Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹದಿಹರೆಯದ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದ ಮಕ್ಕಳನ್ನು ನಿಭಾಯಿಸೋದು ಹೇಗೆ?
ಹದಿಹರೆಯದ ವಯಸ್ಸಿನಲ್ಲಿ ನಮಗೆ ಎಲ್ಲವೂ ಹೊಸತರಂತೆ ಕಾಣುತ್ತದೆ. ಆ ವಯಸ್ಸಿನಲ್ಲಿ ಯಾವುದು ತಪ್ಪು ಯಾವುದು ಸರಿ ಒಂದೂ ಗೊತ್ತಾಗೋದಿಲ್ಲ. ಈ ವಯಸ್ಸಿನಲ್ಲಿ ಹುಡುಗ/ಹುಡುಗಿಯ ಮೇಲೆ ಆಕರ್ಷಿತವಾಗೋದು ಸಹಜ. ಅನೇಕರು ಪ್ರೀತಿಯಲ್ಲಿ ಬಿದ್ದು ಬಿಡುತ್ತಾರೆ. ಪ್ರೀತಿಯಲ್ಲಿ ಬೀಳುವ ಮುನ್ನ ತಪ್ಪು ಯಾವುದು? ಸರಿ ಯಾವುದು? ಅನ್ನೋದನ್ನು ಯೋಚನೆ ಮಾಡೋದಿಲ್ಲ. ಇತ್ತ ಪೋಷಕರು ಎಷ್ಟೇ ಬುದ್ಧಿ ಹೇಳಿದರೂ ಕೂಡ ಅರ್ಥ ಆಗೋದಿಲ್ಲ. ಅಷ್ಟಕ್ಕು ಹದಿಹರೆಯದ ವಯಸ್ಸಿನಲ್ಲಿ ಪ್ರೀತಿಯಿಂದಾಗಿ ಎದುರಿಸುವ ಸಮಸ್ಯೆಗಳ್ಯಾವುದು? ಇಂತಹ ಸಮಸ್ಯೆಗಳಿಂದ ಹೊರ ಬರೋದು ಹೇಗೆ ಅನ್ನೋದನ್ನ ತಿಳಿಯೋಣ.

1. ಒನ್ ಸೈಡೆಡ್ ಲವ್
ಹದಿಹರೆಯದ ವಯಸ್ಸಿನಲ್ಲಿ ಮಕ್ಕಳಿಗೆ ಪ್ರೀತಿ ಹಾಗೂ ಕ್ರಷ್ ನಡುವಿನ ಸಂಬಂಧ ಏನು ಅನ್ನೋದು ಗೊತ್ತಿರೋದಿಲ್ಲ. ಹೀಗಾಗಿ ಒಬ್ಬರ ಮೇಲಿನ ಆಕರ್ಷಣೆಯನ್ನೇ ಪ್ರೀತಿ ಎಂದು ಕೊಳ್ಳುತ್ತಾರೆ. ತಮ್ಮ ಪ್ರೀತಿಯ ಬಗ್ಗೆ ಆ ಹುಡುಗ/ಹುಡುಗಿಗೆ ಹೇಳದೆ ಆ ವ್ಯಕ್ತಿಯನ್ನು ತುಂಬಾನೇ ಪ್ರೀತಿಸುತ್ತಾರೆ. ಒಂದು ವೇಳೆ ಆ ವ್ಯಕ್ತಿಗೆ ಬೇರೆ ಸಂಬಂಧವಿದೆ ಎಂದು ಗೊತ್ತಾದರೆ ಒಳಗೊಳಗೆ ದುಃಖ, ನೋವು ಅನುಭವಿಸುತ್ತಾರೆ. ಇದು ಮುಂದುವರೆದು ಆತಂಕ ಖಿನ್ನತೆಗೂ ಕೂಡ ಕಾರಣವಾಗಬಹುದು. ಹೀಗಾಗಿ ಪೋಷಕರು ಈ ಬಗ್ಗೆ ಎಚ್ಚರ ವಹಿಸಬೇಕು.
2. ಪ್ರಬುದ್ಧತೆ ಇರೋದಿಲ್ಲ
ಹದಿಹರೆಯ ವಯಸ್ಸು ಹೇಗಿರುತ್ತೆ ಎಂದರೆ ಇದು ಮಕ್ಕಳು ಹಾಗೂ ಅಲ್ಪ ಪ್ರಬುದ್ಧತೆಯ ಮಿಶ್ರಣ ಅಂದ್ರೆ ತಪ್ಪಾಗೋದಿಲ್ಲ. ಪ್ರೀತಿಯಲ್ಲಿ ಬಿದ್ದ ಹದಿಹರೆಯದ ಮಕ್ಕಳಿಗೆ ಅದನ್ನು ಉಳಿಸಿಕೊಳ್ಳುವುದು ಹೇಗೆ ಎಂಬುವುದು ಗೊತ್ತಿರೋದಿಲ್ಲ. ಸ್ವಲ್ಪ ಸಮಯ ಪ್ರೀತಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಅವರು ತಿಳಿದೋ, ತಿಳಿಯದೇ ತಪ್ಪು ಮಾಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇನ್ನೂ ಸ್ವಲ್ಪ ಸಮಯದ ನಂತರ ಸಂಗಾತಿ ಕೈ ಕೊಟ್ಟಾಗ ಅವರು ಖಿನ್ನತೆಗೊಳಗಾಗುವ ಸಾಧ್ಯತೆ ಕೂಡ ಇರುತ್ತದೆ.
