Latest Updates
-
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ!
ಗರ್ಭಿಣಿಯರು ತಾವೇ ಆರೈಕೆ ಮಾಡಿಕೊಳ್ಳುವುದು ಹೇಗೆ?
ಪುಟ್ಟ ಮಗುವೊಂದು ಪ್ರಪಂಚಕ್ಕೆ ಕಾಲಿಟ್ಟು ಅದರದೇ ಭಾಷೆಯಲ್ಲಿ, ಏನೆನೋ ಹಾವ ಭಾವಗಳನ್ನು ಮಾಡುವುದನ್ನು ನೋಡುವುದೇ ಚಂದ. ಅದಲ್ಲೂ ಒಂಬತ್ತು ತಿಂಗಳು ಹೊತ್ತು ಒಂದು ಮಗುವಿಗೆ ಜನ್ಮನೀಡುವುದಕ್ಕಾಗಿ ಅತ್ಯಂತ ಉತ್ಸಾಹದಿಂದ ಪ್ರತಿಯೊಬ್ಬ ಹೆಣ್ಣು ಕಾಯುತ್ತಾಳೆ. ಮಗುವನ್ನು ನೋಡುವುದಕ್ಕೆ, ಅಮ್ಮ ಎಂದು ಹೇಳಿಸಿಕೊಳ್ಳುವುದಕ್ಕೆ ಎದುರು ನೋಡುತ್ತಿರುತ್ತಾಳೆ. ತಾಯಿ ಎಂದು ಕರೆಸಿಕೊಂಡ ಹೆಣ್ಣು ಮಾತ್ರ ಪರಿಪೂರ್ಣ ಮಹಿಳೆ ಎನಿಸಿಕೊಳ್ಳುವುದಕ್ಕೆ ಅರ್ಹಳು ಎಂಬ ನಂಬಿಕೆ ನಮ್ಮಲ್ಲಿ ಹಿಂದಿನಿಂದಲೂ ಬಳಕೆಯಲ್ಲಿದೆ.
ಈ ನಂಬಿಕೆಗಳು ಹೇಗೆ ಇರಲಿ, ಆದರೆ ತಾಯಿಯಾಗುತ್ತಿರುವ ಮಹಿಳೆಯ ಆನಂದ ಆ ತಾಯಿಗೆ ಮಾತ್ರವೇ ಗೊತ್ತು!ಒಂದು ಮುದ್ದಾದ, ಸದೃಢವಾದ ಮಗುವನ್ನು ಹೆರಬೇಕಾದರೆ ಗರ್ಭಿಣಿಯಾದವಳು ತನ್ನ ಸಾಮಾನ್ಯ ಆಹಾರ ಪದ್ಧತಿ, ಜೀವನ ಕ್ರಮಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಮಗು ಹೊಟ್ಟೆಯಲ್ಲಿರುವಾಗಲೇ ಅದರ ಆರೈಕೆಯನ್ನು ಮಾಡಿದರೆ ಅದು ಹುಟ್ಟುವಾಗ ಆರೋಗ್ಯವಾಗಿ ಹುಟ್ಟುತ್ತದೆ ಹಾಗೂ ಆರೋಗ್ಯವಾಗಿಯೇ ಬೆಳೆಯುತ್ತದೆ ಎಂಬುದು ವೈದ್ಯರ ಸಲಹೆ ಕೂಡಾ. ಇದಕ್ಕಾಗಿ ಬಹಳಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
ಗರ್ಭಿಣಿ ಸ್ತ್ರೀಯರು ತಮ್ಮ ಆರೋಗ್ಯದ ದೃಷ್ಟಿಯಿಂದ ವಹಿಸಬೇಕಾದ ಕೆಲವು ಮುನ್ಸೂಚನೆಗಳು ಹೀಗಿವೆ.

