ನಿಮ್ಮ ಮಗುವಿಗೂ ಶರ್ಟ್‌ ಜಗಿಯೋ ಅಭ್ಯಾಸವಿದ್ಯಾ? ಹಾಗಾದ್ರೆ ಈ ಸಮಸ್ಯೆಯಿಂದ ಬಳಲುತ್ತಿದೆ ಎಂದರ್ಥ

ತಾಯಿಗೆ ಮಕ್ಕಳು ಬಿಟ್ಟರೆ ಬೇರೆ ಪ್ರಪಂಚವಿಲ್ಲ. ಮಗುವಿನ ಬೆಳವಣಿಯ ಪ್ರತಿಯೊಂದು ಹಂತದಲ್ಲೂ ತಾಯಿಯ ಪಾತ್ರ ಬಹಳ ದೊಡ್ಡದಿದೆ. ಮಕ್ಕಳು ಬೆಳೆಯುವ ಪ್ರತಿ ಹಂತದಲ್ಲಿ ಕೆಲವೊಂದು ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ. ಉಗುರು ಕಡಿಯುವುದು, ಚರ್ಮವನ್ನು ಗಾಯಗೊಳಿಸೋದು, ಉಗಿಯೋದು ಹೀಗೆ ಇದರ ಜೊತೆಗೆ ಮತ್ತೊಂದು ಅಭ್ಯಾಸವೆಂದರೆ ಬಟ್ಟೆಯನ್ನು ಜಗಿಯುವುದು.

ಮಕ್ಕಳು ಒಂದು ಸಾರಿ ಈ ಅಭ್ಯಾಸವನ್ನು ಬೆಳೆಸಿಕೊಂಡು ಬಿಟ್ಟರೆ ಏನೇ ಮಾಡಿದ್ರು ಆ ಅಭ್ಯಾಸವನ್ನು ನಿಲ್ಲಿಸೋದಕ್ಕೆ ಸಾಧ್ಯವಾಗೋದಿಲ್ಲ. ಅಷ್ಟಕ್ಕು ಮಕ್ಕಳು ಈ ರೀತಿ ಶರ್ಟ್‌ ಜಗಿಯೋದು ಯಾಕೆ? ಇದರ ಹಿಂದಿನ ಕಾರಣವೇನು? ಇದನ್ನು ತಡೆಗಟ್ಟೋದು ಹೇಗೆ ಅನ್ನೋದನ್ನು ತಿಳಿಯೋಣ.

How Do I Get My Child To Stop Chewing His Shirt In Kannada

ಮಕ್ಕಳು ಶರ್ಟ್‌ ಜಗಿಯೋದು ಯಾಕೆ?
ಕೆಲ ಮಕ್ಕಳು ಸಣ್ಣ ವಯಸ್ಸಿನಲ್ಲಿ ಶರ್ಟ್‌ ಜಗಿಯೋದಕ್ಕೆ ಶುರು ಮಾಡ್ತಾರೆ. ಈ ಅಭ್ಯಾಸಗಳು ನಿರಂತರವಾಗಿ ಮುಂದುವರೆದಾಗ ತಾಯಂದಿರಿಗೆ ಒಂದು ರೀತಿ ಭಯ ಶುರುವಾಗುತ್ತದೆ. ಆದರೆ ಭಯ ಪಡೋ ಅವಶ್ಯಕತೆ ಇಲ್ಲ. ಯಾಕಂದರೆ ಮಕ್ಕಳಿಗೆ ಹಲ್ಲು ಬರೋ ಸಮಯದಲ್ಲಿ ಅವರ ವಸಡುಗಳಲ್ಲಿ ಸಣ್ಣದಾಗಿ ನೋವು ಕಾಣಿಸಿಕೊಳ್ಳುತ್ತದೆ. ಈ ವೇಳೆ ಅವರು ಕೈಗೆ ಸಿಗೋ ವಸ್ತುಗಳನ್ನು ಜಗಿಯೋದಕ್ಕೆ ಶುರು ಮಾಡ್ತಾರೆ. ಅವರಿಗೆ ಸುಲಭವಾಗಿ ಲಭ್ಯವಾಗೋದು ಅಂದರೆ ಅವರು ಧರಿಸಿಕೊಂಡಿರುವ ಬಟ್ಟೆ. ಹೀಗಾಗಿ ಇದನ್ನೇ ಅವರು ಜಗಿಯುತ್ತಾರೆ. ಇನ್ನೂ ಹಸಿವಾದಾಗಲೂ ಬಟ್ಟೆಯನ್ನು ಜಗಿಯುತ್ತಾರೆ.

