Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತಾಯಂದಿರೇ ಹುಟ್ಟುವ ಮಗು ಆರೋಗ್ಯವಾಗಿರಬೇಕಾದರೆ ಈ ತಪ್ಪುಗಳನ್ನು ಮಾಡಲೇಬೇಡಿ!
ಹುಟ್ಟೋ ಮಗುವಿನ ಬಗ್ಗೆ ತಂದೆ ತಾಯಿಗೆ ನೂರಾರು ಆಸೆ, ಕನಸುಗಳಿರುತ್ತದೆ. ಮಗು ತಾಯಿಯ ಗರ್ಭದಲ್ಲಿರಬೇಕಾದರೆ ಮಗು ಬೆಳೆದು ದೊಡ್ಡವನಾದ ಮೇಲೆ ಶ್ರೇಷ್ಠ ವ್ಯಕ್ತಿಯಾಗಬೇಕೆಂಬ ಬಯಕೆ ಇರುತ್ತದೆ. ಆದರೆ ಹುಟ್ಟೋ ಎಲ್ಲಾ ಮಕ್ಕಳು ಆರೋಗ್ಯವಾಗಿ ಹುಟ್ಟಬೇಕೆಂದೇನಿಲ್ಲ. ಕೆಲ ಮಕ್ಕಳು ದೈಹಿಕ ಹಾಗೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಾರೆ. ಇದಕ್ಕೆ ಅನೇಕ ಕಾರಣಗಳು ಇರಬಹುದು. ಆದರೆ ಕೆಲವೊಂದು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹುಟ್ಟುವ ಮಗುವಿನ ಜನ್ಮ ದೋಷಗಳನ್ನು ಪರಿಹರಿಸಬಹುದು. ಹಾಗಾದ್ರೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಅನ್ನೋದನ್ನು ತಿಳಿಯೋಣ.

1. ಪ್ರತಿನಿತ್ಯ 400 ಮಿಲಿ ಗ್ರಾಂ ಫೋಲಿಸ್ ಆಮ್ಲವನ್ನು ತೆಗೆದುಕೊಳ್ಳಬೇಕು
ಮಗು ತಾಯಿಯ ಹೊಟ್ಟೆಯಲ್ಲಿ ಇರಬೇಕಾದರೆ ಬೆಳವಣಿಗೆ ಹೊಂದೋದ್ರಿಂದ ತಾಯಿ ಪೋಷಕಾಂಶಯುಕ್ತ ಪದಾರ್ಥಗಳನ್ನು ತೆಗೆದುಕೊಳ್ಳುವುದು ತುಂಬಾನೇ ಮುಖ್ಯ. ಅದರ ಜೊತೆಗೆ ಪ್ರತಿನಿತ್ಯ ಫೋಲಿಕ್ ಆಮ್ಲವನ್ನು ತೆಗೆದುಕೊಳ್ಳುವುದರಿಂದ ಹುಟ್ಟುವ ಮಗುವಿನ ಜನ್ಮ ಧೋಷವನ್ನು ಪರಿಹಾರ ಮಾಡಬಹುದು. ಅದ್ರಲ್ಲೂ ಮುಖ್ಯವಾಗಿ ಮೆದುಳು ಹಾಗೂ ಬೆನ್ನುಮೂಳೆಯಲ್ಲಿ ಉಂಟಾಗುವ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಈ ಸಮಸ್ಯೆಗಳು ಭ್ರೂಣಕ್ಕೆ ಕೆಲವು ವಾರಗಳು ತುಂಬುವಾಗಲೇ ಶುರುವಾಗುತ್ತದೆ. ಹೀಗಾಗಿ ತಾಯಂದಿರು ಒಂದು ತಿಂಗಳು ತುಂಬೋದಕ್ಕಿಂತ ಮುಂಚಿತವಾಗಿ ಫೋಲಿಕ್ ಆಮ್ಲವನ್ನು ತೆಗೆದುಕೊಳ್ಳೋದಕ್ಕೆ ಶುರು ಮಾಡಬೇಕು. ಹಾಗೂ ಇದನ್ನು ಒಂಬತ್ತು ತಿಂಗಳು ತುಂಬುವವರೆಗೂ ಮುಂದುವರೆಸಬೇಕು.
