Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ನೈಸರ್ಗಿಕವಾಗಿಯೇ ವೀರ್ಯಾಣುಗಳ ಫಲವತ್ತತೆ ಹೆಚ್ಚಿಸುತ್ತದೆ ಯೋಗ!
ದಂಪತಿಗಳಾದ ಮೇಲೆ ತಮಗೊಂದು ಮಗುವಿರಲಿ, ಅವನು/ಅವಳು ನಮ್ಮ ವಂಶ ಬೆಳಗಲಿ ಎಂಬ ಆಸೆ ಇರುವುದು ಸಹಜ. ಆದರೆ ಸಾಕಷ್ಟು ಮಹಿಳೆಯರಲ್ಲಿ ನಾನಾ ಕಾರಣದಿಂದ ಗರ್ಭಧರಿಸಲು ಸಾಧ್ಯವಾಗದೇ ಇರಬಹುದು. ಇದರಿಂದ ದಂಪತಿಗಳಲ್ಲಿ ನಿರಾಸೆ ಉಂಟಾಗುತ್ತದೆ.
ಆದರೆ ನೆನಪಿಡಿ, ಮಕ್ಕಳಾಗದೇ ಇರುವುದಕ್ಕೆ ಮಹಿಳೆ ಮಾತ್ರ ಕಾರಣವಲ್ಲ, ಪುರುಷರಲ್ಲಿನ ಕೆಲವು ದೋಷಗಳಿಂದಾಗಿಯೂ ಕೂಡ ಈ ಸಮಸ್ಯೆ ಉಂಟಾಗುತ್ತದೆ. ಅದರಲ್ಲಿ ಒಂದು, ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು. ಇದನ್ನು ಹೆಚ್ಚು ಮಾಡುವ ಸಾಕಷ್ಟು ವೈದ್ಯಕೀಯ ಮಾರ್ಗಗಳಿದ್ದರೂ ಕೂಡ ಕೆಲವೊಮ್ಮೆ ಇದು ಫಲಿಸದೇ ಹೋಗಬಹುದು!

ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು ಪುರುಷರಲ್ಲಿ ಖಿನ್ನತೆ ಮತ್ತು ಆತಂಕಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತದೆ. ವಾಸ್ತವವಾಗಿ, ವಿಶ್ವದಾದ್ಯಂತದ ದಂಪತಿಗಳ ಮಾನಸಿಕ ಆರೋಗ್ಯದ ಮೇಲೆ ಬಂಜೆತನವು ಒಂದು ಪ್ರಮುಖ ಪರಿಣಾಮವನ್ನು ಬೀರುತ್ತಿರುವುದು ವರದಿಯಾಗಿದೆ.
ನಿಮ್ಮ ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯ ಚಲನಶೀಲತೆಯನ್ನು ಹೆಚ್ಚಿಸಲು ಸಹಾಯ ಮಾಡುವ ಹಲವಾರು ವೈದ್ಯಕೀಯ ಮತ್ತು ನೈಸರ್ಗಿಕ ಚಿಕಿತ್ಸೆಗಳಿವೆ ಎಂಬುದಂತೂ ಸತ್ಯ. ಇದರಿಂದ ಬಂಜೆತನ ಸಮಸ್ಯೆ ನಿಮ್ಮನ್ನು ಜೀವನ ಪೂರ್ತಿ ಕಾಡಲಾರದು. ಅಧ್ಯಯನದ ಪ್ರಕಾರ ಬಂಜೆತನಕ್ಕೆ ಪರಿಣಾಮಕಾರಿ ನೈಸರ್ಗಿಕ ಪರಿಹಾರವೆಂದರೆ, ಅದು ಯೋಗ!

ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಗ ಹೇಗೆ ಸಹಾಯ ಮಾಡುತ್ತದೆ?
ಕೆಲವು ಶಾರೀರಿಕ ಅಂಶಗಳನ್ನು ಹೊರತುಪಡಿಸಿ ಬಂಜೆತನವನ್ನು ಎದುರಿಸಲು ಮತ್ತು ಮಾನಸಿಕ ಆರೋಗ್ಯವನ್ನು ಹಲವಾರು ರೀತಿಯಲ್ಲಿ ಸುಧಾರಿಸಲು ಯೋಗ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.
ರಕ್ತ ಪರಿಚಲನೆ ಮತ್ತು ದೇಹದ ಸಮತೋಲನತೆಗೆ ಯೋಗ ಅತ್ಯಂತ ಉಪಯುಕ್ತ. ಯೋಗ ನಮ್ಮ ಒತ್ತಡ ನಿವಾರಕ. ಒತ್ತಡವು, ಬಂಜೆತನಕ್ಕೆ ಪ್ರಾಥಮಿಕ ಮಾನಸಿಕ ಕಾರಣವೆಂದು ಪರಿಗಣಿಸಲಾಗಿದೆ.
ಹೃದಯರಕ್ತನಾಳದ ವ್ಯಾಯಾಮ ಮತ್ತು ಧ್ಯಾನ ಈ ಎರಡರ ಸಂಯೋಜನೆಯ ವ್ಯಾಯಾಮವು ಒಟ್ಟಾರೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಇದು ವೀರ್ಯ ಚಲನಶೀಲತೆ ಮತ್ತು ಉತ್ಪಾದನೆಯನ್ನು ಕೂಡ ಹೆಚ್ಚಿಸುತ್ತದೆ. ಒಂದರ್ಥದಲ್ಲಿ ಹೇಳುವುದಾದರೆ ಒಂದು ವ್ಯಾಯಾಮ ಅಥವಾ ತಾಲೀಮು, ನಿಮ್ಮ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮಬೀರುತ್ತದೆಯೋ ಅಂತೆಯೇ ಯೋಗಾಭ್ಯಾಸ ಕೂಡ!
ಯೋಗದಲ್ಲಿನ ಕೆಲವು ಭಂಗಿಗಳು ರಕ್ತ ಪರಿಚಲನೆ ಸುಧಾರಿಸಲು ಮಾತ್ರವಲ್ಲದೆ ನಿಮ್ಮ ದೇಹದ ರಾಸಾಯನಿಕಗಳನ್ನು ಸಮತೋಲನಗೊಳಿಸುತ್ತವೆ ಇದು ಹೆಚ್ಚು ವೀರ್ಯವನ್ನು ಉತ್ಪಾದಿಸುವುದಕ್ಕೆ ಸಹಾಯ ಮಾಡುತ್ತದೆ.

ಕಾಮಾಸಕ್ತಿ ಹೆಚ್ಚಿಸುವ ಯೋಗ
ಆಷ್ಟೇ ಅಲ್ಲ, ಈ ರೀತಿಯ ವ್ಯಾಯಾಮವು ನಿಮ್ಮ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ! ಇದರಿಂದಾಗಿ ನೀವು ಹೆಚ್ಚು ಲೈಂಗಿಕತೆಯನ್ನು ಹೊಂದಲು ಬಯಸುತ್ತೀರಿ. ಲೈಂಗಿಕ ಸಂಭೋಗದ ಆವರ್ತನವು ಮಗುವನ್ನು ಹೊಂದುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ ಇದಕ್ಕೆ ಸಂಬಂಧಿಸಿದಂತೆ ಕೆಲವು ಯೋಗ ಭಂಗಿಗಳು ಸಹಾಯ ಮಾಡುತ್ತವೆ.
ಹಾಗಾದರೆ ಇಂದೇ ಯೋಗ ಮಾಡಿ ಇಂದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದೇ ಎಂದು ಯೋಚಿಸುತ್ತಿದ್ದೀರಾ? ಖಂಡಿತ ಇಲ್ಲ ಯೋಗ, ಬಂಜೆತನಕ್ಕೆ ರಾತ್ರೋ ರಾತ್ರಿ ಪರಿಹಾರ ನೀಡುವುದಿಲ್ಲ. ಇದಕ್ಕಾಗಿ ನಿಮ್ಮ ಪರಿಶ್ರಮ ಬೇಕು.
ನಿಯಮಿತವಾಗಿ ಮತ್ತು ಪರಿಣಾಮಕಾರಿಯಾಗಿ ಅಭ್ಯಾಸ ಮಾಡಿದರೆ ಮಾತ್ರ ಮಗುವನ್ನು ಹೊಂದುವ ಸಾಧ್ಯತೆಗಳನ್ನು ಯೋಗ ಹೆಚ್ಚಿಸುತ್ತದೆ. ಹಾಗೆಂದ ಮಾತ್ರಕ್ಕೆ ಯೋಗವೇ ಬಂಜೆತನಕ್ಕೆ ಸಂಪೂರ್ಣ ಪರಿಹಾರವೆಂದಲ್ಲ. ಆದರೆ ಸಕಾರಾತ್ಮಕ ಉದ್ದೇಶಕ್ಕೆ ಒಮ್ಮೆ ಪ್ರಯತ್ನಸುವುದು ತಪ್ಪಲ್ಲ ಅಲ್ಲವೇ?

ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ಸಹಾಯವಾಗುವ ಕೆಲವು ಯೋಗಾಸನಗಳು
1. ಸೇತುಬಂಧಾಸನ
ಶ್ರೋಣಿಯ ರಕ್ತ ಪರಿಚಲನೆ ಸುಧಾರಿಸಲು ಮತ್ತು ನಿಮ್ಮ ವೀರ್ಯಾಣುಗಳ ಚಲನಶೀಲತೆಯನ್ನು ಹೆಚ್ಚಿಸಲು ಸಹಾಯ ಮಾಡುವ ಅತ್ಯುತ್ತಮ ಭಂಗಿಗಳಲ್ಲಿ ಇದು ಒಂದು.
ಮಾಡುವ ವಿಧಾನ
ಈ ಭಂಗಿ ಮಾಡಲು, ಮೊದಲು ನಿಮ್ಮ ಬೆನ್ನನ್ನು ನೆಲಕ್ಕೆ ತಾಗಿಸಿ ಮಲಗಿ, ನಂತರ ನಿಮ್ಮ ಕಾಲುಗಳನ್ನು ಬಗ್ಗಿಸಿ, ಅದು ನಿಮ್ಮ ಪೃಷ್ಠದ ಹತ್ತಿರವಿರುವಂತೆ ನೋಡಿಕೊಳ್ಳಿ, ನಂತರ ನಿಮ್ಮ ಸೊಂಟವನ್ನು ನೆಲದಿಂದ ಮೇಲಕ್ಕೆತ್ತಿ, ನಿಮ್ಮ ಭುಜಗಳನ್ನು ಮತ್ತು ಮೇಲಿನ ಬೆನ್ನನ್ನು ನೆಲದ ಮೇಲೆ ಇರಿಸಿ. ಸ್ಥಿರವಾಗಿ ಉಸಿರಾಡಿ.

2. ಅಗ್ನಿಸಾರ ಕ್ರಿಯೆ
ವೀರ್ಯ ಆರೋಗ್ಯಕ್ಕಾಗಿ ಇದು ಯೋಗದ ಅತ್ಯಂತ ಹಳೆಯ ಮತ್ತು ಹೆಚ್ಚು ಪ್ರಯೋಜನಕಾರಿ ಭಂಗಿಯಾಗಿದೆ.
ಮಾಡುವ ವಿಧಾನ
ನೇರವಾಗಿ ನಿಂತು, ನಿಮ್ಮ ಕಾಲುಗಳನ್ನು ಸ್ವಲ್ಪ ದೂರ ಇರಿಸಿ, ಮುಂದಕ್ಕೆ ಬಾಗಿ ನಿಮ್ಮ ಅಂಗೈಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ಇರಿಸಿ, ನಿಮ್ಮ ಹೊಟ್ಟೆಯನ್ನು ಒಳಕ್ಕೆ ಎಳೆಯುವಾಗ ಸ್ಥಿರವಾಗಿ ಉಸಿರಾಡಿ, ಉಸಿರೆಳೆದುಕೊಂಡ ನಂತರ 5 ಸೆಕೆಂಡುಗಳ ಕಾಲ ನಿಮ್ಮ ಉಸಿರನ್ನು ಹಿಡಿದುಕೊಳ್ಳಿ, ನಂತರ ಉಸಿರು ಬಿಡಿ ಉಸಿರು ಬಿಡುವಾಗ ನಿಮ್ಮ ಹೊಟ್ಟೆಯನ್ನು ಉಬ್ಬಿಸಿ ಪ್ರತಿ ಸಲಕ್ಕೆ 10 ಬಾರಿ ಇದನ್ನು ಪುನರಾವರ್ತಿಸಿ.

