Latest Updates
-
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ -
ಎಚ್ಚರ! ಬೆಂಗಳೂರಿನಲ್ಲಿ ಶಿಶು ಆಹಾರದ ಮೇಲೆ FSSAI ದಾಳಿ: ನಿಮ್ಮ ಮಗುವಿನ ಆಹಾರ ಸುರಕ್ಷಿತವೇ? -
ಇಂದಿನ ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದ ಬೆಲೆ ತಿಳಿಯಿರಿ ಮತ್ತು ಮಳೆಗಾಲದ ಮೈಲೇಜ್ ಟಿಪ್ಸ್ ಇಲ್ಲಿದೆ -
ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಕ್ರಮಗಳನ್ನು ಮರೆಯದಿರಿ! -
ರಾಜಸ್ಥಾನ UCC: ಲಿವ್-ಇನ್ ಮತ್ತು ಮದುವೆ ಜೋಡಿಗಳೇ ಎಚ್ಚರ, ಈ ದಾಖಲೆಗಳು ಸಿದ್ಧವಿರಲಿ! -
ಮಳೆಗಾಲದ ಎಚ್ಚರಿಕೆ: ಅಪಾರ್ಟ್ಮೆಂಟ್ ಸೋರಿಕೆ ತಡೆಯಲು ಮತ್ತು ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಸರಳ ಉಪಾಯಗಳು -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ₹350 ಕ್ಕಿಂತ ಕಡಿಮೆ ವೆಚ್ಚದಲ್ಲಿ 7 ಹೈ-ಪ್ರೋಟೀನ್ ಬ್ರೇಕ್ಫಾಸ್ಟ್ ಐಡಿಯಾಗಳು! -
ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಹೊಸ ರೂಲ್ಸ್: PoP ಮೂರ್ತಿ ನಿಷೇಧ, ಅನುಮತಿ ಪಡೆಯುವುದು ಹೇಗೆ? -
ದೆಹಲಿ ಆರೆಂಜ್ ಅಲರ್ಟ್: ಮಳೆಯಲ್ಲಿ ಮನೆಯಲ್ಲೇ ಫಿಟ್ ಆಗಿರಲು ಈ 20 ನಿಮಿಷದ ವರ್ಕೌಟ್ ಟ್ರೈ ಮಾಡಿ
ವೈವಾಹಿಕ ಜೀವನ ಮತ್ತು ತಾಯ್ತನವನ್ನು ಒಟ್ಟಾಗಿ ನಿಭಾಯಿಸೋದು ಹೇಗೆ? ಇಲ್ಲಿದೆ ಟಿಪ್ಸ್!
ಮದುವೆ ಅನ್ನೋದು ಒಂದು ಹೆಣ್ಣಿನ ಬಾಳಿನ ಮುಖ್ಯವಾದ ಘಟ್ಟ. ಮದುವೆಯಾದ ಮೇಲೆ ಆಕೆಯ ಗಂಡ ಹಾಗೂ ಸಂಸಾರ ಆಕೆಗೆ ತುಂಬಾನೇ ಮುಖ್ಯವಾಗುತ್ತದೆ. ಅವಳು ತನ್ನ ಗಂಡ ಹಾಗೂ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಇನ್ನೂ ಆಕೆಯ ಬಾಳಿನ ಎರಡನೇ ಮುಖ್ಯವಾದ ಘಟ್ಟ ಎಂದರೆ ಅದು ತಾಯ್ತನ.
ಈಗ ಅವಳು ತನ್ನ ಗಂಡನ ಜೊತೆಗೆ ಮಗುವನ್ನು ನಿಭಾಯಿಸಬೇಕಾದ ಜವಾಬ್ದಾರಿ ಇರುತ್ತದೆ. ಕೆಲವೊಂದು ಹೆಣ್ಣು ಮಕ್ಕಳಿಗೆ ಎರಡೆರಡು ಜವಾಬ್ದಾರಿಯನ್ನು ಒಟ್ಟಾಗಿ ನಿಭಾಯಿಸೋದು ತುಂಬಾನೇ ಕಷ್ಟವಾಗುತ್ತದೆ. ಅಷ್ಟಕ್ಕು ವೈವಾಹಿಕ ಜೀವನ ಹಾಗೂ ತಾಯ್ತನವನ್ನು ಒಟ್ಟಾಗಿ ನಿಭಾಯಿಸೋದು ಹೇಗೆ ಇಲ್ಲಿದೆ ಟಿಪ್ಸ್!

