Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ಎಕ್ಟೋಲೈಫ್: ಮಗುವನ್ನು ಫ್ಯಾಕ್ಟಿರಿಯಲ್ಲೇ ತಯಾರಿಸುವ ತಂತ್ರಜ್ಞಾನವಿದು!
ಮಕ್ಕಳನ್ನು ಫ್ಯಾಕ್ಟರಿಯಲ್ಲಿ ತಯಾರಿಸುವಂತಿದ್ದರೆ? ಏನು, ತಲೆಕೆಟ್ಟಿದೆಯೇ ಎಂದು ಕೇಳಬೇಡಿ.. ಅಂಥದ್ದೊಂದು ಕಾಲ ದೂರವಿಲ್ಲ... ಇದೀಗ ಮಕ್ಕಳನ್ನು ಉತ್ಪತ್ತಿ ಮಾಡುವ ತಂತ್ರಜ್ಞಾನ ಬಂದಿದ್ದು ಈ ಕುರಿತು ಎಲ್ಲಾ ಕಡೆ ಚರ್ಚೆ ಆಗುತ್ತಿದೆ.

ಈ ತಂತ್ರಜ್ಞಾನಕ್ಕೆ ಎಕ್ಟೋಲೈಫ್ ಎಂದು ಕರೆಯಲಾಗುವುದು. ಈ ತಂತ್ರಜ್ಞಾನದಿಂದಾಗಿ ಬಂಜೆತನ ಎಂಬ ಸಮಸ್ಯೆ ದೊಡ್ಡ ಪರಿಹಾರ ಸಿಕ್ಕಾಂತಾಗಿದೆ. ವೈದ್ಯಕೀಯ ಲೋಕದಲ್ಲಿ ಬಂಜೆತನಕ್ಕೆ ಐವಿಎಫ್, ಐಯುಐ ಈ ಬಗೆಯ ಚಿಕಿತ್ಸೆಗಳಿವೆ, ಇದರಿಂದಾಗಿ ತುಂಬಾ ಜನರಿಗೆ ಮಗು ಪಡೆಯಲು ಸಾಧ್ಯವಾಗಿದೆ.
ಆದರೆ ಎಷ್ಟೋ ಜನರಿಗೆ ಈ ರೀತಿಯ ಚಿಕಿತ್ಸೆಯ ಬಳಿಕ ಕೂಡ ಮಗು ಪಡೆಯಲು ಅಸಾಧ್ಯವಾಗುವುದು. ಆದರೆ ಈಗ ಬಂದಿರುವ ತಂತ್ರಜ್ಞಾನದಿಂದಾಗಿ ಮಗು ಬಯಸುವ ಪ್ರತಿಯೊಬ್ಬರು ಮಗುವನ್ನು ಪಡೆಯಲು ಸಾಧ್ಯವಾಗುವುದು.

ಎಕ್ಟೋಲೈಫ್ ಎಂದರೇನು?
ಸಂಶೋಧಕರು ಕಳೆದ 50 ವರ್ಷಗಳಿಂದ ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 75 ಲ್ಯಾಬ್‌ಗಳಿರುವ ಮನೆಯಲ್ಲಿ 400 ಗ್ರೋಥ್ ಪಾಡ್ಸ್ ಹಾಗೂ ಕೃತಕ ಗರ್ಭಕೋಶಗಳನ್ನು ಬಳಸಿ ಮಗುವನ್ನು ತಯಾರಿಸಲಾಗುವುದು.
ಇದರಲ್ಲಿ ಪೋಷಕರು ತಮ್ಮ ಮಗು ಹೇಗೆ ಬೆಳೆಯುತ್ತಿದೆ ಎಂಬ ಕುರಿತು ಸಂಪೂರ್ಣ ಮಾಹಿತಿ ಸ್ಕ್ರೀನ್ ಮೇಲೆ ಬರುತ್ತದೆ, ಅದನ್ನು ನೋಡಿ ಮಗುವಿನ ಆರೋಗ್ಯ ಸ್ಥಿತಿ ತಿಳಿಯಬಹುದಾಗಿದೆ, ಈ ಡಾಟಾಗಳನ್ನು ಮೊಬೈಲ್ ಆ್ಯಪ್ ಮೂಲಕ ಟ್ರ್ಯಾಕ್ ಮಾಡಬಹುದು.