3. ಹಲಾಸನ
ವೀರ್ಯ ಚಲನಶೀಲತೆಗೆ ಮತ್ತೊಂದು ಅದ್ಭುತವಾದ ಯೋಗ ಭಂಗಿ ಇದು. ಈ ಆಸನವು ನಿಮ್ಮ ಒಟ್ಟಾರೆ ವೀರ್ಯಾಣುಗಳ ಸಂಖ್ಯೆಯನ್ನು ಸುಧಾರಿಸುತ್ತದೆ.
ಮಾಡುವ ವಿಧಾನ
ಈ ಭಂಗಿ ಮಾಡಲು, ನಿಮ್ಮ ಬೆನ್ನಿನ ಮಲಗಿಕೊಳ್ಳಿ, ನಿಮ್ಮ ಅಂಗೈಗಳನ್ನು ನಿಮ್ಮ ಪಕ್ಕದಲ್ಲಿ ನೆಲದ ಮೇಲೆ ಇರಿಸಿ. ನಿಮ್ಮ ಕಾಲುಗಳನ್ನು 90 ಡಿಗ್ರಿ ಕೋನಕ್ಕೆ ಎತ್ತರಿಸಿ, ನಿಮ್ಮ ಸೊಂಟವನ್ನು ಮೇಲಕ್ಕೆತ್ತಬೇಡಿ. 3 ಬಾರಿ ಸ್ಥಿರವಾಗಿ ಉಸಿರಾಡಿ, ನಂತರ ನಿಮ್ಮ ಸೊಂಟವನ್ನು ಮೇಲಕ್ಕೆತ್ತಿ ನಿಮ್ಮ ಬೆನ್ನನ್ನು ಸುರುಳಿಯಾಗಿಡಲು ಪ್ರಯತ್ನಿಸಿ, ನಂತರ ನಿಮ್ಮ ಕಾಲ್ಬೆರಳುಗಳು ನಿಮ್ಮ ತಲೆಯ ಹಿಂದೆ ನೆಲವನ್ನು ಮುಟ್ಟುವಂತೆ ಕಾಲುಗಳನ್ನು ಬೆಂಡಾಗಿಸಿ.

4. ಸೂರ್ಯ ನಮಸ್ಕಾರ
ಇದು ಭಂಗಿಗಳ ಸರಣಿಯಾಗಿದ್ದು, ವೀರ್ಯಾಣುಗಳ ಸಂಖ್ಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಇದು ಇತರ ಆರೋಗ್ಯ ಸಮಸ್ಯೆಗಳನ್ನು ಸುಧಾರಿಸುವುದಲ್ಲದೇ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.
ಮಾಡುವ ವಿಧಾನ
ನೇರವಾಗಿ ನಿಲ್ಲುವ ಮೂಲಕ ಪ್ರಾರಂಭಿಸಿ, ಹಿಂದಕ್ಕೆ ವಾಲುವ ಮೂಲಕ ನಿಮ್ಮ ಬೆನ್ನನ್ನು ಹಿಗ್ಗಿಸಿ, ಮುಂದಕ್ಕೆ ಬಾಗಿ ನಿಮ್ಮ ಕಾಲ್ಬೆರಳುಗಳನ್ನು ಸ್ಪರ್ಶಿಸಿ, ನಂತರ ನಿಮ್ಮ ಇನ್ನೊಂದು ಕಾಲು ನಿಮ್ಮ ಅಂಗೈಗಳ ನಡುವೆ 90 ಡಿಗ್ರಿ ಕೋನದಲ್ಲಿರುವಾಗ ಒಂದು ಕಾಲು ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ಸರಿಸಿ, ಕುತ್ತಿಗೆಯನ್ನು ಮೇಲಕ್ಕೆತ್ತಿ, ನಂತರ ನಿಮ್ಮ ಸೊಂಟ ಮತ್ತು ಎದೆಯನ್ನು ನೆಲದ ಮೇಲೆ ಬಿಡಿ, ಹೊಟ್ಟೆಯನ್ನು ನೆಲಕ್ಕೆ ತಾಗಿಸದಂತೆ ಮಲಗಿಕೊಳ್ಳಿ, ಕುತ್ತಿಗೆ ನೇರವಾಗಿ ಮುಂದೆ ನೋಡುವ ಭಂಗಿಯಲ್ಲಿರಲಿ.
ನಂತರ ಕೆಳಮುಖವಾಗಿರುವ ದೇಹವನ್ನು ಮೇಲಕ್ಕೆತ್ತಿ. ಕಾಲುಗಳನ್ನು ಮಡಚಿ ಮಂಡಿಗೆ ತಲೆಯನ್ನು ತಾಗಿಸಿ ಕೈಗಳು ನೇರವಾಗಿರಲಿ. ಮತ್ತೆ ಸೊಂಟವನ್ನು ಮೇಲ್ಮುಖವಾಡಿ ಕೈ ಮತ್ತು ಕಾಲು ನೆಲದ ಮೇಲಿರಲಿ. ನಂತರ ನಿಂತು ಕೈ ಬೆರಳುಗಳಿಂದ ಕಾಲ್ಬೆರಳುಗಳನ್ನು ಸ್ಪರ್ಶಿಸಿ, ನಂತರ ನೇರವಾಗಿ ನಿಲ್ಲಿ. 12 ಬಾರಿ ಪುನರಾವರ್ತಿಸಿ. ನೆನಪಿಡಿ ಈ ಪ್ರತಿಯೊಂದು ಆಸನಗಳನ್ನು ಮಾಡುವಾಗಲು ಉಸಿರೆಳೆದುಕೊಳ್ಳುವುದು ಮತ್ತು ಬಿಡುವುದನ್ನು ಮರೆಯಬೇಡಿ.

