Latest Updates
-
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್!
ಗರ್ಭಿಣಿಯಾಗಿದ್ದಾಗ ಕೆಲಸದ ಜಾಗದಲ್ಲಿ ಎದುರಾಗೋ ಸಮಸ್ಯೆಗಳೇನು? ಪರಿಹಾರವೇನು?
ನಮೆಗೆಲ್ಲಾ ರಾತ್ರಿ ಮಲಗೋವಾಗ ಇರುವ ಖುಷಿ ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗೋದ್ರಲ್ಲಿ ಇರೋದಿಲ್ಲ. ಬೆಳಗ್ಗೆ ಯಾರಪ್ಪಾ ಕೆಲಸಕ್ಕೆ ಹೋಗೋದು ಅನ್ನೋ ಸಂಕಟ ಶುರುವಾಗುತ್ತೆ. ಅಂತದ್ರಲ್ಲಿ ಗರ್ಭಿಣಿಯರ ಬಗ್ಗೆ ಯೋಚಿಸೋದು ಅಸಾಧ್ಯ. ಇಂತಹ ಸಮಯದಲ್ಲಿ ಅವರಿಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿರುತ್ತದೆ. ಇದ್ರ ಮಧ್ಯೆ ಆಫೀಸ್‌ಗೆ ಹೋಗಿ ಕೆಲಸ ಮಾಡ್ಬೇಕು ಅಂದ್ರೆ ಕಷ್ಟ. ಅಷ್ಟಕ್ಕು ಮಹಿಳೆಯರು ಕೆಲಸದ ಜಾಗದಲ್ಲಿ ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸ್ತಾರೆ ಹಾಗೂ ಅದಕ್ಕೆ ಪರಿಹಾರ ಏನು ಅನ್ನೋದನ್ನು ತಿಳಿಯೋಣ.
1. ಈ ವಿಚಾರವನ್ನು ರಹಸ್ಯವಾಗಿಡೋದು ಕಷ್ಟ
ನೀವು ಗರ್ಭಿಣಿಯಾದಾಗ ಮೊದ ಮೊದಲು ಈ ಬಗ್ಗೆ ಯಾರ ಜೊತೆಗೂ ಹಂಚಿಕೊಳ್ಳೋದಕ್ಕೆ ಇಷ್ಟ ಪಡೋದಿಲ್ಲ. ಆದರೆ ಮೊದಲ ಕೆಲ ತಿಂಗಳುಗಳ ಕಾಲ ಆಗಾಗ್ಗೆ ವಾಂತಿಯಾಗೋದು, ಹುಷಾರು ತಪ್ಪೋದು ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಆಫೀಸ್‌ನಲ್ಲಿ ಸರಿಯಾಗಿ ಕೆಲಸ ಮಾಡೋದಕ್ಕೂ ಸಾಧ್ಯವಾಗೋದಿಲ್ಲ. ಆದ್ದರಿಂದ ಈ ವಿಚಾರವನ್ನು ನಿಮ್ಮ ಬಾಸ್ ಹೇಳೋದು ಒಳ್ಳೆಯದು. ಆಗ ಅವರು ನಿಮ್ಮ ಮೇಲೆ ಮೃದು ಧೋರಣೆ ತೋರಬಹುದು.

2. ವಾಂತಿ ಬಂದಂತಹ ಅನುಭವವಾಗುತ್ತದೆ
ಗರ್ಭ ಧರಿಸಿದ ಆರಂಭದಲ್ಲಿ ಆಗಾಗ್ಗೆ ವಾಂತಿ ಬಂದಂತಹ ಅನುಭವವಾಗುತ್ತದೆ. ಈ ವಿಚಾರದ ಬಗ್ಗೆ ಯಾರಿಗೂ ಗೊತ್ತಲ್ಲದಾಗ ನಿಮಗೆ ಪದೇ ಪದೇ ವಾಷ್‌ರೂಂ ಗೆ ಹೋಗೋದು ಮುಜುಗರ ಅನ್ನಿಸಬಹುದು. ಖಾಲಿ ಹೊಟ್ಟೆಯಲ್ಲಿದ್ದಾಗಲೂ ವಾಂತಿಯಾಗುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮ ಮೇಜಿನ ಕೆಳಗೆ ವಾಂತಿ ನಿರೋಧ ಹಣ್ಣುಗಳು, ತಿಂಡಿ ತಂದಿಟ್ಟುಕೊಳ್ಳಿ. ಜೊತೆಗೆ ಶುಂಠಿಯೂ ಕೂಡ ವಾಂತಿ ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.
