Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಮಹಿಳೆಯರು ಬೆಳಗ್ಗೆ ಬಿಸಿಲಿನಲ್ಲಿ ನಿಲ್ಲುವುದರಿಂದ ಬಂಜೆತನ ತಡೆಗಟ್ಟಬಹುದು, ಹೇಗೆ?
ಇತ್ತೀಚೆಗೆ ಬಂಜೆತನದ ಸಮಸ್ಯೆ ಹೆಚ್ಚಾಗುತ್ತಿದೆ. ಹಲವಾರು ಕಾರಣಗಳಿಂದಾಗಿ ಬಂಜೆತನದ ಸಮಸ್ಯೆ ಹೆಚ್ಚಾಗುತ್ತಿದೆ, ಜೀವನಶೈಲಿ, ಆಹಾರಶೈಲಿ, ನಮ್ಮ ಕೆಲಸ(ನೈಟ್ ಶಿಫ್ಟ್) ಇವೆಲ್ಲಾ ಬಂಜೆತನದ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ. ಅದರ ಜೊತೆಗೆ ನಿಮ್ಮ ಮೈಗೆ ಸೂರ್ಯನ ಕಿರಣ ಹೆಚ್ಚಾಗಿ ಬೀಳುತ್ತಿಲ್ಲ ಎಂದಾದರೆ ಅದು ಕೂಡ ಬಂಜೆತನಕ್ಕೆ ಕಾರಣವಾಗುತ್ತಿದೆ.

ಆರೋಗ್ಯಕ್ಕೆ ಬೇಕು ವಿಟಮಿನ್ ಡಿ
ವಿಟಮಿನ್ ಡಿ ಆರೋಗ್ಯಕ್ಕೆ ತುಂಬಾನೇ ಅವಶ್ಯಕ. ಅದರಲ್ಲೂ ಇತ್ತೀಚೆಗೆ ಚಿಕ್ಕ ಪ್ರಾಯದಲ್ಲಿಯೇ ಮಹಿಳೆಯರಲ್ಲಿ ಪಿಸಿಒಎಸ್, ಎಂಡೋಮೆಟ್ರೋಸಿಸ್ ಈ ಬಗೆಯ ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ವಿಟಮಿನ್ ಡಿ ಕೊರತೆ ಕೂಡ ಒಂದು ಕಾರಣವಾಗಿದೆ. ಮೂಳೆಯ ಆರೋಗ್ಯಕ್ಕೆ, ದೇಹದಲ್ಲಿ ಕ್ಯಾಲ್ಸಿಯಂ ಸಮತೋಲನ ಕಾಪಾಡಲು ವಿಟಮಿನ್ ಡಿ ತುಂಬಾನೇ ಅವಶ್ಯಕ ಹಾಗೂ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಅಂಗ ಚೆನ್ನಾಗಿ ಕಾರ್ಯನಿರ್ವಹಿಸಲು ಕೂಡ ವಿಟಮಿನ್ ಡಿ ಅವಶ್ಯಕ.
ಏಕೆ ವಿಟಮಿನ್ ಡಿ ಕೊರತೆ ಉಂಟಾಗುತ್ತಿದೆ?
ವಿಟಮಿನ್ ಡಿ ಎಂಬುವುದು ಪ್ರಮುಖವಾಗಿ ಸೂರ್ಯನ ಕಿರಣಗಳಿಂದ ದೊರೆಯುತ್ತದೆ. ಅದರಲ್ಲೂ ಬೆಳಗ್ಗೆ 9 ಗಂಟೆಯ ಒಳಗಡೆ ಹಾಗೂ ಸಂಜೆ ಹೊತ್ತಿನಲ್ಲಿ ನಮ್ಮ ಮೈಗೆ ಬಿದ್ದರೆ ವಿಟಮಿನ್ ಡಿ ನಮ್ಮ ದೇಹಕ್ಕೆ ದೊರೆಯುತ್ತದೆ. ಬಿಸಿಲು ಅಧಿಕವಾದರೆ ನೇರಳಾತೀತ ಕಿರಣಗಳು ತ್ವಚೆಗೆ ತಾಗಿದರೆ ತ್ವಚೆ ಕ್ಯಾನ್ಸರ್ ಉಂಟಾಗಬಹುದು ಅಲ್ಲದೆ ಸನ್‌ಬರ್ನ್ ಈ ಬಗೆಯ ಸಮಸ್ಯೆ ಕಂಡು ಬರಬಹುದು. ಆದ್ದರಿಂದ ಬೆಳಗ್ಗೆ 9 ಗಂಟೆಯ ಒಳಗಡೆ ಸೂರ್ಯ ಬೆಳಕಿನಲ್ಲಿ ನಿಲ್ಲಬೇಕು. ತಡವಾಗಿ ಏಳುವ ಅಭ್ಯಾಸ ಇರುವವರಿಗೆ, ನೈಟ್ ಶಿಫ್ಟ್, ಬೆಳಗ್ಗೆ ಶಿಫ್ಟ್ ಮಾಡುವವರಿಗೆ ಸೂರ್ಯನ ಬೆಳಕು ಮೈ ಮೇಲೆ ಬೀಳುವುದು ಕಡಿಮೆ ಇದರಿಂದ ವಿಟಮಿನ್ ಡಿ ಕೊರತೆ ಉಂಟಾಗುವುದು. ತುಂಬಾ ತಡವಾಗಿ ಏಳುವ ಅಭ್ಯಾಸವಿದ್ದರೆ ಬೆಳಗ್ಗೆ ಬೇಗನೆ ಏಳಿ, ಇನ್ನು ನಿಮ್ಮ ವರ್ಕ್‌ನಿಂದ ವಿಟಮಿನ್ ಡಿ ಕಡಿಮೆಯಾದರೆ 10 ನಿಮಿಷ ಬ್ರೇಕ್ ತೆಗೆದುಕೊಂಡು ಬೆಳಗ್ಗೆ 9 ಗಂಟೆಯ ಒಳಗಡೆ ಸೂರ್ಯನ ಬೆಳಕಿನಲ್ಲಿ ನಿಲ್ಲಿ.
ವಿಟಮಿನ್ ಡಿ ದೇಹದಲ್ಲಿ ಹಾರ್ಮೋನ್‌ಗಳ ಸಮತೋಲನ ಕಾಪಾಡಲು ಸಹಕಾರಿ
ದೇಹದಲ್ಲಿ ಸಂತಾನೋತ್ಪತ್ತಿಗೆ ಅವಶ್ಯಕವಾದ ಹಲವಾರು ಹಾರ್ಮೋನ್‌ಗಳು ಸಮತೋಲನದಲ್ಲಿರಲು ವಿಟಮಿನ್ ಡಿ ಅವಶ್ಯಕ. FSH(follicle-stimulating hormone), LH(luteinizing hormone), AMH(anti-Mullerian hormone) ಈ ಬಗೆಯ ಹಾರ್ಮೋನ್‌ಗಳು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಹಾರ್ಮೋನ್‌ಗಳ ಸಮತೋಲನ ಕಾಪಾಡಲು ವಿಟಮಿನ್ ಡಿ ಅವಶ್ಯಕ.
ಗರ್ಭಕೋಶದ ಆರೋಗ್ಯ ಕಾಪಾಡುತ್ತದೆ
ಗರ್ಭಕೋಶದ ಆರೋಗ್ಯ ವೃದ್ಧಿಸಲು ವಿಟಮಿನ್ ಡಿ ಸಹಕಾರಿ
ಪಿಸಿಒಎಸ್ ಸಮಸ್ಯೆ ಇರುವವರಿಗೆ ವಿಟಮಿನ್ ಡಿ ಕೊರತೆ ನೀಗಿಸಿದರೆ ಗರ್ಭಕೋಶದ ಆರೋಗ್ಯ ಉತ್ತಮವಾಗುವುದು ಅಧ್ಯಯನದಿಂದ ಸಾಬೀತತಾಗಿದೆ. ವೈದ್ಯರು ನಿಮಗೆ ವಿಟಮಿನ್ ಡಿ ಸಪ್ಲೆಮೆಂಟ್ಸ್ ಕೂಡ ಸೂಚಿಸಬಹುದು.
ನೀವೇ ಸಪ್ಲಿಮೆಂಟ್ಸ್ ಸೇವಿಸಬೇಡಿ
ತುಂಬಾ ಸಮಯದಿಂದ ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದು, ಗರ್ಭನಿಲ್ಲುತ್ತಿಲ್ಲ ಎಂದಾದರೆ ನೀವು ವಿಟಮಿನ್ ಡಿ ಕಡೆಗೆ ಗಮನಹರಿಸಿ, ಆದರೆ ವಿಟಮಿನ್ ಡಿ ಸಪ್ಲಿಮೆಂಟ್ಸ್ ನೀವೇ ತೆಗೆದುಕೊಳ್ಳಬೇಡಿ. ನಿಮ್ಮ ವೈದ್ಯರ ಬಳಿ ಮಾತನಾಡಿ ಸೂಕ್ತ ಸಲಹೆ ಪಡೆದ ಬಳಿಕವಷ್ಟೇ ನೀವು ಸಪ್ಲಿಮೆಂಟ್ಸ್ ತೆಗೆದುಕೊಳ್ಳಬಹುದು.



Click it and Unblock the Notifications
