Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಡೆಂಗ್ಯೂವಿನಿಂದ ಮಕ್ಕಳ ರಕ್ಷಣೆಗೆ ಹೀಗೆ ಮುನ್ನೆಚ್ಚರಿಕೆವಹಿಸಬೇಕು: ಮಕ್ಕಳ ತಜ್ಞೆ ಶಿಲ್ಪಾ ಪಾಂಡ್ಯ
ಮಳೆಯಿಲ್ಲ ಎಂದು ಬೊಬ್ಬೆ ಹಾಕುತ್ತಿದ್ದೇವೆ, ಆದರೆ ರಾಜ್ಯದಲ್ಲಿ ಈಗ ಎಲ್ಲಡೆ ತುಂಬಾ ಮಳೆ ಬೀರುತ್ತದೆ. ಮಳೆ ಬರುತ್ತಿದ್ದಂತೆಯೇ ಡೆಂಗ್ಯೂ ಭೀತಿ ಆವರಿಸಿದೆ. ಜನವರಿ 1 ರಿಂದ ಮೇ 14,2024ರ ವರೆಗೆ 2,877 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದೆ.
ಈ ವರ್ಷ ವಿಶ್ವ ಡೆಂಗ್ಯೂ ನಿಯಂತ್ರಣವಾದ ಇಂದು "ಸಮುದಾಯದೊಂದಿಗೆ ಸಂಪರ್ಕ ಸಾಧಿಸಿ, ಡೆಂಗ್ಯೂ ನಿಯಂತ್ರಿಸಿ" ಎಂಬ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ. ಡೆಂಗ್ಯೂನಿಂದ ಮಕ್ಕಳ ರಕ್ಷಣೆಗೆ ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ಮಕ್ಕಳ ತಜ್ಞರಾದ ಶಿಲ್ಪಾ ಪಾಂಡ್ಯ ಅವರು ಈ ಸಲಹೆ ನೀಡಿದ್ದಾರೆ ನೋಡಿ:

ಡೆಂಗ್ಯೂ ಜ್ವರ ಹರಡುವುದು ಹೇಗೆ?
ಡೆಂಗ್ಯೂ ಜ್ವರ ಸೊಳ್ಳೆ ಕಚ್ಚುವುದರಿಂದ ಬರುವ ಕಾಯಿಲೆಯಾಗಿದೆ. ಈಡಿಸ್ ಈಜಿಪ್ಟಿ ಸೊಳ್ಳೆ ಕಡಿತದಿಂದ ಈ ಡೆಂಗ್ಯೂ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಹಗಲಿನ ವೇಳೆ ಅಗತ್ಯ ರಕ್ಷಣಾ ಕ್ರಮಗಳನ್ನು ತೆಗೆಕೊಳ್ಳುವುದು ಅತ್ಯಗತ್ಯ. ಡೆಂಗ್ಯೂ ಜ್ವರವು ಮಕ್ಕಳು, ವಯಸ್ಕರಲ್ಲಿ ಕಾಣಬರುವ ಸಾಧ್ಯತೆ ಇರಲಿದೆ. ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ಮಕ್ಕಳಲ್ಲಿ ಈ ಕಾಯಿಲೆ ಕಂಡುಬಂದಲ್ಲಿ ಹೆಚ್ಚಿನ ಕಾಳಜಿವಹಿಸುವ ಅಗತ್ಯವಿರುತ್ತದೆ ಎನ್ನುತ್ತಾರೆ ತಜ್ಞೆ ಶಿಲ್ಪಾ ಪಾಂಡ್ಯ.
ಮಕ್ಕಳಿಗೆ ಡೆಂಗ್ಯೂ ಬಂದರೆ ಕಂಡು ಬರುವ ಲಕ್ಷಣವೇನು?
ಆಗಾಗ ಜ್ವರ, ತಲೆನೋವು ಕಾಣಿಸಿಕೊಳ್ಳುವುದು
ಜಠರದಲ್ಲಿ ಉರಿತದ ಸಮಸ್ಯೆ
ವಾಕರಿಕೆ, ವಾಂತಿ, ಹೊಟ್ಟೆ ನೋವು ಮತ್ತು ಕೆಲವೊಮ್ಮೆ ಬೇಧಿ
ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದಲ್ಲಿ ಮೊದಲ 2 ರಿಂದ 4 ವಾರಗಳ ಕಾಲ ಹೆಚ್ಚು ಜಾಗ್ರತೆವಹಿಸಬೇಕು. ಮಗುವನ್ನು ಮಕ್ಕಳ ತಜ್ಞರಿಗೆ ತೋರಿಸಿ. ಮಗುವಿಗೆ ಸಾಕಷ್ಟು ವಿಶ್ರಾಂತಿ ಜೊತೆಗೆ ನೀರು ಕುಡಿಯುವಂತೆ ಕಾಳಜಿವಹಿಸಬೇಕು.
ಡೆಂಗ್ಯೂ ಕುರಿತು ತಪ್ಪು ಕಲ್ಪನೆಗಳಿವು
ಡೆಂಗ್ಯೂ ಕಲುಷಿತ ನೀರಿನಿಂದ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡುತ್ತದೆ.
ಸತ್ಯಾಂಶ: ಡೆಂಗ್ಯೂ ಸೊಳ್ಳೆ ಕಡಿತದಿಂದ ಮಾತ್ರ ಹರಡುತ್ತದೆ. ಆದರೂ ಸೊಳ್ಳೆಗಳು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.
ಡೆಂಗ್ಯೂ ಸೋಂಕಿತ ತಾಯಂದಿರು ಹಾಲುಣಿಸಬಾರದು.
