ಹದಿ ಹರೆಯದ ಮಕ್ಕಳು ಸುಳ್ಳು ಹೇಳಿದಾಗ ಪೋಷಕರು ಏನು ಮಾಡಬೇಕು?

ಸುಳ್ಳು.. ಈ ಜಗತ್ತಿನಲ್ಲಿ ಯಾವ ವ್ಯಕ್ತಿ ಸುಳ್ಳು ಹೇಳೋದಿಲ್ಲ? ಹಾಗೆ ನೋಡೋದಕ್ಕೆ ಹೋದ್ರೆ ಪ್ರತಿಯೊಬ್ಬರೂ ಕೂಡ ಸುಳ್ಳಿನ ಹಿಂದೆ ಬಿದ್ದವರೇ. ಕೆಲವೊಂದು ವಿಚಾರಗಳನ್ನು ಮುಚ್ಚಿ ಹಾಕೋದಕ್ಕಾಗಿ ಸುಳ್ಳು ಹೇಳಬೇಕಾದ ಅನಿವಾರ್ಯತೆ ಮನುಷ್ಯನಿಗೆ ಬಂದೇ ಬರುತ್ತದೆ. ಅದೇ ರೀತಿ ನಿಮ್ಮ ಮನೆಯಲ್ಲಿ ಹದಿ ಹರೆಯದ ಮಕ್ಕಳಿದ್ದರೆ ಅವರು ಸಿಕ್ಕಾಪಟ್ಟೆ ಸುಳ್ಳು ಹೇಳುತ್ತಾರೆ. ಸುಳ್ಳು ಹೇಳೋದು ಅಷ್ಟೇ ಅಲ್ಲ. ಅವರು ನಿಮ್ಮ ಕೈಗೆ ಸುಲಭವಾಗಿ ಸಿಕ್ಕಿ ಬೀಳುತ್ತಾರೆ.

ಹದಿ ಹರೆಯದ ವಯಸ್ಸಿನಲ್ಲಿ ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ನಾವು ಕಾಣುತ್ತೇವೆ. ಈ ಸಂದರ್ಭದಲ್ಲಿ ಅವರ ಮನಸ್ಸಿನಲ್ಲಿ ಆಗುವ ಗೊಂದಲಗಳ ಬಗ್ಗೆ ಖಂಡಿತ ಅವರಿಗೆ ಗೊತ್ತಾಗೋದೇ ಇಲ್ಲ. ಕೆಲವೊಂದು ಸಲ ಚಿಕ್ಕ-ಪುಟ್ಟ ವಿಚಾರಗಳನ್ನು ಮುಚ್ಚಿಡೋದಕ್ಕೆ ಹೋಗಿ ಅದರಿಂದ ಅವರು ಬಹುದೊಡ್ಡ ತೊಂದರೆಗೆ ಸಿಲುಕಿ ಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ಪೋಷಕರು ಏನು ಮಾಡಬೇಕು? ಹದಿ ಹರೆಯದ ಮಕ್ಕಳು ಸುಳ್ಳು ಹೇಳಿದಾಗ ಪೋಷಕರು ಕೈಗೊಳ್ಳಬೇಕಾದ ಕ್ರಮಗಳು ಏನು ಅನ್ನೋದನ್ನು ತಿಳಿಯೋಣ.

How to Respond When You Catch Your Teen Lying in Kannada

1. ಏರು ಧ್ವನಿಯಲ್ಲಿ ಮಾತನಾಡಬೇಡಿ
ನಿಮ್ಮ ಹದಿಹರೆಯದ ಮಗ/ಮಗಳು ಸುಳ್ಳು ಹೇಳಿ ನಿಮ್ಮ ಕೈಗೆ ಸಿಕ್ಕಿ ಬಿದ್ದಾಗ ತಾಳ್ಮೆ ಕಳೆದುಕೊಳ್ಳೋದಕ್ಕೆ ಹೋಗಬೇಡಿ. ಹಾಗೂ ಆಕ್ರಮಣಕಾರಿಯಾಗಿ ವರ್ತಿಸಬೇಡಿ. ಸಮಾಧಾನವಾಗಿ ಅವರನ್ನು ಮಾತನಾಡಿಸಿ. ಅವರು ಯಾಕೆ ಹೀಗೆ ಮಾಡಿದರೂ ಅನ್ನೋದನ್ನು ತಿಳಿದುಕೊಳ್ಳೋದಕ್ಕೆ ಪ್ರಯತ್ನಿಸಿ. ಅವರ ಸಮಸ್ಯೆಯ ಬಗ್ಗೆ ತಿಳಿದುಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಲು ಯತ್ನಿಸಿ.

