Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಮಗುವಿಗೆ ರಾಗಿ ಅಂಬಳಿ ಯಾವಾಗ ಕೊಡಬಹುದು? ಹೇಗೆ ಕೊಡಬೇಕು?
ರಾಗಿಯನ್ನು ಯಾವಾಗ ಮಕ್ಕಳಿಗೆ ಕೊಡಲಾರಂಭಿಸಬಹುದು ಎಂದು ಕೇಳುವುದಾದರೆ ನಿಮ್ಮ ಮಗು ಘನ ಆಹಾರ ಸೇವಿಸಲಾರಂಭಿಸಿದಾಗ ಅಂದರೆ 7-8 ತಿಂಗಳ ನಂತರ ರಾಗಿಯನ್ನು ನೀಡಲಾರಂಭಿಸಬಹುದು.
ಹೊರಗಡೆ ಸಿಗುವ ರೆಡಿಮೇಡ್ ಪೌಡರ್‌ಗಳಿಗಿಂತ ರಾಗಿ ಕೊಡುವುದು ಮಕ್ಕಳಿಗೆ ತುಂಬಾನೇ ಒಳ್ಳೆಯದು. ನೀವು 6 ತಿಂಗಳವರೆಗೆ ಎದೆ ಹಾಲನ್ನು ಮಾತ್ರ ನೀಡಬೇಕು, ಅದಾದ ಬಳಿಕ ರಾಗಿಯನ್ನು ನೀಡಲಾರಂಭಿಸಬಹುದು. ಮೊದಲಿಗೆ ರಾಗಿ ನೀಡುವಾಗ ತುಂಬಾ ತೆಳುವಾಗಿ ಮಾಡಿ ಕೊಡಬೇಕು, ಇಲ್ಲದಿದ್ದರೆ ಮಗುವಿಗೆ ಜೀರ್ಣ ಮಾಡಿಕೊಳ್ಳಲು ಕಷ್ಟವಾಗುವುದು.

ಮಕ್ಕಳಿಗೆ ರಾಗಿಯನ್ನು ಹೇಗೆ ಕೊಡಬೇಕು, ಯಾವಾಗ ಕೊಡಬಾರದು, ಈ ಆಹಾರದಿಂದ ಮಗುವಿಗೆ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ:
ನೀವು ಮಗುವಿಗೆ ರಾಗಿ ಅಂಬಳಿ ಮಾಡಿ ಕೊಡಬಹುದು.
ರಾಗಿ ಅಂಬಳಿ ಮಾಡುವುದು ಹೇಗೆ?
ರಾಗಿಪುಡಿಯನ್ನು ಸೋಸಿ, ಅದರ ನುಣ್ಣನೆಯ ಅಂದರೆ ತುಂಬಾ ನೈಸಾದ ಪುಡಿಯನ್ನು 2 ಚಮಚ ಹಾಕಿ, ಅದಕ್ಕೆ ಒಂದು ತುಂಡು ಕಲ್ಲು ಸಕ್ಕರೆ ಹಾಕಿ ತಿರುಗಿಸುತ್ತಾ ಬೇಯಿಸಿಬೇಕು. ರಾಗಿ ಗಂಟು-ಗಂಟಾಗಬಾರದು, ಮಗುವಿನ ಗಂಟಲಿಗೆ ಸಿಕ್ಕಿಕೊಳ್ಳುತ್ತದೆ. ಆದ್ದರಿಂದ ತಿರುಗಿಸುತ್ತಲೇ ಇರಬೇಕು, ಉರಿಯನ್ನು ಕಡಿಮೆ ಇಟ್ಟುಕೊಳ್ಳಿ.
ಈ ರೀತಿ 10 ನಿಮಿಷ ತಿರುಗಿಸಿ, ಅದಕ್ಕೆ ಅರ್ಧ ಚಮಚ ತುಪ್ಪ ಸೇರಿಸಿ ನಂತರ ಉರಿಯಿಂದ ತೆಗೆದು ಬಿಸಿ ಕಡಿಮೆಯಾದಾಗ ಕೊಡಿ. ಶುದ್ಧ ಹಸುವಿನ ಉಪ್ಪ ಬಳಸಿ. ಈ ರಾಗಿ ಅಂಬಳಿ ತಿನ್ನಲು ತುಂಬಾ ರುಚಿಯಾಗಿರುವುದರಿಂದ ಮಗು ಇಷ್ಟಪಟ್ಟು ತಿನ್ನಲಾರಂಭಿಸುತ್ತದೆ.
ಸಲಹೆ: ನೀವು 6-8 ತಿಂಗಳ ಮಗುವಿಗೆ ಮಾಡುವುದಾದರೆ ತುಂಬಾ ತೆಳುವಾಗಿ ಮಾಡಬೇಕು, ಮಂದ ಮಾಡಬೇಡಿ, ಪುಡಿ ಸ್ವಲ್ಪ ಹಾಕಿ ಆಗ ತೆಳುವಾಗುವುದು.
* 8 ತಿಂಗಳ ಬಳಿಕ ಸ್ವಲ್ಪ ಮಂದವಾಗಿ ನೀಡಲಾರಂಭಿಸಬಹುದು. ಈ ರೀತಿ 2-3 ವರ್ಷದವರೆಗೆ ನೀಡಬಹುದು.
ಸೂಚನೆ: ರಾಗಿಪುಡಿ ಜೊತೆಗೆ ಇತರ ನವಧಾನ್ಯ ಕೂಡ ಬೆರೆಸಿಕೊಟ್ಟರೆ ಅಧಿಕ ಪೋಷಕಾಂಶ ದೊರೆಯುವುದು. ಇದರಿಂದ ಮಗುವಿನ ಬೆಳವಣಿಗೆ ಚೆನ್ನಾಗಿರುತ್ತದೆ.
