Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳಿಗೆ ಮಾವಿನ ಹಣ್ಣು ಕೊಡುವಾಗ ಈ ವಿಚಾರ ಗೊತ್ತಿರಲಿ
ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವಿನ ಹಣ್ಣು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ರುಚಿಯಲ್ಲಿ ಮಾವಿನ ಹಣ್ಣನ್ನು ಮೀರಿಸೋ ಮತ್ತೊಂದು ಹಣ್ಣಿಲ್ಲ. ಇದು ಎಲ್ಲಾ ಋತುಮಾನದಲ್ಲಿ ಲಭ್ಯವಿಲ್ಲವಾದ್ದರಿಂದ ಮಾವಿನ ಹಣ್ಣು ಸಿಗೋ ಟೈಂನಲ್ಲಿ ಜನ ಇದನ್ನು ಬಾಯಿ ಚಪ್ಪರಿಸಿ ತಿನ್ನುತ್ತಾರೆ.

ಇನ್ನೂ ಮಕ್ಕಳಿಗೂ ಇದು ತುಂಬಾನೇ ಫೇವರೇಟ್ ಹಣ್ಣು. ಆದರೆ ಮಕ್ಕಳಿಗೆ ಮಾವಿನ ಹಣ್ಣು ಕೊಡಬಹುದಾ? ಇದನ್ನು ಕೊಡೋದ್ರಿಂದ ಮಕ್ಕಳ ಆರೋಗ್ಯ ದೃಷ್ಟಿಯಿಂದ ಏನಾದ್ರು ಸಮಸ್ಯೆಯಾಗುತ್ತಾ? ಎಷ್ಟು ವಯಸ್ಸಿನ ಮಕ್ಕಳಿಗೆ ಮಾವಿನ ಹಣ್ಣು ಕೊಡಬಹುದು? ಇದರಿಂದಾಗುವ ಆರೋಗ್ಯಕಾರಿ ಪ್ರಯೋಜನಗಳೇನು ಅನ್ನೋದನ್ನ ತಿಳಿಯೋಣ.
ಶಿಶುವಿನ ಆರೋಗ್ಯಕ್ಕೆ ಮಾವಿನ ಹಣ್ಣು ಒಳ್ಳೆಯದಾ?
ಹೌದು, ಮಾವಿನ ಹಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಇದು ಅಧಿಕ ಪೋಷಕಾಂಶವನ್ನು ಹೊಂದಿದೆ. ಜೊತೆಗೆ ಇದರಲ್ಲಿರುವ ವಿಟಮಿನ್ ಹಾಗೂ ಮಿನರಲ್ ಗುಣಗಳು ಮಗುವಿನ ಆರೋಗ್ಯವನ್ನು ಪೋಷಿಸುತ್ತದೆ. ಇನ್ನೂ ಮಾವಿನ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಹಾಗೂ ಕಾರ್ಬೋಹೈಡ್ರೇಟ್ಸ್ ಅಂಶವಿದೆ. ಇದು ನಿಮ್ಮ ಮಗುವನ್ನು ದಿನಪೂರ್ತಿ ಶಕ್ತಿಯುತವಾಗಿರುವಂತೆ ನೋಡಿಕೊಳ್ಳುತ್ತದೆ.
ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಮಾವಿನ ಹಣ್ಣು ನೀಡಬೇಕು?
ಎಂಟರಿಂದ ಹತ್ತು ತಿಂಗಳ ಒಳಗಡೆ ಮಕ್ಕಳಿಗೆ ಮಾವಿನ ಹಣ್ಣು ನೀಡೋದಕ್ಕೆ ಸೂಕ್ತವಾದ ಕಾಲ. ಆದರೆ ಕೆಲವು ಪೋಷಕರು ಆರು ತಿಂಗಳು ತುಂಬುವಾಗಲೇ ಮಾವಿನ ಹಣ್ಣು ಕೊಡೋದಕ್ಕೆ ಶುರು ಮಾಡುತ್ತಾರೆ. ಆದರೆ ಯಾವುದಕ್ಕೂ ನೀವು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಮಾವಿನ ಹಣ್ಣಿನಿಂದಾಗುವ ಆರೋಗ್ಯಕಾರಿ ಉಪಯೋಗಗಳು
ಕೆಲ ಪೋಷಕರು ಮಕ್ಕಳಿಗೆ ಶೀತ ಅಥವಾ ಜ್ವರ ಉಂಟಾಗುವ ಸಾಧ್ಯತೆ ಇದೆ ಎಂದು ಮಾವಿನ ಹಣ್ಣನ್ನು ನೀಡೋದಿಲ್ಲ. ಆದ್ರೆ ಮಾವಿನ ಹಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.
1. ಮೆದುಳಿನ ಬೆಳವಣಿಗೆಗೆ ಸಹಾಯಕಾರಿ
ಮಾವಿನ ಹಣ್ಣಿನಲ್ಲಿರುವ ಗ್ಲುಟಾಮಿನ್ ಆಮ್ಲವು ಮೆದುಳಿನ ಬೆಳವಣಿಗೆಗೆ ಅವಶ್ಯಕವಾಗಿದೆ. ಇದರ ಜೊತೆಗೆ ವಿಟಮಿನ್ ಬಿ 6 ಉತ್ತಮ ನೆನಪಿನ ಶಕ್ತಿ ಮತ್ತು ಮೆದುಳಿನ ಕಾರ್ಯನಿರ್ವಹಣೆಯನ್ನು ಉತ್ತೇಜಿಸುತ್ತದೆ.
