Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಹಠ ಮಾಡುವ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸೂತ್ರಗಳು
ಈಗ ಪೋಷಕರಿಗೆ ದೊಡ್ಡ ತಲೆನೋವು ಅಂದ್ರೆ ಮಕ್ಕಳನ್ನ ಬೆಳೆಸೋದು. ಅದ್ರಲ್ಲೂ ಮಕ್ಕಳು ಸರಿಯಾಗಿ ಊಟ ಮಾಡಲ್ಲ, ಓದಲ್ಲ, ಯಾವಾಗಲು ಟಿವಿ ನೋಡ್ತಾರೆ, ಮೊಬೈಲ್ ಬಳಸುತ್ತಾರೆ ಅನ್ನೋದೆ ಎಲ್ಲರ ದೂರು. ಹೀಗಾಗಿ ಮಕ್ಕಳ ಸಾಕೋದು ಈಗ ದೊಡ್ಡ ಸಾಹಸ ಮಾಡಿದಂತೆ.
ಮಕ್ಕಳಿಗೆ ಒಂದು ಹೇಳಿದರೆ ಕಡಿಮೆ ಎರಡು ಮಾತು ಆಡಿದ್ರೆ ಹೆಚ್ಚಾಗುತ್ತೆ ಅನ್ನೋದು ಎಲ್ಲರ ದೂರು. ಇದರ ಜೊತೆಗೆ ಹಲವರು ಮಕ್ಕಳ ಬೆಳವಣಿಗೆ ಅವರ ಓದು, ಆಟ ಎಲ್ಲದರ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಿದ ಬಳಿಕವೂ ಮಕ್ಕಳು ಹಠ ಮಾಡುತ್ತಾರೆ. ಅವರನ್ನು ನಿಯಂತ್ರಣ ಮಾಡೋದೆ ದೊಡ್ಡ ಸವಾಲು ಎನ್ನುತ್ತಾರೆ.

ಮಕ್ಕಳು ಯಾವಾಗಲು ಹಠ ಮಾಡೋದು ಪೋಷಕರ ತಲೆನೋವಿಗೆ ಕಾರಣವಾಗಿದೆ. ಮನೆಯಲ್ಲಿದ್ದರೂ ಅವರದ್ದೇ ಹಠ, ಎಲ್ಲಿಗಾದರು ಕರೆದುಕೊಂಡು ಹೋದಾಗಲು ಅದೇ ರೀತಿ ಹಠ ಮಾಡುತ್ತಾರೆ ಅಂದ್ರೆ ಪೋಷಕರು ಇನ್ನಿಲ್ಲದ ಕೋಪಗೊಂಡರು ಎಲ್ಲ ಸುಧಾರಿಸಿಕೊಂಡು ಹೋಗುತ್ತಾರೆ.
ಹಾಗಾದರೆ ಹಠ ಮಾಡುವ ಮಕ್ಕಳನ್ನು ನಿಭಾಯಿಸುವುದು ಹೇಗೆ? ಮಕ್ಕಳ ಹಠ ಮಾಡುವುದು ಏಕೆ? ಅವರಿಗೆ ಬುದ್ದಿ ಹೇಳಿ ಸರಿ ದಾರಿಗೆ ತರುವುದು ಹೇಗೆ? ಹಠ ಮಾಡದಂತೆ ಎಚ್ಚರಿಕೆ ವಹಿಸುವುದು ಹೇಗೆ ಎಂಬುದನ್ನು ನೋಡೋಣ.
ಮಕ್ಕಳನ್ನು ಅತಿಯಾಗಿ ಮುದ್ದು ಮಾಡುವುದು
ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವ ನುಡಿಯಂತೆ. ಈಗ ಪೋಷಕರು ತಮ್ಮ ಜೀವನವನ್ನೇ ಮುಡುಪಿಟ್ಟು ಮಕ್ಕಳ ಮುದ್ದಿಸಿ ಬೆಳೆಸುತ್ತಾರೆ. ಅತಿಯಾದರೆ ಅಮೃತವು ವಿಷ ಎನ್ನುವಂತೆ ಹೆಚ್ಚು ಮುದ್ದು ಮಾಡುವ ಮಕ್ಕಳು ಹಠವೂ ಹೆಚ್ಚಾಗಿರುತ್ತೆ.
ಮಕ್ಕಳಿಗೆ ಹೊಡೆಯುವುದು
ಮಕ್ಕಳಿಗೆ ಮುದ್ದಿಸುವುದು ಎಷ್ಟು ಮುಖ್ಯವೋ ಹೊಡೆಯುವುದು ಮುಖ್ಯವೇ. ಆದ್ರೆ ಯಾವಾಗಲು ಹೊಡೆಯುವುದು ಮಾಡುತ್ತಿದ್ದರೆ ಮಕ್ಕಳು ಹಠಕ್ಕೆ ಬೀಳುತ್ತಾರೆ. ನೀವು ಹೊಡೆಯುವುದು ಮುಂದುವರೆಸಿದಾಗಲೆಲ್ಲ ಮಕ್ಕಳು ಹಠ ಬಿಗಿ ಮಾಡುತ್ತಾರೆ.