3. ನಂಬಿಕೆ ಇರೋದಿಲ್ಲ
ಹದಿಹರೆಯದ ವಯಸ್ಸಿನ ಪ್ರೀತಿಯಲ್ಲಿ ನಂಬಿಕೆ ಅನ್ನೋದು ಕಡಿಮೆ ಇರುತ್ತದೆ. ಒಬ್ಬರನ್ನು ಪ್ರೀತಿಸುತ್ತಿದ್ದ ಹಾಗೆಯೇ ಮತ್ತೊಬ್ಬರ ಮೇಲೆ ಅವರಿಗೆ ಪ್ರೀತಿಯಾಗುವ ಸಾಧ್ಯತೆ ಇರುತ್ತದೆ. ಅಥವಾ ಬೇರೆಯವರ ಮೇಲೆ ಆಕರ್ಷಣೆ ಕೂಡ ಉಂಟಾಗಬಹುದು. ಈ ಪ್ರೀತಿ ಒಬ್ಬರ ಮೇಲೆ ಕೊನೆಯವರೆಗೂ ಶಾಶ್ವತವಾಗಿ ಇರುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಹೀಗಾಗಿ ಹದಿ ಹರೆಯದ ಪ್ರೀತಿಯಲ್ಲಿ ನಂಬಿಕೆ, ವಿಶ್ವಾಸ ಕಡಿಮೆ ಇರುತ್ತದೆ. ಈ ವಯಸ್ಸಿನಲ್ಲಿ ಮಕ್ಕಳನ್ನು ಆದಷ್ಟು ಜಾಗರೂಕತೆಯಿಂದ ನೋಡಿಕೊಳ್ಳೋದು ಪೋಷಕರ ಕರ್ತವ್ಯ.
4. ಸರಿಯಾದ ಸಂವಹನದ ಕೊರತೆ
ಯಾವ ಸಂಬಂಧವಾದರೂ ಉಳಿಯಬೇಕಾದರೆ ಅಲ್ಲಿ ಸಂವಹನ ಸರಿಯಾಗಿ ಇರಲೇಬೇಕು. ಹದಿಹರೆಯದ ಪ್ರೀತಿಯಲ್ಲಿ ನಾವು ಸಂವಹನದ ಕೊರತೆ ಇದ್ದೇ ಇರುತ್ತದೆ. ಇಬ್ಬರಿಗೂ ಮಕ್ಕಳ ವಯಸ್ಸಾಗಿರೋದ್ರಿಂದ ಹೇಗೆ ಮಾತನಾಡಬೇಕು ಅನ್ನೋದು ಗೊತ್ತಿರೋದಿಲ್ಲ. ಇಬರ ನಡವಳಿಕೆಯೂ ಮಕ್ಕಳಂತೆ ಇರುತ್ತದೆ. ಅಲ್ಲಿ ಪ್ರಬುದ್ಧತೆಯ ಮಾತುಗಳು ಬರೋದೇ ಇಲ್ಲ. ಹೀಗಾಗಿ ಪ್ರೀತಿ ಬೇಗನೆ ಮುರಿದು ಬೀಳುತ್ತದೆ.
5. ಪೋಷಕರು ಹೇಳಿದ್ದೆಲ್ಲಾ ತಪ್ಪೆನಿಸುತ್ತದೆ
ಈ ಹದಿಹರೆಯದ ವಯಸ್ಸಿನಲ್ಲಿ ಸ್ವಚ್ಛಂದವಾಗಿ ಹಾರಾಡಬೇಕೆಂಬ ಮನಸ್ಸಾಗುತ್ತದೆ. ನನಗೆ ಸ್ವಾತಂತ್ರಬೇಕು. ಈ ಸ್ವತಂತ್ರಕ್ಕೆ ಯಾರು ಅಡ್ಡಿಯಾಗಬಾರದೆಂದು ಹೇಳುತ್ತಾರೆ. ಮಕ್ಕಳು ತಪ್ಪು ದಾರಿಯಲ್ಲಿ ನಡೆಯುತ್ತಿದ್ದಾಗ ಪೋಷಕರು ತಪ್ಪು ಎಂದು ಹೇಳಿದರೆ ಅದನ್ನು ಅವರು ಕೇಳೋದಕ್ಕೆ ತಯಾರಿರೋದಿಲ್ಲ. ಪೋಷಕರಿಗೆ ಎದುರು ಮಾತನಾಡುತ್ತಾರೆ. ಪೋಷಕರು ನಮ್ಮ ಸ್ವಾತಂತ್ರಕ್ಕೆ ಅಡ್ಡಿಯಾಗುತ್ತಿದ್ದಾರೆ. ಮನೆಯಲ್ಲಿ ಇರೋದೇ ಬೇಡ ಎಂದೆನಿಸಿ ಬಿಡುತ್ತದೆ. ಇಂತಹ ಸಂದರ್ಭದಲ್ಲಿ ಪೋಷಕರು ನಾಜುಕಾಗಿ ಮಕ್ಕಳನ್ನು ನಿಭಾಯಿಸಬೇಕು.