ಸತ್ಯಾಂಶ: ಡೆಂಗ್ಯೂ ವೈರಸ್ ಎದೆ ಹಾಲಿನ ಮೂಲಕ ಹರಡುವುದಿಲ್ಲ.
ಸೋಂಕಿತ ಮಗುವಿನ ಸಂಪರ್ಕದಿಂದ ಮಕ್ಕಳಿಗೆ ಡೆಂಗ್ಯೂ ಬರಬಹುದು.
ಸತ್ಯಾಂಶ: ಡೆಂಗ್ಯೂ ಸಂಪರ್ಕದಿಂದ, ಬಟ್ಟೆ ಅಥವಾ ಪಾತ್ರೆಗಳಂತಹ ವಸ್ತುಗಳನ್ನು ಹಂಚಿಕೊಳ್ಳುವ ಮೂಲಕ ಹರಡುವುದಿಲ್ಲ.
ಡೆಂಗ್ಯೂ ಸೋಂಕಿನಿಂದ ರೋಗನಿರೋಧಕ ಶಕ್ತಿ ಬರುತ್ತದೆ.
ಸತ್ಯಾಂಶ: ಯಾವುದೇ ರೋಗನಿರೋಧಕ ಶಕ್ತಿ ಸಿಗುವುದಿಲ್ಲ. ಜನರು ಡೆಂಗ್ಯೂನಿಂದ ಪುನಃ ಸೋಂಕಿಗೆ ಒಳಗಾಗಬಹುದು.
ಮಕ್ಕಳಲ್ಲಿ ಕಂಡುಬರುವ ರೋಗಲಕ್ಷಣಗಳಿವು
ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಎಚ್ಚೆತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಒಳಿತು.
* ಊಟ ಸೇವನೆಗೆ ನಿರಾಕರಿಸುವುದು ಅಥವಾ ವಾಂತಿ ಮಾಡುವುದು.
* ನಿದ್ರಾಹೀನತೆ ಅಥವಾ ಚಡಪಡಿಕೆಗೆ ಒಳಗಾಗುವುದು.
* ಮೂಗು ಮತ್ತು ಒಸಡುಗಳಲ್ಲಿ ರಕ್ತಸ್ರಾವ, ವಾಂತಿ ಅಥವಾ ಮಲದಲ್ಲಿ ರಕ್ತಸ್ರಾವ ಕಂಡುಬರುವುದು.
* ಹೊಟ್ಟೆ ನೋವು
* ಚರ್ಮದ ಬಣ್ಣ ಬದಲಾವಣೆ, ಕೈ ಮತ್ತು ಪಾದಗಳು ತಣ್ಣಗಾಗುವುದು.
* ಕನಿಷ್ಟ 6 ಗಂಟೆಗಳ ಕಾಲ ಮೂತ್ರ ಕಟ್ಟಿಕೊಂಡಿರುವುದು.
ಡೆಂಗ್ಯೂನಿಂದ ಮಕ್ಕಳನ್ನು ರಕ್ಷಿಸಿಕೊಳ್ಳಲು ಪೋಷಕರಿಗೆ ಸಲಹೆಗಳು
ಪೋಷಕರು ತಮ್ಮ ಮಕ್ಕಳನ್ನು ಡೆಂಗ್ಯೂನಿಂದ ರಕ್ಷಿಸಿಕೊಳ್ಳಲು ಹಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಅವುಗಳೆಂದರೆ
•ಸೊಳ್ಳೆಗಳನ್ನು ದೂರವಿಡಲು ಸೊಳ್ಳೆ ನಿವಾರಕಗಳು ಮತ್ತು ಸೊಳ್ಳೆ ಬತ್ತಿಗಳನ್ನು ಬಳಸುವುದು.
•ಬೆಳಗ್ಗೆ ಮತ್ತು ಮುಸ್ಸಂಜೆ ವೇಳೆ ಸೊಳ್ಳೆಗಳು ಹೆಚ್ಚು, ಹೀಗಾಗಿ ಮಕ್ಕಳು ಮೈತಂಬಾ ಉಡುಪುಗಳನ್ನು ಧರಿಸುವಂತೆ ನೋಡಿಕೊಳ್ಳಬೇಕು.
•ಮನೆಯ ಆವರಣದಲ್ಲಿ ನೀರು ನಿಂತಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಮನೆಯ ಸುತ್ತ ನಿಂತ ನೀರನ್ನು ಸ್ವಚ್ಛಗೊಳಿಸುವುದು ಪ್ರಮುಖವಾದುದು.
•ಎರಡು ತಿಂಗಳೊಳಗಿನ ಶಿಶುಗಳಿಗೆ ಸೊಳ್ಳೆ ಪರದೆಗಳನ್ನು ಬಳಸುವುದು ಮುಖ್ಯ.
•ಸೊಳ್ಳೆಗಳು ಹೆಚ್ಚಿರುವ ಮುಂಜಾನೆ ಮತ್ತು ಮುಸ್ಸಂಜೆ ಸಮಯದಲ್ಲಿ ಮಕ್ಕಳು ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಪೋಷಕರು ನೋಡಿಕೊಳ್ಳಬೇಕು.
•ಸೊಳ್ಳೆ ಕಡಿತ ಮತ್ತು ನೈರ್ಮಲ್ಯ ಅಭ್ಯಾಸಗಳ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಬೇಕು ಎನ್ನುವುದು ತಜ್ಞರ ಸಲಹೆ.



Click it and Unblock the Notifications