2. ಅವರ ಜಾಗದಲ್ಲಿ ನಿಂತು ಆಲೋಚಿಸಿ
ನಿಮ್ಮ ಮಕ್ಕಳು ಸುಳ್ಳು ಹೇಳುತ್ತಿದ್ದಾರೆ ಎಂದು ಗೊತ್ತಾದ ತಕ್ಷಣ ಅವರ ಮೇಲೆ ಗದರೋದಕ್ಕೆ ಹೋಗಬೇಡಿ. ದೊಡ್ಡ ಅಪರಾಧ ಮಾಡಿದ್ದಾರೆ ಎಂಬಂತೆ ಅವರನ್ನು ಕಾಣಬೇಡಿ. ನಿಜವಾಗಿಯೂ ಅವರು ನಿಮಗೆ ನೋವು ಮಾಡಬೇಕು ಎಂದು ಸುಳ್ಳು ಹೇಳಿರೋದಿಲ್ಲ. ಅದರ ಹಿಂದೆ ಬೇರೆಯದ್ದೇ ಕಾರಣ ಇರಬಹುದು. ಒಂದು ಸಾರಿ ಅವರ ಜಾಗದಲ್ಲಿ ನಿಂತು ನೀವು ಆಲೋಚಿಸಿ.

3. ಅವರ ಜೊತೆಗೆ ಉತ್ತಮ ಸಂವಹನ ಹಾಗೂ ನಂಬಿಕೆ ಬೆಳೆಸಿ
ಹದಿಹರೆಯದ ಮಕ್ಕಳ ಮೇಲೆ ನೀವು ಒತ್ತಡ ಹೇರಬಾರದು. ಅವರನ್ನು ಅತಿಯಾಗಿ ಶಿಸ್ತು ಶಿಸ್ತು ಎಂದು ಬೇಲಿ ಹಾಕದಿರಿ. ನೀವು ಅವರ ಜೊತೆಗೆ ಗಂಭೀರವಾಗಿ ನಡೆದುಕೊಂಡಾಗ ಅವರು ಎಲ್ಲವನ್ನೂ ಮುಚ್ಚಿ ಇಡೋದಕ್ಕೆ ಯತ್ನಿಸುತ್ತಾರೆ. ಬದಲಾಗಿ ನೀವು ಅವರ ಜೊತೆಗೆ ಸ್ನೇಹಿತರಂತೆ ಇರಲು ಯತ್ನಿಸಿ. ಅವರ ಜೊತೆಗೆ ಉತ್ತಮ ಸಂವಹನ ಬೆಳೆಸಿ. ನಿಮ್ಮ ಮೇಲೆ ಅವರಿಗೆ ನಂಬಿಕೆ ಬರುವಂತೆ ನಡೆದುಕೊಳ್ಳಿ. ಖಂಡಿತ ಅವರು ನಿಮ್ಮ ಬಳಿ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ.