5. ಪ್ರಾಣಾಯಾಮ
ಬಂಜೆತನದ ಪ್ರಮುಖ ಕಾರಣವೆಂದರೆ ಒತ್ತಡ, ಇದು ನಿಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮಾಡುವ ವಿಧಾನ
ಪ್ರಾಣಾಯಾಮದಲ್ಲಿ ಹಲವಾರು ವಿಧಾನಗಳಿವೆ, ಇದು ಯೋಗದ ಬೃಹತ್ ಉಪವಿಭಾಗವಾಗಿದೆ, ಒಂದು ಆರಂಭಿಕ ವಿಧಾನವನ್ನು ಹೇಳುತ್ತೇವೆ. ಕಾಲುಗಳನ್ನು ಮಡಚಿ ಕುಳಿತುಕೊಳ್ಳಿ. ನಿಮ್ಮ ಬೆನ್ನು ನೇರವಾಗಿರಲಿ, ಒಂದು ಮೂಗಿನ ಹೊಳ್ಳೆಯನ್ನು ನಿಮ್ಮ ಹೆಬ್ಬೆರಳಿನಿಂದ ಮುಚ್ಚಿ, ಮೂಗಿನ ಇನ್ನೊಂದು ಹೊಳ್ಳೆಯ ಮೂಲಕ ಉಸಿರಾಡಿ, ಉಸಿರಾಟವನ್ನು ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳಿ, ಹೆಬ್ಬೆರಳಿನಿಂದ ಮುಚ್ಚಿದ ಮೂಗಿನ ಹೊಳ್ಳೆಯನ್ನು ಬಿಡುಗಡೆ ಮಾಡುವಾಗ ವಿರುದ್ಧವಾದ ಮೂಗಿನ ಹೊಳ್ಳೆಯನ್ನು ಮುಚ್ಚಲು ನಿಮ್ಮ ತೋರು ಮತ್ತು ಮಧ್ಯದ ಬೆರಳನ್ನು ಬಳಸಿ, ಉಸಿರಾಡಿ.