2. ರಕ್ತ ಹೀನತೆಯ ಅಪಾಯವನ್ನು ತಡೆಗಟ್ಟುತ್ತದೆ
ಪ್ರತಿ ಮಾವಿನ ಹಣ್ಣು ಸುಮಾರು 0.5mg ಕಬ್ಬಿಣದ ಅಂಶವನ್ನು ಹೊಂದಿರುತ್ತದೆ. ಇದು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅಗತ್ಯವಾಗಿ ಬೇಕಾಗಿದೆ. ಹೀಗಾಗಿ ಮಾವಿನ ಹಣ್ಣು ಪರೋಕ್ಷವಾಗಿ ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ.
3. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಮಾವಿನಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಸಮೃದ್ಧವಾಗಿದೆ. ವಿಟಮಿನ್ ಸಿ ಅಂಶ ಮಾನವನ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಹೆಚ್ಚು ಅಗತ್ಯವಾಗಿದೆ.
4. ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ
ಮಾವಿನ ಹಣ್ಣಿನಲ್ಲಿ ಕೊಬ್ಬಿನ ಅಂಶ ತುಂಬಾ ಕಡಿಮೆ ಇದೆ. ಆದರೆ ಇದರಲ್ಲಿ ಆರೋಗ್ಯಯುತ ಕ್ಯಾಲೋರಿ ಅಂಶ ಅಧಿಕ ಪ್ರಮಾಣದಲ್ಲಿದೆ. ಇದು ನಿಮ್ಮ ಮಗುವಿನ ದೇಹದ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ.
5. ಬೇಸಿಗೆ ಕಾಲದಲ್ಲಿ ತಲೆ ಸುತ್ತುವುದನ್ನು ತಡೆಯುತ್ತದೆ
ಬೇಸಿಗೆಯ ಅತಿಯಾದ ಬಿಸಿಲು ನಿಮ್ಮ ಮಗುವಿನ ದೇಹವನ್ನು ಡಿ-ಹೈಡ್ರೇಟ್ ಮಾಡಬಹುದು. ಇದರಿಂದಾಗಿ ನೀವು ಅವರನ್ನು ಹೊರಗಡೆ ಕರೆದುಕೊಂಡು ಹೋದಾಗ ತಲೆ ಸುತ್ತುವ ಅಪಾಯ ಹೆಚ್ಚಾಗಬಹುದು. ಆದರೆ ಮಾವಿನ ಹಣ್ಣಿನ ಜ್ಯೂಸ್ ಕುಡಿಸುವುದರಿಂದ ದೇಹವನ್ನು ಡಿಹೈಡ್ರೇಟ್ ಆಗಿಡಲು ಸಹಕರಿಸುತ್ತದೆ.
6. ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಅಂಶ ಅಧಿಕ ಪ್ರಮಾಣದಲ್ಲಿದೆ. ಇದು ಕಣ್ಣಿನ ದೃಷ್ಟಿಗೆ ತುಂಬಾನೇ ಉತ್ತಮ. ಇದು ಕಣ್ಣನ್ನು ಒಣಗುವಂತೆ ಮಾಡುವುದು, ತುರಿಕೆ ಅಥವಾ ರಾತ್ರಿ ಕುರುಡು ಉಂಟು ಮಾಡುವ ಸಾಧ್ಯತೆಗಳನ್ನು ಕಡಿಮೆ ಗೊಳಿಸುತ್ತದೆ.
7. ಚರ್ಮದ ಆರೋಗ್ಯಕ್ಕೂ ಉತ್ತಮ
ವಿಟಮಿನ್ ಎ ಅಂಶ ಕಣ್ಣಿನ ಆರೋಗ್ಯಕ್ಕೆ ಮಾತ್ರವಲ್ಲ ಅದರ ಜೊತೆಗೆ ಮಗುವಿನ ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಇದು ಚರ್ಮದ ರಕ್ಷಣೆ ಮಾಡುವುದು ಮಾತ್ರವಲ್ಲ. ಇದರ ಜೊತೆಗೆ ಚರ್ಮವನ್ನು ಪೋಷಿಸಿ ಕಾಂತಿಯುತವಾಗಿರುವಂತೆ ನೋಡಿಕೊಳ್ಳುತ್ತದೆ. ಮಾವಿನ ಹಣ್ಣಿನ ತಿರುಳನ್ನು ಚರ್ಮಕ್ಕೆ ಲೇಪಿಸೋದ್ರಿಂದ ಇದು ಚರ್ಮವನ್ನು ಮಾಶ್ಚರೈಸ್ ಮಾಡುತ್ತದೆ.
8. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
ಮಾವಿನಹಣ್ಣಿನಲ್ಲಿರುವ ಫೈಬರ್‌ನಲ್ಲಿ ಜೀರ್ಣಕಾರಿ ಕಿಣ್ವಗಳಲ್ಲಿ ಸಮೃದ್ಧವಾಗಿವೆ. ಇದು ನಿಮ್ಮ ಮಗುವಿನ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಮತ್ತು ಮಲಬದ್ಧತೆಯ ಅಪಾಯವಿರೋದಿಲ್ಲ. ಇದು ಜೀರ್ಣಾಂಗದಲ್ಲಿ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಪ್ರೋಟೀನ್‌ಗಳ ವಿಭಜನೆಗೆ ಸಹಾಯ ಮಾಡುತ್ತದೆ.
ಮಾವಿನ ಹಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಆದರೆ ಇಂತಿಷ್ಟು ಪ್ರಮಾಣದಲ್ಲಿ ಮಾತ್ರ ಮಕ್ಕಳಿಗೆ ಮಾವಿನ ಹಣ್ಣು ನೀಡಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀಡಿದರೆ ಆರೋಗ್ಯಕ್ಕೆ ಅಪಾಯ ಉಂಟಾಗುವ ಸಾಧ್ಯತೆಗಳಿದೆ.



Click it and Unblock the Notifications



