Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ನಿಮ್ಮ ಮಗಳು ಋತುಮತಿಯಾದಾಗ ಈ ತಪ್ಪುಗಳನ್ನು ಮಾಡಲೇಬೇಡಿ !
ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಋತುಮತಿಯಾಗುತ್ತಾರೆ. ಪೋಷಕರಿಗೆ ಒಂದು ಕಡೆಯಿಂದ ಮಗಳು ದೊಡ್ಡವಳಾಗುತ್ತಿದ್ದಾಳೆ ಅನ್ನೋ ಖುಷಿ. ಮತ್ತೊಂದು ಕಡೆಯಿಂದ ಮಗಳು ದೊಡ್ಡವಳಾದ ಹಾಗೇ ಜವಾಬ್ದಾರಿ ಹೆಚ್ಚಾಗುತ್ತೆ ಅನ್ನೋ ಭಯವು ಇರುತ್ತದೆ. ಸಾಮಾನ್ಯವಾಗಿ 13-14 ನೇ ವಯಸ್ಸಿಗೆ ಕಾಲಿಡುವಾಗ ಹೆಣ್ಣು ಮಕ್ಕಳು ಋತುಮತಿಯಾಗುತ್ತಾರೆ. ಕೆಲವು ಮಕ್ಕಳು ಮತ್ತೂ ಬೇಗನೆ ಋತುಮತಿ ಆಗುತ್ತಾರೆ. ಇನ್ನೂ ಕೆಲವು ಮಕ್ಕಳು ಕೊಂಚ ತಡವಾಗಿ ಆಗುತ್ತಾರೆ.
ಋತುಮತಿಯಾಗುವ ಮೊದಲು ನಿಮ್ಮ ಮಗಳಿಗೆ ಈ ಬಗ್ಗೆ ಎಲ್ಲಾ ಮಾಹಿತಿ ಗೊತ್ತಿದ್ದರೆ ತುಂಬಾನೇ ಒಳ್ಳೆಯದು. ಪೋಷಕರು ಈ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಆದರೆ ಈ ವಿಚಾರವನ್ನು ಮಗಳೊಂದಿಗೆ ಮುಕ್ತವಾಗಿ ಮಾತನಾಡಲು ಕೆಲ ತಾಯಂದಿರು ಹಿಂಜರಿಯುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು ಯಾಕಂದ್ರೆ ಮಗಳಿಗೆ ಎಲ್ಲಾ ವಿಚಾರ ಗೊತ್ತದ್ದರೆ ಆಕೆ ಋತುಮತಿಯಾದಾಗ ಎಲ್ಲವನ್ನು ನಿಭಾಯಿಸುತ್ತಾಳೆ. ಇಲ್ಲದಿದ್ದರೆ ಕೆಲವೊಂದು ಸಲ ಮಕ್ಕಳು ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಹಾಗಾದ್ರೆ ಮಗಳು ಋತುಮತಿಯಾದ ಸಂದರ್ಭದಲ್ಲಿ ಪೋಷಕರು ಏನು ಮಾಡಬೇಕು? ಮಾಡಬಾರದು ಅನ್ನೋದನ್ನು ತಿಳಿಯೋಣ.

ಮಗಳು ಋತುಮತಿಯಾದಾಗ ಏನು ಮಾಡಬೇಕು?
1. ಸರಿಯಾದ ಸ್ಯಾನಿಟರಿ ಪ್ಯಾಡ್ ನೀಡಿ
ಮಕ್ಕಳು ಒಂದು ವಯಸ್ಸಿಗೆ ಬಂದ ಮೇಲೆ ಋತುಮತಿಯಾಗುವ ಪ್ರಕ್ರಿಯೆ ಸಹಜವಾಗಿ ಆಗುತ್ತದೆ. ಈ ಸಂದರ್ಭದಲ್ಲಿ ಆಕೆಗೆ ಈ ಬಗ್ಗೆ ಮಾಹಿತಿ ನೀಡಿ. ಆಕೆಯ ಬ್ಯಾಗ್‌ನಲ್ಲಿ ಸ್ಯಾನಿಟರಿ ಪ್ಯಾಡ್ ಅಥವಾ ಸ್ಯಾನಿಟರಿ ಕಪ್ ಇಡಿ. ಇನ್ನೂ ಮನೆಯಲ್ಲೂ ಕೂಡ ಈ ವಸ್ತುಗಳು ಸಿದ್ಧವಾಗಿರಲಿ. ಯಾಕಂದ್ರೆ ಋತುಮತಿಯಾದ ಸಂದರ್ಭದಲ್ಲಿ ಕೈ ಕಾಲು ಓಡೋದಿಲ್ಲ. ಹೀಗಾಗಿ ಈ ಎಲ್ಲಾ ವಸ್ತುಗಳನ್ನು ಮೊದಲೇ ರೆಡಿ ಮಾಡಿ ಇಟ್ಟರೆ ಉತ್ತಮ.
2. ಋತುಚಕ್ರದ ಲಕ್ಷಣಗಳ ಬಗ್ಗೆ ಜಾಗರೂಕರಾಗಿರಿ
ಋತುಮತಿಯಾಗುವ ಸಂದರ್ಭದಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಲಕ್ಷಣಗಳು ಇರುತ್ತದೆ. ನಿಮ್ಮ ಮಗಳಿಗೆ ಹೆಚ್ಚಿನ ನೋವು ಅಥವಾ ನೋವು ಕಡಿಮೆ ಇರಬಹುದು. ಅದ್ರಲ್ಲೂ ಅವರಿಗೆ ಮೊದಲ ಅನುಭವ ಆಗಿರೋದ್ರಿಂದ ನೋವು ತಡೆದುಕೊಳ್ಳುವ ಶಕ್ತಿ ಇರೋದಿಲ್ಲ. ಹೀಗಾಗಿ ನೋವು ತಣಿಸಲು ಬಿಸಿ ನೀರಿನ ಬಾಟಲ್, ಚಾಕಲೇಟ್‌ಗಳನ್ನು ರೆಡಿಯಾಗಿಟ್ಟಿರಿ. ಈ ಸಂದರ್ಭದಲ್ಲಿ ಪೋಷಕರು ಆಕೆಗೆ ಪ್ರೋತ್ಸಾಹವಾಗಿ ನಿಲ್ಲಬೇಕು.
3. ಆಕೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಿರಿ
ಮಗಳಿಗೆ ಋತುಮತಿಯಾಗುವ ಬಗ್ಗೆ ನೀವು ಈ ಮೊದಲೇ ಮಾಹಿತಿ ನೀಡಿರಬಹುದು. ಅಥವಾ ನೀಡಿರದೇ ಇರಬಹುದು. ಆದರೆ ಋತುಮತಿಯಾದ ನಂತರ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ನೀವು ಸಿದ್ಧರಿರಬೇಕು. ಆ ಪುಟ್ಟ ತಲೆಯಲ್ಲಿ ಸಾವಿರಾರು ಪ್ರಶ್ನೆಗಳಿರುತ್ತದೆ. ಆ ಎಲ್ಲಾ ಪ್ರಶ್ನೆಗಳಿಗೆ ಪೋಷಕರು ಯಾವುದೇ ಮುಜುಗೊರವಿಲ್ಲದೇ ಉತ್ತರಿಸಬೇಕು.
ಮಗಳು ಋತುಮತಿಯಾದಾಗ ಏನು ಮಾಡಬಾರದು?
1. ಎಲ್ಲರ ಬಳಿ ಈ ವಿಚಾರದ ಬಗ್ಗೆ ಹೇಳಿಕೊಳ್ಳಬೇಡಿ
ಮಗಳು ಋತುಮತಿಯಾದಾಗ ಆಕೆ ದೊಡ್ಡವಳಾದಳು ಎಂಬ ಖುಷಿ ಖಂಡಿತ ಇರುತ್ತದೆ. ಹೀಗಾಗಿ ಪೋಷಕರು ಕುಟುಂಬಸ್ಥರು, ಸ್ನೇಹಿತರು, ನೆರೆ ಹೊರೆಯವರಿಗೆ ಈ ಬಗ್ಗೆ ತಿಳಿಸುತ್ತಾರೆ. ಅಷ್ಟೇ ಅಲ್ಲ, ಕೆಲವೊಂದು ಸಲ ಊರಿಗೆಲ್ಲಾ ಅಹ್ವಾನಿಸಿ ಈ ವಿಜೃಂಭಣೆಯನ್ನು ಆಚರಣೆ ಮಾಡಲಾಗುತ್ತದೆ. ಆದರೆ ಅನೇಕ ಹೆಣ್ಣು ಮಕ್ಕಳಿಗೆ ಇದು ಇಷ್ಟವಾಗೋದಿಲ್ಲ. ಅವರು ಇದರಿಂದ ಮುಜುಗೊರ ಅನುಭವಿಸುತ್ತಾರೆ. ಹೀಗಾಗಿ ನಿಮ್ಮ ಆಪ್ತರು ಹಾಗೂ ಕುಟುಂಬಸ್ಥರಿಗಷ್ಟೇ ಈ ಬಗ್ಗೆ ತಿಳಿಸಿ. ಚಿಕ್ಕದಾಗಿ ಆಚರಣೆ ಮಾಡಿ.
2. ನೋವಿನ ಬಗ್ಗೆ ನಿರ್ಲಕ್ಷ್ಯ ಬೇಡ
ಋತುಮತಿಯಾಗುವಾಗ ಸಂದರ್ಭದಲ್ಲಿ ಯಾವ ರೀತಿ ನೋವಿರುತ್ತದೆ ಅನ್ನೋದು ಗೊತ್ತಿರುತ್ತದೆ. ಅದ್ರಲ್ಲೂ ಮೊದಲ ಬಾರಿಗೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ನಿಮ್ಮ ಮಗಳಿಗೆ ಇರೋದಿಲ್ಲ. ಹೀಗಾಗಿ ಈ ನೋವನ್ನು ನಿರ್ಲಕ್ಷ್ಯ ಮಾಡಬೇಡಿ. ಈ ಸಂದರ್ಭದಲ್ಲಿ ಆಕೆಗೆ ನಿಮ್ಮಿಂದ ಆಗುವ ಎಲ್ಲಾ ಸಹಾಯವನ್ನೂ ಮಾಡಿ. ನೋವು ನಿವಾರಣೆಯಾಗಲು ಎಲ್ಲಾ ರೀತಿಯಲ್ಲೂ ಕ್ರಮಗಳನ್ನು ಕೈಗೊಳ್ಳಿ.
ಮಹಿಳೆಯರಲ್ಲಿ ಋತುಚಕ್ರ ಸಂಭವಿಸೋದು ಸಹಜ ಪ್ರಕ್ರಿಯೆ ಇದು ಮುಜುಗರ ಪಟ್ಟುಕೊಳ್ಳುವ ವಿಚಾರ ಅಲ್ಲ. ಹೀಗಾಗಿ ನಿಮ್ಮ ಮಗಳಿಗೆ ಈ ಬಗ್ಗೆ ಮೊದಲೇ ತಿಳಿಸಿದರೆ ಉತ್ತಮ.



Click it and Unblock the Notifications