3. ಅನಗತ್ಯ ಪ್ರಶ್ನೆಗಳು ಎದುರಾಗುತ್ತದೆ
ನೀವು ಗರ್ಭಿಣಿಯಾಗಿದ್ದೀರಿ ಎಂದು ಗೊತ್ತಾದಾಗ ಆಫೀಸ್‌ನಲ್ಲಿ ಅನೇಕ ಜನ ನಿಮ್ಮಲ್ಲಿ ಅನಗತ್ಯ ಪ್ರಶ್ನೆಗಳನ್ನು ಕೇಳೋದಿಕ್ಕೆ ಬರ್ತಾರೆ. ಇದು ನಿಮಗೆ ಖಂಡಿತ ಕಿರಿಕಿರಿ ಉಂಟು ಮಾಡುತ್ತದೆ. ಅಂತಹ ಸಂದರ್ಭದಲ್ಲಿ ನೀವು ಅವರ ಗಮನವನ್ನು ತಿರುಗಿಸಿ ಅವರ ಬಗ್ಗೆ ಮರು ಪ್ರಶ್ನೆ ಕೇಳೋದಕ್ಕೆ ಶುರು ಮಾಡಿ. ಇಲ್ಲದಿದ್ದರೆ ನಿಮಗೆ ಕೆಲಸ ಇದೆ ಎಂದು ಹೇಳಿ ತಪ್ಪಿಸಿಕೊಳ್ಳಿ.
4. ನೀವು ಅಸಮರ್ಥರು ಅನ್ನಿಸುತ್ತದೆ
ಗರ್ಭಿಣಿಯಾದ ಸಂದರ್ಭದಲ್ಲಿ ಮಹಿಳೆಯರಲ್ಲಿ ಒತ್ತಡ ಹೆಚ್ಚಾಗುತ್ತದೆ. ಗರ್ಭಿಣಿಯರ ತಲೆಯಲ್ಲಿ ನೂರಾರು ಪ್ರಶ್ನೆಗಳು ಓಡಾಡುತ್ತಿರುತ್ತದೆ. ಇದು ಅವರ ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತದೆ. ಹೀಗಾಗಿ ನಿಮಗೆ ಸರಿಯಾಗಿ ಕೆಲಸ ಮಾಡೋದಕ್ಕೆ ಆಗೋದಿಲ್ಲ. ಇಂತಹ ಸಮಯದಲ್ಲಿ ನೀವು ಕೆಲಸವನ್ನು ಸಂಪೂರ್ಣವಾಗಿ ಮುಗಿಸಿದ್ದೀರಾ? ಇಲ್ವಾ? ಅನ್ನೋ ಬಗ್ಗೆ ಅನುಮಾನವಿರುತ್ತದೆ. ನಿಮಗೆ ಹೀಗೆ ಅನ್ನಿಸಿದ್ರೆ ಮನೆಗೆ ಹೋಗೋ ಮೊದಲು ಕೆಲಸವನ್ನು ಮತ್ತೊಮ್ಮೆ ಮರು ಪರಿಶೀಲಿಸಿ.
