Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ನಿಮ್ಮ ಮಕ್ಕಳು ತುಂಬಾ ಮೊಬೈಲ್ ನೋಡ್ತಾ ಇದ್ದಾರಾ? ನೀವು ಹೀಗೆ ಮಾಡಿನೋಡಿ
ಈಗೀನ ಬಹುತೇಕ ಪೋಷಕರದ್ದು ಒಂದೇ ಕಂಪ್ಲೇಂಟ್... ಮಕ್ಕಳಿಗೆ ಎಷ್ಟು ಹೇಳಿದರೂ ಕೇಳಲ್ಲ, ತುಂಬಾನೇ ಮೊಬೈಲ್ ನೋಡುತ್ತಾರೆ. ಮಕ್ಕಳಿಗೆ ಮೊಬೈಲ್ ಕೊಟ್ಟರೆ ಸಾಕಯ ಗಲಾಟೆಯಿಲ್ಲ, ತುಂಟಾಟ ಇಲ್ಲ, ಸುಮ್ಮನೆ ಊಟ ಮಾಡುತ್ತಾರೆ ಎಂದು ಸುಮ್ಮನೆ ಕೂರುತ್ತಾರೆ ಎಂದು ಮಕ್ಕಳ ಕೈಗೆ ಮೊಬೈಲ್ ಕೊಡುವವರಿಗೇನೂ ಕಡಿಮೆಯಿಲ್ಲ, ನಂತರ ಮಕ್ಕಳನ್ನು ಮೊಬೈಲ್ ಗೀಳು ಕಡಿಮೆ ಮಾಡುವುದು ಹೇಗೆ ಎಂದು ಯೋಚಿಸುತ್ತಾರೆ.

ಮಕ್ಕಳಿಗೆ ತುಂಬಾ ಮೊಬೈಲ್ ನೀಡುವುದರಿಂದ ಅದು ಮಕ್ಕಳ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುವುದು, ಅವರ ದೈಹಿಕ-ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಅಷ್ಟೇ ಅಲ್ಲ ಅವರ ಸ್ವಭಾವ ಕೂಡ ತುಂಬಾನೇ ಬದಲಾಗುವುದು. ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ, ನೀವು ಹೇಳುವುದು ಅವರ ಕಿವಿಗೆ ಬೀಳಲ್ಲ, ಬೇರೆ ಮಕ್ಕಳ ಜೊತೆಗೆ ಬೆರೆತು ಆಡಲ್ಲ, ಮನೆಗೆ ಯಾರಾದರೂ ಬಂದರೆ ಅವರ ಕಡೆ ಸೌಜನ್ಯದ ನಗು ಕೂಡ ಬೀರಲ್ಲ, ತಾನಾಯ್ತು, ಮೊಬೈಲ್ ಆಯ್ತು ಎಂದು ಇದ್ದು ಬಿಡುತ್ತಾರೆ. ಮಕ್ಕಳಿಂದ ಮೊಬೈಲ್ ಗೀಳು ಬಿಡಿಸಬೇಕೆಂದರೆ ಪೋಷಕರು ಹೀಗೆ ಮಾಡಲೇಬೇಕು:
ಪೋಷಕರೇ ನೀವು ಮೊಬೈಲ್ ನೋಡುವುದನ್ನು ಕಡಿಮೆ ಮಾಡಬೇಕು
ಹೌದು ನಿಮ್ಮ ಮಕ್ಕಳು ಮೊಬೈಲ್ ನೋಡುವುದನ್ನು ಕಡಿಮೆ ಮಾಡಬೇಕು ಎಂದಾದರೆ ನೀವು ಮೊಬೈಲ್ ನೋಡುವುದು ಕಡಿಮೆ ಮಾಡಬೇಕು. ನೀವು ಟೈಮ್ ಸಿಕ್ಕಾಗ ಮೊಬೈಲ್ ಹಿಡಿದು ಕೂತು ನಂತರ ಮಕ್ಕಳಿಗೆ ಮೊಬೈಲ್ ನೋಡಬೇಡ ಎಂದರೆ ಅದು ವರ್ಕ್ ಆಗಲ್ಲ ಎಂದು ಅಧ್ಯಯನ ವರದಿ ಹೇಳಿದೆ. ಈ ಅಧ್ಯಯನದಲ್ಲಿ ಸುಮಾರು 10000 ಕುಟುಂಬ ಭಾಗಿಯಾಗಿತ್ತು, 12-13 ವರ್ಷದ ಮಕ್ಕಳನ್ನು ಈ ಅಧ್ಯಯನದಲ್ಲಿ ಸೇರಿಸಲಾಯ್ತು. ಆವಾಗ ಪೋಷಕರು ಹೆಚ್ಚಾಗಿ ಮೊಬೈಲ್ ನೋಡುತ್ತಿದ್ದರೆ ಅವರ ಮಕ್ಕಳು ಕೂಡ ಹೆಚ್ಚು ಹೊತ್ತು ಮೊಬೈಲ್‌ನಲ್ಲಿ ಕಳಿಯುತ್ತಾರೆ ಎಂದು ಈ ಅಧ್ಯಯನ ವರದಿ ಹೇಳಿದೆ.
