Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಮನೆಮದ್ದು ಮಕ್ಕಳ ಒಡೆದ ತ್ವಚೆಯ ಸಮಸ್ಯೆಯನ್ನ ಪರಿಹರಿಸುತ್ತೆ
ಶಿಶುವಿನ ತ್ವಚೆ ತುಂಬಾನೇ ಕೋಮಲವಾಗಿರುತ್ತದೆ. ಮಕ್ಕಳ ಚರ್ಮಕ್ಕೆ ಬಳಸೋ ಪ್ರಾಡಕ್ಸ್‌ಗಳ ಬಗ್ಗೆ ತುಂಬಾನೇ ಜಾಗರೂಕತೆಯಿಂದ ಇರಬೇಕಾಗುತ್ತದೆ. ಕೆಲವೊಂದು ಸಾರಿ ನಾವು ಎಷ್ಟು ಜಾಗರೂಕತೆ ವಹಿಸಿದರೂ ಮಕ್ಕಳ ಚರ್ಮ ಒಡೆಯುತ್ತದೆ. ಇದು ಮಕ್ಕಳಿಗೂ ತುರಿಕೆಯಂತಹ ಕಿರಿಕಿರಿಯನ್ನು ಉಂಟು ಮಾಡುತ್ತದೆ.
ಅಷ್ಟಕ್ಕು ಮಕ್ಕಳ ಚರ್ಮ ಒಡೆದಾಗ ಏನು ಮಾಡಬೇಕು? ಯಾವ ರೀತಿಯ ಮನೆ ಮದ್ದುಗಳನ್ನು ಬಳಸೋದ್ರಿಂದ ಒಡೆದ ಚರ್ಮದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು ಅನ್ನೋದನ್ನ ತಿಳಿಯೋಣ.

ಶಿಶುವಿನ ಚರ್ಮದ ಸಮಸ್ಯೆಯ ಲಕ್ಷಣಗಳು ಯಾವುದು?
ನಿಮ್ಮ ಅಂಬೆಗಾಲಿಡುವ ಮಗುವಿನ ಚರ್ಮವು ಬಿರುಕು ಬಿಟ್ಟಿದೆ ಅಥವಾ ತುಟಿಗಳು ಒಡೆದಿವೆ. ಮತ್ತು ಮಗುವಿನ ಚರ್ಮದ ಮೇಲೆ ಕೆಂಪು ತೇಪೆಗಳು ಬೆಳೆದರೆ ಮಗುವು ಖಂಡಿತ ಕಿರಿಕಿರಿ ಅಥವಾ ಸುಡುವ ಸಂವೇದನೆಯನ್ನು ಅನುಭವಿಸುತ್ತದೆ. ಇನ್ನೂ ಮಗುವಿನ ತುಟಿಗಳಲ್ಲಿ ರಕ್ತಸ್ರಾವವಾಗಬಹುದು ಮತ್ತು ಒಣ ಚರ್ಮದ ಬಿಗಿತವು ಮಗುವಿಗೆ ಬಹಳ ತೊಂದರೆ ನೀಡಬಹುದು. ಮತ್ತು ಅಸ್ವಸ್ಥತೆಯನ್ನು ಉಂಟುಮಾಡಬಹುದು. ಮಕ್ಕಳಲ್ಲಿ ಈ ರೀತಿಯ ಲಕ್ಷಣ ಕಂಡು ಬಂದರೆ ಖಂಡಿತ ಪೋಷಕರು ಚಿಂತಾಕ್ರಾತರಾಗುತ್ತಾರೆ. ಅಂಬೆಗಾಲಿಡುವ ಮಕ್ಕಳಲ್ಲಿ ಒಣ ಚರ್ಮವು ತುಂಬಾ ಸಾಮಾನ್ಯವಾಗಿದೆ. ಆದರೆ ಇದಕ್ಕಾಗಿ ಕೆಲವೊಂದು ಮನೆ ಮದ್ದುಗಳನ್ನು ಬಳಸಿದರೆ ಸುಲಭವಾಗಿ ಗುಣ ಪಡಿಸಬಹುದು.
ಮಕ್ಕಳಲ್ಲಿ ಒಣ ಚರ್ಮ ಉಂಟಾಗಲು ಕಾರಣವೇನು?