ಮಕ್ಕಳ ತಪ್ಪು ಸಮರ್ಥಿಸುವುದು
ಮಕ್ಕಳು ತಪ್ಪು ಮಾಡಿದಾಗ ಆ ತಪ್ಪನ್ನು ತಿದ್ದುವ ಬದಲು ಚಿಕ್ಕ ಮಗು ತಪ್ಪು ಮಾಡಿದೆ ಎಂದು ಸಮರ್ಥಿಸಿಕೊಳ್ಳುವುದು ಮಾಡಿದಾಗ ಮಕ್ಕಳಲ್ಲಿ ಹಠ ಮಾಡುವ ಮನೋಭಾವ ಬೆಳೆಯುತ್ತದೆ.
ಕೇಳಿದೆಲ್ಲಾ ಕೊಡಿಸುವುದು
ಮಕ್ಕಳು ಕೇಳಿದ್ದನ್ನೆಲ್ಲ ಇಲ್ಲ ಎನ್ನದೆ ಕೊಡಿಸುವುದು. ಕೆಲವರು ಮಕ್ಕಳು ಕೇಳಿದಾಗ ಇಲ್ಲ ಎನ್ನಬಾರದು ಎಂದು ಕೊಡಿಸುತ್ತಾರೆ. ಆದ್ರೆ ಮುಂದೊಂದು ದಿನ ಇದೇ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು.
ಮಕ್ಕಳನ್ನು ನಿಭಾಯಿಸುವುದು ಹೇಗೆ?
ಇಷ್ಟೆಲ್ಲಾ ಆದರೂ ಮಕ್ಕಳನ್ನು ನಾವೇ ನಿಯಂತ್ರಿಸಬೇಕು. ಅಷ್ಟಕ್ಕೂ ಹಠ ಮಾಡುವ ಮಕ್ಕಳನ್ನು ನಿಭಾಯಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ತಾಳೆ ಕಳೆದುಕೊಳ್ಳಬೇಡಿ
ಮಕ್ಕಳು ಹಠ ಹಿಡಿದಾಗ ಪೋಷಕರು ತಾಳ್ಮೆ ಕಳೆದುಕೊಳ್ಳುತ್ತಾರೆ. ಆದ್ರೆ ಹೀಗೆ ಮಾಡುವುದನ್ನೇ ಮಕ್ಕಳು ಸಹ ಬಯಸುತ್ತಾರೆ, ಆದ್ರೆ ನೀವು ಆ ಪರಿಸ್ಥಿತಿಯನ್ನ ಹೇಗೆ ನಿಭಾಯಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಮಕ್ಕಳ ವರ್ತನೆ ನಿಂತಿರುತ್ತದೆ. ನೀವು ತಾಳ್ಮೆ ಕಳೆದುಕೊಳ್ಳದೆ ನಿಧಾನವಾಗಿ ಅವರಿಗೆ ಮನದಟ್ಟು ಮಾಡಬೇಕಾಗುತ್ತದೆ.
ಪರಿಸ್ಥಿತಿಯನ್ನ ಪ್ರೀತಿಯಿಂದ ಮನವರಿಕೆ ಮಾಡಿ
ಮಕ್ಕಳು ಹಠ ಮಾಡುವುದು ಕೆಲವೇ ವಿಚಾರಕ್ಕೆ ಊಟ, ಆಟ, ಪಾಠ ಈ ಮೂರು ವಿಚಾರಗಳನ್ನು ಅವರಿಗೆ ನಿಧಾನವಾಗಿ ಅರ್ಥವಾಗಿಸಬೇಕು ಓದುವುದರ ಪ್ರಾಮುಖ್ಯತೆ, ಆಟ ಯಾವಾಗ ಆಡಬೇಕು. ಊಟದ ವಿಚಾರದಲ್ಲಿ ಅವರ ಬಳಿಕ ತಿಳಿ ಹೇಳಬೇಕು.
ಮೌಲ್ಯಗಳ ಪಾಠ ಮಾಡಿ
ಮಕ್ಕಳು ಚಿಕ್ಕ ವಯಸ್ಸಿನಲ್ಲಿದ್ದಾಗ ಅವರ ಮನಸ್ಸಿಗೆ ಯಾವುದು ಹೆಚ್ಚಾಗಿ ಪ್ರಭಾವ ಉಂಟು ಮಾಡಲಿದೆ ಎಂಬುದು ಮುಖ್ಯವಾಗುತ್ತದೆ. ಹೀಗಾಗಿ ಚಿಕ್ಕವರಿದ್ದಾಗಲೇ ಮೌಲ್ಯ ಯುತ ಪಾಠ ಹೇಳಿಕೊಡಿ. ಸಾಹಸಿಗರ ಕಥೆಗಳು, ಪೌರಾಣಿಕ ಕಥೆಗಳು, ಪವಿತ್ರಗ್ರಂಥಗಳ ಕುರಿತಂತೆ ಅವರಲ್ಲಿ ಅಭಿರುಚಿ ಬೆಳೆಸಿ.



Click it and Unblock the Notifications
