Latest Updates
-
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ!
3 ವರ್ಷದ ಮಕ್ಕಳು ಚುರುಕಾಗಿರಬೇಕೆಂದರೆ ಹೀಗೆ ಮಾಡಿ
ಸಾಮಾನ್ಯವಾಗಿ ಮಕ್ಕಳಿಗೆ ಮೂರು ವರ್ಷ ತುಂಬಿದಾಗ ಅವರು ನಿಧಾನವಾಗಿ ಎಲ್ಲವನ್ನೂ ಕಲಿಯೋದಕ್ಕೆ ಶುರು ಮಾಡುತ್ತಾರೆ. ಹೆಜ್ಜೆ ಹೆಜ್ಜೆಗೂ ಅದು ಪೋಷಕರಲ್ಲಿ ಪ್ರಶ್ನೆ ಹಾಕುತ್ತದೆ. ಈ ವಯಸ್ಸಿನಲ್ಲಿ ಮಕ್ಕಳಿಗೆ ವಾಕ್ಯವನ್ನು ಪೂರ್ತಿ ಮಾಡಿ ಮಾತನಾಡೋದಕ್ಕೆ ಬರೋದಿಲ್ಲ. ಆದರೂ ಕೂಡ ಸುಮ್ಮನೆ ಕೂರೋದೇ ಇಲ್ಲ. ಏನಾದರೂ ಮಾಡುತ್ತಲೇ ಇರಬೇಕು. ಈ ವಯಸ್ಸಿನಲ್ಲಿ ನಾವು ಮಕ್ಕಳಿಗೆ ಏನೇ ಕಲಿಸಿ ಕೊಟ್ಟರೂ ಅವುಗಳು ಬೇಗ ಕಲಿಯುತ್ತಾರೆ. ಹಾಗಾದ್ರೆ ನಿಮ್ಮ ಮೂರುವರ್ಷದ ಮಗುವಿನ ಜೊತೆಗೆ ನೀವು ದಿನ ಪೂರ್ತಿ ಏನೆಲ್ಲಾ ಚಟುವಟಿಕೆ ಮಾಡಬಹುದು ಅನ್ನೋದನ್ನು ತಿಳಿಯೋಣ.
1. ಮನೆ ಕೆಲಸದಲ್ಲಿ ತೊಡಗಿಸಿಕೊಳ್ಳಿ
ನಿಮ್ಮ ಮೂರು ವರ್ಷದ ಮಗುವು ನೀವು ಯಾವುದೇ ಕೆಲಸವನ್ನು ಮಾಡುತ್ತಿದ್ದರೆ ಅಲ್ಲಿಗೆ ಬಂದು ಕೈ ಜೋಡಿಸುತ್ತದೆ. ಹೆಚ್ಚಿನ ಜನ ಮಕ್ಕಳನ್ನು ದೂರ ಇರಿಸೋದಕ್ಕೆ ಬಯಸುತ್ತಾರೆ. ಹೀಗಾಗಿ ನೀವು ಕೆಲಸ ಮಾಡುತ್ತಿರುವಾಗ ನಿಮ್ಮ ಮಗುವಿಗೂ ಸಣ್ಣಪುಟ್ಟ ಕೆಲಸ ಕೊಡಿ. ಕಸ ಗುಡಿಸೋವಾಗ ಡಸ್ಟ್‌ಬಿನ್‌ಗೆ ಕಸ ಹಾಕಲು, ಹಣ್ಣುಗಳನ್ನು ತೊಳೆಯಲು, ಆಹಾರ ತಯಾರು ಮಾಡುವಾಗ ಚಿಕ್ಕ ಪುಟ್ಟ ಕೆಲಸ ಅವರ ಕೈಯಿಂದ ಮಾಡಿಸಿ. ಆಗ ಅವರಿಗೂ ಖುಷಿಯಾಗುತ್ತೆ, ಜೊತೆಗೆ ಏನನ್ನೋ ಹೊಸತು ಕಲಿತ ಹಾಗೆ ಆಗುತ್ತೆ.

