Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಮಗುವಿನಲ್ಲಿ ಕ್ರಿಯೇಟಿವಿಟಿ ಹೆಚ್ಚಾಗುವಂತೆ ಮಾಡೋದು ಹೇಗೆ?
ಪ್ರತಿಯೊಬ್ಬ ತಂದೆ-ತಾಯಿಗೂ ತನ್ನ ಮಗು ಕ್ರಿಯೇಟಿವ್ ಆಗಿರಬೇಕು ಅನ್ನೋ ಆಸೆ ಇರುತ್ತದೆ. ಆದರೆ ಆ ಸೃಜನಾತ್ಮಕತೆ ಎಲ್ಲರಲ್ಲೂ ಇರೋದಿಲ್ಲ. ಆದರೆ ಮಗುವಿನಲ್ಲಿ ಸೃಜನಾತ್ಮಕ ಕಲೆಯನ್ನು ತುಂಬುವ ಕರ್ತವ್ಯ ಪೋಷಕರದ್ದು. ಚಿಕ್ಕ ವಯಸ್ಸಿನಲ್ಲೇ ನಿಮ್ಮ ಮಗುವಿನಲ್ಲಿ ಕ್ರಿಯೇಟಿವಿಟಿ ಹೆಚ್ಚಾಗಬೇಕೆಂದರೆ ನೀವು ಅವರಿಂದ ಕೆಲವೊಂದು ಚಟುವಟಿಕೆಗಳನ್ನು ಮುಖ್ಯವಾಗಿ ಮಾಡಿಸಬೇಕಾಗುತ್ತದೆ. ಹಾಗಾದ್ರೆ ಆ ಚಟುವಟಿಕೆಗಳು ಯಾವುದು ಅನ್ನೋದನ್ನು ತಿಳಿದುಕೊಳ್ಳೋಣ.
1. ಅವರಿಗಾಗಿ ಒಂದು ಡ್ರಾಯಿಂಗ್ ಪುಸ್ತಕ ಸಿದ್ಧಪಡಿಸಿ
ಚಿತ್ರಕಲೆ ಮಕ್ಕಳಲ್ಲಿ ಸೃಜನತ್ಮಕ ಕಲೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚಿಕ್ಕ ವಯಸ್ಸಿನಲ್ಲೇ ನಿಮ್ಮ ಮಗುವಿಗಾಗಿ ಒಂದು ಡ್ರಾಯಿಂಗ್ ಪುಸ್ತಕವನ್ನು ಎತ್ತಿಡಿ. ಅದ್ರಲ್ಲಿ ಪ್ರತಿನಿತ್ಯ ಚಿತ್ರಗಳನ್ನು ಬಿಡಿಸೋದನ್ನು ಅಭ್ಯಾಸ ಮಾಡಿಸಿ. ದಿನಕಳೆದಂತೆ ಅವರಿಗೆ ಬಣ್ಣಗಳ ಪರಿಚಯ ಮಾಡಿಸಿ. ಅವರು ಬಿಡಿಸಿದ ಚಿತ್ರಗಳಿಗೆ ಅವರ ಕೈಯಾರೆ ಬಣ್ಣ ತುಂಬಾಲು ಹೇಳಿ. ಇದರಿಂದ ಅವರ ಕ್ರಿಯಾತ್ಮಕತೆ ಹೆಚ್ಚಾಗುತ್ತಾ ಹೋಗುತ್ತದೆ.

