Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡಿದ್ರೆ ಹೀಗೆ ಮಾಡಿ..! ಈ ರೂಢಿ ಬಿಟ್ಟು ಬಿಡುತ್ತಾರೆ!
ಮಕ್ಕಳು ಬೆಳೆದು ಒಂದು ಹಂತಕ್ಕೆ ಬರುವವರೆಗೂ ಅವರ ಆರೋಗ್ಯದ ಮೇಲೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. 5 ವರ್ಷದ ವರೆಗೂ ಅವರ ಮೇಲೆ ವಿಶೇಷ ಕಾಳಜಿ ಇಟ್ಟರೆ ತುಂಬಾನೆ ಒಳ್ಳೆಯದು. ಆದ್ರೆ ಇತ್ತೀಚಿಗೆ ಮಕ್ಕಳನ್ನು 5 ವರ್ಷದ ಮೊದಲೇ ಕಿಂಡರ್ ಗಾರ್ಡನ್, ಬೇಬಿ ಸಿಟ್ಟಿಂಗ್ ಎಂಬ ಕಡೆಗೆ ಪೋಷಕರು ಕಳುಹಿಸುತ್ತಾರೆ. ಇದು ತಪ್ಪು ಅಲ್ಲ.
ಆದ್ರೆ ಈ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಸಮಸ್ಯೆ ಎಂದರೆ ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ಹಾಗೂ ಹಾಸಿಗೆಯಲ್ಲಿ ಮೂತ್ರ ಮಾಡುವುದು. ಹೌದು ಮನೆಯಲ್ಲಿ ಇದ್ದಾಗ ಅಥವಾ ಹೊರಗಡೆ ಹೋದಾಗ ಅಸಹ ಪದೇ ಪದೇ ಮೂತ್ರ ವಿಸರ್ಜನೆ ಮಾಡುತ್ತಿರುತ್ತಾರೆ. ಕೆಲವರು ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ಒಳ್ಳೆಯದು ಎಂದು ಹೇಳುತ್ತಾರೆ. ಆದ್ರೆ ಪದೇ ಪದೇ ಮೂತ್ರ ವಿಸರ್ಜನೆ ಉತ್ತಮ ಲಕ್ಷಣವಲ್ಲ.

ಇನ್ನು ಒಂದು ಹಂತದವರೆಗೂ ಮಕ್ಕಲು ಹಾಸಿಗೆಯಲ್ಲಿ ಮೂತ್ರ ಮಾಡುವುದು ಸಾಮಾನ್ಯ ಆದರೆ ಕೆಲವು ಮಕ್ಕಳು ಶಾಲೆಗೆ ಹೋಗುವವರೆಗೂ ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುತ್ತಾರೆ. ಹಾಗಾದ್ರೆ ಮಕ್ಕಳು ಪದೇ ಪದೇ ಮೂತ್ರ ಮಾಡುತ್ತಿದ್ದರೆ ಅದಕ್ಕೆ ಕಾರಣವೇನು? ಇದರ ಪರಿಣಾಮವೇನು? ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಮೂತ್ರ ಕೋಶದ ಸೋಂಕು
ಮಕ್ಕಳು ಪದೇ ಪದೇ ಮೂತ್ರ ಮಾಡುವುದು ಮತ್ತು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳುವುದು ಮೂತ್ರ ಕೋಶದ ಸೋಂಕಿನ ಸಮಸ್ಯೆ ಇರಬಹುದು. ಇದಕ್ಕೆ ಸೂಕ್ತ ಚಿಕಿತ್ಸೆಯ ಅಗತ್ಯವಿರುತ್ತದೆ.
ದ್ರವ ಆಹಾರ ನೀಡುವುದು
ಮಕ್ಕಳಿಗೆ ಹೆಚ್ಚಾಗಿ ದ್ರವ ರೂಪದ ಆಹಾರ ನೀಡುವುದು, ಹಾಲು, ನೀರು, ಕಾಫಿ ಟೀ ಇವುಗಳ ನೀಡುವುದು ಸಹ ಅವರಲ್ಲಿ ಹೆಚ್ಚು ಮೂತ್ರಕ್ಕೆ ಕಾರಣವಾಗುತ್ತದೆ. ಜೊತೆಗೆ ರಾತ್ರಿ ಹೊತ್ತು ಹೆಚ್ಚು ದ್ರವ ರೂಪದ ಆಹಾರ ಸೇವಿಸುವುದು ಅವರಲ್ಲಿ ಹಾಸಿಗೆ ಮೇಲೆ ಮೂತ್ರ ಮಾಡಿಕೊಳ್ಳುವ ಅಭ್ಯಾಸಕ್ಕೆ ಕಾರಣವಾಗಿರಬಹುದಾಗಿದೆ.
ಮಲಗುವ ಮುನ್ನ ಒಂದಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆ ಮಾಡಿಸಿ
ಮಕ್ಕಳು ರಾತ್ರಿ ಊಟ ಮಾಡಿ ಮಲಗಿಸುವ ಮುನ್ನ ಅವರಿಗೆ ಒಂದಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆ ಮಾಡಿಸಿ. ಚಿಕ್ಕಮಕ್ಕಳಾಗಿದ್ದರೆ ಅವರು ಮೂತ್ರ ವಿಸರ್ಜನೆ ಮಾಡಿಕೊಳ್ಳುವವರೆಗೂ ನಿದ್ರೆ ಮಾಡಿಸದೆ ಇರುವುದು ಸಹ ಸಹಾಯಕವಾಗುತ್ತೆ, ಸ್ವಲ್ಪ ದೊಡ್ಡ ಮಕ್ಕಳಾದರೆ ನೀವೆ ಒತ್ತಾಯವಾಗಿ ಅವರನ್ನು ಮೂತ್ರ ವಿಸರ್ಜನೆ ಮಾಡುವಂತೆ ಹೇಳಿ.