6. ಮೊದಲ ಪ್ರೀತಿಯನ್ನು ಕಳೆದುಕೊಳ್ಳುವ ಭಯ
ಮೊದಲ ಪ್ರೀತಿ ಪ್ರತಿಯೊಬ್ಬರಿಗೂ ತುಂಬಾನೇ ಸ್ಪೆಷಲ್ ಆಗಿರುತ್ತದೆ. ಹದಿಹರೆಯದ ಮಕ್ಕಳು ಕೂಡ ಮೊದಲ ಪ್ರೀತಿಯ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಕೊನೆವರೆಗೂ ಅವರ ಜೊತೆಗೆ ಬದುಕಿ ಬಾಳಬೇಕು ಎನ್ನುವ ಆಸೆ ಅವರಲ್ಲಿ ಇರುತ್ತದೆ. ಅದರ ಜೊತೆಗೆ ಮೊದಲ ಪ್ರೀತಿಯನ್ನು ಎಲ್ಲಿ ಕಳೆದುಕೊಂಡು ಬಿಡುತ್ತೇನೋ ಎಂಬ ಭಯವಯ ಅವರನ್ನು ಕಾಡುತ್ತಿರುತ್ತದೆ.
7. ಮೋಸ, ಬ್ರೇಕಪ್ ಅನ್ನು ತಡೆದುಕೊಳ್ಳಲು ಆಗೋದಿಲ್ಲ
ಪ್ರೀತಿಯಲ್ಲಿ ಮೋಸವಾದರೆ ಅದು ಎಷ್ಟು ಆಳವಾಗಿ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತೆ ಎನ್ನುವುದು ಹೆಚ್ಚಿವನರಿಗೆ ಗೊತ್ತಿರುತ್ತದೆ. ಆದರೆ ಹದಿಹರೆಯದ ಮಕ್ಕಳಲ್ಲಿ ಇದು ಹೆಚ್ಚಾಗಿಯೇ ಪರಿಣಾಮ ಬೀರುತ್ತದೆ. ಪ್ರೀತಿಯಲ್ಲಿ ಮೋಸವಾದರೆ ಅಥವಾ ಅವರ ಪ್ರಿಯಕರ/ಪ್ರೇಯಸ್ಸಿ ಅವರೊಂದಿಗೆ ಬ್ರೇಕ್‌ಅಪ್ ಮಾಡಿದರೆ ಅವರು ಸಹಿಸೋದಿಲ್ಲ. ಅದೇ ನೋವಿನಲ್ಲಿ ಪ್ರತಿನಿತ್ಯ ಕೊರಗುತ್ತಾರೆ. ಈ ವಿಚಾರವನ್ನು ಯಾರೊಂದಿಗೆ ಹೇಳೋದಿಕ್ಕಾಗದೆ ಖಿನ್ನತೆಗೆ ಒಳಗಾಗುತ್ತಾರೆ. ಆತ್ಮ ಹತ್ಯೆಗೆ ಯತ್ನಿಸುವ ಸಾಧ್ಯತೆಗಳು ಹೆಚ್ಚಿರುತ್ತದೆ.
ಆದ್ದರಿಂದ ಹದಿಹರೆಯದ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುವುದು ಪೋಷಕರ ಕರ್ತವ್ಯ. ಇಂತಹ ಪ್ರೀತಿಯ ಸಮಸ್ಯೆಗಳನ್ನು ಅವರು ಎಂದಿಗೂ ನಿಮ್ಮ ಬಳಿ ಹೇಳಿಕೊಳ್ಳೋದಿಲ್ಲ. ಆದರೆ ನೀವು ಅವರ ಜೊತೆಗೆ ಸ್ನೇಹಿತರಾಗಿದ್ದಾಗ ಅವರ ಒಂದೊಂದೆ ವಿಚಾರವನ್ನು ಹೇಳುತ್ತಾರೆ. ಹೀಗಾಗಿ ಎಲ್ಲವನ್ನೂ ನೀವು ನಾಜೂಕಾಗಿ ನಿಭಾಯಿಸಬೇಕು.



Click it and Unblock the Notifications