6. ಧನುರಾಸನ
ವೀರ್ಯಾಣುಗಳ ಸಂಖ್ಯೆಯನ್ನು ಸುಧಾರಿಸಲು ಈ ಭಂಗಿ ಅದ್ಭುತವಾಗಿದೆ.
ಮಾಡುವ ವಿಧಾನ
ಈ ಭಂಗಿ ಮಾಡಲು, ಮೊದಲು ನಿಮ್ಮ ಹೊಟ್ಟೆಯ ಮೇಲೆ ಮಲಗಿಕೊಳ್ಳಿ. ನಿಮ್ಮ ಮೊಣಕಾಲುಗಳನ್ನು ನಿಮ್ಮ ಬೆನ್ನಿನ ಹಿಂದೆ ಎತ್ತಿ, ನಂತರ ನಿಮ್ಮ ಕೈಗಳಿಂದ ನಿಮ್ಮ ಪಾದಗಳನ್ನು ಹಿಡಿದುಕೊಳ್ಳಿ, ನಂತರ ನಿಮ್ಮ ಎದೆ ಮತ್ತು ಸೊಂಟವನ್ನು ನೆಲದಿಂದ ಎತ್ತಿ, ನಿಮ್ಮ ಹೊಟ್ಟೆಯನ್ನು ಮಾತ್ರ ನೆಲದ ಮೇಲೆ ಬಿಟ್ಟು, ನಿಮ್ಮ ಕುತ್ತಿಗೆಯನ್ನು ಹಿಂದಕ್ಕೆ ಬಾಗಿಸಿ ಮತ್ತು ನಿಮಗೆ ಸಾಧ್ಯವಾದಷ್ಟು ಕಾಲ ಈ ಭಂಗಿಯಲ್ಲೇ ಇರಿ.

7. ಅರ್ಧ ಮತ್ಸೇಯೇಂದ್ರಾಸನ
ಈ ಭಂಗಿಯು ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ವೀರ್ಯ ಚಲನಶೀಲತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮಾಡುವ ವಿಧಾನ
ಕುಳಿತುಕೊಳ್ಳುವಾಗ ನಿಮ್ಮ ಕಾಲುಗಳನ್ನು ನೇರವಾಗಿ ಚಾಚಿ. ನಿಮ್ಮ ಬಲ ಕಾಲು ಎತ್ತಿ ಎಡ ಮೊಣಕಾಲಿನ ಎಡಭಾಗದಲ್ಲಿ ಇರಿಸಿ. ನಿಮ್ಮ ದೇಹವನ್ನು ಬಲಕ್ಕೆ ತಿರುಗಿಸಿ, ನಿಮ್ಮ ಬಲಗೈಯನ್ನು ನಿಮ್ಮ ಎಡಗೈಯಿಂದ ಹಿಡಿದು ನಿಮ್ಮ ಬಲಗೈಯನ್ನು ನಿಮ್ಮ ಬೆನ್ನಿನ ಹಿಂದೆ ಬಗ್ಗಿಸಿ, ತೋಳನ್ನು ನಿಮ್ಮ ದೇಹದ ಸುತ್ತಲೂ ವಿಸ್ತರಿಸಿ.

8. ಪದ್ಮಾಸನ
ಯೋಗದ ಅತ್ಯಂತ ಜನಪ್ರಿಯವಾದ ಭಂಗಿಗಳಲ್ಲಿ ಒಂದಾದ ಈ ಭಂಗಿಯನ್ನು ಅಭ್ಯಾಸ ಮಾಡುವುದರಿಂದ ಅಪಾರ ಪ್ರಯೋಜನಗಳಿರುವುದರಿಂದ ಯೋಗ ಆಸನಗಳ ಮೂಲವಾಗಿದೆ.
ಮಾಡುವ ವಿಧಾನ
ಕಾಲುಗಳನ್ನು ಮಡಚಿ ಕುಳಿತುಕೊಳ್ಳಿ, ನಿಮ್ಮ ಬೆನ್ನನ್ನು ನೇರವಾಗಿಸಿ, ಒಂದು ಕಾಲು ಎತ್ತಿ ಮತ್ತು ಪಾದವನ್ನು ನಿಮ್ಮ ಸೊಂಟದ ಬಳಿ ಇರಿಸಿ, ಇನ್ನೊಂದು ಕಾಲನ್ನು ಅದೇ ರೀತಿ ಮಾಡಿ. ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ನೀವು ಸಾಧ್ಯವಾದಷ್ಟು ಕಾಲ ಈ ಭಂಗಿಯಲ್ಲಿ ಕುಳಿತುಕೊಳ್ಳಿ.

