Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಎದೆಹಾಲನ್ನು ಹೀಗೆ ಸಂಗ್ರಹಿಸಿಟ್ಟರೆ ನೀವು ಕೆಲಸಕ್ಕೆ ಹೋದರೂ ಮಗುವಿಗೆ ಎದೆಹಾಲಿನ ಕೊರತೆಯಾಗಲ್ಲ
ನನ್ನ ಮಗುವಿಗೆ ಎದೆಹಾಲು ಸರಿಯಾಗಿ ಸಿಗಬೇಕು ಎಂದು ಪ್ರತಿಯೊಂದು ತಾಯಿಯೂ ಬಯಸುತ್ತಾಳೆ, ಏಕೆಂದರೆ ಮಗುವಿನ ಅರೋಗ್ಯದ ದೃಷ್ಟಿಯಿಂದ, ಬೆಳವಣಿಗೆಯ ದೃಷ್ಟಿಯಿಂದ ತಾಯಿ ಎದೆಹಾಲು ತುಂಬಾ ಮುಖ್ಯ, ಅಷ್ಟು ಮಾತ್ರ ತಾಯಿಯ ಎದೆ ಹಾಲಿಗೆ ಸಮನಾದ ಪೋಷಕಾಂಶ ಮಗುವಿಗೆ ಸಿಗಲು ಸಾಧ್ಯನೂ ಇಲ್ಲ, ಹಾಗಾಗಿ ತಾಯಿಯ ಎದೆ ಹಾಲಿಗೆ ಅಷ್ಟೊಂದು ಪ್ರಾಮುಖ್ಯತೆ ಇದೆ.
ಹಾಗಾಗಿ ತನ್ನ ಮಗುವಿಗೆ ಎದೆ ಹಾಲಿನ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ತಾಯಿಯ ಕರ್ತವ್ಯ ಕೂಡ ಹೌದು.

ಎದೆಹಾಲನ್ನು ಮಗು ಬಯಸಿದಾಗೆಲ್ಲಾ ಕೊಡಲು ತಾಯಿ ಸಮೀಪದಲ್ಲಿಯೇ ಇದ್ದರೆ ಅಗುತ್ತೆ, ಆದರೆ ಹೊರಗಡೆ ಹೋಗುವವರಿಗೆ ಇದು ಸಾಧ್ಯವಿಲ್ಲ, ಮೆಟರ್ನಿಟಿ ರಜೆಯ ಬಳಿಕ ಕೆಲಸಕ್ಕೆ ಮರಳ ಬೇಕಾಗುತ್ತದೆ, ಮಗುವಿನ ಭವಿಷ್ಯದ ದೃಷ್ಟಿಯಿಂದ ಎದೆಹಾಲು ಹಾಗೂ ಕೆಲಸ ಎರಡೂ ಅ ತಾಯಿಗೆ ಮುಖ್ಯವಾಗಿರುವಾಗ ಮಗುವಿಗೆ ಎದೆ ಹಾಲನ್ನು ಪಂಪ್ ಮಾಡಿಟ್ಟು ಹೋಗುವುದು ಮಾಡುತ್ತಾಳೆ.
ಸಂಗ್ರಹಿಸಿಟ್ಟ ಎದೆಹಾಲು ಕೆಲವೊಮ್ಮೆ ಮಕ್ಕಳು ಕುಡಿಯಲ್ಲ ಏಕೆ?
ಹೀಗೆ ಹಾಲು ಸಂಗ್ರಹಿಸಿಟ್ಟು ನೀಡುವಾಗಲೂ ಕೆಲವೊಮ್ಮೆ ಸಮಸ್ಯೆ ಎದುರಾಗುವುದು, ಆ ಹಾಲನ್ನು ಕುಡಿಯಲು ಮಗು ಇಷ್ಟಪಡಲ್ಲ ಅಥವಾ ಕುಡಿಸಿದಾಗ ವಾಂತಿಯಾಗುತ್ತದೆ, ಏಕೆ ಹೀಗಾಗುತ್ತೆ ಎಂದು ನೋಡುವುದಾದರೆ ಸ್ಟೋರ್ ಮಾಡಿ ಅದನ್ನು ನೀಡುತ್ತಿರುವ ವಿಧಾನ ಸರಿಯಿರಲ್ಲ, ಹಾಗಾಗಿ ಮಗು ಅ ಹಾಲನ್ನು ಕುಡಿಯಲ್ಲ ಅಥವಾ ಕುಡಿದಾಗ ಏನಾದರೂ ಸಮಸ್ಯೆ ಉಂಟಾಗುವುದು.
ಇಂಥ ಸಮಸ್ಯೆ ನಿಮಗೂ ಎದುರಾಗಿದ್ದರೆ ಹಾಲನ್ನು ಹೇಗೆ ಸ್ಟೋರ್ ಮಾಡಬೇಕು ಎಂದು ನೋಡೋಣ:
ಹಾಲನ್ನು ನೀವು ಪಂಪ್ ಮಾಡಿ ತೆಗೆದ ಮೇಲೆ 4 ಗಂಟೆಯವರೆಗೆ ರೂಂನ ಉಷ್ನಾಂಶದಲ್ಲಿ ಇಡಬಹುದು. ಹಾಲಿನ ಬಾಟಲಿ ಮುಚ್ಚಿರಬೇಕು, ಅಲ್ಲದೆ ಗಾಜಿನ ಅಥವಾ ಸ್ಟೀಲ್ ಬಾಟಲಿಯಲ್ಲಿ ಸಂಗ್ರಹಿಸಿಡಬೇಕು.
