Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಪೋಷಕರೇ, ನಿಮ್ಮ ಮಕ್ಕಳ ಬುದ್ಧಿವಂತಿಕೆ ಹೆಚ್ಚಿಸಲು ಏನು ಮಾಡಬೇಕು?
ಎಲ್ಲ ಪೋಷಕರಿಗೆ ನಮ್ಮ ಮಕ್ಕಳನ್ನು ತುಂಬಾ ಬುದ್ಧಿವಂತರನ್ನಾಗಿ ಮಾಡಬೇಕೆಂಬ ಆಸೆ ಇರುತ್ತದೆ. ಆದರೆ ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡಲು ಪೋಷಕರ ಮಾತ್ರಕೂಡ ತುಂಬಾ ಮುಖ್ಯವಾಗುತ್ತದೆ, ಮಕ್ಕಳ ಬುದ್ಧಿವಂತಿಕೆ ಹೆಚ್ಚಿಸಲು ಏನು ಮಾಡಬೇಕು ಎಂದು ನೋಡೋಣ:

ಮಕ್ಕಳಿಗೆ ಸಂಗೀತ ಕೇಳುವಂತೆ ಮಾಡಿ: ಮಕ್ಕಳು ಸಂಗೀತ ಕೇಳಬೇಕು, ಇದು ಅವರ ಬುದ್ಧಿವಂತಿಕೆಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ, ಮಕ್ಕಳು ಸಂಗೀತ ಕಲಿಯುವುದು, ಸಂಗೀತದ ವಾದ್ಯಗಳನ್ನು ನುಡಿಸುವುದು ಇದು ಕೂಡ ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಹೊಸ ಆಟಗಳನ್ನು ಪರಿಚಯಿಸಿ: ಮಕ್ಕಳು ಹೊಸ ಸ್ಪೋರ್ಟ್ಸ್ ಕಲಿಯಬೇಕು, ಇದರಿಂದ ಅವರ ಬುದ್ಧಿಶಕ್ತಿ ಹೆಚ್ಚಾಗುವುದು ಹಾಗೂ ಅವರ ದೈಹಿಕ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಇಂಥ ಆಟಗಳು ಮಕ್ಕಳ ಬುದ್ಧಿಶಕ್ತಿ ಹಾಗೂ ನೆನಪಿನ ಶಕ್ತಿ ಚುರುಕುಗೊಳಿಸುತ್ತೆ.
ಮೆದುಳು ಚುರುಕುಗೊಳಿಸುವ ಆಟಗಳನ್ನು ಆಡುವುದು: ಪದಬಂಧ, ಚೆಸ್ ಮುಂತಾದ ಮೆದುಳಿಗೆ ಕೆಲಸ ಕೊಡುವ ಆಟಗಳನ್ನು ಕಲಿಸುವುದು ಕೂಡ ತುಂಬಾನೇ ಮುಖ್ಯ.
ಉಸಿರಾಟದ ವ್ಯಾಯಾಮ: ಪ್ರತಿನಿತ್ಯ ಉಸಿರಾಟದ ವ್ಯಾಯಾಮ ಮಾಡುವುದರಿಂದ ಮಕ್ಕಳ ಮೆದುಳು ಚುರುಕಾಗುವುದು,ಅಲ್ಲದೆ ಅವರಲ್ಲಿ ಆತ್ಮವಿಶ್ವಾಸ ಹೆಚಚಾಗಲಿದೆ, ನೆನಪಿನ ಶಕ್ತಿ ಹೆಚ್ಚುವುದು. ಅಲ್ಲದೆ ಮಕ್ಕಳಲ್ಲಿ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ಅವರ ಬುದ್ಧಿ ಸಾಮರ್ಥ್ಯ ಹೆಚ್ಚಾಗುವುದು.
ಅವರ ಆಲೋಚನೆಗಳನ್ನು ತಡೆಹಿಡಿಯಬೇಡಿ: ಮಕ್ಕಳ ಚಿಂತನೆಗೆ ತಡೆ ಹಾಕಬೇಡಿ, ಅವರಿಗೆ ಅನಿಸಿದ್ದನ್ನು ಮಾಡಲಿ, ತಪ್ಪುಗಳಾಗಲಿ, ಆ ತಪ್ಪುಗಳಿಂದ ಅವರು ಪಾಠ ಕಲಿಯುವಂತಾಗಬೇಕು, ಅದು ಮಾಡಬೇಡ ಇದು ಮಾಡಬೇಡ ಎಂದು ತುಂಬಾನೇ ನಿರ್ಬಂಧ ಮಾಡಿದರೆ ಅದು ಮಕ್ಕಳ ಆಲೋಚನಾ ಸಾಮರ್ಥ್ಯವನ್ನು ಮೊಟಕುಗೊಳಿಸುತ್ತದೆ.