ಎಕ್ಟೋಲೈಫ್ ಎಂದರೇನು?
ಸಂಶೋಧಕರು ಕಳೆದ 50 ವರ್ಷಗಳಿಂದ ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. 75 ಲ್ಯಾಬ್‌ಗಳಿರುವ ಮನೆಯಲ್ಲಿ 400 ಗ್ರೋಥ್ ಪಾಡ್ಸ್ ಹಾಗೂ ಕೃತಕ ಗರ್ಭಕೋಶಗಳನ್ನು ಬಳಸಿ ಮಗುವನ್ನು ತಯಾರಿಸಲಾಗುವುದು.
ಇದರಲ್ಲಿ ಪೋಷಕರು ತಮ್ಮ ಮಗು ಹೇಗೆ ಬೆಳೆಯುತ್ತಿದೆ ಎಂಬ ಕುರಿತು ಸಂಪೂರ್ಣ ಮಾಹಿತಿ ಸ್ಕ್ರೀನ್ ಮೇಲೆ ಬರುತ್ತದೆ, ಅದನ್ನು ನೋಡಿ ಮಗುವಿನ ಆರೋಗ್ಯ ಸ್ಥಿತಿ ತಿಳಿಯಬಹುದಾಗಿದೆ, ಈ ಡಾಟಾಗಳನ್ನು ಮೊಬೈಲ್ ಆ್ಯಪ್ ಮೂಲಕ ಟ್ರ್ಯಾಕ್ ಮಾಡಬಹುದು.

ಗರ್ಭದಲ್ಲಿ ಬೆಳೆಯುವ ರೀತಿಯಲ್ಲಿಯೇ ಮಗು ಬೆಳೆಯುತ್ತದೆ
ಈ ವಿಧಾನದಲ್ಲಿ ಗರ್ಭದಲ್ಲಿ ಹೇಗೆ ಭ್ರೂಣ ಬೆಳೆಯುತ್ತದೆಯೋ ಅದೇ ರೀತಿ ಈ ಕೃತಕ ಮಗು ಮಾಡುವ ವಿಧಾನದಲ್ಲಿಯೂ ಭ್ರೂಣ 9 ತಿಂಗಳು ಬೆಳೆಯುತ್ತದೆ. ನಂತರ ಹೆರಿಗೆಯಾಗುವ ರೀತಿಯಲ್ಲಿ ಬಟನ್ ಫುಶ್ ಮಾಡುವ ಮೂಲಕ ಪಾಡ್‌ನಿಂದ ಮಗುವನ್ನು ಹೊರಗಡೆ ತೆಗೆಯಲಾಗುವುದು.

ಎಕ್ಟೋಲೈಫ್ ಸುರಕ್ಷಿತ ಹಾಗೂ ಹೆರಿಗೆಯ ನೋವು ಇಲ್ಲ
ಇದರಲ್ಲಿ ಹೆರಿಗೆಯ ವಿಧಾನ ತುಂಬಾ ಸರಳ, ಮಗುವಿನ ಮೇಲೂ ಯಾವುದೇ ಒತ್ತಡ ಬೀಳುವುದಿಲ್ಲ, ಪಾಡ್‌ನಲ್ಲಿರುವ ಮಗು 9 ತಿಂಗಳು ಬೆಳವಣಿಗೆಯಾದ ಬಳಿಕ ಒಂದು ಬಟನ್ ಪ್ರೆಸ್ ಮಾಡಿದರೆ ಮಗು ಈ ಲೋಕಕ್ಕೆ ಬರುತ್ತದೆ.
ಈ ಕೃತಕ ಗರ್ಭದಿಂದ ನೀರು ಹೊರಬಂದು ( ಹೆರಿಗೆಯ ಮುನ್ನ ವಾಟರ್ ಬ್ರೇಕ್ ಆಗುವ ರೀತಿ) ನಂತರ ಮಗು ಹೊರ ಬರುತ್ತದೆ.