ಯೋಗಾಸನಗಳನ್ನು ಮಾಡುವ ಮೊದಲು ನೆನಪಿಡಬೇಕಾದ ಅಂಶಗಳು
- ನೆನಪಿಡಿ, ನಿಯಂತ್ರಿತ ವಾತಾವರಣದಲ್ಲಿ ಮಾಡಿದರೆ ಮಾತ್ರ ಯೋಗ ಮಾಡುವುದರಿಂದ ಪ್ರಯೋಜನವಾಗುತ್ತದೆ.
- ಭಂಗಿಯ ಅಂತಿಮ ಹಂತಕ್ಕೆ ಹೋಗಲು ಅವಸರ ಮಾಡಬೇಡಿ. ನಿಮಗೆ ಸಾಧ್ಯವಾದಷ್ಟು ಮಾಡಿ ಮತ್ತು ಭಂಗಿಯನ್ನು ಪೂರ್ಣಗೊಳಿಸುವ ನಿಮ್ಮ ದೇಹದ ಸಾಮರ್ಥ್ಯವನ್ನು ನಿಧಾನವಾಗಿ ಬೆಳೆಸಿಕೊಳ್ಳಿ.
- ಆರಂಭದಲ್ಲಿ, ಯೋಗ ಗುರುವಿನ ಸಹಾಯವನ್ನು ಪಡೆಯಿರಿ ಇದರಿಂದ ನಿಮಗೆ ಹೆಚ್ಚು ಸಮಸ್ಯೆ ಉಂಟಾಗುವುದಿಲ್ಲ.
- ಯೋಗ ಮಾಡುವಾಗ ಆರಾಮದಾಯಕ, ಸಡಿಲವಾದ ಬಟ್ಟೆಗಳನ್ನೇ ಧರಿಸಿ
- ಆರೋಗ್ಯದ ದೃಷ್ಟಿಯಿಂದ, ನಿಮ್ಮ ಯೋಗ ಚಾಪೆಯನ್ನು ಮಾತ್ರ ಯೋಗಕ್ಕೆ ಬಳಸಿ
- ಸಮತಟ್ಟಾದ ಮೇಲ್ಮೈ ಪ್ರದೇಶದಲ್ಲಿ ಮಾತ್ರ ಯೋಗ ಮಾಡಿ
ಯೋಗವನ್ನು ಮಾಡಲು ಬಯಸುವ ಎಲ್ಲರ ಆರೋಗ್ಯಕ್ಕೆ ಯೋಗವು ಉತ್ತಮ ಫಲಿತಾಂಶವನ್ನೇ ನೀಡಿದೆ. ಇದು ವೀರ್ಯಾಣುಗಳ ಸಂಖ್ಯೆ, ವೀರ್ಯ ಚಲನಶೀಲತೆ ಮತ್ತು ಸ್ಖಲನದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂಬುದು ಖಚಿತವಾಗಿದೆ.
ನಿಯಮಿತವಾಗಿ ಯೋಗ ಮಾಡುವುದರಿಂದ ನಿಮ್ಮ ಕಾಮಾಸಕ್ತಿಯನ್ನು ಹೆಚ್ಚಿಸುವ ಮೂಲಕ ನಿಮ್ಮ ಲೈಂಗಿಕತೆಯನ್ನು ಹೆಚ್ಚಿಸುತ್ತದೆ. ಆದರೆ ಯೋಗವನ್ನು ಸುರಕ್ಷಿತ ರೀತಿಯಲ್ಲಿ ಮಾಡುವುದು ಅತ್ಯಂತ ಮುಖ್ಯ ವಿಷಯ.
ಆದ್ದರಿಂದ ನೀವು ಪ್ರಾರಂಭಿಸುವ ಮೊದಲು ನಿಮ್ಮ ವೈದ್ಯಕೀಯ ಸಲಹೆಗಾರರಿಂದ ಸಲಹೆಯನ್ನು ತೆಗೆದುಕೊಳ್ಳಿ. ಯಾವುದೇ ಪರಿಣಿತ ಯೋಗ ತರಬೇತುದಾರರಿಂದ ಯೋಗವನ್ನು ಕಲಿಯಿರಿ. ಇದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.



Click it and Unblock the Notifications