Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ಗರ್ಭಾವಸ್ಥೆಯಲ್ಲಿ ಕಾಲಿನ ಸೆಳೆತ ತಡೆಗಟ್ಟುವುದು ಹೇಗೆ?
ಮಹಿಳೆ ಗರ್ಭಿಣಿಯಾಗಿದ್ದಾಗ ಕಾಲಿನಲ್ಲಿ ಸೆಳೆತ ಅಥವಾ ನೋವು, ಕಾಲುಗಳು ಊದಿಕೊಳ್ಳುವುದು ಹೀಗೆ ಮುಂತಾದ ಪ್ರಕ್ರಿಯೆಗಳು ಉಂಟಾಗುವುದು ಸಹಜ. ಈ ನೋವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲ. ಏಕೆಂದರೆ ಗರ್ಭಿಣಿ ಸ್ತ್ರೀಯ ದೇಹ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿರುತ್ತದೆ. ಆದರೆ ಈ ಕಾಲಿನ ಸೆಳೆತವನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದು.
ಹಿಪ್ (ಹಿಂಬದಿ) ಪ್ರದೇಶದಲ್ಲಿ ಹೆಚ್ಚು ಒತ್ತಡ ಬಿದ್ದಾಗ ಕಾಲಿನ ರಕ್ತನಾಳಗಳಲ್ಲಿ ಸರಿಯಾಗಿ ಪರಿಚಲನೆಯಾಗದೇ ನೋವುಗಳು ಸಂಭವಿಸುತ್ತವೆ. ಇದಕ್ಕೆ ಸಾಮಾನ್ಯವಾದ ಉಪಶಮನಕಾರಿ ಮಾರ್ಗಗಳು ಇಲ್ಲಿವೆ:

1. ಆರೋಗ್ಯಕರ ಆಹಾರ
ಕೆಲವು ಸಂದರ್ಭಗಳಲ್ಲಿ, ಕಾಲಿನ ಸೆಳೆತ ಕ್ಯಾಲ್ಸಿಯಂ, ಮೆಗ್ನೀಶಿಯಂ ಅಥವಾ ರಂಜಕದ ರೀತಿಯ ದೇಹದಕ್ಕೆ ಅಗತ್ಯವಾದ ಜೀವಸತ್ವಗಳು ಹಾಗೂ ಖನಿಜಾಂಶಗಳ ಕೊರತೆಯಾದ ಸಂದರ್ಭದಲ್ಲಿ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ, ನೀವು ಬಾಳೆಹಣ್ಣುಗಳು, ಬಾದಾಮಿ, ತರಕಾರಿಗಳು ಸಲಾಡ್ ಇತ್ಯಾದಿಗಳನ್ನು ಮಿನಿ-ಮೀಲ್ಸ್ ನಂತೆ ಸೇವಿಸಿ. ಇದನ್ನು ರೂಢಿಸಿಕೊಳ್ಳುವ ಮೊದಲು ಅಗತ್ಯವೆನಿಸಿದರೆ ವೈದ್ಯರ ಮಾರ್ಗದರ್ಶನ ಪಡೆಯಿರಿ.

2. ವಾಕ್ ಮಾಡಿ (ನಡೆದಾಡಿ)
ಪ್ರತಿ 1-2 ಗಂಟೆಗಳ ವಿರಾಮದ ನಂತರ 10 ನಿಮಿಷಗಳ ನಡಿಗೆ, ನಿಮ್ಮ ಕಾಲುಗಳಲ್ಲಿ ರಕ್ತ ಹರಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಮ್ಮ ಮೊದಲ ತ್ರೈಮಾಸಿಕದ ಆರಂಭದಲ್ಲೇ ಇದನ್ನು ಮಾಡುವುದು ಒಳ್ಳೆಯದು. ಆದರೆ ನಿಮ್ಮ ವೈದ್ಯರು ಇದಕ್ಕೆ ಅವಕಾಶ ನೀಡಿದರೆ ಮಾತ್ರ. ಜಾಸ್ತಿ ಸಮಯ ನಿಂತಿರಬೇಡಿ. ಇದರಿಂದ ಕಾಲು ಸೆಳೆತ ಉಲ್ಬಣಗೊಳ್ಳಬಹುದು.