2. ಹಳೆಯ ವಸ್ತುಗಳಿಂದ ಹೊಸ ವಸ್ತುವನ್ನು ಸೃಷ್ಟಿಸಲಿ
ಮನೆಯಲ್ಲಿ ಹಳೆಯದಾದ ಯಾವುದೇ ವಸ್ತುವಾದರೂ ನಾವು ಅದನ್ನು ಎಸೆಯುತ್ತೇವೆ. ಆದರೆ ಹಾಗೆ ಮಾಡುವುದು ತಪ್ಪು. ಕಸದಿಂದ ರಸ ಮಾಡುವ ಕಲೆ ನಮಗೆ ಗೊತ್ತಿರಬೇಕು. ನಮ್ಮ ಮಕ್ಕಳಿಗೂ ನಾವು ಅದನ್ನೇ ಕಲಿಸಿ ಕೊಡಬೇಕು. ಹಳೆಯ ವಸ್ತುಗಳಿಗೆ ಹೊಸ ರೂಪ ಕೊಟ್ಟು ಹೊಸ ವಸ್ತು ಸೃಷ್ಟಿಸೋದನ್ನು ಕಲಿಸಿ. ಉದಾಹರಣೆಗೆ ಪೇಪರ್ ಕ್ರಾಫ್ಟ್, ಬಾಟಲ್ ನಿಂದ ಹೂ ಕುಂಡವನ್ನು ಸೃಷ್ಟಿ ಮಾಡುವುದು ಇತ್ಯಾದಿ.
3. ಪರಿಸರದ ಜೊತೆಗೆ ಸಮಯ ಕಳೆಯಲಿ
ಸಿಟಿಯಲ್ಲಿ ಬೆಳೆದ ಮಕ್ಕಳನ್ನು ತಂದೆ ತಾಯಿ ಹೊರಗಡೆ ಕಳಿಸೋದೇ ಇಲ್ಲ. ಸಿಕ್ಕಾಪಟ್ಟೆ ಆಟದ ಸಾಮಾನು ತಂದುಕೊಟ್ಟು ಮನೆಯ ಒಳಗಡೆ ಅವರನ್ನು ಕೂಡಿ ಹಾಕುತ್ತೇವೆ. ಇದರಿಂದ ಅವರ ಯೋಚನಾ ಸಾಮರ್ಥ್ಯ ನಾಲ್ಕು ಗೋಡೆಗಷ್ಟೇ ಸೀಮಿತವಾಗಿರುತ್ತದೆ. ಹೀಗಾಗಿ ಸಮಯ ಸಿಕ್ಕಾಗಲೆಲ್ಲಾ ನಿಮ್ಮ ಮಗುವನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಬನ್ನಿ. ಪರಿಸರದ ಜೊತೆಗೆ ಕಾಲ ಕಳೆಯಲಿ. ಆಗ ಅವರ ಕ್ರಿಯಾತ್ಮಕತೆ ಹೆಚ್ಚಾಗುತ್ತದೆ.
4. ವಿಭಿನ್ನವಾಗಿರೋದು ಎಷ್ಟು ಮುಖ್ಯ ಎಂದು ಅರ್ಥ ಮಾಡಿಸಿ
ನಾವು ಎಲ್ಲರಂತಿದ್ದರೆ ನಮಗೂ ಹಾಗೂ ಇತರರಿಗೂ ವ್ಯತ್ಯಾಸ ಇರೋದಿಲ್ಲ. ನಮ್ಮನ್ನು ಯಾರಾದರೂ ಗುರುತಿಸಬೇಕೆಂದರೆ ನಾವು ಇತರರಿಗಿಂತ ಯಾವಾಗಲೂ ವಿಭಿನ್ನ ಎಂದೆನಿಸಿಕೊಳ್ಳಬೇಕು. ನಿಮ್ಮ ಮಗುವಿನಲ್ಲೂ ವಿಶೇಷ ಕೌಶಲ್ಯಗಳನ್ನು ಬೆಳೆಸಿ ಹಾಗೂ ಅದು ಎಷ್ಟು ಮುಖ್ಯ ಅನ್ನೋದನ್ನು ಅವರಿಗೆ ಅರ್ಥ ಮಾಡಿಸಿ.
