Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ನಿದ್ದೆ ಕಡಿಮೆಯಾಗುತ್ತಿದೆಯೇ? ಬಂಜೆತನ ಉಂಟಾಗಬಹುದು ಹುಷಾರ್!
ಇತ್ತೀಚೆಗೆ ದಂಪತಿಗಳಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. 10 ಜೋಡಿಯನ್ನು ತೆಗೆದುಕೊಂಡರೆ ಅವರಲ್ಲಿ ಮೂವರಿಂದ ನಾಲ್ಕು ಜನರಿಗೆ ಮಕ್ಕಳಾಗುವುದು ತಡವಾಗಿರುತ್ತದೆ. ಮಗುವಿಗಾಗಿ ತುಂಬಾ ವರ್ಷಗಳಿಂದ ಪ್ರಯತ್ನಿಸುತ್ತಿರುತ್ತಾರೆ, ಕೆಲವರು ಮಗು ಪಡೆಯಲು ಚಿಕಿತ್ಸೆ ಪಡೆಯುತ್ತಿರುತ್ತಾರೆ.

ಏಕೆ ಇತ್ತೀಚಿನ ವರ್ಷಗಳಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆಯೆಂದರೆ ಅದಕ್ಕೆ ಕಾರಣಗು ಹಲವು. ಅದರಲ್ಲೂ ಪ್ರಮುಖ ಕಾರಣವೆಂದರೆ ಈಗೀನ ಜೀವನಶೈಲಿ. ನಿಮಗೆ ಗೊತ್ತಾ ನಿದ್ದೆ ಕಡಿಮೆಯಾದರೂ ಬಂಜೆತನದ ಸಮಸ್ಯೆ ಉಂಟಾಗುವುದು. ಇದರ ಕುರಿತ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿ ತಿಳಿಯೋಣ:
ನಿದ್ದೆ ಸಂತಾನೋತ್ಪತ್ತಿ ಮೇಲೆ ಹೇಗೆ ಪ್ರಭಾವ ಬೀರುತ್ತದೆ?
ನಿದ್ದೆ ನಮ್ಮ ದೇಹದಲ್ಲಿ ಸಂತಾನೋತ್ಪತ್ತಿ ಹಾರ್ಮೋನ್ ಉತ್ಪತ್ತಿ ಮೇಲೆ ಪ್ರಭಾವ ಬೀರುವುದು. ನಿದ್ದೆ ಕಡಿಮೆಯಾದರೆ ಹಾರ್ಮೋನ್‌ಗಳ ಅಸಮತೋಲನ ಉಂಟಾಗುವುದು. ನಿದ್ದೆಗೂ ಅಂಡಾಣುಗಳ ಹಾಗೂ ವೀರ್ಯಾಣುಗಳ ಉತ್ಪತ್ತಿಗೆ ಸಂಬಂಧವಿದೆ ಎಂದು ಹಲವಾರು ಸಂಶೋಧನೆಗಳು ಹೇಳಿವೆ.
ನಿದ್ದೆ ಕಡಿಮೆಯಾದರೆ ಅಂಡಾಣು ಹಾಗೂ ವೀರ್ಯಾಣಿಗಳ ಉತ್ಪತ್ತಿ ಕಡಿಮೆಯಾಗುವುದು.
ನಿದ್ದೆ ಕಡಿಮೆಯಾದರೆ ಮಾನಸಿಕ ಒತ್ತಡ ಹೆಚ್ಚಾಗಲಿದೆ
ಯಾವಾಗ ನಿದ್ದೆ ಕಡಿಮೆಯಾಗುವುದೋ ಆವಾಗ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಇದರಿಂದ ಈಸ್ಟ್ರೋಜನ್ ಹಾಗೂ ಟೆಸ್ಟೋಸ್ಟಿರೋನ್ ಉತ್ಪತ್ತಿಯಲ್ಲಿ ಅಸಮತೋಲನ ಉಂಟಾಗುವುದು. ಇದರಿಂದಾಗಿ ಸಂತಾನೋತ್ಪತ್ತಿ ಹಾರ್ಮೋನ್‌ಗಳ ಮೇಲೆ ಕೆಟ್ಟ ಪರಿಣಾಮ ಬೀರುವುದು.