3. ಅಡ್ಡ ಕಾಲಿನ ಮೇಲೆ ಕುಳಿತುಕೊಳ್ಳಬೇಡಿ
ಕಾಲನ್ನು ಅಡ್ಡ ಹಾಕಿ ಕುಳಿತುಕೊಳ್ಳುವುದು ಅಥವಾ ಮಲುಗುವುದು ಒಳ್ಳೆಯದಲ್ಲ. ಇದರಿಂದ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಆಗಾಗ ಕಾಲ್ಬೆರಳುಗಳನ್ನು ಉಜ್ಜುತ್ತಿರಿ ಇದರಿಂದ ನೋವು ಕಡಿಮೆಯಾಗುತ್ತದೆ.

4. ಸರಿಯಾದ ಭಂಗಿಯ ಆಯ್ಕೆ
ನಿಮ್ಮ ಕಾಲುಗಳನ್ನು ನಿಮ್ಮ ದೇಹಕ್ಕಿಂತ ಸ್ಪಲ್ವ ಮಟ್ಟಿಗೆ ಎತ್ತರದಲ್ಲಿಟ್ಟು ಕುಳಿತುಕೊಳ್ಳುವುದು, ಮಲಗುವುದು ಒಳ್ಳೆಯದು. ಇದರಿಂದ ರಕ್ತ ಪರಿಚಲನೆಗೆ ಸಹಾಯಕವಾಗುತ್ತದೆ.

5. ಕಾಲಿಗೆ ವ್ಯಾಯಾಮ ನೀಡಿ
ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಸುಲಭವಾಗಿ ವ್ಯಾಯಾಮ ಮಾಡುವುದು ಕಷ್ಟ ಸಾಧ್ಯ. ಆದರೆ ಕಾಲುಗಳ ವ್ಯಾಯಾಮವನ್ನು ನಿರಾಯಾಸವಾಗಿ ಮಾಡಬಹುದು. ಕಾಲುಗಳನ್ನು ಎಡಕ್ಕೆ ಬಲಕ್ಕೆ ತಿರುಗಿಸುವ ವ್ಯಾಯಾಮವನ್ನು ರೂಢಿಸಿಕೊಳ್ಳಿ.

6. ಕಾಲಿಗೆ ಶಾಖ ಕೊಡುವುದು, ಪೆಡಿಕ್ಯೂರ್ ಮಾಡುವುದು
ಕಾಲಿನ ಒತ್ತಡವನ್ನು ತಡೇಯಲು ಒಂದು ಬಾಟಲಿ ಅಥವಾ ಹಾಟ್ ಪ್ಯಾಡ್ ಗಳಲ್ಲಿ ಬಿಸಿ ನೀರನ್ನು ತುಂಬಿ ಕಾಲಡಿಯಲ್ಲಿಟ್ಟು ಮಸಾಜ್ ಮಾಡಿ. ದಿನವೂ ರಾತ್ರಿ ಮಲಗುವ ಮುನ್ನ ಈ ರೂಢಿಯನ್ನಿಟ್ಟುಕೊಳ್ಳುವುದು ಒಳ್ಳೆಯದು.
ಈ ಮಾರ್ಗಗಳನ್ನು ಅನುಸರಿಸಿದರೂ ಕೂಡ ನಿಮ್ಮ ಕಾಲುಗಳಲ್ಲಿ ಸೆಳೆತ ಇನ್ನೂ ಇದ್ದರೆ ಮೀನಖಂಡಗಳ ಸ್ನಾಯುಗಳನ್ನು ಸಡಿಲಿಸಲು ಕಾಲಿನ ಮಸಾಜ್ ಮಾಡುವುದು ಉತ್ತಮ.



Click it and Unblock the Notifications