ಶೀತ ವಾತಾವರಣ, ಒಳಾಂಗಣದ ತಾಪ ಅಥವಾ ಹವಾನಿಯಂತ್ರಣ ಮತ್ತು ಹೊರಗಿನ ಶುಷ್ಕ ಗಾಳಿಯು ಮಗುವಿನ ಚರ್ಮವನ್ನು ಸಡಿಲಗೊಳಿಸುತ್ತದೆ ಮತ್ತು ಇದು ಶುಷ್ಕ ಚರ್ಮಕ್ಕೆ ಕಾರಣವಾಗಬಹುದು. ಸುಡುವ ಬೇಸಿಗೆಯ ಬಿಸಿಲು ಮತ್ತು ಕ್ಲೋರಿನೇಟೆಡ್ ಅಂಶ ಹೊಂದಿರುವ ಕೊಳದ ನೀರು ಮಕ್ಕಳಲ್ಲಿ ಚರ್ಮದ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾದಾಗ ನೀವು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬಹುದು. ಇಲ್ಲವಾದರೆ ಕೆಲವೊಂದು ಮನೆಮದ್ದುಗಳು ಕೂಡ ಮಕ್ಕಳ ಚರ್ಮದ ಆರೈಕೆಗೆ ತುಂಬಾನೇ ಉತ್ತಮ.
1. ನೈಸರ್ಗಿಕ ಏಣ್ಣೆಗಳು
ಒಣ ತ್ವಚೆಗೆ ಉತ್ತಮವಾದ ಮನೆಮದ್ದು ಯಾವುದೆಂದರೆ ವಿವಿಧ ನೈಸರ್ಗಿಕ ತೈಲಗಳ ಬಳಕೆ ಮಾಡೋದು. ಉದಾಹರಣೆಗೆ ತೆಂಗಿನ ಎಣ್ಣೆ. ಇದು ಸುಲಭವಾಗಿ ಲಭ್ಯವಿದೆ. ಇದರಲ್ಲಿ ಯಾವುದೇ ರೀತಿ ಅಡ್ಡ ಪರಿಣಾಮಗಳು ಇಲ್ಲದಿರೋದ್ರಿಂದ ಮಗುವಿನ ತ್ವಚೆಯ ಆರೈಕೆಗೆ ಬಳಸಬಹುದು. ಇದು ಚರ್ಮಕ್ಕೆ ಹೆಚ್ಚುವರಿ ಹೊಳಪನ್ನು ನೀಡುತ್ತದೆ. ಚರ್ಮ ಒಣಗಿದ ಸಂದರ್ಭದಲ್ಲಿ ಇದನ್ನು ಹಚ್ಚದರೆ ತುಂಬಾನೇ ಒಳ್ಳೆಯದು. ಇನ್ನೂ ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಯು ಸಮೃದ್ಧವಾಗಿದೆ ಮತ್ತು ಚರ್ಮವನ್ನು ಪೋಷಿಸಲು ಇದು ಸಹಾಯ ಮಾಡುತ್ತದೆ. ಇನ್ನೂ ಬೆಣ್ಣೆಹಣ್ಣಿನ ಎಣ್ಣೆ ಅಥವಾ ಹಿಸುಕಿದ ಅವಕಾಡೋವನ್ನು ಚರ್ಮದ ಮೇಲೆ ಹಚ್ಚಿ ಸ್ವಲ್ಪ ಹೊತ್ತಿನ ನಂತರ ತೊಳೆಯಿರಿ.
2. ಅಲೋವೆರಾ
ಅಲೋವೆರಾವು ಒಣ ಚರ್ಮಕ್ಕೆ ಉತ್ತಮವಾಗಿದೆ. ಅಲೋವೆರಾವು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಸಿಗುವ ಅಲೋವೆರಾ ಜೆಲ್‌ಗಿಂತ ನೈಸರ್ಗಿಕ ಅಲೋವೆರಾವೇ ಉತ್ತಮ. ನಿಮ್ಮ ಮಗುವಿನ ಚರ್ಮ ಒಣಗಿದ ಹಾಗೇ ಆದಾಗ ಅಲೋವೆರಾ ಹಚ್ಚಿ ಸ್ವಲ್ಪ ಹೊತ್ತು ಇಟ್ಟು ನಂತರ ತೊಳೆಯಿರಿ. ಆದರೆ ಎಲ್ಲಾ ಮಕ್ಕಳ ತ್ವಚೆಗೂ ಇದು ಅನ್ವಯವಾಗೋದಿಲ್ಲ. ಕೆಲ ಮಕ್ಕಳಿಗೆ ಇದರಿಂದ ಅಲರ್ಜಿಯಂತಹ ಸಮಸ್ಯೆ ಉಂಟಾಗುತ್ತದೆ ಮುಂಜಾಗರೂಕತೆ ವಹಿಸಿ.