5. ಮಗುವಿಗೆ ಹಾಡು ಕೇಳುವ ಅಭ್ಯಾಸ ಮಾಡಿಸಿ
ಹಾಡಿಗೆ ಎಂತಹ ಕಲ್ಲು ಮನಸ್ಸನ್ನು ಕರಗಿಸುವ ಶಕ್ತಿ ಇದೆ. ಹಾಡು ಕೇಳಿದ ತಕ್ಷಣ ನಮ್ಮಲ್ಲಿ ಒಂದು ರೀತಿಯ ಹೊಸ ಚೈತನ್ಯ ಆವರಿಸುತ್ತದೆ. ನಿಮ್ಮ ಮಗುವಿಗೆ ಚಿಕ್ಕ ವಯಸ್ಸಿನಲ್ಲೇ ಹಾಡು ಕೇಳುವ ಅಭ್ಯಾಸವನ್ನು ಮಾಡಿಸಿ. ಹಾಡು ಕೇಳಿದಾಗ ಅವರಿಗೂ ಖುಷಿಯಾಗುತ್ತೆ, ಅವರು ಕುಣಿಯುತ್ತಾರೆ. ಆ ಹಾಡನ್ನು ಹಾಡೋದಕ್ಕೆ ಪ್ರಯತ್ನಿಸುತ್ತಾರೆ. ಆ ಹಾಡಿನ ಸ್ವಾರಸ್ಯ ಏನು ಅನ್ನೋದನ್ನು ಅರ್ಥ ಮಾಡಿಸಿ. ನಿಧಾನವಾಗಿ ಸಾಹಿತ್ಯ ಬರೆಯೋದನ್ನು ಅಭ್ಯಾಸ ಮಾಡಿಸಿ.
6. ಆತ್ಮ ವಿಶ್ವಾಸ ಹೆಚ್ಚಿಸಿ
ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಒಂದು ರೀತಿ ಭಯ ಇದ್ದೇ ಇರುತ್ತದೆ. ಅವರು ಯಾವ ಕೆಲಸವನ್ನೂ ಮಾಡೋದಕ್ಕೂ ಮುಂದೆ ಹೋಗೋದಿಲ್ಲ. ಇಂತಹ ಸಂದರ್ಭದಲ್ಲಿ ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬುವುದು ಪೋಷಕರ ಕರ್ತವ್ಯ. ನಿಮ್ಮ ಮಗು ಯಾವುದೇ ವಿಚಾರಕ್ಕೂ ಅಂಜದೇ ಅಳುಕದೇ ಇರುವಂತಹ ಆತ್ಮ ವಿಶ್ವಾಸವನ್ನು ಅವರಲ್ಲಿ ತುಂಬಿರಿ. ದೊಡ್ಡದಾದ ಮೇಲೂ ಈ ಆತ್ಮವಿಶ್ವಾಸ ಅವರಲ್ಲಿ ಅಚಲವಾಗಿರುತ್ತದೆ.
7. ಪೋಷಕರೇ ಮಕ್ಕಳಿಗೆ ಮಾದರಿಯಾಗಲಿ
ಪೋಷಕರಾಗಿ ನಿಮ್ಮಲ್ಲಿ ಕ್ರಿಯಾತ್ಮಕತೆ ಇದ್ದರೆ ಖಂಡಿತ ನಿಮ್ಮ ಮಕ್ಕಳಿಗೂ ಅದು ಬಳುವಳಿಯಾಗಿ ಬಂದಿರುತ್ತದೆ. ಹೀಗಾಗಿ ನೀವು ನಿಮ್ಮ ಪುಟ್ಟ ಮಗುವಿನ ಜೊತೆಗೆ ಡ್ರಾಯಿಂಗ್ ಮಾಡಬೇಕು, ಪಜಲ್ ಗಳನ್ನು ಜೋಡಿಸಬೇಕು, ಆಟವಾಡಬೇಕು, ಡಾನ್ಸ್ ಮಾಡಬೇಕು. ಆಗ ನಿಮ್ಮ ಮಗುವಿಗೂ ಆಸಕ್ತಿ ಹೆಚ್ಚಾಗುತ್ತದೆ. ಹೀಗಾಗಿ ಪೋಷಕರು ಮಕ್ಕಳಿಗೆ ಮಾದರಿಯಾಗಿದ್ದರೆ ತುಂಬಾನೇ ಒಳ್ಳೆಯದು.
ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಹಾಗೆ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ನೀವು ಸೃಜನಾತ್ಮಕತೆಯ ಬೀಜ ಬಿತ್ತಬೇಕು. ಇದು ಅವರ ಭವಿಷ್ಯ ಬೆಳಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.



Click it and Unblock the Notifications












