Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಾಯಂದಿರೇ.. ಮಕ್ಕಳ ಜಗಳ ನಿಲ್ಲುತ್ತಿಲ್ವಾ? ಮನೆಯಲ್ಲೇ ಮಾಡಿ ಈ ಸಿಂಪಲ್ ಪರಿಹಾರ!
ಮಕ್ಕಳನ್ನು ನೋಡಿಕೊಳ್ಳುವುದು ಮಕ್ಕಳ ಆಟವಲ್ಲ! ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ನಿತ್ಯವೂ ಜಗಳವೇ..! ಅದಂರೆ, ಅಂದರೆ ಒಡಹುಟ್ಟಿದವರ ಪೈಪೋಟಿ. ಈ ಪುಟ್ಟ-ಪುಟ್ಟ ಮಕ್ಕಳು (childrens) ಒಂದಲ್ಲ ಒಂದು ಕಾರಣಕ್ಕೆ ಜಗಳ (siblings fighting) ಮಾಡುತ್ತಲೇ ಇರುತ್ತಾರೆ. ಈ ಕಿತ್ತಾಟಗಳು ಪ್ರೀತಿಯಿಂದ ಇರಬಹುದು, ಇಲ್ಲವೇ ಆಟವಾಡುವ ವಸ್ತುಗಳಿಗಾಗಿ ಇರಬಹುದು. ಅಕ್ಕ ಮತ್ತು ತಂಗಿ, ಅಣ್ಣ ಮತ್ತು ತಂಗಿ, ಅಣ್ಣ ಮತ್ತು ತಮ್ಮ ಜಗಳ ಸಾಮಾನ್ಯವೇ ಬಿಡಿ. ಆದರೆ, ಈ ಜಗಳಗಳು (children fights) ಪರಸ್ಪರ ಅಸೂಯೆಗೆ ಕಾರಣವಾಗವಹುದು. ನಿಮ್ಮ ಮನೆಯಲ್ಲಿಯೂ ಮಕ್ಕಳಲ್ಲಿ ಜಗಳಗಳು ಹೆಚ್ಚುತ್ತಿವೆಯೇ? ಹಾಗಿದ್ದರೆ, ಈ ಸುಲಭ ಟಿಪ್ಸ್ ಪಾಲಿಸಿದರೆ, ಮಕ್ಕಳಲ್ಲಿ ಜಗಳ ಮೂಡುವುದಿಲ್ಲ ಮತ್ತು ಮನೆಯಲ್ಲಿ ಶಾಂತ ರೀತಿಯ ವಾತಾವರಣ ನೆಲೆಸುತ್ತದೆ.
ಮಕ್ಕಳು ಮನೆಗೆ ಸಂತೋಷ ತರುತ್ತಾರೆ. ಮಕ್ಕಳು ಮನೆಯಲ್ಲಿದ್ದಾಗ ಇಡೀ ಮನೆಯ ವಾತಾವರಣವು ಹರ್ಷದಿಂದ ಕೂಡಿರುತ್ತದೆ. ಆದರೆ, ಪ್ರಸ್ತುತ ಸಮಯದಲ್ಲಿ ಸಮಯದ ಕೊರತೆಯಿಂದ ಪೋಷಕರು (parents) ಮಕ್ಕಳನ್ನು ನೋಡಿಕೊಳ್ಳುವುದನ್ನು ಕಷ್ಟಕರ. ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳಿರುವಾಗ ಇದು ಇನ್ನಷ್ಟು ಕಷ್ಟಕರ. ಎರಡು ಅಥವಾ ಮೂರು ಮಕ್ಕಳು ಇದ್ದರೆ, ಆಗಾಗ್ಗೆ ಆ ಮಕ್ಕಳ ನಡುವೆ ಜಗಳ ಸಾಮಾನ್ಯ. ಪೋಷಕರು ಯಾವಾಗಲೂ ಈ ಬಗ್ಗೆ ಚಿಂತೆ ಮಾಡುತ್ತಾರೆ. ಮಕ್ಕಳ ಜಗಳವನ್ನು (Sibling Rivalry) ಪೋಷಕರಾದವರು ಹೇಗೆ ನಿಭಯಿಸಬೇಕು. ಅವರಿಬ್ಬರ ನಡುವೆ ಪ್ರೀತಿ ಹೆಚ್ಚಿಸಲು ಏನು ಮಾಡಬೇಕು ಎಂಬ ಬಗ್ಗೆ ಚಿಂತಿಸುತ್ತಾರೆ. ನೀವು ಈ ಕೆಲವು ಸಲಹೆಗಳನ್ನು ಪಾಲಿಸಿದರೆ, ಮಕ್ಕಳ ಜಗಳಗಳನ್ನು ಸುಲಭವಾಗಿ ಪರಿಹರಿಸಬಹುದು.

ಮಕ್ಕಳು ಜಗಳವಾಡಲು ಏನು ಕಾರಣ?
ಮೊದಲು, ಎಲ್ಲಾ ಪೋಷಕರು ಇದನ್ನು ಅರ್ಥಮಾಡಿಕೊಳ್ಳಬೇಕು. ಮಕ್ಕಳು ಬೆಳೆಯುತ್ತಿರುವಾಗ, ಅವರಿಗೆ ಯಾವುದೇ ವಿಷಯಗಳನ್ನು ನಿಭಾಯಿಸುವ ತಿಳುವಳಿಕೆ ಇರುವುದಿಲ್ಲ. ಇದು ಪೋಷಕರ ಗಮನದಲ್ಲಿರಬೇಕು. ಅದಕ್ಕಾಗಿಯೇ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇಂತಹ (ಜಗಳ) ನಡವಳಿಕೆಯ ಮೊರೆ ಹೋಗುತ್ತಾರೆ. ಮಕ್ಕಳ ನಡುವೆ ಜಗಳವಾದರೆ, ಅದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಇತರೆ ಮಕ್ಕಳಿಗೆ ಹೋಲಿಸುವುದನ್ನು ಬಿಡಬೇಕು. ಮಗುವಿನ ಭಾವನೆಗಳನ್ನು ಅರ್ಥಮಾಡಿಕೊಳ್ಳಿ. ಇದು ಬಹಳ ಮುಖ್ಯವಾಗಿದೆ.