1. ಮೊದಲ ಆದ್ಯತೆ ಯಾವುದಕ್ಕೆ ನೀಡಬೇಕೆಂದು ಆಲೋಚಿಸಿ
ಗಂಡ- ಮಕ್ಕಳು ಇಬ್ಬರಲ್ಲಿ ಒಬ್ಬರನ್ನು ಖಂಡಿತ ಆಯ್ಕೆ ಮಾಡಿಕೊಳ್ಳೋದಕ್ಕೆ ಆಗೋದಿಲ್ಲ. ಹೀಗಾಗಿ ಆ ಸಮಯಕ್ಕೆ ಅನುಗುಣವಾಗಿ ನಿಮ್ಮ ಮೊದಲ ಪ್ರಾಮುಖ್ಯತೆ ಯಾರಿಗೆ ನೀಡಬೇಕೆಂದು ಆಲೋಚಿಸಿ. ಯಾವ ಕೆಲಸ ಮೊದಲು ಆಗಬೇಕು ಅನ್ನೋದ್ರ ಬಗ್ಗೆ ಗಮನ ಕೊಡಿ. ಉದಾಹರಣೆಗೆ ನಿಮ್ಮ ಪತಿ ಆಫಿಸ್ ಗೆ ಬೇಗನೆ ಹೋಗಬೇಕಿದ್ರೆ ನಿಮ್ಮ ಮೊದಲ ಪ್ರಾಮುಖ್ಯತೆ ಅವರಿಗೆ ನೀಡಿ. ನಂತರ ಮಕ್ಕಳ ಕಡೆಗೆ ಗಮನ ಹರಿಸಿ.
2. ಇಬ್ಬರ ಜೊತೆಗೂ ಸುಂದರ ಕ್ಷಣಗಳನ್ನು ಕಳೆಯಿರಿ
ಮಗು ಬಂದ ಮೇಲೆ ನಿಮ್ಮ ಗಮನ ಸಂಪೂರ್ಣವಾಗಿ ಮಗುವಿನ ಮೇಲೆ ಇರಬೇಕೆಂದೇನಿಲ್ಲ. ಇದರಿಂದ ನಿಮ್ಮ ಪತಿ ಬೇಸರಗೊಳ್ಳಬಹುದು. ಗಂಡ ಆಫಿಸ್ ಗೆ ಹೋದ ಸಂದರ್ಭದಲ್ಲಿ ಪೂರ್ತಿ ದಿನ ಮಗುವಿನ ಜೊತೆಗೆ ಕಳೆಯುತ್ತೀರಿ. ಮಗುವಿನ ಲಾಲನೆ- ಪಾಲನೆ ಮಾಡುತ್ತೀರಿ. ಆಟವಾಡುತ್ತೀರಿ, ಮಗುವನ್ನು ಮುದ್ದು ಮಾಡುತ್ತೀರಿ. ಸಾಧ್ಯವಾದರೆ ಗಂಡ ಮನೆಗೆ ಬಂದ ಮೇಲೆ ಅವರಿಗಾಗಿ ಸಮಯ ನೀಡಿ. ಅವರ ಜೊತೆಗೆ ಕುಳಿತು ಸಿನಿಮಾ ನೋಡಿ ಸಮಯವನ್ನು ಸುಂದರ ಕ್ಷಣಗಳನ್ನು ಕಳೆಯಿರಿ.
