Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳಿಗೆ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಬಗ್ಗೆ ತಿಳಿಸೋದು ಪೋಷಕರ ಕರ್ತವ್ಯ !
ಮಕ್ಕಳು ತುಂಬಾನೇ ಸೂಕ್ಷ್ಮ ಅವರ ಮನಸ್ಸಿಗೆ ಒಂದು ಚೂರು ನೋವಾದರೂ ಅವರು ಸಹಿಸಿಕೊಳ್ಳೋದಿಲ್ಲ. ಮಕ್ಕಳ ಒಂದು ಹಂತದವರೆಗೂ ರಕ್ಷಣೆ ಮಾಡೋದು ಪೋಷಕರ ಜವಾಬ್ದಾರಿಯಾಗಿದೆ. ಹಾಗಂತ ಪ್ರತಿ ಸಾರಿ ಮಕ್ಕಳ ಹಿಂದೆ ಇರೋದಿಕ್ಕೆ ಆಗೋದಿಲ್ಲ. ಹೀಗಾಗಿ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಪ್ರತಿಯೊಂದು ವಿಚಾರದ ಬಗ್ಗೆ ತಿಳಿ ಹೇಳುವುದು ಪೋಷಕರ ಆದ್ಯ ಕರ್ತವ್ಯವಾಗಿದೆ.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವಾಗೋದನ್ನು ನಾವು ದಿನ ನಿತ್ಯ ಟಿವಿ, ಪೇಪರ್‌ನಿಂದ ಓದಿ ತಿಳಿದುಕೊಳ್ಳುತ್ತೇವೆ. ಏನು ಅರಿಯದ ಕಂದಮ್ಮಗಳ ಮೇಲೆ ಕಾಮುಕರು ಅಟ್ಟಹಾಸ ಮೆರೆಯುತ್ತಾರೆ. ವಿಪರ್ಯಾಸ ಅಂದ್ರೆ ಮಕ್ಕಳಿಗೆ ತಮ್ಮ ಮೇಲೆ ದೌರ್ಜನ್ಯವಾಗ್ತಿದೆ ಅನ್ನೋದು ಗೊತ್ತಾಗಿರೋದಿಲ್ಲ. ಹೀಗಾಗಿ ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಈ ಬಗ್ಗೆ ಶಿಕ್ಷಣ ನೀಡಬೇಕು. ಅದ್ರಲ್ಲೂ ಮುಖ್ಯವಾಗಿ ಒಳ್ಳೆಯ ಸ್ಪರ್ಶ ಯಾವುದು? ಕೆಟ್ಟ ಸ್ಪರ್ಶ ಯಾವುದು ಅನ್ನೋದನ್ನು ತಿಳಿಸಿಕೊಡಬೇಕು.

1. ದೇಹದ ಪ್ರತಿಯೊಂದು ಅಂಗದ ಪರಿಚಯ ಮಾಡಿಕೊಡಿ
ಮಕ್ಕಳಿಗೆ ಸಣ್ಣವಯಸ್ಸಿನಲ್ಲಿ ದೇಹದ ಪ್ರತಿಯೊಂದು ಅಂಗದ ಹೆಸರು ಗೊತ್ತಿರೋದಿಲ್ಲ. ಸಾಮಾನ್ಯವಾಗಿ ಕಣ್ಣು, ಮೂಗು, ಕಿವಿ, ಬಾಯಿ, ಕೈ, ಕಾಲುಗಳಷ್ಟನ್ನೇ ಗುರುತಿಸೋದಕ್ಕೆ ಮಕ್ಕಳು ಶಕ್ತರಾಗಿರುತ್ತಾರೆ. ಗುಪ್ತಾಂಗಳ ಬಗ್ಗೆ ನಾವು ಮಕ್ಕಳಿಗೆ ತಿಳಿಸೋದೇ ಇಲ್ಲ. ಇದು ಪೋಷಕರು ಮಾಡುವ ದೊಡ್ಡ ತಪ್ಪು. ಗುಪ್ತಾಂಗಗಳ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. ಹಾಗೂ ಅದರ ಹೆಸರನ್ನು ಅವರಿಗೆ ತಿಳಿಸಬೇಕು.
