Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಹೆರಿಗೆಯ ರಜೆಯ ಬಳಿಕ ಕೆಲಸದ ಜೊತೆಗೆ ಮಗುವನ್ನು ನೋಡಿಕೊಳ್ಳೋದಕ್ಕೆ ಕಷ್ಟ ಆಗ್ತಿದ್ಯಾ?
ತಾಯ್ತನ ಅನ್ನೋದೇ ಹೆಣ್ಣು ಮಕ್ಕಳಿಗೆ ಒಂದು ರೀತಿ ಸುಂದರ ಅನುಭವ ಇದ್ದ ಹಾಗೆ. ಆದರೆ ಮಗು ಜನಿಸಿದ ನಂತರ ಒಂದು ಹೆಣ್ಣಿನ ಬದುಕಿನಲ್ಲಿ ಅನೇಕ ಬದಲಾಗುತ್ತದೆ. ಅದ್ರಲ್ಲೂ ಕೆಲಸಕ್ಕೆ ಹೋಗುವ ಹೆಣ್ಣು ಮಕ್ಕಳಿಗಂತೂ ತುಂಬಾನೇ ಕಷ್ಟ.
ಒಂದು ಕಡೆಯಿಂದ ಮಗು ಹಾಗೂ ಮತ್ತೊಂದು ಕಡೆಯಿಂದ ಕೆಲಸವನ್ನು ಬ್ಯಾಲೆನ್ಸ್ ಮಾಡೋದು ಅಂದ್ರೆ ಸುಲಭದ ಮಾತಲ್ಲ. ಆದ್ರೆ ಈ ಟಿಪ್ಸ್ ಗಳನ್ನು ಪಾಲಿಸಿದ್ರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ. ಅಷ್ಟಕ್ಕು ಮಗು ಹಾಗೂ ಕೆಲಸವನ್ನು ಒಟ್ಟಾಗಿ ಬ್ಯಾಲೆನ್ಸ್ ಮಾಡೋದು ಹೇಗೆ ಅನ್ನೋದನ್ನು ತಿಳಿಯೋಣ.

ನಿಮ್ಮ ಮೇಲೆ ಒತ್ತಡ ಹಾಕಿಕೊಳ್ಳಬೇಡಿ
ಹೆರಿಗೆ ರಜೆಯಲ್ಲಿ ಇರುವ ಸಮಯದಲ್ಲಿ ನಿಮಗೆ ಕೆಲಸದ ಭಯ ಇರೋದಿಲ್ಲ. ಸಂಪೂರ್ಣ ಗಮನವನ್ನು ಮಗುವನ್ನು ನೋಡಿಕೊಳ್ಳೋದಕ್ಕೆ ನೀಡುತ್ತೀರಿ. ಆದರೆ ಹೆರಿಗೆಯ ರಜೆ ಕಳೆದ ಮೇಲೆ ನಿಮಗೆ ನಿಜವಾದ ತಲೆನೋವು ಶುರುವಾಗೋದು. ಒಂದು ಕಡೆಯಿಂದ ಸರಿಯಾದ ಸಮಯಕ್ಕೆ ಕೆಲಸಕ್ಕೂ ಹೋಗಬೇಕು.
ಮತ್ತೊಂದು ಕಡೆಯಿಂದ ಮಗುವಿನ ಕಾಳಜಿಯನ್ನೂ ಮಾಡಬೇಕು. ಇಂತಹ ಸಂದರ್ಭದಲ್ಲಿ ನಿಮ್ಮ ಮೇಲೆ ನೀವು ಒತ್ತಡ ಹಾಕಿಕೊಳ್ಳದೇ ಮೊದಲಿಗೆ ಮಗುವಿನ ಕೆಲಸ ಮುಗಿಸಿ. ಆನಂತರ ಕೆಲಸದ ಕಡೆಗೆ ಗಮನಕೊಡಿ. ಇನ್ನೂ ರಾತ್ರಿ ಸರಿಯಾದ ಸಮಯಕ್ಕೆ ಮಲಗೋದನ್ನು ಅಭ್ಯಾಸ ಮಾಡಿಕೊಳ್ಳಿ. ಇಲ್ಲದಿದ್ದರೆ ಬೆಳಗ್ಗೆ ಬೇಗ ಎದ್ದು ಮನೆ ಕೆಲಸ ಮುಗಿಸಿ ಆಫಿಸ್ ಗೆ ಹೋಗೋದು ಕಷ್ಟ.
