Latest Updates
-
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ!
ಚಿಕ್ಕ ಮಗುವಿರುವ ಪೋಷಕರೇ, ಬೇಸಿಗೆಯಲ್ಲಿ ನಿಮ್ಮ ಮಗುವಿಗೆ ಬೇಕು ಈ ರೀತಿಯ ಆರೈಕೆ
ಎಂಥ ಉರಿ ಬಿಸಿಲು, ಈ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಓಡಾಡಿದರೆ ಸುಸ್ತಾಗಿ ಬಿಡ್ತೀವಿ ಅಂಥದ್ದರಲ್ಲಿ ಚಿಕ್ಕ ಮಕ್ಕಳನ್ನು ಅದರಲ್ಲಿಯೂ 6 ತಿಂಗಳಿಗಿಂತ ಚಿಕ್ಕ ಮಕ್ಕಳ ಜೊತೆ ಹೊರಗಡೆ ಆಸ್ಪತ್ರೆ, ಶಾಪಿಂಗ್, ಧಾರ್ಮಿಕ ಸ್ಥಳಗಳು, ಫಂಕ್ಷನ್ ಅಂತ ಓಡಾಡುವಾಗ ತುಂಬಾನೇ ಜಾಗ್ರತೆವಹಿಸಬೇಕು, ಏಕೆಂದರೆ ಇಂಥ ಉರಿ ಬಿಸಿಲು ತಡೆಯುವುದು ಚಿಕ್ಕ ಮಕ್ಕಳಿಗೆ ತುಂಬಾನೇ ಕಷ್ಟವಾಗುವುದು.
ಇನ್ನು ಕೆಲವರನ್ನು ನೋಡ್ತೀವಿ ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗುವಾಗ ಈ ಬಿಸಿಲಿನಲ್ಲಿ ಸ್ವೆಟರ್, ಟೊಪ್ಪಿ ಅಂತ ಹಾಕಿ, ಶಾಲು ಸುತ್ತಿ ಹಿಡಿದುಕೊಂಡು ಹೋಗುತ್ತಾರೆ, ಸೆಕೆ ಹೆಚ್ಚಿರುವಾಗ ಮಕ್ಕಳನ್ನು ಈ ರೀತಿ ಕರೆದುಕೊಂಡು ಅವರು ಸೆಕೆ ಸಹಿಸಲಾರದೆ ಜೋರಾಗಿ ಅಳಲಾರಂಭಿಸುತ್ತಾರೆ. ಅಲ್ಲದೆ ಬಿಸಿಲಿನಲ್ಲಿ ಈ ರೀತಿ ಕರೆದುಕೊಂಡು ಹೋದಾಗ ಮೈ ಮೇಲೆ ಬೊಬ್ಬೆಗಳಾಗಬಹುದು, ಹಾಗಾಗಿ ಈ ಬಗ್ಗೆ ಜಾಗ್ರತೆಮಾಡಬೇಕು.

ಅದರಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ಹೊರಗಡೆ ಓಡಾಡುವಾಗ ತುಂಬಾನೇ ಜಾಗ್ರತೆ ಮಾಡಬೇಕು.
- ಮಗುವನ್ನು ಹೊರಗಡೆ ಕರೆದುಕೊಂಡು ಹೋಗುವಾಗ ನೀವು ಉಣ್ಣೆಯ ಬಟ್ಟೆ ಹಾಕಿ ಕೊಡಬೇಡಿ, ಕಾಟನ್ ಬಟ್ಟೆ ಸುತ್ತಿ
- ಇನ್ನು ನಿಮ್ಮಿಷ್ಟಕ್ಕೆ ಸನ್‌ಸ್ಕ್ರೀನ್ ಹಚ್ಚಬೇಡಿ, ನೀವು ಮಕ್ಕಳ ತಜ್ಞರ ಸಲಹೆ ಪಡೆದು ಅವರು ಸೂಚಿಸಿದ ಕ್ರೀಮ್ ಹಚ್ಚಿ
- ಮಗುವಿನ ಮೈ ಮೇಲೆ ಬಿಸಿಲು ಬೀಳಲು ಬಿಡಬೇಡಿ
- ಮಕ್ಕಳ ತಲೆಗೆ ಅಗಲವಾದ ಟೋಪಿ ಹಾಕಿಕೊಡಿ
- ಕೊಡೆ ಹಿಡಿದು ಹೊರಗಡೆ ಹೋಗಿ, ಕಪ್ಪು ಕೊಡೆಯ ಬದಲಿಗೆ ಬಣ್ಣದ ಕೊಡೆ ಬಳಸಿ
- ಇನ್ನು ಫಂಕ್ಷನ್‌ಗಳಿಗೆ ಹೋದಾಗ ಫ್ಯಾನ್ ಗಾಳಿ ಬೀಸುವ ಕಡೆ ಕೂರಿ
- ಒಂದು ವೇಳೆ ಮಗುವಿನ ತ್ವಚೆಗೆ ಸನ್‌ಬರ್ನ್ ಆದರೆ ಕೂಡಲೇ ಕೋಲ್ಡ್ ಕಂಪ್ರೆಸ್ ನೀಡಬೇಕು
- ಚಿಕ್ಕ ಮಕ್ಕಳ ತ್ವಚೆ ಮೇಲೆ ಉರಿ ಬಿಸಿಲು ಬೀಳದಂತೆ ಜಾಗ್ರತೆ ಮಾಡಿ
- ಚಿಕ್ಕ ಮಕ್ಕಳಿಗೆ ಕಾಟನ್ ಬಟ್ಟೆಗಳನ್ನು ಹಾಕಿ ಕೊಡಿ
- ಆದಷ್ಟೂ ಬಿಸಿಲಿನಲ್ಲಿಹೊರಗಡೆ ಕರೆದುಕೊಂಡು ಹೋಗುವುದನ್ನು ತಪ್ಪಿಸಿ.