2. ದೇಹದ ಖಾಸಗಿತನದ ಬಗ್ಗೆ ಮಕ್ಕಳಿಗೆ ತಿಳಿಸಿ
ಮಕ್ಕಳಿಗೆ ದೇಹದ ಪ್ರತಿಯೊಂದು ಅಂಗದ ಹೆಸರುಗಳನ್ನು ತಿಳಿಸಿದ ನಂತರ ಪೋಷಕರು ಮಾಡಬೇಕಾದ ಕರ್ತವ್ಯ ಎಂದರೆ ಮಕ್ಕಳಿಗೆ ಖಾಸಗಿತನದ ಬಗ್ಗೆ ಮಾಹಿತಿ ನೀಡಬೇಕು. ದೇಹದ ಖಾಸಗಿ ಭಾಗಗಳನ್ನು ಯಾರು ಕೂಡ ಮುಟ್ಟಬಾರದು, ಫೋಟೋ ತೆಗೆಯಬಾರದು ಹಾಗೂ ಅದನ್ನು ಬೇರ್ಯಾರಿಗೂ ತೋರಿಸಬಾರದು ಎಂಬ ಬಗ್ಗೆ ಮಕ್ಕಳಿಗೆ ಹೇಳಿ ಕೊಡಿ.
ಉದಾಹರಣೆಗೆ ಸುಲಭವಾಗಿ ಮಕ್ಕಳಿಗೆ ಅರ್ಥವಾಗಬೇಕೆಂದರೆ ಸ್ವಿಮ್ ಸೂಟ್ ನಿಯಮದ ಬಗ್ಗೆ ತಿಳಿಸಿ. ದೇಹದ ಖಾಸಗಿ ಭಾಗಗಳು ಸ್ವಿಮ್ ಸೂಟ್‌ನಲ್ಲಿ ಕವರ್ ಆಗಿರುತ್ತದೆ. ಎಂಬ ಬಗ್ಗೆ ಮಾಹಿತಿ ನೀಡಿ. ಇದೆಷ್ಟೇ ಅಲ್ಲ, ಮಕ್ಕಳು ಚಿಕ್ಕವರಿರಬೇಕಾದರೆ ಕೂಡ ಮಕ್ಕಳ ಖಾಸಗಿತನ ಕಾಪಾಡುವುದು ಪೋಷಕರ ಕರ್ತವ್ಯ. ಎಲ್ಲರ ಎದುರಿನಲ್ಲಿ ಅವರ ಬಟ್ಟೆ, ಡೈಪರ್ ಬದಲಾವಣೆ ಮಾಡೋದು ಸರಿಯಲ್ಲ. ಚಿಕ್ಕಂದಿನಿಂದಲೇ ನೀವು ಅವರ ಖಾಸಗಿತನ ಕಾಪಾಡಿಕೊಂಡರೆ ದೊಡ್ಡದಾಗುತ್ತಾ ಅವರಿಗೆ ಎಲ್ಲವೂ ಅರ್ಥವಾಗುತ್ತದೆ.
3. ಗುಪ್ತಾಂಗಗಳ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ಮಾತನಾಡಿ
ಅನೇಕ ಬಾರಿ ಗುಪ್ತಾಂಗಗಳ ಬಗ್ಗೆ ಮಾತನಾಡೋದಕ್ಕೆ ಪೋಷಕರು ಹಿಂಜರಿಯುತ್ತಾರೆ. ಇದು ಸರಿಯಲ್ಲ, ಚಿಕ್ಕ ವಯಸ್ಸಿನಲ್ಲೇ ಅವರ ಬಳಿ ಗುಪ್ತಾಂಗಗಳ ಬಗ್ಗೆ ಮಾತನಾಡಬೇಕು. ಸ್ನಾನ ಮಾಡಿಸುವಾಗ, ಸ್ವಿಮ್ಮಿಂಗ್ ಪೂಲ್‌ಗೆ ಕರೆದುಕೊಂಡು ಹೋಗುವ ಸಂದರ್ಭ ಈ ಬಗ್ಗೆ ಮುಕ್ತವಾಗಿ ಮಾತನಾಡಿ. ಹೀಗಾದಾಗ ಅವರಿಗೆ ಭವಿಷ್ಯದಲ್ಲಿ ಏನಾದರೂ ತೊಂದರೆ ಎದುರಾದರೆ ಅವರು ಪೋಷಕರ ಬಳಿ ಹೇಳಿಕೊಳ್ಳೋದಕ್ಕೆ ಹಿಂಜರಿಯೋದಿಲ್ಲ.
4. ಮುಕ್ತವಾಗಿ ಮಾತನಾಡಲು ಪ್ರೋತ್ಸಾಹ ನೀಡಿ
ಅನೇಕ ಬಾರಿ ಲೈಂಗಿಕ ದೌರ್ಜನ್ಯ ನಡೆದ ಸಂದರ್ಭದಲ್ಲಿ ಮಕ್ಕಳು ಪೋಷಕರ ಮುಂದೆ ಮಾತನಾಡೋದಕ್ಕೆ ಹಿಂಜರಿಯುತ್ತಾರೆ. ಚಿಕ್ಕ ಮಕ್ಕಳು ಮಾತ್ರವಲ್ಲ ಕಾಲೇಜಿಗೆ ಹೋಗುವ ಮಕ್ಕಳು ಕೂಡ ಈ ಬಗ್ಗೆ ಮಾತನಾಡೋದಿಲ್ಲ. ಕಾರಣ ಮನೆಯಲ್ಲಿ ಪೋಷಕರು ಇಂತಹ ವಿಚಾರದ ಬಗ್ಗೆ ಚರ್ಚೆ ನಡೆಸೋದಿಲ್ಲ. ಹೀಗಾಗಿ ಪೋಷಕರು ಇಂತಹ ವಿಚಾರಗಳ ಬಗ್ಗೆ ಮುಕ್ತ ಮನಸ್ಸಿನಿಂದ ಮನೆಯಲ್ಲಿ ಮಾತನಾಡುತ್ತಾ ಇರಬೇಕು. ಆಗ ಮಕ್ಕಳಿಗೂ ದೈರ್ಯ ಬರುತ್ತದೆ.