ಕೆಲವು ದಿನಗಳ ಕಾಲ ಮನೆಯಿಂದ ಕೆಲಸ ಮಾಡಿ
ಮೊದಲಿಗೆ ನಿಮ್ಮ ಕೆಲಸದ ಸ್ಥಳದಲ್ಲಿ ಮಾತನಾಡಿ ಯಾವ ದಿನ ನೀವು ಕೆಲಸಕ್ಕೆ ಮರಳಬೇಕು ಎಂದು ತಿಳಿದುಕೊಳ್ಳಿ. ನಂತರ ನೀವು ಕೆಲಸಕ್ಕೆ ಮರಳುವ ಮೊದಲು ಮಾನಸಿಕವಾಗಿ ಸಿದ್ಧವಾಗಬೇಕು. ಆಫಿಸ್ ಗೆ ಹೋದರೂ ಕೂಡ ಅಲ್ಲಿಂದ ಬೇಗ ಮರಳುವಂತೆ ನೋಡಿಕೊಳ್ಳಿ. ಉಳಿದ ಕೆಲಸವನ್ನು ಮನೆಯಲ್ಲಿ ಮುಗಿಸಿ. ಆಗ ನಿಮ್ಮ ಮಗುವಿನ ಜೊತೆಗೆ ಸಮಯ ಕಳೆಯಬಹುದು. ಇದರ ಜೊತೆಗೆ ವಾರದಲ್ಲಿ ಮೂರು ದಿನ ಮನೆಯಿಂದಲೇ ಕೆಲಸ ಮಾಡಲು ಆಫಿಸ್ ನಿಂದ ಅನುಮತಿಯನ್ನು ಪಡೆಯಿರಿ.
ಭಾವನಾತ್ಮಕ ಮನಸ್ಥಿತಿಯಿಂದ ಹೊರಬನ್ನಿ
ಹೆರಿಗೆ ರಜೆಯ ಬಳಿಕ ನೀವು ಕೆಲಸ ಮಾಡೋದಕ್ಕೆ ನಿರ್ಧರಿಸಿದ್ದರೆ ಮೊದಲು ನಿಮ್ಮ ಭಾವನಾತ್ಮಕ ಮನಸ್ಥಿತಿಯಿಂದ ಹೊರಬರಬೇಕು. ಮಗುವನ್ನು ಬಿಟ್ಟು ಕೆಲಸಕ್ಕೆ ಬರುವುದೆಂದರೆ ತುಂಬಾನೇ ಕಷ್ಟ. ಮಗುವಾದ ನಂತರ ಹಾರ್ಮೋನಿನ ಏರಿಳಿತಗಳು, ನಿದ್ರಾಹೀನತೆ ಮತ್ತು ನಿಯಂತ್ರಣವಿಲ್ಲದ ಭಾವನೆಯಿಂದಾಗಿ ಕೆಲಸವನ್ನು ಪುನರಾರಂಭಿಸುವುದು ಒಂದು ರೀತಿ ಸವಾಲಾಗಿರಬಹುದು.
ಇನ್ನೂ ಮತ್ತೊಂದು ಕಡೆಯಿಂದ ಪುಟ್ಟ ಮಗುವನ್ನು ಮನೆಯಲ್ಲಿ ಬಿಟ್ಟು ಬರೋದಕ್ಕೆ ಮನಸ್ಸು ಕೇಳೋದಿಲ್ಲ. ಮಗುವನ್ನು ನೋಡಿಕೊಳ್ಳಲು ಯಾರನ್ನಾದರೂ ನೇಮಿಸಿದ್ದರೆ ಅವರು ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರಾ ಎನ್ನುವ ಭಯ ಕಾಡುತ್ತಿರುತ್ತದೆ. ಕೆಲವೊಂದು ಸಲ ನಿಮ್ಮ ಅಮ್ಮ ಅಥವಾ ಅತ್ತೆಯ ಹತ್ತಿರ ಮಗುವನ್ನು ಬಿಟ್ಟು ಬಂದರೂ ಕೂಡ ತಾಯಿ ಕರುಳು ಇಡೀ ದಿನ ಮಗುವಿನ ಬಗ್ಗೆ ಚಿಂತಿಸೋದು ಸಹಜ. ಈ ಎಲ್ಲಾ ಆಲೋಚನೆಗಳನ್ನು ಬಿಟ್ಟು ಕೆಲಸದ ಸಮಯದಲ್ಲಿ ಕೆಲಸದ ಕಡೆಗೆ ಗಮನಕೊಡಿ. ಮನೆಗೆ ಬಂದಾಗ ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ.
