Latest Updates
-
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ದಿನಾ ಭಾರ ಎತ್ತಿದರೆ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚುವುದು: ಅಧ್ಯಯನ ವರದಿ
ಪುರುಷರೇ ನೀವು ದೈಹಿಕ ಶ್ರಮದ ಹಾಗೂ ನೀವು ಭಾರ ಎತ್ತು ಕೆಲಸ ಮಾಡುತ್ತಿದ್ದೀರಾ? ಹಾಗಾದರೆ ಪುರುಷ ಸಾಮರ್ಥ್ಯ ಹೆಚ್ಚಾಗಿರುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.

ಯಾರು ಅಧಿಕ ಭಾರ ಎತ್ತುವ ವ್ಯಾಯಾಮ ಅಥವಾ ಕೆಲಸ ಮಾಡುತ್ತಾರೋ ಅವರಲ್ಲಿ ವೀರ್ಯಾಣುಗಳು ಹೆಚ್ಚು ಉತ್ಪತ್ತಿಯಾಗುತ್ತದೆ, ಇವರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಚೆನ್ನಾಗಿರುತ್ತದೆ ಎಂದು ಇತ್ತೀಚೆಗೆ ನಡೆಸಿದ ಅಧ್ಯಯನದ ವರದಿ ಹೇಳಿದೆ.
Brigham and Women's Hospitalನ ಸಂಶೋಧಕರು ಈ ಅಧ್ಯಯನ ನಡೆಸಿ ಅಧಿಕ ದೈಹಿಕ ಶ್ರಮದ ಕೆಲಸ ಮಾಡುವ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಅಧಿಕ ಇರುತ್ತದೆ ಎಂದು ಹೇಳಿದೆ.
ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯ ಯಾವಾಗ ಕಡಿಮೆಯಾಗುವುದು?
* ಮೈ ತೂಕ ಅತ್ಯಧಿಕವಾದರೆ
* ಕೆಲವೊಂದು ಕಾಯಿಲೆಗಳು
* ಅತ್ಯಧಿಕ ಧೂಮಪಾನ
* ಡ್ರಗ್ಸ್ ಸೇವನೆ
* ಅತ್ಯಧಿಕ ಮಾನಸಿಕ ಒತ್ತಡ
* ವಿಪರೀತ ಮದ್ಯಪಾನ
ಇವೆಲ್ಲಾ ಪುರುಷರಲ್ಲಿ ವೀರ್ಯಾಣುಗಳ ಉತ್ಪತ್ತಿ ಕಡಿಮೆ ಮಾಡುತ್ತದೆ.
ಪುರುಷರಲ್ಲಿ ಬಂಜೆತನ
ಬಂಜೆತನ ಎಂಬುವುದು ಮಹಿಳೆಯರಲ್ಲಿ ಮಾತ್ರವಲ್ಲ, ಪುರುಷರಲ್ಲಿಯೂ ಇರಲಿದೆ. ಪುರುಷರಲ್ಲಿ ವೀರ್ಯಾಣು ಕಡಿಮೆಯಾದರೆ ಸಂತಾನೋತ್ಪತ್ತಿಯಾಗುವುದಿಲ್ಲ.
ದೈಹಿಕ ವ್ಯಾಯಾಮ, ದೈಹಿಕ ಶ್ರಮದ ಕೆಲಸ
ಪುರುಷರು ದೈಹಿಕ ವ್ಯಾಯಾಮ ಮಾಡುವುದರಿಂದ, ದೈಹಿಕ ಶ್ರಮದ ಕೆಲಸ ಮಾಡುವುದರಿಂದ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಬಹುದು. 2014ರಲ್ಲೂ ಹ್ಯೂಮನ್ ರಿಪ್ರೊಡೆಕ್ಷನ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಯಾರು ಓಡುವುದು, ಭಾರ ಎತ್ತುವುದು ಈ ಬಗೆಯ ಚಟುವಟಿಕೆ ಮಾಡುತ್ತಾರೋ ಅವರಲ್ಲಿ ವೀರ್ಯಾಣುಗಳ ಸಂಖ್ಯೆ ಅಧಿಕವಿರುತ್ತದೆ.
ವೀರ್ಯಾಣುಗಳ ವೃದ್ಧಿಗೆ ಏನು ಮಾಡಬೇಕು?
* ಆರೋಗ್ಯಕರ ಮೈ ತೂಕ ಹೊಂದಿರಬೇಕು
ಮೈ ತೂಕ ಹೆಚ್ಚಾದಂತೆ ವೀರ್ಯಾಣುಗಳ ಸಂಖ್ಯೆ ಹಾಗೂ ವೀರ್ಯಾಣುಗಳ ಚಲನೆ ಕಡಿಮೆಯಾಗುವುದಾಗಿ ಅಧ್ಯಯನ ವರದಿಗಳು ಹೇಳಿವೆ.
* ಆರೋಗ್ಯಕರ ಆಹಾರ ಸೇವಿಸಬೇಕು: ಸಾಕಷ್ಟು ಹಣ್ಣು, ತರಕಾರಿಗಳನ್ನು ತಿನ್ನಬೇಕು.
* ಮಾನಸಿಕ ಒತ್ತಡ ಕಡಿಮೆ ಮಾಡಬೇಕು: ಮಾನಸಿಕ ಒತ್ತಡ ಅಧಿಕ ಇರುವವರಲ್ಲಿಯೂ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಆದ್ದರಿಂದ ಯೋಗ, ಧ್ಯಾನದ ಮೂಲಕ ಮಾನಸಿಕ ಒತ್ತಡ ಕಡಿಮೆ ಮಾಡಬೇಕು.
* ದೈಹಿಕವಾಗಿ ಚಟುವಟಿಕೆಯಿಂದ ಇರಬೇಕು: ದಿನಾ ದೈಹಿಕ ವ್ಯಾಯಾಮ ಮಾಡಿ, ಇದು ನಿಮ್ಮ ಸಾಮರ್ಥ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ.
ಯಾವಾಗ ವೈದ್ಯರನ್ನು ಭೇಟಿಯಾಗಬೇಕು?
ಮಗು ಬೇಕೆಂದು ಬಯಸಿ ಪ್ರಯತ್ನಿಸಿದಾಗ ಸಂಗಾತಿ ಗರ್ಭಧಾರಣೆಯಾಗದೇ ಇದ್ದರೆ ಅದು ಬರೀ ಅವರಲ್ಲಿರುವ ಸಮಸ್ಯೆಗಳಿಂದ ಅಂತ ಭಾವಿಸಬೇಡಿ, ಇಬ್ಬರೂ ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ ಸೂಚನೆ ಪಡೆಯಿರಿ.



Click it and Unblock the Notifications