5. ಅಪರಿಚಿತರೊಂದಿಗೆ ಹುಷಾರಾಗಿರುವಂತೆ ತಿಳಿಸಿ
ಮಕ್ಕಳ ಮೇಲೆ ದೌರ್ಜನ್ಯ ಎಸಗುವವರು ಶೇಕಡಾ 90 ರಷ್ಟು ಜನ ಪರಿಚಯಸ್ತರೇ ಹೊರತು ಅಪರಿಚಿತರಲ್ಲ. ಅಪರಿಚಿತರ ಜೊತೆಗೆ ಯಾವುದೇ ಕಾರಣಕ್ಕೂ ಡ್ರಾಪ್ ತೆಗೆದುಕೊಳ್ಳದಂತೆ ತಿಳಿಸಿ. ಇನ್ನೂ ಪೋಷಕರು ಬಿಟ್ಟು ಬೇರ್ಯಾರ ಜೊತೆಗೂ ಒಂಟಿಯಾಗಿ ಹೋಗೋದು ಬೇಡ ಎಂದು ತಿಳಿಸಿ. ಇನ್ನೂ ಮನೆಯಲ್ಲಿ ಬಿಟ್ಟು ಬೇರ್ಯಾರು ಕೊಟ್ಟ ಚಾಕಲೇಟ್, ಐಸ್‌ಕ್ರೀಮ್, ಬೇರ್ಯಾವುದೇ ವಸ್ತುಗಳನ್ನು ತಿನ್ನದಂತೆ ತಿಳಿ ಹೇಳಿ.
6. ಕೆಟ್ಟದಾಗಿ ಸ್ಪರ್ಶಿಸಿದಾಗ ಏನು ಮಾಡಬೇಕೆಂದು ತಿಳಿಸಿ
ಯಾರಾದರೂ ನಿಮ್ಮ ಮಗುವನ್ನು ಕೆಟ್ಟದಾಗಿ ಸ್ಪರ್ಶಿಸಿದರೆ ಏನು ಮಾಡಬೇಕು ಎಂಬ ಬಗ್ಗೆ ಮೊದಲೇ ಮಾಹಿತಿ ನೀಡಿ. ಮೊದಲಿಗೆ ಚೀರಾಡಿ ಇತರರ ಸಹಾಯ ಕೇಳಬೇಕು, ಆ ಜಾಗದಿಂದ ಓಡಿ ಹೋಗಬೇಕು, ಪೋಷಕರನ್ನು ಕರೆಯಬೇಕು, ಕೋಣೆಯ ಒಳಗಿದ್ದರೆ ಅಲ್ಲಿಂದ ಓಡಿ ಬರಬೇಕು. ಸಾಧ್ಯವಾದರೆ ಆ ವ್ಯಕ್ತಿಗೆ ಕಚ್ಚಿ, ಹೊಡೆದು ಹಲ್ಲೆ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಕು. ಆದಷ್ಟು ಹೆಣ್ಣಾಗಲಿ/ಗಂಡಾಗಲಿ ಮಕ್ಕಳಿಗೆ ಸಿಲ್ಫ್ ಡಿಫೆನ್ಸ್ ಬಗ್ಗೆ ಮಾಹಿತಿ ನೀಡಿ.
ಇತ್ತೀಚಿಗೆ ಕಾಲ ಸರಿಯಿಲ್ಲ. ಪ್ರಾಣಿಯನ್ನೇ ಬಿಡದ ಕಾಮುಕರು ಮಕ್ಕಳನ್ನು ಬಿಡ್ತಾರಾ? ಹೀಗಾಗಿ ಮಕ್ಕಳ ಕಾಳಜಿ ಮಾಡೋದು ಪೋಷಕರ ಕರ್ತವ್ಯ. ಈ ರೀತಿಯ ಎಲ್ಲಾ ಶಿಕ್ಷಣವನ್ನು ಮಕ್ಕಳಿಗೆ ಚಿಕ್ಕಂದಿನಲ್ಲೇ ನೀಡಿ.



Click it and Unblock the Notifications