ಮಧುಮೇಹ ಚಿಕಿತ್ಸೆ
ಗರ್ಭಿಣಿಯರಿಗೆ ಮಧುಮೇಹ ಬರುವ ಸಾಧ್ಯತೆಗಳಿರುತ್ತವೆ. ಆದರಿಂದ ದವಸ ಧಾನ್ಯಗಳನ್ನು ತಿನ್ನುವುದರ ಮೂಲಕ ನಿಮ್ಮ ದೇಹ ಪ್ರಕೃತಿಯನ್ನು ಸಮಾನವಾಗಿರುವಂತೆ ನೋಡಿಕೊಳ್ಳಿ.ಪ್ರೊಟೀನ್ ಅಂಶವಿರುವ ಆಹಾರವನ್ನು ಹೆಚ್ಚು ಹೆಚ್ಚು ಸೇವಿಸಿ. ನೀವೆನಾದರೂ ಡಯಟ್ (diet) ಮಾಡುತ್ತಿದ್ದರೆ ಈ ಸಂದರ್ಭದಲ್ಲಿ ಅವುಗಳಿಗೆ ವಿರಾಮ ಕೊಡಿ. ಏಕೆಂದರೆ ಆಹಾರದಲ್ಲಿ ಅತಿಯಾದ ಕಡಿತ ಗರ್ಭವತಿ ಸ್ತ್ರೀಯರಿಗೆ ಒಳ್ಳೆಯದಲ್ಲ.

ಮನಸ್ಸು ಮತ್ತು ಆರೋಗ್ಯ
ಅತೀ ಹೆಚ್ಚು ನೀರನ್ನು ಕುಡಿಯುವುದು ಬಹಳ ಉತ್ತಮ ಹಾಗೂ ಅಗತ್ಯ ಕೂಡ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ನಿಮಗೆ ಬರಿಯ ನೀರನ್ನು ಕುಡಿಯುವುದಕ್ಕೆ ಸಾಧ್ಯವಾಗದಿದ್ದರೆ ಸ್ವಲ್ಪ ಸಕ್ಕರೆಯನ್ನು ಬೆರೆಸಿ ಕುಡಿಯರಿ.
ದಿನವೂ ಸಾಧ್ಯವಾದಷ್ಟು, ಬೇಕೆನಿಸಿದಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳಿ. ಕೆಲಸ ಮಾಡುತ್ತಿರುವಾಗ ಮಧ್ಯದಲ್ಲಿ 10 ನಿಮಿಷಗಳ ಕಾಲ ಆಗಾಗ ವಿಶ್ರಾಂತಿಯನ್ನು ತೆಗೆದುಕೊಳ್ಳಿ. ರಾತ್ರಿ ಬೇಗ ಮಲಗಿ. ಮುಂಜಾನೆ ಲಗುಭಗೆಯಿಂದ ಒಂದೇ ಸಲಕ್ಕೆ ಎದ್ದೇಳಬೇಡಿ. ನಿಧಾನವಾಗಿ ದೇಹಕ್ಕೆ ಯಾವುದೇ ಶ್ರಮವಾಗದ ರೀತಿಯಲ್ಲಿ ಎದ್ದರೆ ಹೊಟ್ಟೆಯಲ್ಲಿರುವ ಮಗುವಿಗೂ ಯಾವುದೇ ತೊಂದರೆಗಳಾಗುವುದಿಲ್ಲ. ಅಲ್ಲದೇ ನಿಮ್ಮ ಮನಸ್ಸನ್ನು ಆದಷ್ಟು ಪ್ರಶಾಂತ ವಾಗಿರಿಸುವುದು ಹುಟ್ಟುವ ಮಗುವಿನ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಬೀಳುವುದನ್ನು ತಪ್ಪಿಸುತ್ತದೆ.