ಇನ್ನೂ ಕೆಲವು ಸಂದರ್ಭಗಳಲ್ಲಿ ತಾಯಂದಿರುವ ಗಮನಿಸಿರಬಹುದು. ತಾಯಿಯ ಎದೆ ಹಾಲು ಕುಡಿಯುವ ಸಂದರ್ಭದಲ್ಲಿ ಕೂಡ ಮಕ್ಕಳು ಕಚ್ಚೋದಕ್ಕೆ ಪ್ರಯತ್ನಿಸುತ್ತಾರೆ. ಮಗುವಿಗೆ ಹಲ್ಲು ಬರೋ ಸಮಯದಲ್ಲಿ ಈ ರೀತಿಯ ನಡವಳಿಕೆ ಸಾಮಾನ್ಯವಾಗಿರುತ್ತದೆ. ಹೀಗಾಗಿ ಭಯ ಪಡೋ ಅವಶ್ಯಕತೆ ಇಲ್ಲ. ಆದರೆ ನಾಲ್ಕು ವರ್ಷದ ನಂತರವು ಮಕ್ಕಳಲ್ಲಿ ಈ ನಡವಳಿಕೆ ಇದ್ದರೆ ಈ ಬಗ್ಗೆ ಯೋಚಿಸಬೇಕಾಗುತ್ತದೆ.

9 -10 ವರ್ಷದ ಮಕ್ಕಳಿಗೆ ಶರ್ಟ್‌ ಜಗಿಯುವ ಅಭ್ಯಾಸವಿದ್ಯಾ?
ಸಾಮಾನ್ಯವಾಗಿ ಮಕ್ಕಳು ಶಾಲೆಗೆ ಹೋಗುವಂತಹ ಸಂದರ್ಭದಲ್ಲೂ ಕೆಲ ಮಕ್ಕಳಲ್ಲಿ ಈ ಅಭ್ಯಾಸಗಳನ್ನು ನಾವು ನೋಡಿರ್ತೀವಿ. ಅದ್ರಲ್ಲೂ ಹುಡುಗರಲ್ಲಿ ಹೆಚ್ಚಾಗಿ ಶರ್ಟ್‌ ಜಗಿಯೋ ಅಭ್ಯಾಸ ಇರುತ್ತದೆ. 9 -10 ವರ್ಷದ ಮಕ್ಕಳಲ್ಲೂ ಈ ಅಭ್ಯಾಸ ಕಂಡಾಗ ಭಯ ಆಗೋದು ಸಹಜ. ಆದರೆ ಇದರ ಹಿಂದೆ ಕಾರಣಗಳು ಅನೇಕ ಇರಬಹುದು. ಆದರೆ ಇದರಿಂದ ಅವರ ಶಾಲೆಯ ಸಮವಸ್ತ್ರ ಅಥವಾ ಸ್ಫೋರ್ಟ್‌ ಸಮವಸ್ತ್ರವನ್ನು ಹಾಳು ಮಾಡಿಕೊಂಡು ಬಿಡುತ್ತಾರೆ.

ಶರ್ಟ್‌ ಜಗಿಯೋದಕ್ಕೆ ಕಾರಣವೇನು?
1. ಚಡಪಡಿಕೆ
ಮಕ್ಕಳಲ್ಲಿ ಯಾವುದಾದರೂ ವಿಚಾರಕ್ಕೆ ಚಡಪಡಿಕೆ ಉಂಟಾದಾಗ ಅವರಿಗೆ ಏನು ಮಾಡಬೇಕು ಎಂದು ದಿಕ್ಕು ತೋಚದಾಗುತ್ತದೆ. ಇಂತಹ ಸಂದರ್ಭದಲ್ಲಿ ಅವರ ಬಟ್ಟೆಯನ್ನು ಜಗಿಯೋದು, ಕಾಲರ್‌ ಜಗಿಯೋದಕ್ಕೆ ಶುರು ಮಾಡುತ್ತಾರೆ. ಪ್ರತಿ ಸಾರಿ ಚಡಪಡಿಕೆ ಆದಾಗ ಹೀಗೆ ಮಾಡುತ್ತಿರೋದ್ರಿಂದ ಇದು ಒಂದು ರೀತಿ ಅಭ್ಯಾಸ ಆಗಿ ಬದಲಾಗುತ್ತದೆ.

2. ಆತಂಕ
ಮಕ್ಕಳು ಎದುರಿಸೋ ಬಹು ದೊಡ್ಡ ಸಮಸ್ಯೆಗಳಲ್ಲಿ ಆತಂಕ ಕೂಡ ಒಂದು. ಅವರ ವಯಸ್ಸಿಗೆ ತಕ್ಕ ಹಾಗೇ ಆಡಿಕೊಂಡು ಖುಷಿ ಖುಷಿಯಾಗಿರಬೇಕಾದ ಮಕ್ಕಳು ಆತಂಕಕ್ಕೆ ಒಳಗಾಗಿ ಬಿಡುತ್ತಾರೆ. ಈ ವಿಚಾರವನ್ನು ಮನೆಯಲ್ಲಿ ಹೇಳೋಕಾದ ಪರಿಸ್ಥಿತಿಗೆ ತಲುಪಿ ಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ಆ ಕ್ಷಣಕ್ಕೆ ಅವರು ಯಾವುದಾದರೂ ಒಂದು ಕೆಟ್ಟ ಅಭ್ಯಾಸವನ್ನು ರೂಢಿಸಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಬಟ್ಟೆ, ಕಾಲರ್ ಅನ್ನು ಜಗಿಯೋದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ.