3. ಗಂಡನ ಜೊತೆಗೆ ಸಂವಹನ ನಡೆಸಿ
ಮಗು ಬಂದ ಮೇಲೆ ನಿಮ್ಮ ಹೆಚ್ಚಿನ ಗಮನ ಮಗುವಿನ ಕಡೆಗೆ ಇದ್ದಾಗ ಖಂಡಿತ ಅವರು ಬೇಸರ ಪಟ್ಟುಕೊಂಡು ಇರುತ್ತಾರೆ. ನಿಮ್ಮ ಜೊತೆಗೆ ಅವರಿಗೆ ಸುಂದರ ಕ್ಷಣಗಳನ್ನು ಕಳೆಯೋದಕ್ಕೆ ಸಾಧ್ಯವಾಗದೇ ಇರಬಹುದು. ಇಂತಹ ಸಂದರ್ಭದಲ್ಲಿ ಪತ್ನಿಯಾಗಿ ನೀವು ಅವರ ಮನಸ್ಸಿನಲ್ಲಿ ಏನಿದೆ ಅನ್ನೋದನ್ನು ಮಾತನಾಡಿ ತಿಳಿದುಕೊಳ್ಳಿ. ಅವರಿಗೆ ಯಾವಾಗ ಸಮಯ ನೀಡಬೇಕು ಅನ್ನೋದನ್ನು ಅರ್ಥ ಮಾಡಿಕೊಳ್ಳಿ. ಗಂಡನಿಗೂ ಸಾವಿರಾರು ಸಮಸ್ಯೆಗಳು ಇರುತ್ತದೆ. ಈ ವೇಳೆ ಅವರ ಜೊತೆಗೆ ಮಾತನಾಡಿ ಅವರಿಗೆ ದೈರ್ಯ ತುಂಬುವ ಕೆಲಸ ನೀವು ಮಾಡಬೇಕು.
4. ಚೆನ್ನಾಗಿ ಡ್ರೆಸ್ ಮಾಡಿಕೊಳ್ಳಿ
ಮಕ್ಕಳಾದ ಮೇಲೆ ಎಲ್ಲಾ ತಾಯಂದಿರೂ ಬದಲಾಗುತ್ತಾರೆ. ತಮ್ಮ ಅಂದ-ಚೆಂದದ ಬಗ್ಗೆ ಗಮನ ಕೊಡೋದಿಲ್ಲ. ಪೂರ್ತಿ ಗಮನ ಮಕ್ಕಳ ಮೇಲೆ ಇರುತ್ತದೆ. ಮಕ್ಕಳನ್ನು ನೋಡಿಕೊಳ್ಳೋದ್ರಲ್ಲೇ ಸುಸ್ತಾಗಿ ಹೋಗುತ್ತಾರೆ. ಈ ರೀತಿ ಇರೋದು ತಪ್ಪು. ನೀವು ನಿಮಗೋಸ್ಕರ ಬದುಕಬೇಕು. ಚೆನ್ನಾಗಿ ಡ್ರೆಸ್ ಮಾಡಿಕೊಳ್ಳಿ. ನಿಮ್ಮ ಫಿಟ್ನೆಸ್ ಬಗ್ಗೆ ಗಮನ ನೀಡಿ. ಆಗ ನಿಮ್ಮ ಮಾನಸಿಕ ಆರೋಗ್ಯ ಚೆನ್ನಾಗಿ ಇರುತ್ತದೆ. ನೀವು ಈ ರೀತಿ ಇದ್ದರೆ ನಿಮ್ಮ ಗಂಡನಿಗೂ ನಿಮ್ಮ ಮೇಲೆ ಆಸಕ್ತಿ ಹೆಚ್ಚಾಗುತ್ತದೆ.
5. ಸರಿಯಾಗಿ ನಿದ್ರೆ ಮಾಡಿ
ಮಕ್ಕಳ ಪಾಲನೆ-ಪೋಷಣೆ ಮಾಡಬೇಕಾದ ಸಂದರ್ಭದಲ್ಲಿ ತಾಯಂದಿರು ನಿದ್ದೆಯನ್ನು ಮರೆತು ಬಿಡಬೇಕು. ರಾತ್ರಿಯಿಡೀ ಸರಿಯಾಗಿ ನಿದ್ದೆ ಇರೋದಿಲ್ಲ. ಇದರಿಂದ ನಿಮ್ಮ ಮಾನಸಿಕ ಆರೋಗ್ಯ ಹಾಳಾಗುತ್ತದೆ. ಗಂಡನ ಜೊತೆಗೆ ಸಣ್ಣ-ಪುಟ್ಟ ವಿಚಾರಗಳಿಗೂ ಜಗಳವಾಡುತ್ತೀರಿ. ಹೀಗಾಗಿ ತಾಯಿಗೂ ನಿದ್ದೆ ತುಂಬಾನೇ ಅವಶ್ಯಕವಾಗಿದೆ. ರಾತ್ರಿ ನಿದ್ದೆ ಮಾಡೋದಕ್ಕೆ ಸಾಧ್ಯವಾಗದೇ ಹೋದರೆ ಹಗಲಿನ ಸಮಯದಲ್ಲಿ ಬೇಗ ಬೇಗ ಕೆಲಸ ಮುಗಿಸಿ ಸಮಯ ಸಿಕ್ಕಾಗಲೆಲ್ಲಾ ಕಣ್ತುಂಬ ನಿದ್ದೆ ಮಾಡಿ. ಇದರಿಂದ ನೀವು ಆರೋಗ್ಯವಾಗಿರುತ್ತೀರಿ.