ಮಗುವಿನ ಬಗ್ಗೆ ಧನಾತ್ಮಕ ಯೋಚನೆ
ನಿಮ್ಮ ದೇಹವನ್ನು ಅತ್ಯಂತ ಪ್ರಜ್ಞಾಪೂರಕವಾಗಿ ಆತ್ಮವಿಶ್ವಾಸದಿಂದ ನೋಡಿಕೊಳ್ಳಿ. ಅಂದರೆ ನನಗೆ ಸುಸ್ತು ಎಂದು ಯಾವಾಗಲೂ ಹೇಳುತ್ತಿದ್ದರೆ ಅಥವಾ ಕುಳಿತಲ್ಲಿಯೇ ಕುಳಿತಿದ್ದರೆ ಹೊಟ್ಟೆಯಲ್ಲಿರುವ ಮಗುವಿನ ಚಲನೆ ಸರಿಯಾಗಿ ಆಗುವುದೇ ಇಲ್ಲ. ಇದರಿಂದ ಪ್ರಸವದ ಸಮಯದಲ್ಲಿ ತೊಂದರೆಗಳಾಗಬಹುದು.
ಹುಟ್ಟುವ ಮಗುವಿನ ವಿಷಯದಲ್ಲಿ ಧನಾತ್ಮಕ (ಪೊಸಿಟೀವ್) ಯೋಚನೆಗಳನ್ನೇ ಮಾಡಿ. ಯಾರಾದರೂ ಮಗುವಿನ ಹುಟ್ಟಿಗೆ ಸಂಬಂಧಿಸಿದ ಯಾವುದೇ ಕೆಟ್ಟ ಘಟನೆಗಳನ್ನು ಹೇಳಿದರೆ ಅದನ್ನು ಕೇಳುವುದನ್ನು ತಿರಸ್ಕರಿಸಿ. ಭಯಾನಕವೆನಿಸುವ ಚಲನಚಿತ್ರಗಳನ್ನು ನೋಡಬೇಡಿ. ನಿಮ್ಮ ಮನಸ್ಸು ಹೆದರಿಕೊಳ್ಳುವಂತಹ ಜಾಗಗಳಿಗೂ ಹೋಗಬೇಡಿ. ಸದಾ ಒಳ್ಳೆಯ ಸಂಗೀತಗಳನ್ನು ಕೇಳುತ್ತಿರಿ. ಅದು ಕಿವಿಗಡಚುವಂತಹ ಶಬ್ದವನ್ನು ಮಾಡದಿರಲಿ.

ಆಹಾರದ ಬಗ್ಗೆ ವೈದ್ಯರ ಸಲಹೆ
ನಿಮಗೆ ಆಹಾರದ ಬಗ್ಗೆ ಸಲಹೆಗಳನ್ನು ಮಾಡಿದರೆ ಅದು ತಿನ್ನಬಹುದೇ ಬೇಡವೇ, ಆ ಆಹಾರಕ್ಕೆ ನಿಮ್ಮ ದೇಹ ಸ್ಪಂದಿಸುತ್ತದೆಯೇ ಇಲ್ಲವೇ ಎಂಬುದನ್ನು ನಿಮ್ಮ ವೈದ್ಯರಿಂದಲೇ ಕೇಳಿ ತಿಳಿದ ನಂತರವಷ್ಟೇ ಸೆವಿಸಿ.
ಕೆಲವು ನಿಮಿಷಗಳ ಕಾಲ ಧ್ಯಾನವನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಜೊತೆಗೆ ಪುರಾಣಗಳಂತಹ ಒಳ್ಳೆಯ ವಿಷಯಗಳನ್ನು ಒಳಗೊಂಡಿರುವ ಪುಸ್ತಕಗಳನ್ನು ಓದಿ.

ಧ್ಯಾನ
ಕೆಲವು ನಿಮಿಷಗಳ ಕಾಲ ಧ್ಯಾನವನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಜೊತೆಗೆ ಪುರಾಣಗಳಂತಹ ಒಳ್ಳೆಯ ವಿಷಯಗಳನ್ನು ಒಳಗೊಂಡಿರುವ ಪುಸ್ತಕಗಳನ್ನು ಓದಿ.
ನೀವು ಮಾತನಾಡುವಾಗ ನಿಮ್ಮ ಮಾತು ಹೆಚ್ಚು ಸೂಕ್ಷ್ಮವಾಗಿರಲಿ. ಕೂಗುವುದು, ಇಡೀ ದಿನ ಮಾತಾಡುವುದನ್ನು ಮಾಡಬೇಡಿ. ನೀವು ಏನೆ ಮಾಡಿದರೂ ಅದು ನಿಮ್ಮ ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ನೆನಪಿನಲ್ಲಿಡಿ. ಸಿಟ್ಟು ಮಾಡಿಕೊಳ್ಳುವುದು, ಬೇಜಾರು ಇವುಗಳಿಗೆ ನಿಮ್ಮ ಹತ್ತಿರ ಸುಳಿಯಲೂ ಅವಕಾಶ ಕೊಡಬೇಡಿ.