3. ಓಟ್ಸ್ ಬಳಕೆ ಮಾಡಿ
ಓಟ್ಸ್ ನಿಮ್ಮ ಮಗುವಿನ ಒಣ ಚರ್ಮಕ್ಕೆ ಅದ್ಭುತ ಮನೆಮದ್ದು. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಓಟ್ಸ್ ಅನ್ನು ಬಳಕೆ ಮಾಡೋದು ಹೇಗೆಂದರೆ, ಮೊದಲು ಅದನ್ನು ನುಣ್ಣಗೆ ಪುಡಿಮಾಡಿ ಮತ್ತು ನಿಮ್ಮ ಮಗುವಿನ ಸ್ನಾನದ ನೀರಿಗೆ ಸುಮಾರು 2 ಚಮಚಗಳನ್ನು ಸೇರಿಸಿ. ಹೆಚ್ಚು ಪರಿಣಾಮಕಾರಿ ಫಲಿತಾಂಶಗಳಿಗಾಗಿ ನೀವು ತೆಂಗಿನ ಎಣ್ಣೆ ಅಥವಾ ಇತರ ಯಾವುದೇ ನೈಸರ್ಗಿಕ ಎಣ್ಣೆಯನ್ನು ನೀರಿಗೆ ಸೇರಿಸಬಹುದು.
4. ತಾಯಿ ಎದೆ ಹಾಲು ಅಥವಾ ಹಸುವಿನ ಹಾಲು
ಮಗುವಿನ ಒಣ ಚರ್ಮಕ್ಕೆ ಹಚ್ಚಲು ತಾಯಿಯ ಎದೆ ಹಾಲು ಅತ್ಯತ್ತಮ. ನಿಮ್ಮ ಮಗುವಿನ ಒಣ ಚರ್ಮಕ್ಕೆ ಇದನ್ನು ಹಚ್ಚಿ. ಕೊಂಚ ದೊಡ್ಡ ಮಕ್ಕಳಾದರೆ ಹಸು ಅಥವಾ ಎಮ್ಮೆ ಹಾಲು ಹಚ್ಚಬಹುದು. ಒಂದು ಬಟ್ಟೆ ತೆಗೆದುಕೊಂಡು ಅದನ್ನು ಹಾಲಿನಲ್ಲಿ ಅದ್ದಿ ಮಗುವಿನ ಚರ್ಮಕ್ಕೆ ಹಚ್ಚಿ. ನಂತರ ಕೆಲ ನಿಮಿಷಗಳ ಕಾಲ ಇಟ್ಟು ಒದ್ದೆ ಬಟ್ಟೆಯಿಂದ ಮತ್ತೆ ಒರೆಸಿ.
5. ನೀರು
ನೀರು ಒಣ ತ್ವಚೆಗೆ ಅಂತಿಮ ಪರಿಹಾರವಾಗಿದೆ. ನಿಮ್ಮ ಮಗುವನ್ನು ಹೈಡ್ರೇಟ್ ಆಗಿರಿಸಲು ಸಾಕಷ್ಟು ನೀರನ್ನು ಮಗುವಿಗೆ ನೀಡಿ. ನೀರು ತುಂಬಿದ ಬಾಟಲಿಯನ್ನು ಸುಲಭವಾಗಿ ಕೈಗೆಟುಕುವಂತೆ ಇರಿಸಿ ಮತ್ತು ಮಗು ಎಷ್ಟು ನೀರು ಕುಡಿಯುತ್ತಿದೆ ಅನ್ನೋದನ್ನು ಪರಿಶೀಲಿಸಿ. ಇನ್ನೂ ಮಕ್ಕಳಿಗೆ ಹೆಚ್ಚು ಹೊತ್ತು ಸ್ನಾನ ಮಾಡಿಸುವುದು ಒಳ್ಳೆಯದಲ್ಲ. ಹೀಗಾಗಿ 10 ನಿಮಿಷದ ಒಳಗಡೆ ಸ್ನಾನ ಮಾಡಿಸಿ ಬಿಡಿ. ಇನ್ನೂ ಚರ್ಮದ ಮೇಲೆ ಸೌಮ್ಯವಾದ ಸಾಬೂನುಗಳನ್ನೇ ಬಳಸಿ.
ಸಣ್ಣ ವಯಸ್ಸಿನಲ್ಲಿ ಮಕ್ಕಳ ತ್ವಚೆ ತುಂಬಾನೇ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಪೋಷಕರು ಆದಷ್ಟು ಮುಂಜಾಗರೂಕತೆ ವಹಿಸಿದರೆ ಉತ್ತಮ.



Click it and Unblock the Notifications