ಆದ್ದರಿಂದ ಪೋಷಕರೇ ಮಕ್ಕಳಿಗೆ ಹೇಳುವ ಮುನ್ನ ನೀವು ಮೊಬೈಲ್ ನೋಡುವುದನ್ನು ಕಡಿಮೆ ಮಾಡಿ
ಹೌದು ಮಕ್ಕಳನ್ನು ನಮ್ಮನ್ನು ನೋಡಿ ಕಲಿಯುತ್ತಾರೆ, ಆದ್ದರಿಂದ ನೀವು ಮಕ್ಕಳಿಗೆ ಮೊಬೈಲ್ ತುಂಬಾ ಬಳಸಬೇಡ ಎಂದು ಹೇಳುವ ಮುನ್ನ ನೀವು ಮಿತಿಯಲ್ಲಿ ಬಳಸಿ. ನೀವು ಹೆಚ್ಚು ಬಳಸದೆ ಮಕ್ಕಳಿಗೆ ಬುದ್ಧಿವಾದ ಹೇಳಲು ಹೋದರೆ ಮಾತ್ರ ಅವರು ನಿಮ್ಮ ಮಾತು ಕೇಳುತ್ತಾರೆ.
ಮಕ್ಕಳ ತುಂಟಾಟ ತಡೆಗಟ್ಟಲು, ಊಟ ಮಾಡಿಸಲು ಮೊಬೈಲ್ ಕೊಡದಿರಿ
ಹೌದು ಮಕ್ಕಳು ತುಂಟಾಟ ಮಾಡುತ್ತಾರೆ, ನಮ್ಮನ್ನು ಕೆಲಸ ಮಾಡಲು ಬಿಡುತ್ತಿಲ್ಲ, ಸರಿಯಾಗಿ ಊಟ ಮಾಡಲ್ಲ ಅಂತ ಮೊಬೈಲ್ ಕೊಡುತ್ತಾರೆ. ನಾವು ಆರಾಮವಾಗಿ ಇರಲು ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಕೂರಿಸುವ ಅಭ್ಯಾಸ ಬಿಡಬೇಕು. ನಾವು ಗಲಾಟೆ ಮಾಡಿದಾಗ ಅಮ್ಮ-ಅಪ್ಪ ಮೊಬೈಲ್ ಕೊಡುತ್ತಾರೆ ಎಂದು ಮಕ್ಕಳಿಗೆ ಬೇಗನೆ ತಿಳಿಯುತ್ತದೆ, ಆವಾಗ ಅವರು ಮೊಬೈಲ್ ಸಿಗಲಿ ಎಂದು ತುಂಬಾನೇ ಗಲಾಟೆ ಮಾಡುತ್ತಾರೆ. ಹಾಗಾಗಿ ಮಕ್ಕಳು ಗಲಾಟೆ ಮಾಡುತ್ತಾರೆ ಎಂದು ಮೊಬೈಲ್ ನೀಡಲೇಬೇಡಿ.
ಅಲ್ಲದೆ ನೀವು ಕೂಡ ಮೊಬೈಲ್ ನೋಡದೆ ಇದ್ದರೆ ನಿಮ್ಮ ಹಾಗೂ ಮಗುವಿನ ಬಾಂಧವ್ಯ ಚೆನ್ನಾಗಿರಲಿದೆ
ಹೌದು ನೀವು ಮೊಬೈಲ್‌ನಲ್ಲಿ ಮುಳುಗಿದಾಗ ಮಗುವಿನ ಕಡೆ ಗಮನ ಹರಿಸಲು ಸಾಧ್ಯವಾಗಲ್ಲ, ಅದೇ ನೀವು ಮೊಬೈಲ್ ನೋಡಲ್ಲ, ಮಗುವೂ ನೋಡಲ್ಲ, ಆವಾಗ ಮಾತನಾಡುತ್ತೀರಿ, ಆಟ ಆಡುತ್ತೀರಿ ನಿಮ್ಮ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದು. ನಿಮಗೆ ನಿಮ್ಮ ಮಗುವಿನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಾಗುವುದು, ಆ ಮಕ್ಕಳಿಗೂ ನೀವು ಅವರ ಜೊತೆ ಕಳೆಯುವ ಕ್ಷಣಗಳು ಅವರ ನೆನಪಿನಲ್ಲಿ ಸದಾ ಉಳಿಯುತ್ತದೆ.
ಮೊಬೈಲ್ ಕೊಡಲೇಬಾರದಾ?
ಈ ಜಮಾನದಲ್ಲಿ ಹಾಗೆ ಹೇಳಲು ಸಾಧ್ಯವಿಲ್ಲ, ಅವರಿಗೆ ಅಸೈನ್‌ಮೆಂಟ್‌ಗೆ ಅಥವಾ ಏನಾದರು ಮಾಹಿತಿ ಹುಡುಕಲು ಈಗ ಮೊಬೈಲ್ ಅವಶ್ಯಕತೆ ಇದೆ. ಅಲ್ಲದೆ ರೀಲ್ಸ್ ನೋಡಲು, ಸ್ವಲ್ಪ ಗೇಮ್ ಆಡಲು ಕೂಡ ಕೇಳಬಹುದು, ಸ್ವಲ್ಪ ಹೊತ್ತು ಮೊಬೈಲ್ ಕೊಡಿ, ಅಲ್ಲದೆ ಚೈಲ್ಡ್ ಲಾಕ್ ಹಾಕಿ ಕೊಡಿ ನಂತರ ಪಡೆಯಿರಿ ಅರ್ಧ ಗಂಟೆಗಿಂತ ಹೆಚ್ಚು ಹೊತ್ತು ಮೊಬೈಲ್ ಕೊಡಲೇಬೇಡಿ.



Click it and Unblock the Notifications

