Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಮಗುವಿಗೆ ಎದೆಹಾಲು ಸಾಕಾಗುತ್ತಿದೆ ಎಂದು ತಿಳಿಯುವುದು ಹೇಗೆ? ಸಾಕಾಗುತ್ತಿಲ್ಲ ಎಂದು ತಿಳಿಯುವುದು ಹೇಗೆ?
ನವಜಾತ ಶಿಶುವಿನಿಂದ ಆರು ತಿಂಗಳು ತುಂಬುವವರೆಗೆ ಎದೆಹಾಲು ಬಿಟ್ಟು ಬೇರೇನೂ ಕೊಡಬೇಡಿ ಎಂದು ಮಕ್ಕಳ ತಜ್ಞರು ಹೇಳುತ್ತಾರೆ. ಒಂದು ವೇಳೆ ಎದೆ ಹಾಲು ಕಡಿಮೆಯಾಗಿದ್ದರೆ ಫಾರ್ಮುಲಾ ಮಿಲ್ಕ್ ನೀಡಲಾಗುವುದು. ಫಾರ್ಮುಲಾ ಮಿಲ್ಕ್ ಆದರೆ ಎಷ್ಟು ಕೊಡಬೇಕು ಎಂದು ವೈದ್ಯರು ತಿಳಿಸಿರುತ್ತಾರೆ, ಆದರೆ ಎದೆಹಾಲುಣಿಸುವಾಗ ಮಗುವಿಗೆ ಎದೆಹಾಲು ಸಾಕಾಗುತ್ತಿದೆಯೇ ಎಂಬ ಸಂಶಯ ಮೂಡುವುದು.

ಮಗುವಿಗೆ ನಿಮ್ಮ ಎದೆಹಾಲು ಸಾಕಾಗುತ್ತದೆ ಎಂದು ತಿಳಿಯುವುದು ಹೇಗೆ?
- ಮಗುವಿನ ತೂಕ ವಾರದಲ್ಲಿ 100-140 ಗ್ರಾಂ ಹೆಚ್ಚಾಗುವುದು, ಪ್ರತಿವಾರ ಮಗುವಿನ ತೂಕ ಹೆಚ್ಚಾಗುವುದು,
- ಹಾಲು ಕುಡಿದ ಬಳಿಕ ಮಗುವಿನ ಮುಖದಲ್ಲಿ ಸಂತೋಷ ಇರುತ್ತದೆ, ಹೊಟ್ಟೆ ತುಂಬಿದರೆ ಮಗು ತುಂಬಾ ಚೆನ್ನಾಗಿ ನಿದ್ದೆ ಮಾಡುತ್ತದೆ.
- ಮಗು ದಿನದಲ್ಲಿ 7-8 ಬಾರಿ ಮೂತ್ರ ವಿಸರ್ಜನೆಗೆ ಹೋಗುತ್ತದೆ. ಮಗು ಅಧಿಕ ಮೂತ್ರ ವಿಸರ್ಜನೆ ಮಡಿದಷ್ಟು ಒಳ್ಳೆಯದು.
- ಮಲ ವಿಸರ್ಜನೆ ಚೆನ್ನಾಗಿ ಆಗುವುದು.
- ಮಗುವಿಗೆ ಎದೆಹಾಲು ಸಾಕಾಗುತ್ತಿಲ್ಲ ಎಂದಾದರೆ ಮಗುವಿನಲ್ಲಿ ಕಂಡು ಬರುವ ಲಕ್ಷಣಗಳು
- ಎದೆಹಾಲು ಸಾಕಷ್ಟು ಸಿಗದಿದ್ದರೆ ಮಗುವಿನಲ್ಲಿ ನಿಶ್ಯಕ್ತಿ ಇರುತ್ತದೆ, ತುಂಬಾನೇ ನಿದ್ದೆ ಮಾಡುವುದು
- ಮಲ ತುಂಬಾ ಗಟ್ಟಿಯಾಗಿದ್ದು ಮಗುವಿಗೆ ಮಲವಿಸರ್ಜನೆಗೆ ಕಷ್ಟವಾದರೆ ಎದೆಹಾಲು ಸಾಕಾಗುತ್ತಿಲ್ಲ ಎಂದರ್ಥ.
- ಮಗು ಬೇಗನೆ ಹಾಲು ಕುಡಿದು ನಿಲ್ಲಿಸುತ್ತದೆ, ಮಗುವಿಗೆ ಸರಿಯಾಗಿ ಹಾಲು ಸಿಗದೇ ಇದ್ದಾಗ ಈ ರೀತಿ ಮಾಡುತ್ತದೆ. ಈ ರೀತಿ ಮಾಡುತ್ತಿದ್ದರೆ ಮಗುವಿಗೆ ಸರಿಯಾಗಿ ಹೊಟ್ಟೆ ತುಂಬುವುದಿಲ್ಲ.
- ಮಗುವಿನ ಮೈತೂಕ ಸರಿಯಾದ ರೀತಿಯಲ್ಲಿ ಹೆಚ್ಚಾಗುವುದಿಲ್ಲ
- ಮಗುವಿನಲ್ಲಿ ಮೂತ್ರ ವಿಸರ್ಜನೆ ಕಡಿಮೆ ಇರುತ್ತದೆ.
ಹಾಲು ಸಾಕಾಗದಿದ್ದರೆ ಫಾರ್ಮುಲಾ ಹಾಲು ಕೊಡುವುದು ಒಳ್ಳೆಯದೇ?