ಇದಲ್ಲದೆ ನೀವು ಪ್ರಿಡ್ಜ್‌ನಲ್ಲಿ ಇಡುವುದಾದರೆ
ಫ್ರಿಡ್ಜ್‌ನಲ್ಲಿಟ್ಟ ಹಾಲನ್ನು 3-4 ದಿನಗಳವರೆಗೆ ಇಡಬಹುದು.
ಅದೇ ಫ್ರೀಝರ್‌ನಲ್ಲಿ ಇಟ್ಟರೆ 6 ತಿಂಗಳವರೆಗೆ ಇಡಬಹುದು.
ಈ ಹಾಲನ್ನು ನೀಡುವುದರಿಂದ ಮಗುವಿಗೆ ಯಾವುದೇ ಸಮಸ್ಯೆಯಾಗಲ್ಲ, ತಾಯಿ ಕೆಲಸಕ್ಕೆ ತೆರಳಿದಾಗ ಮಗುವಿನ ಆರೈಕೆ ಮಾಡುವವರು ಮಗುವಿಗೆ ಹಾಲನ್ನು ನೀಡಬಹುದು.
ಇನ್ನು ಎದೆಹಾಲಿನ ಕೊರತೆ ಇರುವ ಮಗುವಿಗೂ ಹಾಲನ್ನು ನೀಡಬಹುದು
ಕೆಲವು ತಾಯಂದಿರಿಗೆ ಹೆರಿಗೆಯ ಬಳಿಕ ಎದೆ ಹಾಲಿನ ಉತ್ಪತ್ತಿ ತುಂಬಾ ಕಡಿಮೆ ಇರುತ್ತದೆ. ಇನ್ನು ಕೆಲ ಮಕ್ಕಳಿಗೆ ನಾನಾ ಕಾರಣಗಳಿಂದ ಎದೆ ಹಾಲು ದೊರಕಲ್ಲ (ಹೆರಿಗೆಯಾಗಿ ಮಗುವನ್ನು ಬಿಟ್ಟು ಹೋಗಿದ್ದರೆ, ಹೆರಿಗೆಯ ಸಮಯದಲ್ಲಿ ತಾಯಿ ತೀರಿ ಹೋಗಿದ್ದರೆ, ಅಥವಾ ತಾಯಿಗೆ ಆರೋಗ್ಯ ಸಮಸ್ಯೆಯಿದ್ದಾಗ ಮಗುವಿಗೆ ಎದೆಹಾಲು ಸಿಗಲ್ಲ) ಕೆಲವರಿಗೆ ಎದೆ ಹಾಲಿನ ಉತ್ಪತ್ತಿ ತುಂಬಾನೇ ಚೆನ್ನಾಗಿರುತ್ತೆ, ತನ್ನ ಮಗುವಿನ ಹೊಟ್ಟೆ ತುಂಬಿಸಿ ಕೂಡ ಹಾಲು ಸೋರಿಕೆಯಾಗುತ್ತಿರುತ್ತದೆ, ಅಂಥ ತಾಯಿ ಹಾಲು ಪಂಪ್ ಮಾಡಿ ಇಂಥ ಮಕ್ಕಳಿಗೆ ನೀಡಬಹುದು.
ಫ್ರಿಡ್ಜ್‌ನಲ್ಲಿಟ್ಟ ಹಾಲು ಮಗುವಿಗೆ ಹೇಗೆ ಕೊಡಬೇಕು?
ನೀವು ಹಾಲನ್ನು ಬಿಸಿ ಮಾಡಬೇಡಿ
ಬದಲಿಗೆ ಲೋಟಕ್ಕೆ ಹಾಕಿ ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ಇಟ್ಟು, ಉಗುರು ಬೆಚ್ಚಗೆ ಬಿಸಿಯಾದಾಗ ಕೊಡಿ
ಇನ್ನು ಫ್ರಿಡ್ಜ್‌ನಿಂದ ಹೊರ ತೆಗೆದ ಹಾಲನ್ನು ಮತ್ತೆ ಪ್ರಿಡ್ಜ್‌ನಲ್ಲಿ ಇಡಿ.
ಎದೆಹಾಲನ್ನು ಹೇಗೆ ಸಂಗ್ರಹಿಸಿಡಬೇಕು?
ಹಾಲನ್ನು ಪಂಪ್ ಮಾಡುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆಯಬೇಕು
ಗಾಜಿನ ಡಬ್ಬದಲ್ಲಿ ಹಾಕಿಡಿ
ಇನ್ನು ಸ್ಟೋರೇಜ್ ಭ್ರಿಮ್ ಬಳಸುವುದಾದರೆ ಪೂರ್ತಿ ತುಂಬಿಸಬೇಡಿ, ಮುಕ್ಕಾಲು ಭಾಗವಷ್ಟೇ ತುಂಬಿ ಜಿಪ್ ಕ್ಲೋಸ್ ಮಾಡಿ. ಏಕೆಂದರೆ ಹಾಲು ತಣ್ಣಗಾದಾಗ ಇನ್ನೂ ಸ್ವಲ್ಪ ಜಾಗ ಬೇಕಾಗುವುದು.



Click it and Unblock the Notifications