- ಮನೆಯಲ್ಲಿ ಮಗುವನ್ನು ಹೇಗೆ ಆರೈಕೆ ಮಾಡಬೇಕು?
ಮನೆಯೊಳಗಡೆ ಇದ್ದರೂ ಸೆಕೆಗೇನೂ ಕಮ್ಮಿಯಿಲ್ಲ, ಆಗಾಗಿ ಮಗುವಿಗೆ ತುಂಬಾ ಸೆಕೆಯಾಗದಂತೆ ಮನೆಯನ್ನು ತಂಪಾಗಿ ಇಡಿ. ಮನೆಯ ಕಿಟಕಿಗಳಿಗೆ ವಿಂಡೋಶೇಡ್ ಬಳಸಿ, ಇದರಿಂದ ಮನೆ ತಂಪಾಗಿ ಇರುತ್ತದೆ, ಅಲ್ಲದೆ ಫ್ಯಾನ್ ಬಳಸಿ, ಫ್ಯಾನ್ ಗಾಳಿ ನೇರವಾಗಿ ಮಗುವಿನ ಮುಖಕ್ಕೆ ಬಡೆಯುವಂತೆ ಇಡಬೇಡಿ.
ಚರ್ಮ ರೋಗ ತಜ್ಞರನ್ನು ಭೇಟಿ ಮಾಡಿ ಯಾವ ಕ್ರೀಮ್ ಬಲಸಬೇಕು ಎಂಬ ಸಲಹೆ ಪಡೆಯಿರಿ
ಮಕ್ಕಳಿಗೆ ಸೆಕೆ ಹೆಚ್ಚಾದಾಗ ಮೈ ಮೇಲೆ ಕೆಂಪು-ಕೆಂಪು ಗುಳ್ಳೆಗಳು ಏಳುವುದು, ಇದನ್ನು ತಡೆಗಟ್ಟಲು ನೀವು ತಜ್ಞರು ಸೂಚಿಸಿದ ಕ್ರೀಮ್ ಬಳಸಿ.
ಎಣ್ಣೆ ಸ್ನಾನ ಮಾಡಿಸಿ
ಮಕ್ಕಳ ಮೈ ತಂಪಾಗಿಡಲು ತೆಂಗಿನೆಣ್ಣೆಗೆ ಸ್ವಲ್ಪ ಹರಳೆಣ್ಣೆ ಮಿಕ್ಸ್ ಮಾಡಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಿ, ಹೀಗೆ ಮಾಡಿಸುವುದರಿಂದ ಮಗು ತುಂಬಾ ಚೆನ್ನಾಗಿ ನಿದ್ದೆ ಬರುತ್ತದೆ, ಮಗುವಿನ ಮೈ ಮೇಲೆ ತುಂಬಾ ಬಿಸಿ-ಬಿಸಿಯಾದ ನೀರು ಹಾಕಬೇಡಿ, ತಣ್ಣೀರು ಕೂಡ ಬೇಡ, ಉಗುರು ಬೆಚ್ಚಗಿನ ನೀರು ಬಳಸಿ.
ಸೊಳ್ಳೆ ಪರದೆಯೊಳಗೆ ನಿದ್ದೆ ಮಾಡಿಸುವಾಗ ತೆಳುವಾದ ಬಟ್ಟೆಯಷ್ಟೇ ಸಾಕು
ಮಗುವನ್ನು ಸೊಳ್ಳೆ ಪರದೆಯೊಳಗಡೆ ಮಲಗಿಸುವಾಗ ಬಟ್ಟೆಯೇನೂ ಬೇಕಾಗಿಲ್ಲ, ತೆಳುವಾದ ಬಟ್ಟೆ ಹಾಕಿ ಮಲಗಿಸಿ. ಫ್ಯಾನ್ ಗಾಳಿ ಸ್ವಲ್ಪ ಬೀಸುವಂತಿರಬೇಕು.
ಎಸಿ ರೂಮ್‌ನಲ್ಲಿ ಮಲಗಿಸಬೇಡಿ
ಎಸಿ ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಫ್ಯಾನ್ ಕೂಡ ಅಷ್ಟೇ, ಆದರೆ ಎಸಿಗಿಂತ ಫ್ಯಾನ್ ಬೆಟರ್.
ಮಗುವನ್ನು ಸ್ನಾನ ಬಳಿಕ ಚೆನ್ನಾಗಿ ಒರೆಸಬೇಕು
ಚಿಕ್ಕ ಮಕ್ಕಳನ್ನು ಸ್ನಾನ ಮಾಡಿಸಿದ ಬಳಿಕ ಚೆನ್ನಾಗಿ ಒರೆಸಬೇಕು. ಕುತ್ತಿಗೆ, ತೊಡೆ, ಕೈಗಳಲ್ಲಿ ನೀರು , ಬೆವರು ಸೇರಿ ಕಜ್ಜಿ, ಗಾಯವಾಗುವುದು. ಹಾಗಾಗಿ ತುಂಬಾನೇ ಜಾಗ್ರತೆ ಮಾಡಿ.



Click it and Unblock the Notifications