ನೀವು ಮಾಡುವ ಈ ತಪ್ಪಿನಿಂದ ಭಾರೀ ಬೆಲೆ ತೆರಬೇಕಾಗುತ್ತೆ!
ನಿಮ್ಮ ಮಕ್ಕಳು ಪರಸ್ಪರ ಜಗಳವಾಡುತ್ತಿದ್ದರೆ, ಯಾವುದೇ ಒಂದು ಮಗುವಿನ ಪರ ನಿರ್ಧಾರ ತೆಗೆದುಕೊಳ್ಳಬೇಡಿ. ಪೋಷಕರು ಮಾಡುವ ಈ ತಪ್ಪಿನಿಂದ ಭಾರೀ ಬೆಲೆ ತೆರಬೇಕಾಗುತ್ತದೆ. ಮೊದಲು ಇಡೀ ವಿಷಯವನ್ನು ಅರ್ಥಮಾಡಿಕೊಳ್ಳಿ ಮತ್ತು ಬಳಿಕ ಅದನ್ನು ಮಕ್ಕಳಿಗೆ ಸರಿಯಾಗಿ ವಿವರಿಸಿ. ನೀವು ಒಂದು ಮಗುವಿನ ಪರ ಇರುವ ನಿರ್ಧಾರ ತೆಗೆದುಕೊಂಡರೆ, ಅದು ಇನ್ನೊಂದು ಮಗುವಿನ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ತಪ್ಪು ಮಾಡಿದಾಗ ಕ್ಷಮಿಸಿ, ಸರಿಯಾದ ನಡವಳಿಕೆ ಕಲಿಸಿ
ಮಕ್ಕಳಿಗೆ ಆರಂಭದಿಂದಲೇ ಚೆನ್ನಾಗಿ ವರ್ತಿಸಲು ಕಲಿಸಬೇಕು. ಇಬ್ಬರು ಒಟ್ಟಿಗೆ ಕೆಲಸ ಮಾಡಲು ಸಲಹೆ ನೀಡಬೇಕು. ತಪ್ಪು ಮಾಡಿದಾಗ ಕ್ಷಮಿಸಿ ಎಂದು ಹೇಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಮಕ್ಕಳು ಈ ರೀತಿ ವರ್ತಿಸಿದರೆ ಅವರನ್ನು ಹೊಗಳಬೇಕು. ಯಾವುದು ಸರಿ? ಯಾರದು ತಪ್ಪು? ಯಾವುದನ್ನು ಮಾಡಬಾರದು? ಎಂಬುದರ ಬಗ್ಗೆ ಅರಿವು ಮೂಡಿಸಿ.
ಬಾಲ್ಯದಿಂದಲೇ ಕೆಲವು ನಿಯಮ ರೂಪಿಸಿ
ಮಕ್ಕಳಿಗೆ ಶಿಸ್ತನ್ನು ಕಲಿಸುವುದು ಮುಖ್ಯ. ಇದು ಪೋಷಕರ ಮೊದಲ ಆದ್ಯತೆಯಾಗಬೇಕು. ಬಾಲ್ಯದಿಂದಲೇ ಕೆಲವು ನಿಯಮಗಳನ್ನು ರೂಪಿಸಬೇಕು. ಹಾಗೆಯೇ ಮಕ್ಕಳಲ್ಲಿ ವಿಷಯಗಳನ್ನು ಹಂಚಿಕೊಳ್ಳುವ ಅಭ್ಯಾಸವನ್ನು ಬೆಳೆಸಬೇಕು. ಪೋಷಕರು ಮಕ್ಕಳೊಂದಿಗೆ ವ್ಯವಹರಿಸುವಾಗ ಸ್ವಲ್ಪ ತಾಳ್ಮೆಯಿಂದಿರಬೇಕು. ಆಗ ಮಾತ್ರ ಮಕ್ಕಳ ಜಗಳಗಳನ್ನು ಶಾಂತಿಯುತವಾಗಿ ಪರಿಹರಿಸಿ. ನಿಯಮಿತವಾಗಿ ಮನೆಯಲ್ಲಿ ಕೆಲವು ನಿಯಮಗಳನ್ನು ಜಾರಿಗೆ ತರಬೇಕು.
ಒಟ್ಟಾರೆ, ಬೆಳೆಯುತ್ತಿರುವ ಮಕ್ಕಳ ನಡುವೆ ಜಗಳಗಳು ನಡೆಯುತ್ತವೆ. ಪೋಷಕರು ಹೆಚ್ಚಾಗಿ ಇದರ ಬಗ್ಗೆ ಚಿಂತಿಸಬಾರದು. ಆದರೆ, ಇದನ್ನು ಸಕಾಲದಲ್ಲಿ ಸರಿಪಡಿಸಿ, ಇಲ್ಲದಿದ್ದರೆ ಭವಿಷ್ಯದಲ್ಲಿ ಇದು ದೊಡ್ಡ ಸಮಸ್ಯೆಯಾಗಬಹುದು. ನಾವು ಈ ಮೇಲೆ ತಿಳಿಸಿರುವ ಕೆಲವು ಸಲಹೆಗಳ ಮೂಲಕ ನೀವು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.



Click it and Unblock the Notifications











