರ್ಷದೊಳಗಿನ ಮಕ್ಕಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಕಡಿಮೆ ಇರೋದ್ರಿಂದ ಮಕ್ಕಳಲ್ಲಿ ಬ್ಯಾಕ್ಟೀರಿಯಾಗಳು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
3. ಡೈರಿ ಉತ್ಪನ್ನಗಳನ್ನು ಕೆಲವು ತಿಂಗಳ ಮೊದಲೇ ತಯಾರಿಸಿಡಲಾಗುತ್ತದೆ
ಸಾಮಾನ್ಯವಾಗಿ ಐಸ್‌ಕ್ರೀಮ್‌ನಂತಹ ಡೈರಿ ಉತ್ಪನ್ನಗಳನ್ನು ಕೆಲವು ತಿಂಗಳ ಮೊದಲೇ ತಯಾರಿಸಿ ಇಡಲಾಗುತ್ತದೆ. ಹೀಗಾಗಿ ಮಕ್ಕಳ ಆರೋಗ್ಯಕ್ಕೆ ಇದು ಒಳ್ಳೆಯದಲ್ಲ. ಒಂದು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಫ್ರೆಶ್ ಆಗಿರೋ ಆಹಾರ ಕೊಟ್ಟರೆ ಉತ್ತಮ. ಹಣ್ಣು, ತರಕಾರಿ, ಹಾಲು, ರಾಗಿ ಗಂಜಿ ಇಂತಹ ಆಹಾರ ಪದಾರ್ಥಗಳೇ ಮಕ್ಕಳಿಗೆ ಒಳ್ಳೆಯದು.
4. ರಾಸಾಯನಿಕಗಳ ಬಳಕೆ
ಐಸ್‌ಕ್ರೀಮ್‌ಗಳಲ್ಲಿ ಕೆಲವು ರೀತಿಯ ಸಂರಕ್ಷಕಗಳನ್ನು ಸೇರಿಸಲಾಗುತ್ತದೆ. ಸಂಸ್ಕರಿಸಿದ ಕೊಬ್ಬು, ಸಕ್ಕರೆ, ಕೃತಕ ಸಿಹಿಕಾರಕ ಏಜೆಂಟ್‌ಗಳು, ಆಹಾರ ಬಣ್ಣ ಇತ್ಯಾದಿಗಳೊಂದಿಗೆ ಸಂಯೋಜಿಸಲಾಗಿದೆ. ಇದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
5. ಮಕ್ಕಳಿಗೆ ಜೀರ್ಣಕ್ರಿಯಾ ಸಾಮರ್ಥ್ಯ ಕಡಿಮೆ
ಒಂದು ವರ್ಷದೊಳಗಿನ ಮಕ್ಕಳಿಗೆ ಜೀರ್ಣ ಕ್ರಿಯೆ ಸಾಮರ್ಥ್ಯ ಕಡಿಮೆ. ಘನ ವಸ್ತುಗಳನ್ನು ಅವರಿಂದ ಅರಗಿಸಿಕೊಳ್ಳೋದು ಕಷ್ಟ. ಹೀಗಾಗಿ ಐಸ್‌ಕ್ರೀಮ್ ಕೊಡೋದು ಒಳ್ಳೆಯದಲ್ಲ.
ಆರೋಗ್ಯವೇ ಭಾಗ್ಯ ಮಕ್ಕಳು ಚಿಕ್ಕದಿರುವಾಗ ಅವರ ಆರೋಗ್ಯದ ಕಾಳಜಿ ಮಾಡೋದು ಹೆತ್ತವರ ಕರ್ತವ್ಯ. ಯಾವುದೇ ಹೊಸ ಆಹಾರವನ್ನು ಮಕ್ಕಳಿಗೆ ಪರಿಚಯಿಸುವಾಗ ಮುಂಜಾಗರೂಕತೆ ತುಂಬಾನೇ ಒಳ್ಳೆಯದು.



Click it and Unblock the Notifications