4. ಈ ಮಾತುಗಳನ್ನು ಹೇಳದಿರಿ
ಹೆಚ್ಚಾಗಿ ಅಪ್ಪ- ಅಮ್ಮಾ ಏನು ಹೇಳುತ್ತಾರೋ? ಬೈಯುತ್ತಾರೋ ಗದರುತ್ತಾರೋ ಎಂಬ ಭಯದಿಂದಲೇ ಮಕ್ಕಳು ಸುಳ್ಳು ಹೇಳುತ್ತಾರೆ. ನಿಮ್ಮ ಮಗು ಸುಳ್ಳು ಹೇಳಿ ಸಿಕ್ಕಿ ಬಿದ್ದಾಗ ಈ ಪ್ರಶ್ನೆಗಳನ್ನು ಕೇಳಲೇಬೇಡಿ. ಅವು ಯಾವುದೆಂದರೆ :
* ನನ್ನ ಬಳಿ ಸುಳ್ಳು ಹೇಳಲು ನಿನಗೆಷ್ಟು ದೈರ್ಯ
* ಈ ಸುಳ್ಳಿನಿಂದ ನೀನು ತಪ್ಪಿಸಿಕೊಳ್ಳಬಹುದು ಅಂದುಕೊಂಡಿದ್ದೀಯಾ?
* ನಾನು ನಿನ್ನಿಂದ ನಿರಾಶೆಗೊಂಡಿದ್ದೇನೆ
* ನೀನು ದೊಡ್ಡ ಸುಳ್ಳುಗಾರ
* ನಿನಗೆ ಶಿಕ್ಷೆ ಆಗಲೇಬೇಕು

5. ಮಕ್ಕಳಿಗೆ ಪ್ರಾಮಾಣಿಕತೆಯನ್ನು ಕಲಿಸಲು ಯತ್ನಿಸಿ
ಪ್ರಾಮಾಣಿಕತೆ ಯಾರಿಗೂ ಹುಟ್ಟಿನಿಂದ ಬರೋದಿಲ್ಲ. ನೀವು ಪ್ರಾಮಾಣಿಕತೆಯನ್ನು ಮಕ್ಕಳಿಗೆ ಕಲಿಸದ ಹೊರತಾಗಿ ಅದನ್ನು ಮಕ್ಕಳಿಂದ ನಿರೀಕ್ಷೇ ಮಾಡುವುದು ಕೂಡ ಸರಿಯಲ್ಲ. ಹೀಗಾಗಿ ಚಿಕ್ಕಂದಿನಿಂದಲೇ ಮಕ್ಕಳಿಗೆ ಕೆಲವೊದು ಪ್ರಾಮಾಣಿಕತೆಯ ಪಾಠವನ್ನು ಕಲಿಸಿ.
* ಪ್ರಾಮಾಣಿಕತೆ ಎಷ್ಟು ಮುಖ್ಯವೆಂದು ಅರ್ಥೈಸಿ
* ಸುಳ್ಳು ಹೇಳುವುದರಿಂದ ಯಾವ ರೀತಿ ಋಣಾತ್ಮಕ ಪರಿಣಾಮ ಬೀಳಲಿದೆ ಅನ್ನೋದನ್ನು ತಿಳಿಸಿ
* ಸತ್ಯ ಮಾತನಾಡಿದಾಗ ಅವರನ್ನು ಪ್ರಶಂಸಿಸಿ
* ಸುಳ್ಳಿನ ಹೊರತಾಗಿ ಸಮಸ್ಯೆಗಳನ್ನು ಪರಿಹರಿಸೋದು ಹೇಗೆ ಅನ್ನೋದನ್ನು ತಿಳಿಸಿಕೊಡಿ
* ಉದಾಹರಣೆಗಳನ್ನು ನೀಡಿ

ಸತ್ಯವನ್ನು ಮುಚ್ಚಿ ಹಾಕೋದಕ್ಕೆ ಸುಳ್ಳೊಂದೇ ದಾರಿಯಲ್ಲ. ಅದರ ಹೊರತಾಗಿ ಅನೇಕ ದಾರಿಗಳಿದೆ. ಹೀಗಾಗಿ ಹದಿಹರೆಯದ ಮಕ್ಕಳು ಸುಳ್ಳು ಹೇಳಿದಾಗ ಅವರ ಮೇಲೆ ಗದರೋದನ್ನು ಬಿಟ್ಟು ಅವರಿಗೆ ಯಾವ ರೀತಿ ತಿದ್ದಿ ಬುದ್ಧಿ ಹೇಳಬಹುದು ಅನ್ನೋದ್ರ ಬಗ್ಗೆ ಯೋಚಿಸಿ.

English summary

How to Respond When You Catch Your Teen Lying in Kannada

These are the tips to Respond When You Catch Your Teen Lying.
X
Desktop Bottom Promotion