ಈಗಾಗಲೇ ಕೃತಕ ಗರ್ಭಕೋಶದಲ್ಲಿ ಮಗು ಮಾಡಲಾಗುತ್ತಿದೆಯೇ?
ಇಲ್ಲ, ಈ ಕುರಿತು ಸಂಶೋಧನೆಗಳಷ್ಟೇ ನಡೆಯುತ್ತಿದೆ ಇನ್ನು 10 ವರ್ಷಗಳಲ್ಲಿ ಈ ತಂತ್ರಜ್ಞಾನ ಕಾರ್ಯರೂಪಕ್ಕೆ ಬರಲಿದೆ. ಶೇ. 100ರಷ್ಟು ವೈಜ್ಞಾನಿಕ ತಂತ್ರಜ್ಞಾನ ಬಳಸಿ ಮಗುವನ್ನು ತಯಾರಿಸಲಾಗುವುದು.
ಭವಿಷ್ಯದಲ್ಲಿ ಈ ತಂತ್ರಜ್ಞಾನ ಜನಪ್ರಿಯವಾಗಬಹುದು
ವೃತ್ತಿ ಜೀವನದ ಒತ್ತಡದಿಂದಾಗಿ ಮಗುವಿಗೆ ಪ್ಲ್ಯಾನ್ ಮಾಡಲು ಕೆಲವರಿಗೆ ಕಷ್ಟವಾಗುತ್ತಿದೆ, ಇನ್ನು ಕೆಲವರಿಗೆ ದೈಹಿಕ ಸಮಸ್ಯೆಯಿಂದಾಗು ಮಗು ಆಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಈ ತಂತ್ರಜ್ಞಾನವಾಗಬಹುದು. ಮಗು ಕೃತಕ ಗರ್ಭಕೋಶದಲ್ಲಿ ಬೆಳೆಯುವುದರಿಂದ ವೃತ್ತಿ ಜೀವನಕ್ಕೆ ತೊಂದರೆ, ನೈಸರ್ಗಿಕವಾಗಿ ಗರ್ಭಧಾರಣೆ ಸಾಧ್ಯವಾಗದೇ ಇರುವವರು ಕೂಡ ಮಗುವನ್ನು ಪಡೆಯಬಹುದು.
ಇದರಲ್ಲಿ ಡಿಸೈನ್ ಬೇಬಿ ಪಡೆಯಬಹುದು
ಈ ವಿಧಾನದಲ್ಲಿ ಮಗು ಪಡೆಯುವವರು ತಮಗೆ ಎಂಥ ಮಗು ಬೇಕು ಎಂದು ಮೊದಲೇ ಪ್ಲ್ಯಾನ್ ಕೂಡ ಮಾಡುವ ಸಾಧ್ಯತೆ ಇದೆ. ಆದರೆ ಈಗ 14 ದಿನಗಳಿಗಿಂತ ಹೆಚ್ಚಾಗಿ ಭ್ರೂಣ ಬೆಳೆಯಲು ಬಿಡುತ್ತಿಲ್ಲ, ಕೆಲವು ನೈತಿಕ ಕಾರಣಗಳಿಂದಾಗಿ 14 ದಿನಗಳ ನಂತರ ಭ್ರೂಣವನ್ನು ನಾಶ ಪಡಿಸಲಾಗುತ್ತಿದೆ. ಒಂದು ವೇಳೆ ನೈತಿಕ ನಿರ್ಬಂಧಗಳು ಸಡಿಲವಾದರೆ ಈ ತಂತ್ರಜ್ಞಾನ ಬಳಸಿ ಪೂರ್ಣ ಆರೋಗ್ಯದ ಮಗು ಪಡೆಯುವ ಪ್ರಯತ್ನಕ್ಕೆ ಸುಲಭವಾಗುವುದು.
ಪೋಷಕರು ತಮ್ಮ ಮಗುವಿನ ಬುಧ್ಧಿಶಕ್ತಿ, ಎತ್ತರ, ಕಣ್ಣಿನ ಬಣ್ಣ, ದೈಹಿಕ ಸಾಮರ್ಥ್ಯ, ತ್ವಚೆಯ ಬಣ್ಣ ಎಲ್ಲವನ್ನೂ ಮೊದಲೇ ನಿರ್ಧರಿಸಿ ಅಂಥದ್ದೇ ಮಗು ಪಡೆಯಬಹುದು.
ಈ ತಂತ್ರಜ್ಞಾನ ಎಲ್ಲಾದರೂ ಬಂದರೆ ಭವಿಷ್ಯದ ಜಗತ್ತು ಹೇಗಿರಬಹುದು ಅಲ್ವಾ?



Click it and Unblock the Notifications