ನಿರ್ದಿಷ್ಟ ಗುರಿಯನ್ನು ಇಟ್ಟುಕೊಳ್ಳಿ
ಹೆರಿಗೆ ರಜೆ ನಂತರ ಆಫಿಸ್ ಗೆ ಬಂದು ಕೆಲಸ ಮಾಡೋದು ಕಷ್ಟ. ಆದರೆ ಈ ಸಮಯದಲ್ಲಿ ನೀವು ನಿಮ್ಮ ಮಗುವಿನ ಯೋಚನೆ ಬಿಟ್ಟು ಕೆಲಸದ ಕಡೆಗೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ನೀವು ದೊಡ್ಡ ಮಟ್ಟಕ್ಕೆ ಬೆಳೆಯಬೇಕಾದರೆ ಶ್ರಮ ಪಡಲೇಬೇಕಾಗುತ್ತದೆ. ನೀವು ಒಂದು ಉತ್ತಮ ಹಂತಕ್ಕೆ ತಲುಪಿದರೆ ಖಂಡಿತ ನಿಮ್ಮ ಮಗು ದೊಡ್ಡದಾದ ಮೇಲೆ ನಿಮ್ಮ ಬಗ್ಗೆ ಹೆಮ್ಮ ಪಡುತ್ತದೆ. ಹಾಗೂ ನಿಮ್ಮಿಂದ ಪ್ರೇರಣೆಯನ್ನು ಪಡೆಯುತ್ತದೆ. ಅಷ್ಟೇ ಯಾಕೆ ನಿಮ್ಮನ್ನೇ ಆದರ್ಶವಾಗಿ ಇಟ್ಟುಕೊಳ್ಳಬಹುದು.
ಮನೆಯಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಿ
ಒಂದು ಮಗುವಿನ ತಾಯಿಯಾಗಿ ಮತ್ತು ಆಫಿಸ್ ನಲ್ಲಿ ಒರ್ವ ಕೆಲಸಗಾರ್ತಿಯಾಗಿ ಎರಡನ್ನು ಒಟ್ಟಾಗಿ ನಿಭಾಯಿಸಬೇಕೆಂದರೆ ಕೆಲವೊಂದು ವ್ಯವಸ್ಥೆಯನ್ನು ಮನೆಯಲ್ಲಿ ನೀವು ಮಾಡಿಕೊಂಡಿರಬೇಕು. ಸಮಯಕ್ಕೆ ಸರಿಯಾಗಿ ಊಟ-ತಿಂಡಿ ವ್ಯವಸ್ಥೆ ಮಾಡೋದು, ಅಮ್ಮ, ಅತ್ತೆ ಇರದೇ ಹೋದರೆ ಮಗು ನೋಡಿಕೊಳ್ಳಲು ಯಾರನ್ನಾದರೂ ನೇಮಿಸಿ, ಮನೆ ಕೆಲಸ ಮಾಡಲು ಯಾರನ್ನಾದರೂ ನೇಮಿಸಿ. ಆಗ ನಿಮ್ಮ ಅರ್ಧ ತಲೆನೋವು ಕಡಿಮೆಯಾಗುತ್ತದೆ. ಕೆಲಸದ ಸ್ಥಳದಲ್ಲೂ ನಿಶ್ಚಿಂತೆಯಿಂದ ಕೆಲಸ ಮಾಡಬಹುದು. ಮನೆಗೆ ಬಂದ ನಂತರ ಮಗುವಿನ ಕಾಳಜಿ ಮಾಡಬಹುದು.
ಒರ್ವ ಉತ್ತಮ ತಾಯಿಯಾಗಿ, ಇತ್ತ ಆಫಿಸ್ ನಲ್ಲಿ ಉತ್ತಮ ಕೆಲಸಗಾರ್ತಿಯಾಗಿ ಜವಾಬ್ದಾರಿಯನ್ನು ನಿಭಾಯಿಸುವುದು ಕಷ್ಟ. ಆದರೆ ನೀವು ಏನಾದರೂ ಸಾಧನೆ ಮಾಡಬೇಕಾದರೆ ಕೆಲವೊಂದು ತ್ಯಾಗಗಳನ್ನು ಮಾಡಲೇಬೇಕಾಗುತ್ತದೆ.



Click it and Unblock the Notifications