2. ಮಾತನಾಡಿ ಮತ್ತು ಹಾಡು ಹಾಡಿಸಿ
ನಿಮಗೆ ಸಮಯ ಸಿಕ್ಕಾಗ ನಿಮ್ಮ ಮಗುವಿನ ಜೊತೆಗೆ ಕುಳಿತುಕೊಳ್ಳಿ. ಸುಮ್ಮನೆ ಅದರೊಂದಿಗೆ ಮಾತನಾಡಿ. ಆಗ ಮೂರು ವರ್ಷದ ನಿಮ್ಮ ಮಾತನಾಡುವ ಕಲೆ ವೃದ್ಧಿಯಾಗುತ್ತದೆ. ನಿಧಾನವಾಗಿ ಅದು ಪೂರ್ತಿ ವಾಕ್ಯ ಮಾತನಾಡಲು ಕಲಿಯುತ್ತದೆ. ಇನ್ನೂ ಇದರ ಜೊತೆಗೆ ಅದಕ್ಕೆ ಹಾಡೋದನ್ನು ಕಲಿಸಿ. ಇದರಿಂದ ನಿಮ್ಮ ಮಗು ಹೊಸ ಶಬ್ಧಕೋಶಗಳನ್ನು ಕಲಿತು ಕೊಳ್ಳುತ್ತದೆ.
3. ಹೊರಗಡೆ ಕರೆದುಕೊಂಡು ಹೋಗಿ
ಮಕ್ಕಳನ್ನು ಮನೆಯ ಒಳಗಡೆ ಕೂಡಿ ಹಾಕೋದು ಸರಿಯಲ್ಲ. ಹೀಗಾಗಿ ಆಗಾಗ್ಗೆ ಅವರನ್ನು ಹೊರಗಡೆ ಕರೆದುಕೊಂಡು ಹೋಗಿ. ಪಾರ್ಕ್, ಬೀಚ್, ಚಿಕ್ಕ ಟ್ರಿಪ್‌ಗೆ ಹೋಗಿ. ಆಗ ಮಕ್ಕಳಿಗೂ ಹೊಸ ಅನುಭವವಾಗುತ್ತದೆ. ತಾಜಾತನವನ್ನು ಅನುಭವಿಸುತ್ತಾರೆ. ಈ ರೀತಿ ಹೊರಗಡೆ ಹೋಗೋದು ತಾಯಿಯ ಮಾನಸಿಕ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.
4. ಗಣಿತದ ಕೌಶಲ್ಯಗಳನ್ನು ಕಲಿಸಿ
ಹೆಚ್ಚಿನ ಮಕ್ಕಳು ಶಾಲೆಗೆ ಹೋಗುವ ಸಂದರ್ಭದಲ್ಲಿ ಗಣಿತದ ಲೆಕ್ಕಗಳನ್ನು ಮಾಡೋದಕ್ಕೆ ಕಷ್ಟ ಪಡುತ್ತಾರೆ. ಹೀಗಾಗಿ ಚಿಕ್ಕದಿರುವಾಗಲೇ ಅವರಲ್ಲಿ ಗಣಿತದ ಕೌಶಲ್ಯ ಬೆಳೆಯುವಂತೆ ಮಾಡಬೇಕು. ನಿಮ್ಮ ಮೂರು ವರ್ಷದ ಮಗುವಿಗೆ ಸಂಖ್ಯೆಗಳನ್ನು ಎಣಿಸೋದು, ವಸ್ತುಗಳನ್ನು ಎಣಿಸೋದು, ಆಕಾರಗಳನ್ನು, ಬಣ್ಣಗಳನ್ನು ಗುರುತಿಸೋದನ್ನು ಕಲಿಸಿಕೊಡಿ.
5. ಮಗುವಿನೊಂದಿಗೆ ಆಟವಾಡಿ
ಮಕ್ಕಳಿಗೆ ಒಂದು ರಾಶಿ ಆಟದ ಸಾಮಾನು ಕೊಟ್ಟು ನಾವು ಸುಮ್ಮನೆ ಇದ್ದು ಬಿಡುತ್ತೇವೆ. ಈ ರೀತಿಯ ಮಾಡುವುದು ತಪ್ಪು. ನೀವು ಮಕ್ಕಳೊಂದಿಗೆ ಆಟವಾಡೋದಕ್ಕೆ ಸೇರಿಕೊಳ್ಳಿ. ಹೊಸ ಹೊಸ ಆಟಗಳನ್ನು ಮಕ್ಕಳಿಗೆ ಪರಿಚಯ ಮಾಡಿಕೊಡಿ. ಆಗ ಅವರು ಯೋಚಿಸೋದಕ್ಕೆ ಶುರು ಮಾಡುತ್ತಾರೆ. ಇದು ಮಕ್ಕಳ ಮೆದುಳಿಗೆ ಒಳ್ಳೆಯದು.