6. ವೀಕೆಂಡ್ ಹೊರಗಡೆ ಹೋಗಿ
ಇಡೀ ದಿನ ಮನೆಯಲ್ಲಿ ಇದ್ದು ನಿಮಗೂ ಕೂಡ ಬೇಜಾರಾಗಿರುತ್ತೆ. ಮಕ್ಕಳಿಗೂ ಒಂದು ರೀತಿ ಚೇಂಜ್ ಬೇಕಿರುತ್ತೆ. ನಿಮ್ಮ ಪತಿಗೂ ನಿಮ್ಮ ಜೊತೆಗೆ ಸಮಯ ಕಳೆಯೋದಕ್ಕೆ ಆಸೆ ಇರುತ್ತೆ. ಹೀಗಾಗಿ ವೀಕೆಂಡ್ ನಲ್ಲಿ ಒಂದು ಸಾರಿಯಾದರೂ ಹೊರಗಡೆ ಸುತ್ತಾಡೋದಕ್ಕೆ ಹೋಗಿ. ಪತಿ ಹಾಗೂ ಮಕ್ಕಳ ಜೊತೆಗೆ ಸಮಯ ಕಳೆದಂತೆ ಆಗುತ್ತದೆ. ಜೊತೆಗೆ ನಿಮ್ಮ ಮನಸ್ಸಿಗೂ ಒಂದು ರೀತಿ ನೆಮ್ಮದಿ ಸಿಗುತ್ತದೆ.
7. ಯಾವುದೇ ರೀತಿ ಕೊರಗು ಕಾಡದಂತೆ ಜಾಗೃತೆ ವಹಿಸಿ
ಮಕ್ಕಳಾದ ಮೇಲೆ ಸಾಮಾನ್ಯವಾಗಿ ತಾಯಂದಿರು ಕೆಲಸ ಬಿಡಲೇಬೇಕಾಗುತ್ತದೆ. ಹೆಚ್ಚಿನ ತಾಯಂದಿರಿಗೆ ಮಕ್ಕಳಿಂದಾಗಿ ತಮ್ಮ ಭವಿಷ್ಯ ಹಾಳಾಗಿ ಹೋಯ್ತು ಅನ್ನೋ ಕೊರಗು ಕಾಡುತ್ತಲೇ ಇರುತ್ತದೆ. ಇದಕ್ಕೆ ಪರಿಹಾರ ನೀವೇ ಕಂಡುಕೊಳ್ಳಬೇಕು. ಒಂದಾ ಮಗುವನ್ನು ನೋಡಿಕೊಳ್ಳೋದಕ್ಕೆ ಬೇರೆ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಮಗುವಿನ ಮುಖ ನೋಡುತ್ತಾ ನಿಮ್ಮ ವೃತ್ತಿ ಜೀವನವನ್ನು ಮರೆತು ಬಿಡಬೇಕು.
ಮದುವೆ ಹಾಗೂ ತಾಯ್ತನವನ್ನು ನಿಭಾಯಿಸೋದು ಸುಲಭದ ಮಾತಲ್ಲ. ಆದರೆ ತಾಯಿಯಾದವಳು ಗಟ್ಟಿ ಮನಸ್ಸು ಮಾಡಿ ಇದಕ್ಕೆಲ್ಲಾ ಸಿದ್ಧವಾಗಿ ಇರಬೇಕು.



Click it and Unblock the Notifications