ಚಿಕಿತ್ಸೆ
ವೈದ್ಯರ ಹತ್ತಿರ ಹೋದಾಗ ನಿಮ್ಮ ಪ್ರಸವಕ್ಕೆ ಸಂಬಂಧಿಸಿದಂತೆ ಏನೇ ಸಂಶಯಗಳಿದ್ದರೂ ಕೇಳಿ ಪರಿಹರಿಸಿಕೊಳ್ಳಿ. ಏಕೆಂದರೆ ಹಲವಾರು ಯೋಚನೆಗಳು ತಲೆಯಲ್ಲಿ ತುಂಬಿದ್ದರೆ ನೀವು ಅದರ ಬಗ್ಗೆಯೇ ಯೋಚಿಸುತ್ತಿದ್ದರೆ ಅದು ನಿಮ್ಮ ಕನಸಿನ ಕಂದಕ್ಕೆ ತೊಂದರೆ ಮಾಡಬಹುದು.
ಹುಟ್ಟುವ ಮಗುವಿನ ಬಗ್ಗೆ ಅಧಿಕ ನಿರೀಕ್ಷೆಗಳನ್ನು ಇಟ್ಟುಕೊಳ್ಳದಿರುವುದೇ ಉತ್ತಮ. ಹುಟ್ಟುವ ಮಗು ಹೆಣ್ಣು ಅಥವಾ ಗಂಡು ಎಂದು ಯೋಚಿಸದೇ ಆದು ಆರೋಗ್ಯವಾಗಿರಲಿ ಎಂದಷ್ಟೇ ಹಾರೈಸುವುದು ಒಳ್ಳೆಯದು. ಆರೋಗ್ಯದಲ್ಲಿ ಯಾವುದೇ ಏರುಪೇರಾದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಗರ್ಭಿಣಿಯ ಜೀವನ ಶೈಲಿ
ನೀವು ಮಾತನಾಡುವಾಗ ನಿಮ್ಮ ಮಾತು ಹೆಚ್ಚು ಸೂಕ್ಷ್ಮವಾಗಿರಲಿ. ಕೂಗುವುದು, ಇಡೀ ದಿನ ಮಾತಾಡುವುದನ್ನು ಮಾಡಬೇಡಿ.
ಸ್ನಾನವನ್ನು ಮಾಡುವಾಗ ಅತೀ ಬಿಸಿ ನೀರನ್ನು ಬಳಸಲೇ ಬೇಡಿ. ಕೇವಲ ಉಗುರು ಬೆಚ್ಚಗಿನ ನೀರಿನಲ್ಲಿಯೇ ಸ್ನಾನ ಮಾಡಬೇಕು. ಸ್ನಾನದ ನಂತರ ಸ್ವಲ್ಪ ಹಣ್ಣಿನ ರಸವನ್ನು ಸೇವಿಸಿ. ಕೆಫೆನ್ ಟೀ ಕಾಫಿಗಳಿಗಿಂತ ಹಾಲನ್ನು ಹೆಚ್ಚಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳಿ.
ಗರ್ಭಿಣಿಯಾದವಳು ಕೇವಲ ಮಗುವಿನ ಬಗ್ಗೆ ಕನಸು ಕಂಡರಷ್ಟೇ ಸಾಲದು. ಆ ಮಗು ಸರಿಯಾಗಿ ಪ್ರಪಂಚವನ್ನು ಅದಕ್ಕಿಂತ ಹೆಚ್ಚಾಗಿ ನಿಮ್ಮನ್ನು 'ಅಮ್ಮಾ' ಎಂದು ಕೂಗಲು ನಿಮ್ಮ ಆಹಾರ ಪದ್ಧತಿ ಹಾಗೂ ಬದುಕುವ ರೀತಿಗಳು ಸರಿಯಾಗಿರಬೇಕು ಎಂಬುದನ್ನು ಒಪ್ಪುತ್ತೀರಲ್ಲವೇ?



Click it and Unblock the Notifications