2. ಪ್ರತಿ ತಿಂಗಳು ವೈದ್ಯರನ್ನು ಭೇಟಿಯಾಗೋದನ್ನು ಮರೀಬೇಡಿ
ಇತ್ತೀಚಿಗಿನ ಜೀವನಶೈಲಿಯಿಂದಾಗಿ ಅನೇಕ ಮಹಿಳೆಯರು ತಾಯಿಯಾಗುವ ಅವಕಾಶವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ನೀವು ತಾಯಿಯಾಗ ಬಯಸಿದ್ದಲ್ಲಿ ಮೊದಲಿಗೆ ವೈದ್ಯರನ್ನು ಸಂಪರ್ಕಿಸುವುದು ತುಂಬಾನೇ ಮುಖ್ಯ. ನಿಮ್ಮ ದೈಹಿಕ ಸ್ಥಿತಿಯನ್ನು ನೋಡಿಕೊಂಡು ವೈದ್ಯರು ಸಲಹೆಯನ್ನು ನೀಡುತ್ತಾರೆ. ಗರ್ಭಿಣಿಯಾಗುವ ಮೊದಲು ನಿಮಗೇನಾದರೂ ಆರೋಗ್ಯ ಸಮಸ್ಯೆಗಳಿದ್ದು ಇಂತಹ ಸಮಯದಲ್ಲಿ ನೀವು ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ ಇದು ನಿಮ್ಮ ಮಗುವಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಹೀಗಾಗಿ ಪ್ರತಿ ತಿಂಗಳು ವೈದ್ಯರನ್ನು ಭೇಟಿಯಾಗಿ ಅವರ ಸಲಹೆ ಪಡೆದುಕೊಂಡು ಮುಂದುವರೆಯೋದು ಒಳ್ಳೆಯದು. ಈ ರೀತಿ ಮಾಡೋದ್ರಿಂದ ಮಗುವಿನ ಜನ್ಮ ಧೋಷದ ಸಮಸ್ಯೆಯನ್ನು ಬಗೆಹರಿಸಬಹುದು.
3. ಜ್ವರ ಹಾಗೂ ನಾಯಿ ಕೆಮ್ಮಿನ ಲಸಿಕೆ ತೆಗೆದುಕೊಳ್ಳಿ
ಗರ್ಭಿಣಿಯಾಗಿರುವ ಸಮಯದಲ್ಲಿ ತಾಯಿ ಹಾಗೂ ಮಗುವಿನ ಆರೋಗ್ಯಕ್ಕಾಗಿ ಅನೇಕ ರೀತಿಯ ಲಸಿಕೆಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ಜ್ವರ ಹಾಗೂ ನಾಯಿ ಕೆಮ್ಮಿನ ಲಸಿಕೆಯನ್ನು ತೆಗೆದುಕೊಳ್ಳುವುದು ಕೂಡ ತುಂಬಾನೇ ಮುಖ್ಯ. ಈ ಲಸಿಕೆಯನ್ನು Tdap ಲಸಿಕೆ ಎಂತಲೂ ಕರೆಯುತ್ತಾರೆ. ಈ ಲಸಿಕೆ ಎರಡು ಜೀವಗಳ ರಕ್ಷಣೆಯನ್ನು ಮಾಡುತ್ತದೆ.
* ಜ್ವರದ ಲಸಿಕೆ : ಗರ್ಭಿಣಿಯಾಗೋ ಮೊದಲು ಹಾಗೂ ಗರ್ಭಿಣಿಯಾದ ನಂತರ ಈ ಲಸಿಕೆ ತೆಗೆದುಕೊಳ್ಳಬಹುದು.