ಇದನ್ನು ತಡೆಗಟ್ಟೋದು ಹೇಗೆ?
1. ರುಚಿಯಾದ ತಿಂಡಿ ನೀಡಿ
ಚಿಕ್ಕ ವಯಸ್ಸಿನಲ್ಲಿ ಈ ಅಭ್ಯಾಸವಿದ್ದರೆ ಅದನ್ನು ನಿಧಾನವಾಗಿ ಕಡಿಮೆ ಮಾಡಬಹುದು. ಆದರೆ ಶಾಲೆಗೆ ಹೋಗುವ ಸಂದರ್ಭದಲ್ಲಿ ಇಂತಹ ಅಭ್ಯಾಸಗಳಿದ್ದರೆ ಅದರಿಂದ ಮಕ್ಕಳನ್ನು ಹೊರ ತರೋದು ತುಂಬಾನೇ ಕಷ್ಟ. ಆತಂಕ, ಚಡಪಡಿಕೆಯಂತಹ ಸಮಸ್ಯೆಯಿಂದ ಅವರು ಬಳಲುತ್ತಿದ್ದರೆ ಅವರ ಜೊತೆಗೆ ಕೂತು ಮಾತನಾಡಿ ಸಮಸ್ಯೆ ಬಗೆ ಹರಿಸಿಕೊಳ್ಳಿ. ಇನ್ನೂ ಹಸಿವಿನಿಂದ ಅವರು ಹೀಗೆ ಮಾಡುತ್ತಿದ್ದರೆ ಸರಿಯಾದ ಸಮಯಕ್ಕೆ ಅವರಿಗೆ ರುಚಿ ರುಚಿಯಾದ ತಿಂಡಿಗಳನ್ನು ನೀಡಿ.

2. ತಜ್ಞರನ್ನು ಸಂಪರ್ಕಿಸಿ
ಇತ್ತೀಚಿನ ದಿನಗಳಲ್ಲಿ ಯಾವುದೇ ವಿಚಾರವನ್ನೂ ಕಡೆಗಣಿಸೋದಕ್ಕೆ ಆಗೋದಿಲ್ಲ. ಮಕ್ಕಳಲ್ಲಿ ಇಂತಹ ನಡವಳಿಕೆಗಳು ಹೆಚ್ಚಾಗಿ ಕಂಡು ಬಂದರೆ ತಜ್ಞರನ್ನು ಸಂಪರ್ಕಿಸೋದು ಒಳ್ಳೆಯದು. ಇತ್ತೀಚಿಗೆ ಮಕ್ಕಳು ಕೂಡ ಪ್ರತಿಯೊಂದು ವಿಚಾರವನ್ನೂ ತುಂಬಾನೇ ಆಳವಾಗಿ ಆಲೋಚಿಸೋದಕ್ಕೆ ಶುರು ಮಾಡಿದ್ದಾರೆ. ನಿಮ್ಮ ಮಕ್ಕಳು ಆತಂಕ, ಚಡಪಡಿಕೆಯಂತಹ ತೀವ್ರ ತರಹದ ಸಮಸ್ಯೆಯಿಂದ ಬಳಲುತ್ತಿರೋದು ಗೊತ್ತಾದರೆ ವೈದ್ಯರನ್ನು ಸಂಪರ್ಕಿಸೋದು ಉತ್ತಮ.

ಒಟ್ಟಿನಲ್ಲಿ ಮಕ್ಕಳ ಬೆಳವಣಿಗೆಯ ಪ್ರತಿಯೊಂದು ಹಂತವನ್ನೂ ಸೂಕ್ಷ್ಮವಾಗಿ ಗಮನಿಸೋದು ಪೋಷಕರಾದವರ ಕರ್ತವ್ಯ. ಕೊಂಚ ಎಡವಿದ್ರು ಮುಂದೆ ಬಹುದೊಡ್ಡ ಅಪಾಯವನ್ನೇ ಎದುರಿಸಬೇಕಾಗುತ್ತದೆ.

English summary

How Do I Get My Child To Stop Chewing His Shirt In Kannada

Here are the tips to stop chewing your child shirt. Read More.
Story first published: Saturday, April 15, 2023, 15:14 [IST]
X
Desktop Bottom Promotion