5. ಇಡೀ ದಿನ ಕೂತಿದ್ದರೆ ಸಮಸ್ಯೆ ಉಂಟಾಗುತ್ತದೆ
ಸಾಮಾನ್ಯವಾಗಿ ಮಹಿಳೆಯರು ಆಫಿಸ್‌ನಲ್ಲಿ ಕೂತು ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಗರ್ಭಿಣಿಯಾಗಿದ್ದ ಸಂದರ್ಭ ಹೆಚ್ಚು ಹೊತ್ತು ಕೂತಿದ್ದರೆ ಪಾದದಲ್ಲಿ ನೀರು ತುಂಬಿಕೊಂಡು ಕಾಲು ಊದಿಕೊಂಡಂತೆ ಆಗುತ್ತದೆ. ಹೀಗಾಗಿ ನೀವು ಕೆಲಸ ಮಾಡುತ್ತಿದ್ದಾಗ ಆಗಾಗ್ಗೆ ಪಾದವನ್ನು ಮೇಲೆ ಕೆಳಗೆ ಮಾಡಿರಿ. ಇನ್ನೂ ಕಾಲು ಅಲುಗಾಡಿಸುತ್ತಾ ಇರಿ. ಸಮಯ ಸಿಕ್ಕಾಗಲೆಲ್ಲಾ ಸಣ್ಣದಾಗಿ ವಾಕಿಂಗ್ ಮಾಡಿ.
6. ಆಗಾಗ್ಗೆ ಬಾತ್‌ರೂಂಗೆ ಹೋಗಬೇಕಾಗುತ್ತದೆ
ಗರ್ಭಿಣಿಯಾದ ಸಂದರ್ಭದಲ್ಲಿ ಆಗಾಗ್ಗೆ ವಾಷ್‌ರೂಂಗೆ ಹೋಗಬೇಕಾಗುತ್ತದೆ. ಇದರಿಂದ ಕೆಲವೊಂದು ಸಲ ನೀವು ಮುಜುಗೊರಕ್ಕೆ ಒಳಗಾಗಿದ್ದು ಇದೆ. ಹೀಗಾಗಿ ಆಗಾಗ್ಗೆ ವಾಷ್‌ರೂಂಗೆ ಹೋಗೋದನ್ನು ತಪ್ಪಿಸಬೇಕಂದ್ರೆ ನಿಮ್ಮ ಕೆಲಸದ ಬಗ್ಗೆ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ. ಒಂದು ಕೆಲಸ ಮುಗಿಯೋವರೆಗೆ ವಾಷ್‌ರೂಂಗೆ ಹೋಗೋದಿಲ್ಲವೆಂದು ನಿರ್ಧರಿಸಿ.
7. ಸೊಂಟ ನೋವು ಹೆಚ್ಚಾಗುತ್ತದೆ
ಇತ್ತೀಚಿಗೆ ಕೂತು ಕೆಲಸ ಮಾಡುವ ಅನೇಕ ಜನರು ಸೊಂಟ ನೋವಿನಂತಹ ಸಮಸ್ಯೆಯನ್ನು ಖಂಡಿತವಾಗಿ ಎದುರಿಸಿರುತ್ತಾರೆ. ಸತತವಾಗಿ ಎಂಟು ಗಂಟೆಗಳ ಕಾಲ ಕೂತಿರೋದ್ರಿಂದ ಈ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತದೆ. ಅದ್ರಲ್ಲೂ ಗರ್ಭಿಣಿಯರಿಗೆ ಸೊಂಟ ನೋವಿನ ಸಮಸ್ಯೆ ಅತಿಯಾಗಿ ಕಾಡುತ್ತದೆ. ಇದಕ್ಕೆ ಪರಿಹಾರವೆಂದರೆ ಒಂದೇ ಸಮನೇ ಕೂತಲ್ಲೇ ಕೂರಬೇಡಿ. ಕೆಲಸದ ಮಧ್ಯದಲ್ಲಿ ಆಗಾಗ್ಗೆ ಎದ್ದು ನಡೆಯುತ್ತಿರಿ.
ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯವಾಗಿ ಮಹಿಳೆಯರನ್ನು ಕಾಡುತ್ತದೆ. ಆದ್ರೆ ಇದಕ್ಕಾಗಿ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳಿ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೇ ಕೆಲಸ ಮಾಡಿ.



Click it and Unblock the Notifications