* ನಾಯಿ ಕೆಮ್ಮಿನ ಲಸಿಕೆ : ಪ್ರತಿ ಗರ್ಭಾವಸ್ಥೆಯ ಕೊನೆಯ ಮೂರು ತಿಂಗಳಲ್ಲಿ ನೀವು ನಾಯಿಕೆಮ್ಮಿಗೆ ಲಸಿಕೆಯನ್ನು ಪಡೆಯಬಹುದು
4. ಆರೋಗ್ಯಯುತ ತೂಕವನ್ನು ಕಾಪಾಡಿಕೊಳ್ಳಿ
ಇತ್ತೀಚಿನ ಜೀವನ ಶೈಲಿಯಿಂದ ಜನ ಹೊರಗಡೆಯ ಆಹಾರಕ್ಕೆ ಒಗ್ಗಿಕೊಂಡು ಮನೆ ಆಹಾರವನ್ನು ತಿರಸ್ಕರಿಸುತ್ತಿದ್ದಾರೆ. ಹೀಗಾಗಿ ಜನ ಏಕಾಏಕಿ ತೂಕ ಏರಿಸಿಕೊಂಡು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನೀವು ತಾಯಿಯಾಗಲು ಬಯಸುವುದಾದರೆ ನಿಮ್ಮ ತೂಕ ಆರೋಗ್ಯಯುತವಾಗಿರಬೇಕು. ತಾಯಿ ಅತಿಯಾದ ತೂಕ ಹೊಂದಿದ್ದರೆ ಹುಟ್ಟುವ ಮಗುವಿನಲ್ಲಿ ಜನ್ಮ ದೋಷಗಳು ಉಂಟಾಗುವ ಸಾಧ್ಯತೆಗಳಿದೆ. ಹೀಗಾಗಿ ವೈದ್ಯರನ್ನು ಸಂಪರ್ಕಿಸಿ ವೈದ್ಯರ ಸಲಹೆಯ ನಂತರ ತಾಯಿಯಾಗಲು ನಿರ್ಧರಿಸಿ.
5. ಧೂಮಪಾನ, ಮಧ್ಯಪಾನ, ಇತರ ದುಸ್ಚಟಗಳನ್ನು ಬಿಟ್ಟು ಬಿಡಿ
ಈ ಮಾರ್ಡನ್ ಜೀವನ ಶೈಲಿಗೆ ಒಗ್ಗಿಕೊಂಡ ಮಂದಿಗೆ ದುಸ್ಚಟಗಳನ್ನು ರೂಢಿಸಿಕೊಂಡಿದ್ದಾರೆ. ಕೇವಲ ಪುರುಷರು ಮಾತ್ರವಲ್ಲ ಮಹಿಳೆಯರು ಕೂಡ ತಾವೇನೂ ಕೂಡ ಕಡಿಮೆ ಇಲ್ಲ ಅನ್ನೋ ಹಾಗೇ ಪುರುಷರ ಜೊತೆಗೆ ಸ್ಫರ್ಧೆಗಿಳಿದು ಬಿಟ್ಟಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಅದ್ರಲ್ಲೂ ತಾಯಿಯಾಗಬೇಕು ಅಂತ ಬಯಸುವವರು ದುಸ್ಚಟಗಳಿಂದ ದೂರ ಇರಲೇಬೇಕು. ಮಗು ಹುಟ್ಟುವರೆಗೂ ವೈನ್, ಬಿಯರ್, ಸಿಗರೇಟ್, ಡ್ರಗ್ಸ್ ಸೇರಿದಂತೆ ಯಾವುದೇ ವಸ್ತುಗಳನ್ನು ಮುಟ್ಟಲು ಬಾರದು. ಇದರ ಸೇವನೆಯಿಂದ ಮಗು ಜನ್ಮದೋಷಗಳನ್ನು ಅನುಭವಿಸುವುದು ಮಾತ್ರವಲ್ಲದೇ ಹೊಟ್ಟೆಯೊಳಗೆ ಮಗು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ.
ತಾಯ್ತನ ತಾಯಿಗೆ ತುಂಬಾನೇ ಮುಖ್ಯ. ಮಗು ಹೊಟ್ಟೆಯಲ್ಲಿರ ಬೇಕಾದರೆ ತಾಯಿ ಮಾಡುವ ಪ್ರತಿಯೊಂದು ಚಟುವಟಿಕೆಗಳು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರೋದ್ರಿಂದ ಜಾಗರೂಕತೆಯಿಂದ ಇರೋದು ತುಂಬಾನೇ ಮುಖ್ಯವಾಗುತ್ತದೆ. ಹೀಗಾಗಿ ಮಗುವಿನ ಜನ್ಮ ದೋಷದ ಸಮಸ್ಯೆಗಳನ್ನು ತಡೆಗಟ್ಟಬೇಕಾದರೆ ಈ ವಿಚಾರಗಳ ಬಗ್ಗೆ ಮುತುವರ್ಜಿ ವಹಿಸೋದು ತುಂಬಾನೇ ಮುಖ್ಯವಾಗುತ್ತದೆ.



Click it and Unblock the Notifications