ಪೌಡರ್ ಮಾಡದಿದ್ದರೆ ಈ ರೀತಿಯೂ ಮಾಡಬಹುದು
* ರಾಗಿಯನ್ನು 4-5 ತಾಸು ನೆನೆ ಹಾಕಿ, ನಂತರ ಅದನ್ನು ರುಬ್ಬಿ ಅದರ ಹಾಲನ್ನು ಹಿಂಡಿ ತೆಗೆದು, ಆ ಹಾಲಿಗೆ ಸ್ವಲ್ಪ ಹಾಲು ಹಾಗೂ ನೀರು ಸೇರಿಸಿ, ಕಲ್ಲು ಸಕ್ಕರೆ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ ರಾಗಿ ಅಂಬಳಿ ಮಾಡಿ ಕೊಡಿ.
ಸಕ್ಕರೆ ಬಳಸಬೇಡಿ
ಕೆಲವರು ಸಕ್ಕರೆ ಬಳಸುತ್ತಾರೆ, ಆದರೆ ಮಕ್ಕಳಿಗೆ ಕಲ್ಲುಸಕ್ಕರೆ ಆರೋಗ್ಯಕರ ಇದು ಕಫ ಆಗದಂತೆ ಕೂಡ ತಡೆಗಟ್ಟುತ್ತದೆ.
ರಾಗಿ ಪುಡಿ ಹೇಗೆ ಮಾಡಬೇಕು?
ನೀವು ಹೊರಗಡೆಯಿಂದ ತಂದು ಮಾಡುವುದಕ್ಕಿಂತ ಮನೆಯಲ್ಲಿಯೇ ಮಾಡಿ, ಇದು ತುಂಬಾನೇ ರುಚಿಯಾಗಿರುತ್ತದೆ
* 2 ಕೆಜಿ ರಾಗಿ, 1/2 ಕಪ್ ಜೋಳ ಹಾಗೂ 2 ಚಮಚ ಮೆಂತೆ ನೆನೆಹಾಕಿ, ನಂತರ ಗಂಟು ಕಟ್ಟಿ ಮೊಳಕೆ ಬರಿಸಿ.
* ನಂತರ ಮೊಳಕೆ ಬಂದ ಕಾಳುಗಳನ್ನು ನೆರಳಿನಲ್ಲಿ ಒಣಗಿಸಿ, 2-3 ದಿನ ಒಣಗಿಸಬೇಕು.
* ನಂತರ ಅವುಗಳನ್ನು ಹದವಾಗಿ ಹುರಿದುಕೊಳ್ಳಿ.
* ನಂತರ ಮಿಕ್ಸಿಯಲ್ಲಿಯೇ ಪುಡಿ ಮಾಡಿ
* ನಂತರ ಪುಡಿಯನ್ನು ಸೋಸಿ, ಅದರ ನುಣ್ಣನೆಯ ಪುಡಿ ತೆಗೆಯಬೇಕು.
* 2 ಕೆಜಿ ರಾಗಿ ಪುಡಿ ಮಾಡಿದರೆ ಅರ್ಧ ಕೆಜಿಯಷ್ಟು ನುಣ್ಣನೆಯ ಪುಡಿ ಸಿಗುತ್ತೆ, ಅದನ್ನು ಬಳಸಿ, ಇದು ತುಂಬಾ ರುಚಿಯಾಗಿರುತ್ತೆ.
* ರಾಗಿ ಪುಡಿಯನ್ನು ಸೋಸದೆ ಬಳಸಿದರೆ ಮಗುವಿನ ಹೊಟ್ಟೆ ಹಾಳಾಗುವುದು, ಆದ್ದರಿಂದ ಸೋಸಿ ನುಣ್ಣನೆಯ ಪುಡಿಯಷ್ಟೇ ಬಳಸಿ. 2 ವರ್ಷ ಬಳಿಕ ಅಷ್ಟು ನುಣ್ಣನೆಯ ಪುಡಿ ಬೇಕಾಗಿಲ್ಲ.
ರಾಗಿ ಅಂಬಳಿ ಕೊಡುವುದರಿಂದ ಮಕ್ಕಳಿಗೆ ದೊರೆಯುವ ಪ್ರಯೋಜನಗಳು
* ಇದರಲ್ಲಿ ಕ್ಯಾಲ್ಸಿಯಂ ಅಧಿಕವಿರುವುದರಿಂದ ಮಗುವಿನ ಮೂಳೆ ಬಲವಾಗುವುದು
* ಇದರಲ್ಲಿ ಅತ್ಯಧಿಕ ಪೋಷಕಾಂಶಗಳಿರುವುದರಿಂದ ಮಗು ಆರೋಗ್ಯಕರ ಮೈ ತೂಕ ಹೊಂದಲು ಸಹಕಾರಿ.
* ಮಗುವಿನಲ್ಲಿ ರಕ್ತಹೀನತೆ ತಡೆಗಟ್ಟುತ್ತದೆ
* ಮಗುವಿನ ಹಸಿವು ನಿಯಂತ್ರಿಸುತ್ತದೆ. ರಾಗಿ ತಿಂದರೆ ಬೇಗನೆ ಹಸಿವು ಉಂಟಾಗಲ್ಲ
* ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು
* ಮಗುವಿನಲ್ಲಿ ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ



Click it and Unblock the Notifications