ಮನೆಮದ್ದಿನ ಮೊರೆ ಹೋಗಿ
ಈ ರೀತಿ ಹಾಸಿಗೆ ಒದ್ದೆ ಮಾಡುವ ಮಕ್ಕಳಿಗೆ ಒಂದು ಮನೆ ಮದ್ದು ಇದೆ. ಒಂದು ಬೌಲ್‌ನಲ್ಲಿ ನೆಲ್ಲಿ ಕಾಯಿ ಪುಡಿ ಹಾಕಿ ಕಾಲು ಸ್ಪೂನ್ ಪುಡಿ ಇದ್ದರೆ ಸಾಕು. ನಂತರ ಇದಕ್ಕೆ ಅರ್ಧ ಸ್ಪೂನ್ ಅರಶಿನ ಹಾಕಿ. ನಂತರ ಇದಕ್ಕೆ ಒಂದು ಸ್ಪೂನ್ ಜೇನು ತುಪ್ಪ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದು ಬೆಲ್ಲದ ಪಾಕದಂತೆ ಕಾಣುತ್ತದೆ. ಇದನ್ನು ಪ್ರತಿ ದಿನ ಮಕ್ಕಳಿಗೆ ನಿತ್ಯವೂ ರಾತ್ರಿ ನೀಡಿ. ಹೀಗೆ ನಿರಂತರ ಮಾಡುವುದರಿಂದ 1 ತಿಂಗಳೊಳಗೆ ಅರು ಹಾಸಿಗೆ ಮೇಲೆ ಮೂತ್ರ ವಿಸರ್ಜನೆ ನಿಲ್ಲಿಸುತ್ತಾರೆ.
ದ್ರವ ಪದಾರ್ಥಗಳ ನಡುವೆ 3 ಗಂಟೆಗೂ ಹೆಚ್ಚು ಸಮಯ ಮಿತಿ
ಮಕ್ಕಳಿಗೆ ಯಾವುದೇ ದ್ರವ ಪದಾರ್ಥ ನೀಡುವ ಮುನ್ನ 3 ಗಂಟೆಗಳ ಅವಧಿಯ ಅಂತರ ಕಾಯ್ದುಕೊಳ್ಳಬೇಕು. ಮಾನವರಿಗೆ ಸಮಾನ್ಯವಾಗಿ ದ್ರವ ಪದಾರ್ಥ ಸ್ವೀಕರಿಸಿದಾಗ ಅದು ಮೂತ್ರವಾಗಿ ಪರಿವರ್ತನೆಯಾಗಲು ಸರಾಸರಿ 3 ಗಂಟೆ ಹಿಡಿಯಲಿದೆ. ಹೀಗಾಗಿ ಮೂರು ಗಂಟೆಗಳ ಒಳಗೆ ಪದೇ ಪದೇ ದ್ರವ ಪದಾರ್ಥ ನೀಡುವುದು ಉತ್ತಮವಲ್ಲ.
ಮೂತ್ರ ವಿಸರ್ಜನೆ ರೂಢಿ ಮಾಡಿಸೋದು
ಮಕ್ಕಳಿಗೆ ನೀವೆ ಮೂತ್ರ ವಿಸರ್ಜನೆಯ ಸಮಯ ರೂಢಿ ಮಾಡಬೇಕು. ಅಂದರೆ ಮಕ್ಕಳು ಊಟ ಮಾಡಿ ಮಲಗುವ ಮುನ್ನ ಪ್ರತಿದಿನ ಮೂತ್ರ ವಿಸರ್ಜನೆ ಮಾಡಿಸುವುದು, ಬೆಳಗ್ಗೆ ಎದ್ದ ತಕ್ಷಣ ಮೂತ್ರ ವಿಸರ್ಜನೆ ಮಾಡಲು ಹೇಳುವುದು, ಶಾಲೆಯಿಂದ ಬಂದ ತಕ್ಷಣ ಮೂತ್ರ ವಿಸರ್ಜನೆಗೆ ಹೇಳುವುದು, ಇಲ್ಲವೆ ಹೊರಗಡೆಯಿಂದ ಬಂದ ತಕ್ಷಣ ಮೂತ್ರ ವಿಸರ್ಜನೆ ಮಾಡಲು ಹೇಳುವುದು, ಶಾಲೆಗೆ ಹೋಗುವ ಮುನ್ನ ಮಾಡಿಸುವುದು ಹೀಗೆ ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ತಪ್ಪಿಸದೆ ಮಾಡಿಸಿದರೆ ಮೂತ್ರ ವಿಸರ್ಜನೆಗೆ ಸಮಯ ನಿಗದಿಯಾಗಿ ಇದು ರೂಢಿಯಾಗುತ್ತದೆ.



Click it and Unblock the Notifications