6. ಇತರ ಮಕ್ಕಳ ಜೊತೆಗೆ ಬೆರೆಯಲು ಬಿಡಿ
ಮಕ್ಕಳು ಪ್ಲೇ ಸ್ಕೂಲ್‌ಗೆ ಹೋಗೋದಕ್ಕೆ ಶುರು ಮಾಡಿದಾಗ ಅವರು ಹೊಸತು ಹೊಸತು ವಿಚಾರಗಳನ್ನು ಕಲಿಯುತ್ತಾರೆ. ಆದರೆ ಕೆಲ ಮಕ್ಕಳು ಯಾರೊಂದಿಗೂ ಬೆರೆಯೋದಕ್ಕೆ ಇಷ್ಟ ಪಡೋದಿಲ್ಲ. ಅವರ ಲೋಕದಲ್ಲೇ ಮುಳುಗಿರುತ್ತಾರೆ. ಮಕ್ಕಳು ಇತರ ಮಕ್ಕಳ ಜೊತೆಗೆ ಸ್ನೇಹ ಬೆಳೆಸುವಂತೆ ನೋಡಿಕೊಳ್ಳಿ. ತಮ್ಮಲ್ಲಿರುವ ವಸ್ತುಗಳನ್ನು ಹಂಚಿಕೊಳ್ಳುವ ಗುಣ ಕಲಿಸಿ. ಇದು ಮುಂದೆ ಅವರ ಜೀವನಕ್ಕೂ ಉಪಯೋಗವಾಗುತ್ತದೆ.
7. ಸ್ವ-ಸಹಾಯ ಕೌಶಲ್ಯಗಳನ್ನು ಕಲಿಸಿ
ನೀವು ಗಮನಿಸಿರಬಹುದು ನಿಮ್ಮ ಮೂರು ವರ್ಷದ ಮಗು ಅನೇಕ ಸಂದರ್ಭದಲ್ಲಿ ನಾನೇ ಇಂತಹದ್ದನ್ನು ಮಾಡುತ್ತೇನೆ ಎಂದು ಹೇಳುತ್ತದೆ. ಆಗ ಪೋಷಕರು ಅದಕ್ಕೆ ಅವಕಾಶ ಮಾಡಿಕೊಡೋದಿಲ್ಲ. ಈ ವಯಸ್ಸಿನಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಅವರಾಗಿಯೇ ಕಲಿತುಕೊಂಡರೆ ಉತ್ತಮ. ಉದಾಹರಣೆಗೆ ತಿನ್ನುವುದು, ಕೈ ತೊಳಯುವುದು, ಹಲ್ಲುಜ್ಜುವುದು, ಶೂ ಲೇಸ್ ಕಟ್ಟುವುದು ಮುಂತಾದವು. ಈ ಅಭ್ಯಾಸಗಳನ್ನು ಅವರು ಈಗಲೇ ಕಲಿತುಕೊಳ್ಳೋದಕ್ಕೆ ಪೋಷಕರು ಅವಕಾಶ ನೀಡಬೇಕು.
ಮೂರು ವರ್ಷದ ನಂತರವೇ ಮಕ್ಕಳು ಎಲ್ಲವನ್ನೂ ಕಲಿಯೋದಕ್ಕೆ ಶುರು ಮಾಡೋದು. ಈ ವಯಸ್ಸಿನಲ್ಲಿ ನಾವು ಏನು ಕಲಿಸಿದರೂ ಅವರು ಅದನ್ನು ಸ್ವೀಕರಿಸುತ್ತಾರೆ. ಹೀಗಾಗಿ ಆದಷ್ಟು ಉತ್ತಮ ಜೀವನ ಮೌಲ್ಯಗಳನ್ನೇ ನಿಮ್ಮ ಮಕ್ಕಳಲ್ಲಿ ತುಂಬಿರಿ.



Click it and Unblock the Notifications