ಅವರನ್ನು ಹೊಗಳಿ: ಹೌದು ಅವರು ಒಳ್ಳೆಯದು ಮಾಡಿದಾಗ ಅವರನ್ನು ಹೊಗಳಿ, ಹೊಗಳಿಕೆ ಅವರನ್ನು ಮತ್ತಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆ.
ಅವರ ಜೊತೆಗಿನ ಬಾಂಧವ್ಯ: ಮಕ್ಕಳ ಜೊತೆಗಿನ ಉತ್ತಮ ಬಾಂಧವ್ಯ ಅವರಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಮಕ್ಕಳ ಜೊತೆ ಪೋಷಕರ ಬಾಂಧವ್ಯ ಹೇಗಿರುತ್ತದೆ ಎಂಬುವುದು ಅವರ ಬುದ್ಧಿವಂತಿಕೆ, ಆಲೋಚನಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದು. ಅವರನ್ನು ಎಮೋಷನಲ್ ಸ್ಟ್ರಾಂಗ್ ಮಾಡಲು ಪ್ರಯತ್ನಿಸಬೇಕು.
ಮಕ್ಕಳ ಕ್ರಿಯೇಟಿವಿಟಿ ಪ್ರೋತ್ಸಾಹಿಸಬೇಕು
ನೀವು ನೀವು ಊಹಿಸಿರುವಂತೆ ಮಕ್ಕಳು ಇರಬೇಕೆಂದು ಬಯಸದೆ ಅವರಲ್ಲಿನ ಕ್ರಿಯೇಟಿವಿಟಿ ಹೆಚ್ಚಿಸಲು ನೀವು ಪ್ರೋತ್ಸಾಹ ನೀಡಬೇಕು, ಇದು ನಿಮ್ಮ ಮಕ್ಕಳ ಪ್ರತಿಭೆ ಪೋಷಣೆ ಮಾಡಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿ.
ಅವರ ಭಾವನೆಗಳಿಗೆ ಬೆಂಬಲ ನೀಡಿ
ಮಕ್ಕಳ ಮನಸ್ಸು ಅರ್ಥ ಮಾಡಿಕೊಳ್ಳಬೇಕು. ಮಕ್ಕಳು ತುಂಬಾ ಒತ್ತಡದಲ್ಲಿದ್ದರೆ ಅದು ಅವರ ಚಿಂತನೆ ಬುದ್ಧಿವಂತಿಕೆ ಮೇಲೆ ಗಮನಹರಿಸಬೇಕು.
ಅವರು ಏನು ಹೇಳುತ್ತಾರೆ ಅದನ್ನು ಕೇಳಬೇಕು: ಪೋಷಕರು ನಾವು ಹೇಳಿದ್ದೇ ಸರಿ ಅಂತ ವರ್ತಿಸಬಾರದು, ಅವರು ಏನು ಹೇಳುತ್ತಾರೆ ಎಂಬುವುದನ್ನು ಕೇಳಿ, ನಿಮ್ಮ ಈ ಬಗೆಯ ವರ್ತನೆ ಅವರಲ್ಲಿ ಆಲೋಚನೆ ಸಾಮರ್ಥ್ಯ, ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಿಸುತ್ತದೆ.
ಮಕ್ಕಳ ದೈಹಿಕ ವ್ಯಾಯಾಮದ ಕಡೆಗೆ ಗಮನಹರಿಸಿ: ಮಕ್ಕಳ ಮಾನಸಿಕಾರೋಗ್ಯದ ಜೊತೆಗೆ ದೈಹಿಕ ಆರೋಗ್ಯ ಕೂಡ ತುಂಬಾನೇ ಮುಖ್ಯ. ಅವರನ್ನು ಆಟ ಆಡಲು ಬಿಡಿ. ಸದಾ ಓದು ಓದು ಅಂತ ಹೇಳದೆ ಆಟ ಆಡಲು ಕೂಡ ಸಮಯ ನೀಡಬೇಕು.
ಹೀಗೆ ಈ ಎಲ್ಲಾ ಅಂಶಗಳ ಕಡೆಗೆ ಗಮನಹರಿಸಿದರೆ ನಿಮ್ಮ ಮಕ್ಕಳ ಬುದ್ಧಿ ಸಾಮರ್ಥ್ಯ ಹೆಚ್ಚಾಗುವುದು, ನೆನಪಿನ ಶಕ್ತಿ ಚೆನ್ನಾಗಿರುತ್ತದೆ, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು.



Click it and Unblock the Notifications