ಮೆಲಾಟೋನಿನ್ ರಾತ್ರಿಯಲ್ಲಿ ಉತ್ಪತ್ತಿಯಾಗುವುದು
ನಮ್ಮ ದೇಹದಲ್ಲಿ ಮೆಲಾಟೋನಿನ್ ಎಂಬ ಹಾರ್ಮೋನ್ ರಾತ್ರಿ ಹೊತ್ತಿನಲ್ಲಿ ನಿದ್ರಿಸಿದಾಗ ಉತ್ಪತ್ತಿಯಾಗಿದೆ. ನಮ್ಮ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಲು ಈ ಹಾರ್ಮೋನ್ ತುಂಬಾನೇ ಮುಖ್ಯ. ತುಂಬಾ ಹೊತ್ತು ಮೊಬೈಲ್ ನೋಡುವುದು, ರಾತ್ರಿ ಲೈಟ್ ಆಗಿ ನಿದ್ರಿಸುವುದು ಇವೆಲ್ಲಾ ನಿದ್ದೆಗೆ ಭಂಗ ಉಂಟು ಮಾಡುತ್ತದೆ. ಇದರಿಂದ ಮೆಲಟೋನಿನ್ ಉತ್ಪತ್ತಿಗೆ ಅಡಚಣೆ ಉಂಟಾಗುವುದು.
ನಿದ್ದೆ ಯಾವ ಕಾರಣದಿಂದ ಕಡಿಮೆಯಾಗುತ್ತಿದೆ?
ಶಿಫ್ಟ್ ವರ್ಕ್
ರಾತ್ರಿ ಹೊತ್ತಿನಲ್ಲಿ ಕೆಲಸ ಮಾಡಿ ಹಗಲು ಹೊತ್ತಿನಲ್ಲಿ ನಿದ್ರಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹಗಲಿನಲ್ಲಿ ಮಲಗಿದರೆ ರಾತ್ರಿಯಲ್ಲಿ ನಿದ್ರಿಸಿದಂತೆ ನಿದ್ರಿಸಲು ಸಾಧ್ಯವಾಗಲ್ಲ, ಆಗಾಗ ಎಚ್ಚರವಾಗುತ್ತಲೇ ಇರುತ್ತದೆ.
ಪಾರ್ಟಿ ಅಂತ ತಡರಾತ್ರಿಯವರೆಗೆ ಎಚ್ಚರವಾಗಿರುವುದು
ವಾರದ ಐದು ದಿನ ಕೆಲಸ ಎಂದು ತಡರಾತ್ರಿ ಕೂತರೆ ವೀಕೆಂಡ್‌ಗಳಲ್ಲಿ ಪಾರ್ಟಿ ಅಂತ ಕಾಲ ಕಳೆಯುವ ಯುವ ಜನತೆಯೇನು ಕಡಿಮೆಯಿಲ್ಲ. ಈ ಜೀವನಶೈಲಿಯಿಂದಾಗಿ ನಿದ್ದೆ ಕಡಿಮೆಯಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವುದು.
ಮೊಬೈಲ್ ನೋಡುವುದು
ಈ ಸ್ಮಾರ್ಟ್ ಫೋನ್ ನಮ್ಮ ಟೈಮ್, ಆರೋಗ್ಯ ಎರಡನ್ನೂ ನಾಶ ಮಾಡುತ್ತಿದೆ. ಇದರಲ್ಲಿ ಅಧಿಕ ಸಮಯ ಕಳೆಯುತ್ತಾ ಮಾಡಬೇಕಾದ ಕೆಲಸವನ್ನು ಮರೆಯುತ್ತೇವೆ. ರಾತ್ರಿ ಮಲಗುವ ಮುನ್ನ ಮೊಬೈಲ್ ನೋಡುವ ಅಭ್ಯಾಸ ಬಿಡಿ.
ಎಷ್ಟು ಹೊತ್ತು ನಿದ್ದೆ ಅವಶ್ಯಕ?
ದಿನದಲ್ಲಿ 8 ಗಂಟೆ ನಿದ್ದೆ ಅವಶ್ಯಕ.



Click it and Unblock the Notifications