ಫಾರ್ಮುಲಾ ಹಾಲು ಕೊಟ್ಟರೆ ಮಗುವಿನ ಹೊಟ್ಟೆ ತುಂಬುವುದು, ಆದರೆ ತಾಯಿಯ ಎದೆಹಾಲಿಗೆ ಸಮವಾಗಿರಲ್ಲ. ಅಲ್ಲದೆ ಮಗುವಿಗೆ ಜೀರ್ಣಗೊಳ್ಳಲು ಕಷ್ಟವಾಗಬಹುದು. ಮಗುವಿಗೆ ಮಲಬದ್ಧತೆ ಸಮಸ್ಯೆ ಕಂಡು ಬರುವುದು. ಆದ್ದರಿಂದ ಫಾರ್ಮುಲಾ ಹಾಲಿಗಿಂತ ಮಕ್ಕಳಿಗೆ ಎದೆಹಾಲೇ ತುಂಬಾ ಒಳ್ಳೆಯದು.
ಮೊದಲ ಹೆರಿಗೆಯಾದ ತಾಯಂದಿರಿಗೆ ಕೆಲ ಸಲಹೆಗಳು
- ಮಗುವಿಗೆ ಒಂದೂವರೆ ಗಂಟೆಗೊಮ್ಮೆ ಹಾಲುಣಿಸಿ, ಹೀಗೆ ಮಾಡುವುದರಿಂದ ಹಸಿವು ಇಂಗುವುದು.
- ಮಗುವಿಗೆ ಹಾಲುಣಿಸಿದಷ್ಟೂ ಎದೆಹಾಲಿನ ಉತ್ಪತ್ತಿ ಹೆಚ್ಚಾಗುವುದು. ನೀವು ಒಂದು ಬದಿ ಸಂಪೂರ್ಣ ಕುಡಿಸಿದ ಬಳಿಕ ಇನ್ನೊಂದು ಮೊಲೆಯುಣಿಸಿ.
- ಸ್ತನವನ್ನು ಮಸಾಜ್ ಮಾಡಿ, ಮಗುವಿಗೆ ಹಾಲುಣಿಸುವಾಗ ಮೆಲ್ಲನೆ ಎದೆಯನ್ನು ಪ್ರೆಸ್ ಮಾಡಿ, ಇದರಿಂದ ಮಗುವಿಗೆ ಹೆಚ್ಚು ಹಾಲು ಸಿಗುವುದು. ಹೆಚ್ಚು ಹಾಲಿದ್ದರೆ ಹೀಗೆ ಮಾಡಬೇಡಿ, ನೆಲ್ಲಿಗೆ ಹತ್ತುವುದು.
ಎದೆಹಾಲಿನ ಉತ್ಪತ್ತಿ ಹೆಚ್ಚಿಸಲು ಯಾವ ಬಗೆಯ ಆಹಾರ ಒಳ್ಳೆಯದು?
ಕಬ್ಬಿಣಂಶ, ಪ್ರೊಟೀನ್, ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿ
ಧಾನ್ಯಗಳು, ಸೊಪ್ಪು, ತರಕಾರಿ, ಬಟಾಣಿ, ಡ್ರೈ ಫ್ರೂಟ್, ಒಣದ್ರಾಕ್ಷಿ, ವಿಟಮಿನ್ ಸಿ ಇರುವ ಆಹಾರಗಳನ್ನು ಸೇವಿಸಿ.
ಅಗ್ಯವಿದ್ದರೆ ಸಪ್ಲಿಮೆಂಟ್ ಸೇವಿಸಿ
ವಿಟಮಿನ್ ಬಿ-12 ಸಪ್ಲಿಮೆಂಟ್ , ಒಮೆಗಾ 3, ವಿಟಮಿನ್ ಡಿ ಈ ಬಗೆಯ ಸಪ್ಲಿಮೆಂಟ್‌ಸೇವಿಸಿ. ನೀವು ಸ್ವಂತ ಸಪ್ಲಿಮೆಂಟ್ ಸೇವಿಸಬೇಡಿ. ನೀವು ವೈದ್ಯರ ಸಲಹೆ ಪಡೆಯಿರಿ
ಸೊಪ್ಪು, ಧಾನ್ಯಗಳು, ನುಗ್ಗೆಕಾಯಿ ಸೊಪ್ಪು, ಸಬ್ಬಸ್ಸಿಗೆ ಸೊಪ್ಪು , ಮೊಳಕೆ ಬರಿಸಿದ ಧಾನ್ಯಗಳು ಈ ಬಗೆಯ ಆಹಾರ ಸೇವಿಸಿ.
ಇನ್ನು ಆಯುರ್ವೇದದಲ್ಲಿ ಕೆಲವೊಂದು ಲೇಹ್ಯ (ಉದಾಹರಣೆಗೆ ತೆಂಗಲ್‌ಪೂಕಲ್) ಸೇವಿಸಿ.
ಈ ಬಗೆಯ ಆಹಾರ ಸೇವಿಸಬೇಡಿ
ಮದ್ಯಪಾನ: ಎದೆಹಾಲುಣಿಸುವವರು ಮದ್ಯ ಸೇವಿಸಬೇಡಿ.
ಕೆಫೀನ್: ಕೆಫೀನ್ ಅಧಿಕವಿರುವ ಆಹಾರ ಸೇವಿಸಬೇಡಿ
ಮೀನು: ಮೀನಿನಲ್ಲಿ ಒಮೆಗಾ 3 ಕೊಬ್ಬಿನಂಶವಿದೆ. ಆದರೆ ಕೆಲ ಮಕ್ಕಳಿಗೆ ಇದು ಆಗಿ ಬರುವುದಿಲ್ಲ, ಮಕ್ಕಳು ವಾಂತಿ ಮಾಡುತ್ತವೆ. ಹಾಗಾದರೆ ತಿನ್ನಬೇಡಿ.



Click it and Unblock the Notifications
